ಗೃಹಶೋಭಾ ಮಹಿಳಾ ಓದುಗರ ವಿಶೇಷ ಅಭಿವೃದ್ಧಿ, ವ್ಯಕ್ತಿತ್ವ ವಿಕಾಸ, ಏಳಿಗೆಗಾಗಿ ಎಂದೇ, ಡೆಲ್ಲಿ ಪ್ರೆಸ್‌ ಪ್ರಕಟಣಾ ತಂಡ, ಗೃಹಶೋಭಾ ಮಾಸಪತ್ರಿಕೆಯ ವತಿಯಿಂದ `ಕುಕಿಂಗ್‌ ಕ್ವೀನ್‌' ಇವಂಟ್‌ ನ್ನು ಇತ್ತೀಚೆಗೆ ಬಲು ಅದ್ಧೂರಿಯಾಗಿ ಏರ್ಪಡಿಸಲಾಗಿತ್ತು. ಪ್ರಮುಖ ಪ್ರಾಯೋಜಕರು ಎಂದರೆ ಸ್ಪೈಸ್‌ ಪಾರ್ಟ್ ನರ್‌ ಎಲ್.ಜಿ ಇಂಗು, ಹೆಲ್ದಿ ಟಿಫನ್‌ ಪಾರ್ಟ್‌ ನರ್‌ ಎಕ್ಸೋ, ಪ್ಯೂರಿಟಿ ಪಾರ್ಟ್‌ ನರ್‌ ಸನ್‌ ಪ್ಯೂರ್‌ ಸನ್‌ ಫ್ಲವರ್‌ ಆಯಿಲ್‌, ಜ್ಯೂವೆಲರಿ ಪಾರ್ಟ್‌ ನರ್‌ ಸೆನ್‌ ಕೋ, ಅಸೋಸಿಯೇಟ್‌ ಸ್ಪಾನ್ಸರರ್‌ ನಂದಿನಿ ಹಾಗೂ ಮೀಡಿಯಾ ಪಾರ್ಟ್‌ ನರ್ಸ್‌ ಪ್ರಜಾಪ್ರಗತಿ ದಿನಪತ್ರಿಕೆ  ಪ್ರಗತಿ ಟಿವಿ.

ಈ ಕಾರ್ಯಕ್ರಮದ ಇಡೀ ಫೋಕಸ್‌ ಅಡುಗೆ, ಪೌಷ್ಟಿಕ ಆಹಾರ ಸೇವನೆಯ ಕುರಿತಾಗಿತ್ತು. ಕಳೆದ ತಿಂಗಳು ಸೆಪ್ಟೆಂಬರ್‌ 7 ರಂದು ಈ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಜಿಪಿಓ ಬಳಿಯ ರಾಜಭವನ ರಸ್ತೆಯ ಹೋಟೆಲ್ ‌ಕ್ಯಾಪಿಟಲ್ ನಲ್ಲಿ ಅದ್ಧೂರಿಯಿಂದ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕಾಗಿ  ಬಂದಿದ್ದ ಮಹಿಳಾ ಅಭ್ಯರ್ಥಿಗಳಿಂದ ಆನ್‌ ದಿ ಸ್ಪಾಟ್‌ ಅಡುಗೆ ತಯಾರಿ ಸ್ಪರ್ಧೆ ಪ್ರಮುಖ ಹೈಲೈಟ್‌ ಆಗಿತ್ತು. ನಗರದ ನೂರಾರು ಮಹಿಳೆಯರು ಅತಿ ಉತ್ಸಾಹದಿಂದ ತಮ್ಮ ಆರೋಗ್ಯ, ಪೌಷ್ಟಿಕ ಆಹಾರ, ಅಡುಗೆಯ ಸ್ಪರ್ಧೆ, ಸೆಲೆಬ್ರಿಟಿ ಶೆಫ್‌ ರಿಂದ ಅಡುಗೆ ಡೆಮೊ, ಹೆಚ್ಚಿನ ಮನರಂಜನೆ ಇತ್ಯಾದಿಗಳಿಗಾಗಿ ಇಲ್ಲಿ ಸೇರಿದ್ದರು.

Cooking_Queen_Bengaluru_Post_event-01

ನ್ಯೂಟ್ರಿಷನಿಸ್ಟ್ ಸೆಷನ್

ಮೊದಲಿಗೆ ಸಭಿಕರನ್ನು ಉದ್ದೇಶಿಸಿ ಆಹಾರತಜ್ಞೆ ಸುಮಾ ಚೇತನ್‌ ರಿಂದ ಅಮೂಲ್ಯ ಆರೋಗ್ಯದ ಟಿಪ್ಸ್ ಒದಗಿಸಲಾಯಿತು. ಫುಡ್‌ಸೈನ್ಸ್ ನಲ್ಲಿ ಪದವೀಧರೆ ಹಾಗೂ ಕ್ಲಿನಿಕಲ್ ನ್ಯೂಟ್ರಿಷನ್‌ ಡೈಟೆಟಿಕ್ಸ್ ನಲ್ಲಿ ಪಿಜಿ ಡಿಪ್ಲೊಮಾ ಹೋಲ್ಡರ್‌ ಸುಮಾ ಚೇತನ್, ಕ್ರೈಯಾ ಸುಪ್ರಾ ಆಸ್ಪತ್ರೆಗಳಲ್ಲಿ ಕನ್ಸಲ್ಟೆಂಟ್‌ ಡಯೆಟಿಷಿಯನ್‌ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

