ಆಡಳಿತ ಚೆನ್ನಾಗಿದ್ದರೆ ಮಿಕ್ಕಿದ್ದು ತಾನಾಗಿ ಬರುವುದು

ಗುಡಿಗಳಲ್ಲಿ ಅಥವಾ ವೇದಿಕೆಗಳಲ್ಲಿ ಭರತನಾಟ್ಯಂ, ಕೂಚ್ಚಿಪುಡಿ, ಒಡಿಸ್ಸಿ ನೃತ್ಯ ಮಾಡುವುದಕ್ಕೂ ಮತ್ತು ಯಾವುದಾದರೂ ಬೇರೆ ನೃತ್ಯದಲ್ಲಿ ಮುಂಬೈ ಟೈಪ್‌ ಫಿಲ್ಮ್ ಡ್ಯಾನ್ಸ್ ಮಾಡುವುದಕ್ಕೂ ವ್ಯತ್ಯಾಸವಾದರೂ ಏನಿದೆ? ಕಲ್ಲಿನ ದೇವರಂತೂ ನೃತ್ಯವನ್ನು ನೋಡಿ ಚಪ್ಪಾಳೆ ಹೊಡೆಯುವುದಿಲ್ಲ. ಗುಡಿ, ಹಾಲ್ ‌ಅಥವಾ ಯಾವುದಾದರೂ ಕೋಣೆಯಾಗಲಿ ಜನ ಚಪ್ಪಾಳೆ ಹೊಡೆಯುತ್ತಾರೆ. ಚಪ್ಪಾಳೆ ಹೊಡೆಯುವ ಕೈಗಳು ಪೂಜಾರಿಗಳದ್ದಾಗಿರಲಿ, ಮಹಂತರದ್ದಾಗಿರಲಿ, ಭಕ್ತರದ್ದಾಗಿರಲಿ, ನೃತ್ಯ ಪ್ರೇಮಿಗಳದ್ದಾಗಿರಲಿ ಅಥವಾ ಉನ್ಮತ್ತರದ್ದಾಗಿರಲಿ ಏನಾದರೂ ವ್ಯತ್ಯಾಸವಿದೆಯೇ?

ಯಾವ ದೇಶದ ಗುಡಿಗಳಲ್ಲಿ ನೃತ್ಯದ ಹಳೆಯ ಪರಂಪರೆಯೇ ಇದ್ದು ಗುಡಿಗಳಲ್ಲಿ ನೃತ್ಯ ಮಾಡುವ ಹುಡುಗಿಯರು ಕೋಣೆಗಳಿಂದ ಬಂದು  ಹೋಗುವವರೇ ಆಗಿದ್ದಾರೆ. ಹಾಗಾದರೆ ಸಂಸ್ಕಾರವಂತರೆಂದು ನಾಟಕ ಮಾಡುವ ಅಗತ್ಯವೇನಿದೆ? ಮುಂಬೈ ಮತ್ತು ಇತರ ನಗರಗಳಲ್ಲಿ ಡ್ಯಾನ್ಸ್  ಬಾರ್‌ಗಳನ್ನು ಮುಚ್ಚುವ ಮಹಾರಾಷ್ಟ್ರ ಸರ್ಕಾರದ ಹಠಕ್ಕೆ ಅರ್ಥವಿಲ್ಲ. ಒಂದುವೇಳೆ ಮುಚ್ಚಬೇಕೆಂದಿದ್ದರೆ ಬಾರ್‌ನ್ನು ಮುಚ್ಚಿ, ಡ್ಯಾನ್ಸ್ ನ್ನು ಅಲ್ಲ. ಮಹಾರಾಷ್ಟ್ರ ಸರ್ಕಾರ ಯಾವ ಮೋಜಿನ ಇತಿಹಾಸವನ್ನು ಪದೇ ಪದೇ ಹೆಮ್ಮೆಯಿಂದ ಪುನರಾವರ್ತಿಸುತ್ತದೋ ಅದೇ ಮೋಜಿನ ಮೇಲೆ ಕಾನೂನಿನ ಬಲೆ ಬೀಸುತ್ತಿದೆ. 100-200 ರೂ.ಗಳನ್ನು ಸಂಪಾದಿಸಲು ಅವರು ಗಂಟೆಗಟ್ಟಲೆ ಮೇಕಪ್‌ ಮಾಡಿಕೊಂಡಿರುತ್ತಾರೆ. ಸದಾ ಆಯಾಸಗೊಂಡು ಸೋರುವ ಕೋಣೆಗಳಲ್ಲಿ ಕೃತಕ ನಗೆಯೊಡನೆ ನೃತ್ಯ ಮಾಡುತ್ತಿರುತ್ತಾರೆ.

