ಇಬ್ಬರು ಸಿನಿಮಾ ನಟರ ಪತ್ನಿಯರು ಮಾತುಕಥೆಯಲ್ಲಿ ತೊಡಗಿದ್ದರು. ಒಬ್ಬಳು ಹೇಳಿದಳು, “ನನ್ನ ಪತಿ ಕೆಲಸ ಕಾರ್ಯಗಳಿಂದ ವಿಶ್ರಾಂತಿ ಪಡೆಯಲೆಂದು ಒಂದು ತಿಂಗಳ ರಜೆ ಪಡೆದಿದ್ದಾರೆ. ನಾವು ಪ್ರಪಂಚ ಪರ್ಯಟನೆಗೆ ಹೊರಟಿದ್ದೇವೆ.”

“ಹೂಂ, ನಾವು ಸಹ ರಜೆಯ ಮಜ ಪಡೆಯಬೇಕೆಂದಿದ್ದೇವೆ. ಆದರೆ ನಾವು ಬೇರೆ ಬೇರೆ ಕಡೆ ಹೋಗಬೇಕೆಂದು ಇದ್ದೇವೆ,” ಎಂದು ಎರಡನೆಯವಳು ಹೇಳಿದಳು.

ಪತಿ : ಈ ವಿಷಯ ನಂಬಲಾಗದ ಸತ್ಯವಾಗಿದೆ. ಇದರ ವಾಸ್ತವಿಕ ಸಂಗತಿಯನ್ನು ಅಲ್ಲಗಳೆಯಲಾಗುವುದಿಲ್ಲ. ಯೂರೋಪ್‌ನ ಒಬ್ಬ ವಿದ್ವಾಂಸರು ಬರೆಯುತ್ತಾರೆ. “ಯಾವ ವ್ಯಕ್ತಿ ಮಹಾ ಕಡುಮೂರ್ಖನಾಗಿರುತ್ತಾನೋ, ಅವನಿಗೆ ಅಷ್ಟೇ ಚೆಲುವೆಯಾದ ಹೆಂಡತಿ ಸಿಗುತ್ತಾಳೆ.”

ಪತ್ನಿ : ಅಯ್ಯೋ…. ಇರಲಿ…. ಬಿಡಿ. ಸುಮ್ಮನೆ ನನ್ನ ಹೊಗಳೋದು ಅಂದರೆ ನಿಮಗೆ ಇಷ್ಟ ಅಂತ ನನಗೆ ಗೊತ್ತಿಲ್ವೆ?

ಪ್ರಭಾ : ನನ್ನ ಮಗ ಈ ದಿನ ವಜ್ರದ ಉಂಗುರ ನುಂಗಿಬಿಟ್ಟ. ಈಗ ಅವನ ಆಪರೇಶನ್‌ ಮಾಡಿಸಬೇಕಾಗಿದೆ. ಇಲ್ಲಿಗೆ ಬಂದಿದ್ದಾರಲ್ಲ ಹೊಸಬರು, ಡಾ. ವಿನಯ್‌, ಅವರನ್ನು ನಂಬಬಹುದಾ?

ಸುಧಾ : ಇದೇನು ಹೀಗೆ ಹೇಳ್ತೀರಿ? ಅವರು ತುಂಬಾ ಪ್ರಾಮಾಣಿಕರು.

ಮಹೇಂದ್ರ ತನ್ನ ಗೆಳೆಯ ಯೋಗೇಶನ ಮದುವೆಯ ವಾರ್ಷಿಕೋತ್ಸಕ್ಕೆ 500 ರೂ. ಬೆಲೆ ಬಾಳುವ ಒಂದು ಮಾತನಾಡುವ ಗಿಣಿಯನ್ನು ಉಡುಗೊರೆಯಾಗಿ ಕೊಟ್ಟ. ಕೆಲವು ದಿನಗಳ ನಂತರ ಒಮ್ಮೆ ಯೋಗೇಶನ ಮನೆಗೆ ಬಂದ ಮಹೇಂದ್ರ ಕೇಳಿದ, “ನಾನು ಕೊಟ್ಟ ಉಡುಗೊರೆ ಹಿಡಿಸಿತೇ?”

ಯೋಗೇಶ ಉತ್ತರಿಸಿದ, “ಬಹಳ ಹಿಡಿಸಿತು. ಆದರೆ ನನ್ನ ಹೆಂಡತಿ ಸ್ವಲ್ಪ ಉಪ್ಪು ಜಾಸ್ತಿ ಹಾಕಿಬಿಟ್ಟಳು.”