Photo-02

ಹೆಣ್ಣುಮಕ್ಕಳು, ಪ್ರೌಢ ಮಹಿಳೆಯರು ಪ್ರತಿನಿತ್ಯ ಸೇವಿಸುವ ಆಹಾರ ಯಾವ ರೀತಿ ಅವರ ಗಟ್‌ ಹೆಲ್ಚ್, ಹಾರ್ಮೋನ್‌ ಇನ್‌ಫ್ಲೂಯೆನ್ಸ್, ಹೃದ್ರೋಗಗಳು, ಸರ್ವೈಕಲ್, ಬ್ರೆಸ್ಟ್ ಕ್ಯಾನ್ಸರ್‌, ಬೋನ್‌ ಹೆಲ್ತ್, ತೂಕ ನಿಯಂತ್ರಣ ಇತ್ಯಾದಿಗಳ ಮೇವಲೆ ಪ್ರಭಾವ ಬೀರುತ್ತದೆ ಎಂದು ಸವಿವರವಾಗಿ ತಿಳಿಸಿಕೊಟ್ಟರು. ಎಂಥ ಆಹಾರ ಸೇವಿಸಬೇಕು/ಬಾರದು, ಓಟ್ಸ್, ಮಿಲೆಟ್ಸ್, ಬ್ರೊಕನ್‌ ವೀಟ್‌, ಆರ್ಗ್ಯಾನಿಕ್‌ ಫುಡ್‌, ಕೊಲೆಸ್ಟ್ರಾಲ್, ಫೈಬರ್‌ ಯುಕ್ತ ಆಹಾರ, ಡ್ರೈಫ್ರೂಟ್ಸ್, ಚಿಯಾ/ಸಬ್ಜಾ ಸೀಡ್ಸ್/ಎಣ್ಣೆಯ ಬಳಕೆ ಇತ್ಯಾದಿ ಎಲ್ಲದರ ಬಗ್ಗೆ ಅಮೂಲ್ಯ ಮಾಹಿತಿ ನೀಡಿದರು. ಆ ನಂತರ ನೆರೆದಿದ್ದ ನೂರಾರು ಮಹಿಳೆಯರ ಅಸಂಖ್ಯಾತ ಸಂದೇಹಗಳನ್ನು ಸೂಕ್ತವಾಗಿ ನಿವಾರಿಸಿ, ಡಯೆಟ್‌ ಕುರಿತು ಅವರ ಜ್ಞಾನ ತಣಿಸಿದರು.

ಸೆಲೆಬ್ರಿಟಿ ಶೆಫ್ಸೆಷನ್

ಆಯುಷ್‌ ಟಿವಿ, ಉದಯ, ಸ್ಟಾರ್‌ ಸುವರ್ಣಾ ಟಿವಿ ಚಾನೆಲ್ ‌ಗಳಲ್ಲಿ ಶೆಫ್‌ ಆಗಿ ಮಿಂಚುತ್ತಿರುವ ಆಶಾರಾಣಿ ಸೋಮನಾಥ್‌, ಸುಮಾರು 400ಕ್ಕೂ ಹೆಚ್ಚು ಟಿವಿ ಆಡುಗೆ ಕಾರ್ಯಕ್ರಮಗಳಿಂದ ನಮ್ಮ ಓದುಗರಿಗೆ ಚಿರಪರಿಚಿತ. `ಬೊಂಬಾಟ್‌ ಭೋಜನ' ಅಡುಗೆ ಕಾರ್ಯಕ್ರಮದಿಂದ ಅಪಾರ ಕೀರ್ತಿ ಪಡೆದವರು.

Photo-01

ಅಮೂಲ್ ‌ಫೇಸ್‌ ಬುಕ್‌ ಲೈವ್ ‌ಶೋನಲ್ಲಿ ಖ್ಯಾತಿ ಗಳಿಸಿ ಎರಡೆರಡು ಸಲ ಕುಕ್ಕಿಂಗ್‌ ಕ್ವೀನ್‌ ಅವಾರ್ಡ್‌ ಪಡೆದಿರುತ್ತಾರೆ. ಉಚಿತವಾಗಿ ಬಡ ಮಕ್ಕಳಿಗೆ ಟ್ಯೂಷನ್‌ ಹೇಳುವುದು ಇವರ ಹವ್ಯಾಸ. ಹಲವು ಅಡುಗೆ ಕಾರ್ಯಕ್ರಮಗಳಿಗೆ ಜಜ್‌ ಆಗಿದ್ದಾರೆ, ಉತ್ತಮ ಬ್ಲಾಗರ್‌ ಕೂಡ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