ಒಂದುವೇಳೆ ನೃತ್ಯವನ್ನು ಇಸ್ಲಾಂ ಅಪವಿತ್ರವೆಂದು ಭಾವಿಸಿದಂತೆ ಅಂದುಕೊಂಡರೆ ಅದು ಬೇರೆ ವಿಚಾರ. ಇಸ್ಲಾಂ ಕೂಡ ಇದನ್ನು ಎಂದೂ ಎಲ್ಲಿಯೂ ಮುಚ್ಚಲಾಗಲಿಲ್ಲ. ಮಹಿಳೆಯರು ನೃತ್ಯ ಮಾಡದಿದ್ದರೆ  ಪುರುಷರು ನೃತ್ಯ ಮಾಡುತ್ತಿದ್ದರು. ಒಂದುವೇಳೆ ನೃತ್ಯ ಚಿನ್ನಾಗಿದ್ದರೆ ಪುರುಷರು ಮತ್ತು ಮಹಿಳೆಯರಲ್ಲಿ ವ್ಯತ್ಯಾಸವೇನಿದೆ?

ಸುಪ್ರೀಮ್ ಕೋರ್ಟ್‌ ಏಪ್ರಿಲ್ ‌ತಿಂಗಳ ಒಂದು ಹಿಯರಿಂಗ್‌ನಲ್ಲಿ, ಒಂದುವೇಳೆ ಹುಡುಗಿಯರು ನರ್ತಿಸಿ ಹಣ ಸಂಪಾದಿಸಿದರೆ ಅದು ರಸ್ತೆಗಳಲ್ಲಿ ನಿಂತು ಭಿಕ್ಷೆ ಬೇಡುವುದಕ್ಕಿಂತ ಒಳ್ಳೆಯದು ಎಂದು ಸರಿಯಾಗಿಯೇ ಹೇಳಿದೆ.

ಅಸಲಿಗೆ, ನೃತ್ಯ ಮತ್ತು ವೇಶ್ಯಾವೃತ್ತಿಯ ಮೇಲೆ ವಿಧಿಸಿರುವ ವಿವಿಧ ಬಗೆಯ ತಡೆಗಳನ್ನು ಕೊನೆಗಾಣಿಸಬೇಕು. ಏಕೆಂದರೆ ಇದು ಜೀವನದ ಒಂದು ಭಾಗವಾಗಿದೆ. ಮಹಿಳೆಯರು ನರ್ತಿಸುವುದು ಮತ್ತು ಪುರುಷರೊಂದಿಗೆ ಮಲಗುವುದು ಎರಡೂ ಅವರ ಸುಖಕ್ಕಾಗಿ. ಅದು ಸಂಪಾದನೆಯ ಸಾಧನವಲ್ಲ. ಎಲ್ಲರೂ ಸಂಪಾದನೆಯ ಯಾವುದಾದರೂ ಸಾಧನವನ್ನು ಹುಡುಕುತ್ತಾರೆ ಮತ್ತು ಇತರರಿಗಾಗಿ ಕೆಲಸ ಮಾಡುತ್ತಾರೆ. ಅದರಿಂದ ಇತರರಿಗೆ ಸುಖ ಸಿಗುತ್ತದೆ. ಆ ಕೆಲಸ ಪಿಕಾಸೋನಂತಹ ಪೇಂಟರ್‌ಆಗಿರಬಹುದು, ಜುಬಿನ್‌ ಮೆಹ್ತಾರಂತಹ ಸಂಗೀತಗಾರರಾಗಿರಬಹುದು, ಮನ್ನಾಡೆರಂತಹ ಗಾಯಕರದ್ದಾಗಿರಬಹುದು, ಬಿರ್ಜು ಮಹಾರಾಜ್‌ರಂತಹ ಕಥಕ್‌ ನೃತ್ಯಗಾರರದ್ದಾಗಿರಬಹುದು, ಮೈಕೆಲ್ ‌ಜಾಕ್ಸನ್‌, ಸಚಿನ್‌ ತೆಂಡೂಲ್ಕರ್‌, ವಿರಾಟ್‌ ಕೊಹ್ಲಿ, ಮೇರಿ ಕೋವ್‌ರದ್ದಾಗಿರಬಹುದು.