ಸುರೇಶ : ಅಲ್ಲಯ್ಯ, ನಿನ್ನ ಕೈಗಳು ಯಾಕೆ ಇಷ್ಟೊಂದು ಕಪ್ಪಾಗಿವೆ?

ಮಹೇಶ : ನನ್ನ ಹೆಂಡತಿಯನ್ನು ರೈಲು ಹತ್ತಿಸಿ ಬಂದೆ.

ಸುರೇಶ : ಅದಕ್ಕೂ ಇದಕ್ಕೂ ಏನಯ್ಯಾ ಸಂಬಂಧ?

ಮಹೇಶ : ನಾನು ಸಂತೋಷದಿಂದ ಎಂಜಿನ್‌ನ್ನು ತಟ್ಟಿ ತಟ್ಟಿ ಶಹಭಾಷ್‌ಗಿರಿ ಕೊಟ್ಟೆ.

ನವ ವಿವಾಹಿತ ಪತಿ : ನಮ್ಮ ಮದುವೆಯಾಗಿ ಆಗಲೇ 24 ಗಂಟೆಗಳಾಗಿ ಹೋಗಿವೆ.

ಪತ್ನಿ : ಹೌದಲ್ವೇ? ನನಗಂತೂ ನಿನ್ನೆ ತಾನೇ ನಮ್ಮ ಮದುವೆ ಆದ ಹಾಗಿತ್ತು.

ಸೀಮಾ : ಈ ಅಂಚೆ ಕಛೇರಿಯವರು ಬಹಳ ಗಡಿಬಿಡಿ ಮಾಡಿಬಿಡುತ್ತಾರಮ್ಮ.

ರೀನಾ : ಹೂಂ, ಅದೇನೋ ಸರಿ. ಆದರೆ ಈಗ ಆದದ್ದೇನು?

ಸೀಮಾ : ನನ್ನ ಪತಿ ಕೇರಳದಿಂದ ನನಗೆ ಪತ್ರ ಬರೆದಿದ್ದಾರೆ. ಆದರೆ ಅಂಚೆ ಕಛೇರಿಯರು ಸಿಮ್ಲಾದ ಮುದ್ರೆ ಒತ್ತಿದ್ದಾರೆ.

ಪ್ರಿಯಕರ : ಪ್ರಿಯೆ, ನಾನು ಬೆಳಗ್ಗೆ ಎದ್ದೊಡನೆ ನಿನ್ನದೇ ಯೋಚನೆಯಲ್ಲಿ ಮುಳುಗಿರುತ್ತೇನೆ.

ಪ್ರೇಯಸಿ : ಹೌದು, ಸಂದೀಪ ಸಹ ಇದನ್ನು ಹೇಳುತ್ತಿರುತ್ತಾನೆ.

ಪ್ರಿಯಕರ : ನಾನು ಸಂದೀಪನಿಗಿಂತ ಎಷ್ಟೋ ಬೇಗನೇ ಏಳುತ್ತೇನಲ್ಲಾ!

ಒಬ್ಬ ಮಹಿಳೆ ನಿದ್ರೆ ಮಾಡಲು ಹಠ ಮಾಡುತ್ತಿದ್ದ ತನ್ನ ಮಗನನ್ನು ರಮಿಸುತ್ತಾ, “ಮಗು, ಬೇಗ ನಿದ್ದೆ ಮಾಡಿಬಿಡಪ್ಪ. ಇಲ್ಲದಿದ್ದರೆ ಕಳ್ಳ ಬಂದುಬಿಡ್ತಾನೆ… ಅಷ್ಟೇ…..”

ಮಗ ಅದಕ್ಕೆ ಉತ್ತರಿಸುತ್ತ, “ನನ್ನ ಬಳಿ ನೆಕ್ಲೇಸ್‌ ಇಲ್ಲ, ಬಳೆ ಇಲ್ಲ ಅಂತ ಅಪ್ಪನ ಹತ್ತಿರ ಜಗಳವಾಡ್ತೀಯಲ್ಲ, ಕಳ್ಳ ಇನ್ನೇಕೆ ಬರುತ್ತಾನಮ್ಮ?”

ಪತ್ರಿಕಾ ವರದಿಗಾರ : (ಸಿನಿಮಾ ನಟಿಗೆ) ಮೇಡಂ, ತಾವೇಕೆ ಇನ್ನೂ ಮದುವೆಯಾಗಿಲ್ಲ?

