ಇಬ್ಬರು ಸಿನಿಮಾ ನಟರ ಪತ್ನಿಯರು ಮಾತುಕಥೆಯಲ್ಲಿ ತೊಡಗಿದ್ದರು. ಒಬ್ಬಳು ಹೇಳಿದಳು, ``ನನ್ನ ಪತಿ ಕೆಲಸ ಕಾರ್ಯಗಳಿಂದ ವಿಶ್ರಾಂತಿ ಪಡೆಯಲೆಂದು ಒಂದು ತಿಂಗಳ ರಜೆ ಪಡೆದಿದ್ದಾರೆ. ನಾವು ಪ್ರಪಂಚ ಪರ್ಯಟನೆಗೆ ಹೊರಟಿದ್ದೇವೆ.''
``ಹೂಂ, ನಾವು ಸಹ ರಜೆಯ ಮಜ ಪಡೆಯಬೇಕೆಂದಿದ್ದೇವೆ. ಆದರೆ ನಾವು ಬೇರೆ ಬೇರೆ ಕಡೆ ಹೋಗಬೇಕೆಂದು ಇದ್ದೇವೆ,'' ಎಂದು ಎರಡನೆಯವಳು ಹೇಳಿದಳು.
ಪತಿ : ಈ ವಿಷಯ ನಂಬಲಾಗದ ಸತ್ಯವಾಗಿದೆ. ಇದರ ವಾಸ್ತವಿಕ ಸಂಗತಿಯನ್ನು ಅಲ್ಲಗಳೆಯಲಾಗುವುದಿಲ್ಲ. ಯೂರೋಪ್‌ನ ಒಬ್ಬ ವಿದ್ವಾಂಸರು ಬರೆಯುತ್ತಾರೆ. ``ಯಾವ ವ್ಯಕ್ತಿ ಮಹಾ ಕಡುಮೂರ್ಖನಾಗಿರುತ್ತಾನೋ, ಅವನಿಗೆ ಅಷ್ಟೇ ಚೆಲುವೆಯಾದ ಹೆಂಡತಿ ಸಿಗುತ್ತಾಳೆ.''
ಪತ್ನಿ : ಅಯ್ಯೋ.... ಇರಲಿ.... ಬಿಡಿ. ಸುಮ್ಮನೆ ನನ್ನ ಹೊಗಳೋದು ಅಂದರೆ ನಿಮಗೆ ಇಷ್ಟ ಅಂತ ನನಗೆ ಗೊತ್ತಿಲ್ವೆ?
ಪ್ರಭಾ : ನನ್ನ ಮಗ ಈ ದಿನ ವಜ್ರದ ಉಂಗುರ ನುಂಗಿಬಿಟ್ಟ. ಈಗ ಅವನ ಆಪರೇಶನ್ ಮಾಡಿಸಬೇಕಾಗಿದೆ. ಇಲ್ಲಿಗೆ ಬಂದಿದ್ದಾರಲ್ಲ ಹೊಸಬರು, ಡಾ. ವಿನಯ್, ಅವರನ್ನು ನಂಬಬಹುದಾ?
ಸುಧಾ : ಇದೇನು ಹೀಗೆ ಹೇಳ್ತೀರಿ? ಅವರು ತುಂಬಾ ಪ್ರಾಮಾಣಿಕರು.
ಮಹೇಂದ್ರ ತನ್ನ ಗೆಳೆಯ ಯೋಗೇಶನ ಮದುವೆಯ ವಾರ್ಷಿಕೋತ್ಸಕ್ಕೆ 500 ರೂ. ಬೆಲೆ ಬಾಳುವ ಒಂದು ಮಾತನಾಡುವ ಗಿಣಿಯನ್ನು ಉಡುಗೊರೆಯಾಗಿ ಕೊಟ್ಟ. ಕೆಲವು ದಿನಗಳ ನಂತರ ಒಮ್ಮೆ ಯೋಗೇಶನ ಮನೆಗೆ ಬಂದ ಮಹೇಂದ್ರ ಕೇಳಿದ, ``ನಾನು ಕೊಟ್ಟ ಉಡುಗೊರೆ ಹಿಡಿಸಿತೇ?''