ಇವೆಲ್ಲ ಕೆಲಸಗಳೂ ಹೊಟ್ಟೆಪಾಡಿಗಾಗಿ, ತಮ್ಮ ನೆಮ್ಮದಿಗಾಗಿ ಹಾಗೂ ಪರರಿಗೆ ಸುಖ ಕೊಡಲು ಮಾಡಲಾಗುತ್ತವೆ. ಅದಕ್ಕೆ ಹಣ ಕೇಳಲಾಗುತ್ತದೆ ಅಥವಾ ಪಡೆಯಲಾಗುತ್ತದೆ. ಈ ಜನ ದೇಹ ಅಥವಾ ದೇಹದ ಅಂಗಗಳನ್ನು ಮಾರಿ ಸಂಪಾದಿಸುತ್ತಿದ್ದಾರೆ ಮತ್ತು ಗೌನನ್ನೂ ಪಡೆಯುತ್ತಿದ್ದಾರೆ. ಹಾಗಾದರೆ ಡ್ಯಾನ್ಸ್ ಬಾರ್‌ನ ಅಥವಾ ವೇಶ್ಯಾಗೃಹದ ಹುಡುಗಿಯರಿಗೆ ಅಂಕುಶವೇಕೆ?

ಈ ದ್ವಂದ್ವ ನಮ್ಮ ಇತಿಹಾಸದ ಭಾಗವಾಗಿದೆ. ಇದರಲ್ಲಿ ನಾವು ಹೇಳುವುದೇ ಒಂದು. ವಾಸ್ತವ ಇನ್ನೊಂದು. ಈ ಹುಡುಗಿಯರನ್ನು ವಿರೋಧಿಸುವವರು ಮೊದಲ ಅಕಾಶದಲ್ಲಿ ಹುಡುಗಿಯರನ್ನು ಪಡೆಯಲು ಪರದಾಡುತ್ತಾರೆ. ರಾಜಕೀಯ ಆಡಳಿತ ಮತ್ತು ಸಾಮಾಜಿಕ ಚೌಕಟ್ಟು ಹೇಗಿರಬೇಕೆಂದರೆ ಮಹಿಳೆಯರಿಗೆ ಎಲ್ಲ ಕ್ಷೇತ್ರಗಳಲ್ಲೂ ಅಂದರೆ ಮನೆಗಳಲ್ಲಿ , ಮಾರುಕಟ್ಟೆಯಲ್ಲಿ, ಕಛೇರಿಗಳಲ್ಲಿ, ಪ್ರವಾಸಿ ತಾಣಗಳಲ್ಲಿ ಮತ್ತು ಹೆಚ್ಚಾಗಿ ಇಂತಹ ಕೆಟ್ಟ ಅಭಿಪ್ರಾಯವುಳ್ಳ ವೃತ್ತಿಗಳಲ್ಲಿ ಸುರಕ್ಷತೆ ಸಿಗಬೇಕು.