ನಟೀಮಣಿ : ನಾನು ನನ್ನ ತಾಯಿಯ ನಟನೆಯನ್ನು ಮಾತ್ರವಲ್ಲದೆ, ಆಕೆಯ ಆದರ್ಶ ಜೀವನವನ್ನೂ ಪರಿಪಾಲಿಸುತ್ತಿದ್ದೇನೆ.

ಡಾಕ್ಟರ್‌ ತಮ್ಮ ಕೊಠಡಿಯಿಂದ ಬಿರಬಿರನೆ ಹೊರ ಬಂದು ಸಹಾಯಕಿಯನ್ನು ಸ್ಕ್ರೂ ಡ್ರೈವರ್‌ ಕೊಡುವಂತೆ ಕೇಳಿದರು. ಸ್ವಲ್ಪ ಹೊತ್ತಾದ ನಂತರ ಒಂದು ಉಳಿ ಹಾಗೂ ಸುತ್ತಿಗೆಯನ್ನೂ ಕೇಳಿ ಪಡೆದರು.

ಇದನ್ನು ನೋಡುತ್ತ ಹೊರಗೆ ನಿಂತಿದ್ದ ಗುಂಡ ಗಾಬರಿಯಿಂದ ಡಾಕ್ಟರನ್ನು ಪ್ರಶ್ನಿಸಿದ, “ಯಾಕೆ ಸ್ವಾಮಿ, ನನ್ನ ಹೆಂಡತಿಯ ಸ್ಥಿತಿ ಸರಿಯಿಲ್ಲವೇ?”

ಡಾಕ್ಟರ್‌ ತಮ್ಮ ಹಣೆಯ ಬೆರಳನ್ನು ಒರೆಸುತ್ತ ಹೇಳಿದರು, “ಇದುವರೆಗೂ ಇನ್ನೂ ಏನು ತಿಳಿಯಲಿಲ್ಲ. ಮೊದಲು ನಾನು ನನ್ನ ಕಿಟ್‌ ಬ್ಯಾಗ್‌ ತೆರೆಯಬೇಕಲ್ಲ?”

ಒಡತಿ : ಯಾಕೆ ಕೆಂಪಿ, ಈ ತಿಂಗಳ ಸಂಬಳದ ಹಣ ನೀನಿನ್ನೂ ಕೇಳೇ ಇಲ್ಲ?

ಕೆಂಪಿ : ಮರ್ವಾದಸ್ತ ಎಂಗಸ್ರನ್ನು ನಾನು ಅಂಗೆಲ್ಲ ಕೇಳಾಕಿಲ್ರವ್ವಾ…..

ಒಡತಿ : ಅಲ್ಲವೇ, ಅದಕ್ಕೇಂತ ಯಾರಾದರೂ ಹೆಂಗಸು ನಿನಗೆ ಸಂಬಳ ಕೊಡದೆ ಇದ್ರೆ?

ಕೆಂಪಿ : ರವಷ್ಟು ದಿನ ನೋಡ್ತಿವ್ನಿ. ಅಂಗೂ ಕೊಡ್ದೇ ಓದ್ರೆ, ಆಮ್ಮಂಗೆ ಮರ್ವಾದೆ ಇಲ್ಲಾಂತ ನಾನೇ ಕೇಳ್‌ ತಕ್ಕಂತೀನಿ.

ಕಮಲಮ್ಮ : ಏನ್ರೀ ವಿಮಲಾ, ಬಹಳ ಬೇಸರ ಮಾಡಿಕೊಂಡಿದ್ದೀರಿ ಏನಾಯ್ತು?

ವಿಮಲಮ್ಮ : ಮದುವೆಯಾಗಿ ಇಷ್ಟು ವರ್ಷದಿಂದ ಅಡುಗೆ ಮಾಡ್ತಿದ್ದಾರೆ ಒಂದು ರುಚಿಯಿಲ್ಲ ಪಚಿಯಿಲ್ಲ…. ನಾನು ಹೇಗೋ ಹೊಂದಿಕೊಂಡಿದ್ದೇನೆ.

ಅರವಿಂದ್‌ : ವಿಜಯ್‌,  ನನಗೆ ನನ್ನ ಹೆಂಡತಿಯದೇ ಬಹಳ ಚಿಂತೆಯಾಗಿದೆ. ಅವಳು ನಿದ್ದೆಯಲ್ಲಿ “ಬೇಡ ರವೀ….” ಎಂದು ಅರಚುತ್ತಾಳೆ. ನನಗೆ ಬಹಳ ಭಯಾಗುತ್ತೆ.

ವಿಜಯ್‌ : ಇದರಲ್ಲಿ ಹೆದರುವಂಥಾದ್ದೇನು ಇದೆ? ಅವಳು ಬೇಡಾಂತ ತಾನೇ ಹೇಳ್ತಿದಾಳೆ.