ಯೋಗೇಶ ಉತ್ತರಿಸಿದ, ``ಬಹಳ ಹಿಡಿಸಿತು. ಆದರೆ ನನ್ನ ಹೆಂಡತಿ ಸ್ವಲ್ಪ ಉಪ್ಪು ಜಾಸ್ತಿ ಹಾಕಿಬಿಟ್ಟಳು.''
ಸುರೇಶ : ಅಲ್ಲಯ್ಯ, ನಿನ್ನ ಕೈಗಳು ಯಾಕೆ ಇಷ್ಟೊಂದು ಕಪ್ಪಾಗಿವೆ?
ಮಹೇಶ : ನನ್ನ ಹೆಂಡತಿಯನ್ನು ರೈಲು ಹತ್ತಿಸಿ ಬಂದೆ.
ಸುರೇಶ : ಅದಕ್ಕೂ ಇದಕ್ಕೂ ಏನಯ್ಯಾ ಸಂಬಂಧ?
ಮಹೇಶ : ನಾನು ಸಂತೋಷದಿಂದ ಎಂಜಿನ್‌ನ್ನು ತಟ್ಟಿ ತಟ್ಟಿ ಶಹಭಾಷ್‌ಗಿರಿ ಕೊಟ್ಟೆ.
ನವ ವಿವಾಹಿತ ಪತಿ : ನಮ್ಮ ಮದುವೆಯಾಗಿ ಆಗಲೇ 24 ಗಂಟೆಗಳಾಗಿ ಹೋಗಿವೆ.
ಪತ್ನಿ : ಹೌದಲ್ವೇ? ನನಗಂತೂ ನಿನ್ನೆ ತಾನೇ ನಮ್ಮ ಮದುವೆ ಆದ ಹಾಗಿತ್ತು.
ಸೀಮಾ : ಈ ಅಂಚೆ ಕಛೇರಿಯವರು ಬಹಳ ಗಡಿಬಿಡಿ ಮಾಡಿಬಿಡುತ್ತಾರಮ್ಮ.
ರೀನಾ : ಹೂಂ, ಅದೇನೋ ಸರಿ. ಆದರೆ ಈಗ ಆದದ್ದೇನು?
ಸೀಮಾ : ನನ್ನ ಪತಿ ಕೇರಳದಿಂದ ನನಗೆ ಪತ್ರ ಬರೆದಿದ್ದಾರೆ. ಆದರೆ ಅಂಚೆ ಕಛೇರಿಯರು ಸಿಮ್ಲಾದ ಮುದ್ರೆ ಒತ್ತಿದ್ದಾರೆ.
ಪ್ರಿಯಕರ : ಪ್ರಿಯೆ, ನಾನು ಬೆಳಗ್ಗೆ ಎದ್ದೊಡನೆ ನಿನ್ನದೇ ಯೋಚನೆಯಲ್ಲಿ ಮುಳುಗಿರುತ್ತೇನೆ.
ಪ್ರೇಯಸಿ : ಹೌದು, ಸಂದೀಪ ಸಹ ಇದನ್ನು ಹೇಳುತ್ತಿರುತ್ತಾನೆ.
ಪ್ರಿಯಕರ : ನಾನು ಸಂದೀಪನಿಗಿಂತ ಎಷ್ಟೋ ಬೇಗನೇ ಏಳುತ್ತೇನಲ್ಲಾ!
ಒಬ್ಬ ಮಹಿಳೆ ನಿದ್ರೆ ಮಾಡಲು ಹಠ ಮಾಡುತ್ತಿದ್ದ ತನ್ನ ಮಗನನ್ನು ರಮಿಸುತ್ತಾ, ``ಮಗು, ಬೇಗ ನಿದ್ದೆ ಮಾಡಿಬಿಡಪ್ಪ. ಇಲ್ಲದಿದ್ದರೆ ಕಳ್ಳ ಬಂದುಬಿಡ್ತಾನೆ... ಅಷ್ಟೇ.....''
ಮಗ ಅದಕ್ಕೆ ಉತ್ತರಿಸುತ್ತ, ``ನನ್ನ ಬಳಿ ನೆಕ್ಲೇಸ್ ಇಲ್ಲ, ಬಳೆ ಇಲ್ಲ ಅಂತ ಅಪ್ಪನ ಹತ್ತಿರ ಜಗಳವಾಡ್ತೀಯಲ್ಲ, ಕಳ್ಳ ಇನ್ನೇಕೆ ಬರುತ್ತಾನಮ್ಮ?''