ಅವರು ತಮ್ಮ ಸಂಪಾದನೆ ಮಾಡುವಂತಿರಬೇಕು, ತಮ್ಮ ಹಣ ಸುರಕ್ಷಿತವಾಗಿ ಇಡುವಂತಿರಬೇಕು. ತಮ್ಮ ಶರೀರವನ್ನು ಒತ್ತಾಯವಾಗಿ ಯಾರಿಗಾದರೂ ಒಪ್ಪಿಸುವಂತಾಗಬಾರದು. ಒತ್ತಾಯವಾಗಿ ಅವರ ಡ್ಯಾನ್ಸ್ ಅಥವಾ ದೇಹ ವ್ಯಾಪಾರಕ್ಕೆ ಹೊಡೆತ ಬೀಳಬಾರದು. ಈ ಕೆಲಸವನ್ನು ಮಾಡಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಅದರ ಬದಲಾಗಿ ಸಂಸ್ಕಾರ, ಸತ್ಕಾರ ಹಾಗೂ ಸತ್ಕರ್ಮದ ನೆಪ ಹೇಳುತ್ತಿದೆ.

ಒಳ್ಳೆಯ ದಿನ ತಲುಪಿದ್ದಕ್ಕೆ ಜೈ

ಹಣಕಾಸು ಸಚಿವ ಅರುಣ್‌ ಜೇಟ್ಲಿ ಮೇಲಿಂದ ಮೇಲೆ ಭಾರತದ ಹಣಕಾಸು ಬೆಳವಣಿಗೆಯನ್ನು ವೇದ ಮಂತ್ರಗಳ ಹಾಗೆ ಪಠಿಸುತ್ತಲೇ ಇರುತ್ತಾರೆ. ಓಂ ಶಾಂತಿ ಶಾಂತಿ ಎಂದು ಹೇಳುವುದರಿಂದ ಹೇಗೆ ಶಾಂತಿ ಸಿಗುವುದಿಲ್ಲವೋ, ಹಾಗೆಯೇ 7.6%ನ ಪ್ರಗತಿಯಿಂದ ಭಾರತ ಜಗತ್ತಿನ ಅತ್ಯಂತ ಪ್ರಗತಿಪರ ದೇಶವೇನೂ ಆಗದು.

ಈ ಪ್ರಗತಿ ಒಳ್ಳೆಯದು. ಆದರೆ ಇದು ಆಮೆ ನಡಿಗೆಯ ರೀತಿಯಲ್ಲಿದೆ. ಬೇರೆ ಚಿರತೆ, ಜಿಂಕೆ, ಮೊಲ ಮುಂತಾದವು ತಮ್ಮ ಮೊದಲಿನ ವೇಗಕ್ಕಿಂತ ಹೆಚ್ಚು ವೇಗ ಪಡೆದುಕೊಂಡಿವೆ. ಆ ದೇಶಗಳು ಎಂದೂ ನಮ್ಮ ಹಾಗೂ ಅಮೆರಿಕ, ಇಂಗ್ಲೆಂಡ್‌, ಚೀನಾ, ದಕ್ಷಿಣ ಆಫ್ರಿಕಾ ಮುಂತಾದವುಗಳ ವ್ಯತ್ಯಾಸ ಹೆಚ್ಚಾಗುತ್ತಿವೆ ಎಂದು ಹೇಳಿಕೊಳ್ಳುವುದಿಲ್ಲ. ಪ್ರಗತಿ ಮಂತ್ರದ ಪಾಠದ ಹೊರತಾಗಿ ಅದು ಕುಸಿಯುತ್ತಿಲ್ಲ. ವಾಸ್ತವದಲ್ಲಿ, ಅರುಣ್‌ ಜೇಟ್ಲಿಯವರ ಬಳಿ ಹೇಳಿಕೊಳ್ಳಲು ಮತ್ತೇನೂ ಇಲ್ಲ. ಒಳ್ಳೆಯ ದಿನಗಳ ಹೆಸರಿನಲ್ಲಿ ದೇಶದಲ್ಲಿ ಬರಗಲವೇ ಆವರಿಸಿಕೊಂಡಿದೆ. ಮಳೆ ಪರಿಪೂರ್ಣವಾಗಿ ಆಗಲೇ ಇಲ್ಲ. ತೆರಿಗೆ ಪರಿಹಾರ ಇಲ್ಲ, ಆಡಳಿತದಲ್ಲಿ ಚುರುಕುತನ ಇಲ್ಲ, ಕಾನೂನಿಗೇನೂ ಕೊರತೆ ಇಲ್ಲ. ವ್ಯವಸ್ಥೆಯಲ್ಲಿ ಯಾವುದೇ ಸುಧಾರಣೆಯಿಲ್ಲ.