ನವಿವಾಹಿತೊಬ್ಬಳು ತನ್ನ ಪತಿಯನ್ನು ಪ್ರೀತಿಯಿಂದ ಕೇಳಿದಳು, “ಏನೂಂದ್ರೆ, ನಾನು ದಪ್ಪ ಆದರೂ ನೀವು ನನ್ನನ್ನು ಹೀಗೆ ಪ್ರೀತಿಸ್ತೀರಾ?”

“ಖಂಡಿತ ಇಲ್ಲ,” ಗಂಡ ಉತ್ತರಿಸಿದ, “ನಾನು ಕಷ್ಟ ಸುಖದಲ್ಲಿ ಭಾಗಿಯಾಗುತ್ತೇನೆಂದು ಮಾತ್ರ ಪ್ರಮಾಣ ಮಾಡಿದ್ದೇನೆ. ದಪ್ಪ, ಸಣ್ಣ ಆಗುವ ಬಗ್ಗೆ ಏನೂ ಮಾತು ಕೊಟ್ಟಿಲ್ಲ.”

ಅವಳಿ ಮಕ್ಕಳ ಜನನ ಸಂಖ್ಯೆಯಲ್ಲಿ ಹೆಚ್ಚಳ ಆಗುತ್ತಿರುವ ಕಾರಣವನ್ನು ಸಮಾಜಶಾಸ್ತ್ರಜ್ಞರು ವಿವರಿಸಿದರು. “ಸಮಾಜದಲ್ಲಿ ಹಿಂಸೆ ಎಷ್ಟೊಂದು ಹೆಚ್ಚುತ್ತಿದೆಯೆಂದರೆ ಈಗ ಮಕ್ಕಳೂ ಒಬ್ಬೊಬ್ಬರೇ ಹೊರಬರಲು ಹೆದರುತ್ತಾರೆ.”

“ಒಂದೇ ತರಹ ಇರುವ ಸಾವಿರಾರು ಎಮ್ಮೆಗಳಲ್ಲಿ ನೀನು ನಿನ್ನ ಎಮ್ಮೆಯನ್ನು ಹೇಗೆ ಪತ್ತೆ ಮಾಡಿದೆ?”

ನ್ಯಾಯಾಲಯದಲ್ಲಿ ವಕೀಲರೊಬ್ಬರು ಮಹಿಳೆಯನ್ನು ಪಾಟೀಸವಾಲು ಮಾಡುತ್ತಿದ್ದರು.

ಮಹಿಳೆ ಹೇಳಿದಳು, “ಇದೇನು ಮಹಾ ವಿಷಯ? ಈ ಕಛೇರಿಯಲ್ಲಿ ಕಪ್ಪು ಕೋಟು ಧರಿಸಿರುವ ವಕೀಲರು ಯಾರೆಂದು ನಾನು ಸುಲಭವಾಗಿ ಗುರುತಿಸುತ್ತೇನೆ.”

ಮಹಿಳಾ ಸಾಕ್ಷಿಯೊಬ್ಬಳು ನ್ಯಾಯಾಲಯದ ಕಟಕಟೆಯಲ್ಲಿ ನಿಂತಿದ್ದಳು. ಅವಳು ಮೊದಲು ತನ್ನ ವಯಸ್ಸು ತಿಳಿಸಿ, ಅನಂತರ ಪ್ರಮಾಣ ಮಾಡಿದಳು, “ನಾನು ಹೇಳುವುದೆಲ್ಲಾ ಸತ್ಯ, ಸತ್ಯವಲ್ಲದೆ ಬೇರೇನನ್ನೂ ಹೇಳುವುದಿಲ್ಲ.”

ಇಬ್ಬರು ಗ್ರಾಮೀಣ ಮಹಿಳೆಯರು ಪರಸ್ಪರ ಮಾತನಾಡುತ್ತಿದ್ದರು. ಒಬ್ಬಾಕೆ ಕೇಳಿದಳು, “ಈ ಹಸ್‌ಬ್ಯಾಂಡ್‌ ಎಂದರೆ ಏನೆಂದು ಗೊತ್ತೇನೇ?”

ಇನ್ನೊಬ್ಬಾಕೆ ಹೇಳಿದಳು, “ಅದೊಂದು ಥರ ಬ್ಯಾಂಡು ಕಣೇ. ಅದನ್ನು ಲಟ್ಟಣಿಗೆಯಿಂದ ಬಾರಿಸ್ತಾರೆ.”

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