ಆಮದು ರಫ್ತು ಕುರಿತಂತೆ ಬಿಡುಗಡೆ ಮಾಡಿದ ಹೊಸ ಅಂಕಿಅಂಶಗಳು ಬಣ್ಣ ಬಯಲು ಮಾಡುತ್ತವೆ. 2013-14ರಲ್ಲಿ ದೇಶದಲ್ಲಿ ರಫ್ತು ಪ್ರಮಾಣ 314 ಶತಕೋಟಿ ಡಾಲರ್‌ನಷ್ಟಿತ್ತು. ಅದು 2015-16ರಲ್ಲಿ 261 ಶತಕೋಟಿ ಡಾಲರ್‌ಗೆ ಕುಸಿಯಿತು. ಎರಡು ವರ್ಷದಲ್ಲಿ ರಫ್ತು ಪ್ರಮಾಣ 450 ಶತಕೋಟಿ ಡಾಲರ್‌ನಿಂದ 380 ಶತಕೋಟಿ ಡಾಲರ್‌ಗೆ ಇಳಿದಿರುವುದು ಸರಿ. ಆದರೆ ಇದರರ್ಥ ಆರ್ಥಿಕ ನಷ್ಟ ಇದೆ, ಕೂಗೆಬ್ಬಿಸುವ ಸಂಗತಿಯಲ್ಲ.

ಆಮದು ಪ್ರಮಾಣ ಹೆಚ್ಚಾದರೂ ಕೂಡ ಭಾರತದ ವಿದೇಶಿ ವಿನಿಮಯ ಸಂಗ್ರಹ ಏಕೆ ಜಾಸ್ತಿ ಇದೆ? ಎಂದು ಅನೇಕರು ಕೇಳಬಹುದು. ಅದು ಹೆಚ್ಚಿಗೆ ಇರಲು ಪ್ರಮುಖ ಕಾರಣವೆಂದರೆ, ವಿದೇಶದಲ್ಲಿ ನೆಲೆಸಿರುವ ಭಾರತೀಯರು ಪ್ರತಿವರ್ಷ ಭಾರತದಲ್ಲಿನ ತಮ್ಮ ಕುಟುಂಬಗಳ ನಿರ್ವಹಣೆಗಾಗಿ ಸಾಕಷ್ಟು ಹಣ ಕಳಿಸುತ್ತಿರುತ್ತಾರೆ. ಆ ಕೂಲಿಕಾರರು, ತಮ್ಮ ಮನೆಗಳನ್ನು ಅಚ್ಚುಕಟ್ಟಾಗಿ ನಡೆಸುತ್ತಾರೆ. ಅವರ ಯೂರೊ, ಡಾಲರ್‌, ದಿನಾರ್‌, ದಿರಹಮ್ ಗಳಿಂದ ಇಲ್ಲಿ ವಿಮಾನ, ಟ್ಯಾಂಕ್‌, ಮರ್ಸಿಡಿಸ್‌ಖರೀದಿಸಲಾಗುತ್ತಿದೆ. ಶ್ರೀಮಂತರು ಡಾಲರ್‌ನ್ನು ಕಳಿಸಿಕೊಡುತ್ತಿದ್ದಾರೆ. ಏಕೆಂದರೆ ಇಲ್ಲಿ ಬ್ಯಾಂಕುಗಳಲ್ಲಿ ಬಡ್ಡಿದರ ಕಡಿಮೆ ಇದೆ. ಇಲ್ಲಿನ ಶ್ರೀಮಂತ ಭಾರತೀಯರು ಡಾಲರ್‌ ಖರೀದಿಸಿ ವಿದೇಶಗಳಿಗೆ ಕಳಿಸಿರುವುದು ಪನಾಮಾ ದಾಖಲೆಗಳಿಂದ ಸ್ಪಷ್ಟವಾಗಿದೆ.

ಯಾವ ದೇಶ ತಾನೇ ಹೀಗೆ ಪ್ರತಿಪಾದಿಸಲು ಸಾಧ್ಯ? ಇಲ್ಲಿನ ಮುಂಬೈ ಹಾಗೂ ದೆಹಲಿಯಂತಹ ನಗರಗಳ ಶೇ.80ರಷ್ಟು ಜನರು ಎಂತಹ ಸ್ಥಳಗಳಲ್ಲಿ ವಾಸಿಸುತ್ತಿದ್ದಾರೆಂದರೆ, ಅಲ್ಲಿನ ಆಸ್ಪತ್ರೆಗಳಲ್ಲಿ ಔಷಧಿಗಳೇ ಇಲ್ಲ, ನಲ್ಲಿಗಳಲ್ಲಿ ನೀರೇ ಬರುವುದಿಲ್ಲ, ಮನೆಗಳಲ್ಲಿ ಶೌಚಾಲಯಗಳೇ ಇಲ್ಲ. ವಿದ್ಯುತ್‌ ಹೋಗುತ್ತಿರುತ್ತದೆ, ಬರುತ್ತಿರುತ್ತದೆ. ಅಲ್ಲಿ ನ್ಯಾಯವೇ ಸಿಗುವುದಿಲ್ಲ. ಒಂದು ವೇಳೆ 7.6%ನ ಮಂತ್ರಪಠಣ ಮಾಡುವುದೇ ದೇಶದ ಮೂಲ ಧರ್ಮವಾಗಿದ್ದರೆ, ಅದು ಬೇರೆ ಮಾತು. ಭಾರತ್‌ ಮಾತಾ ಕೀ ಜೈ! 7.6ಗೆ ಜೈ!

ವೈಚಾರಿಕ ಸ್ವಾತಂತ್ರ್ಯದ ಅಗತ್ಯ

ಮೊದಲು ಕ್ಷುಲಕ ವಿಚಾರದವರು, ಕುರುಡು ಮನೋಭಾವದ ಜನರಷ್ಟೇ ವರ್ತಮಾನ ಪತ್ರಿಕೆಗಳು, ನಿಯತಕಾಲಿಕೆಗಳು, ಮುಖಂಡರು, ಲೇಖಕರ ವಿರುದ್ಧ ಭಾರತೀಯ ದಂಡಸಂಹಿತೆಯ 295 `ಎ’ ಅನ್ವಯ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿರುವುದು ಅಥವಾ ಎರಡು ಸಮುದಾಯಗಳ ವೈಮನಸ್ಯ ಉಂಟು ಮಾಡುವ ಮೊಕದ್ದಮೆಗಳನ್ನು ಯಾವುದೇ ಪುರಾವೆ, ಸಾಕ್ಷ್ಯಗಳಲ್ಲದೆ ಮಾಡುತ್ತಿದ್ದರು. ಈಗ ಅದರಲ್ಲಿ ದೇಶದ್ರೋಹದ ಕಲಂ 124 `ಎ’ಯನ್ನು ಸೇರ್ಪಡೆ ಮಾಡಲಾಗಿದೆ.

ಮುಸ್ಲಿಂ ಮುಖಂಡ ಅಸದುದ್ದೀನ್‌ ಓಲೈಸಿಯ ವಿರುದ್ಧ ಬಿ.ಎಸ್‌. ಶುಕ್ಲಾ ಮೊಕದ್ದಮೆ ದಾಖಲು ಮಾಡಿದ್ದರು. ಆದರೆ ಮೊದಲ ಹಂತದಲ್ಲಿಯೇ ಓಲೈಸಿ ವಿುದ್ಧ ಯಾವುದೇ ದಾಖಲೆಯಾಗಲಿ, ದನಿಮುದ್ರಣವಾಗಲಿ ಇಲ್ಲ ಎನ್ನುವುದು ಸ್ಪಷ್ಟವಾಯಿತು. ಕೇವಲ ಪತ್ರಿಕೆಯಲ್ಲಿ ಪ್ರಕಟವಾದ ವರದಿಯನ್ನು ದಾಖಲೆ ಎಂದು ಪರಿಗಣಿಸಲಾಗದು.

ಈ ತೆರನಾದ ಪ್ರಕರಣಗಳು ಸಾಮಾನ್ಯವಾಗಿ ಡೆಲ್ಲಿ ಪ್ರೆಸ್‌ ಪತ್ರಿಕೆಗಳ ವಿರುದ್ಧ ಹಾಕಲಾಗುತ್ತಿರುತ್ತದೆ. ಒಂದು ವೇಳೆ ಸರ್ಕಾರ ಕಂದಾಚಾರಿಗಳದ್ದೇ ಆಗಿರಬಹುದು ಅಥವಾ ಅಂತಹ ಕಂದಾಚಾರಿಗಳ ಒತ್ತಡಕ್ಕೊಳಗಾಗಿ ಮೊಕದ್ದಮೆ ಹೂಡಲು ಅನುಮತಿ ನೀಡುತ್ತದೆ. ಹಾಗೆ ನೋಡಿರೆ ಯಾವುದೇ ಅನುಮತಿ ಇಲ್ಲದೆ ಮೊಕದ್ದಮೆ ಹೂಡಲಾಗುತ್ತದೆ. ನ್ಯಾಯಾಲಯಗಳಲ್ಲಿ ವಕ್ತಾರರು, ಲೇಖಕರು, ಪ್ರಕಾಶಕರು ಹಾಜರಾಗುತ್ತಿರುತ್ತಾರೆ. ದೇಶದಲ್ಲಿ ವೈಚಾರಿಕ ಸ್ವಾತಂತ್ರ್ಯಕ್ಕಾಗಿ ಕಾನೂನು ಮತ್ತು ನ್ಯಾಯಾಲಯಗಳನ್ನು ದುರುಪಯೋಗ ಆಗದಂತೆ ತಡೆಯಬೇಕಾಗಿದೆ. ಎಲ್ಲಕ್ಕೂ ಮೊದಲು ಪೊಲೀಸರು ವಿವೇಕದಿಂದ ಕಾರ್ಯಪ್ರವೃತ್ತರಾಗಬೇಕು. ಯಾವುದೇ ವಿಶೇಷ ಕಾರಣವಿಲ್ಲದೆ ವಿಚಾರಗಳಿಗೆ, ಹೇಳಿಕೆಗಳಿಗೆ ಸಂಬಂಧಪಟ್ಟಂತೆ ಉದ್ಭವಿಸಿದ ಪ್ರಕರಣಗಳಲ್ಲಿ ಹಸ್ತಕ್ಷೇಪ ಮಾಡಬಾರದು, ಎರಡನೆಯದು, ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ವೈಚಾರಿಕ ಸ್ವಾತಂತ್ರ್ಯವನ್ನು  ಕಾಯ್ದುಕೊಂಡು ಹೋಗಬೇಕೆಂದರೆ, ಮ್ಯಾಜಿಸ್ಟ್ರೇಟ್‌ಗಳಿಗೆ ಈ ಕುರಿತು ಕಣ್ಮುಚ್ಚಿಕೊಂಡು ವಾರಂಟ್‌ ಅಥವಾ ಸಮನ್ಸ್ ಜಾರಿಗೊಳಿಸದಂತೆ ಮಾಡಬೇಕು. ಅದೆಷ್ಟೋ ಪ್ರಕರಣಗಳಲ್ಲಿ ಲೇಖಕರು, ವಿಚಾರವಾದಿಗಳು, ಚಿತ್ರಕಲಾವಿದರು ಈ ತೆರನಾದ ಆಘಾತಗಳಿಗೆ ಹೆದರಿ ವಿದೇಶಗಳಿಗೆ ಹೊರಟುಹೋದರು. ಆದರೆ ಕಂದಾಚಾರಿಗಳು ಕಾರಣವಿಲ್ಲದೆಯೇ ಮೊಕದ್ದಮೆಗಳನ್ನು ಹೂಡುತ್ತಿದ್ದರು ಮತ್ತು ಮ್ಯಾಜಿಸ್ಟ್ರೇಟ್‌ಗಳು ಕಣ್ಮುಚ್ಚಿಕೊಂಡು ವಾರಂಟ್‌ ಜಾರಿಗೊಳಿಸುತ್ತಿದ್ದರು.

ಈ ಪ್ರಕರಣಗಳಲ್ಲಿ ಅಂತಿಮವಾಗಿ ಶಿಕ್ಷೆಯಾದ ಪ್ರಕರಣಗಳು ಕಡಿಮೆಯೇ. ಕೇವಲ ಬರೆಯುವುದರಿಂದ, ಮಾತನಾಡುವುದರಿಂದ ಅಥವಾ ಚಿತ್ರ ಬರೆದಿರುವುದರಿಂದ ಧಾರ್ಮಿಕ ಭಾವನೆಗಳನ್ನು ಕೆರಳಿಸಿದ್ದು ಅಥವಾ ದೇಶದ್ರೋಹದ ಆರೋಪ ಹೊರಿಸಲು ಸಾಧ್ಯವಾಗುವುದಿಲ್ಲ.

ವಿಚಾರವಾದಿಗಳನ್ನು ತೊಂದರೆಗೀಡು ಮಾಡಲು ಈ ತಂತ್ರ ಅನುಸರಿಸಲಾಗುತ್ತದೆ. ಪೊಲೀಸರು ಹಾಗೂ ಮುಖಂಡರು ಇದರ ಮಜ ಪಡೆಯುತ್ತಿರುತ್ತಾರೆ. ಏಕೆಂದರೆ ಪ್ರಜಾಪ್ರಭುತ್ವದ ವಿಚಾರವೇ ಅವರ ಶಕ್ತಿಯನ್ನು ಕಡಿಮೆಗಳಿಸುತ್ತದೆ.

ಜನರು ಈ ಬೇಕಾಬಿಟ್ಟಿ ವರ್ತನೆಯಿಂದ ಸುರಕ್ಷತೆ ಬಯಸುತ್ತಾರೆಂದರೆ, ಅವರು ಭಾರತೀಯ ದಂಡ ಸಂಹಿತೆಯ ಕಲಂ 295 `ಎ’ ಮತ್ತು 124 `ಎ’ ಅಸ್ವಿತ್ವದಲ್ಲಿಯೇ ಇರಬಾರದೆಂದು ಸರ್ಕಾರದ ಮೇಲೆ ಒತ್ತಡ ಹೇರಬೇಕು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