ನನ್ನ ಹಳೆಯ ಗೆಳತಿ ಗೀತಾ ಪ್ರೌಢಶಾಲೆಗೆ ಹೋಗುವ ಇಬ್ಬರು ಮಕ್ಕಳ ತಾಯಿ. ಆಕೆಯನ್ನು ಈ ಕುರಿತು ಕೇಳಿದರೆ, ತನ್ನ ಮಕ್ಕಳು ಮಾಡಿದ ಸಂಕಲ್ಪವನ್ನು ಮುರಿಯದಂತೆ ನೋಡಿಕೊಳ್ಳುವುದೇ ಅವಳ ಸಂಕಲ್ಪ ಎನ್ನುವುದೇ!

ಹೊಸ ವರ್ಷ ಬಂದೊಡನೆ ಎಲ್ಲರೂ ಸಂಕಲ್ಪಗಳ ಕುರಿತು ಮಾತನಾಡುವುದು ಸಹಜ. ಹೀಗಾಗಿ ಈ ನೂತನ ವರ್ಷ 2015ಕ್ಕಾಗಿ ಏನೆಲ್ಲ ಸಂಕಲ್ಪ ಮಾಡಿಕೊಳ್ಳುವುದು? ಅದಿರಲಿ, ಈ ಸಂಕಲ್ಪಗಳನ್ನು ಉಳಿಸಿಕೊಳ್ಳಬೇಕೇ ಅಥವಾ ಬೇಕಾದಾಗ ಬ್ರೇಕ್ ಮಾಡಬಹುದೇ? ಇದಕ್ಕಾಗಿ ಹಿಂದಿನ ವರ್ಷಗಳ ಸಂಕಲ್ಪಗಳು ಹಾಗೂ ಅವು ಎಷ್ಟು ಮಾತ್ರ ನೆರವೇರಿತು ಎಂಬುದರ ಪರಾಮರ್ಶೆ ಅಗತ್ಯ.

ನನ್ನ ಹತ್ತಿರದ ಒಬ್ಬ ಗೆಳತಿ ಪದ್ಮಾ, ಹಳೆಯ ವಿಚಾರಗಳು, ಸಂಪ್ರದಾಯಗಳನ್ನು ಕಟ್ಟುನಿಟ್ಟಾಗಿ ರೂಢಿಸಿಕೊಂಡಿರುವ ಗೃಹಿಣಿ. ಆಕೆ ಈ ಹೊಸ ವರ್ಷಕ್ಕಾಗಿ ಮಾಡಿದ ಸಂಕಲ್ಪವೆಂದರೆ, ``ಈ ವರ್ಷ ನಾನೆಂದೂ ಕೋಪ ಮಾಡಿಕೊಳ್ಳುವುದೇ ಇಲ್ಲ!''

``ಇದೇನೋ ದಿಢೀರ್‌ ಎಂದು ಕೈಗೊಂಡ ನಿರ್ಧಾರದಂತಿದೆ, ಯೋಚಿಸಿ ಪ್ಲ್ಯಾನ್‌ ಮಾಡಿದ್ದಲ್ಲವೇನೋ....'' ಎಂದು ನಾನು ರಾಗವೆಳೆದೆ. ಅದಕ್ಕೆ ಅವಳು ನಸುನಗುತ್ತಾ, ``ಹೂಂ, ನಮ್ಮವರ ಮಾತುಗಳು ನನ್ನನ್ನು ತಕ್ಷಣ ಈ ಸಂಕಲ್ಪ ಕೈಗೊಳ್ಳಲು ಪ್ರೇರೇಪಿಸಿತು,'' ಎಂದಳು.

``ಅದೇನೆಂದು ವಿವರಿಸುವವಳಾಗು ಸಖಿ,'' ಎಂದು ನಾನು ನಾಟಕೀಯವಾಗಿ ಕೇಳಿದೆ.

``ಯುಗಾದಿ ನಮ್ಮ ಹೊಸ ವರ್ಷದ ಮೊದಲ ದಿನ. ಹೀಗಾಗಿ ಆ ದಿನ ಹಬ್ಬದ ಇತರ ಕೆಲಸ, ಪೂಜೆ ಪುನಸ್ಕಾರ ಮುಗಿದು ಹಿರಿಯರಿಂದ ಆಶೀರ್ವಾದ ಪಡೆದ ಮೇಲೆ ಗಂಡನ ಕಾಲಿಗೆ ನಮಸ್ಕರಿಸಿ ಬೇವುಬೆಲ್ಲ ಸೇವಿಸಬೇಕೆಂಬ ಸಂಪ್ರದಾಯವಿದೆ. ಈ ಸಲ ಹಾಗಾದಾಗ, ಅವರು ಎಂದಿನಂತೆ `ಸುಖೀಭವ' ಅಥವಾ `ದೀರ್ಘ ಸುಮಂಗಲೀಭವ' ಎನ್ನುವ ಬದಲು `ಸದಾ ಶಾಂತ ಸ್ವರೂಪಿಣಿ ಭವ!' ಎಂದುಬಿಡುವುದೇ? ಅವರು ನನ್ನಿಂದ ಏನನ್ನು ಅಪೇಕ್ಷಿಸುತ್ತಿದ್ದಾರೆ ಎಂದು ಅರ್ಥ ಮಾಡಿಕೊಂಡು ನಾನು ತಕ್ಷಣ ಈ ಸಂಕಲ್ಪ ಕೈಗೊಂಡೆ,'' ಎಂದು ವಿವರಿಸಿದಳು ಪದ್ಮಾ.

ನಂತರ ನನ್ನ ಮತ್ತೊಬ್ಬ ಗೆಳತಿ ಸುಮಾಳನ್ನು ಈ ಕುರಿತು ಪ್ರಶ್ನಿಸಿದಾಗ, ಎಲ್ಲಾ ಪತ್ರಿಕೆಗಳಿಗೂ ಫ್ರ್ಯೀಲಾನ್ಲ್ ಬರಹಗಾರ್ತಿಯಾಗಿ ಲೇಖನ ಕಳುಹಿಸುವ ಆಕೆ, ``ಸಂಕಲ್ಪವೇ? ಓ.... ಅದಾಗಲೇ ಮತ್ತೊಂದು ಹೊಸ ವರ್ಷ ಬಂದಾಯ್ತು ಅನ್ನು, ನಾನಂತೂ ಆ ಬಗ್ಗೆ ಇನ್ನು ಏನೂ ನಿರ್ಧರಿಸಿಲ್ಲ....'' ಎಂದು ಸ್ವಲ್ಪ ಯೋಚಿಸಿದ ಅವಳು, ``ಏನಾದರೂ ಒಂದು ನಿರ್ಧಾರ ಕೈಗೊಂಡು ಆ ಸಂಕಲ್ಪಕ್ಕೆ ದೃಢವಾಗಿ ಅಂಟಿಕೊಳ್ಳಬೇಕೆಂಬುದೇ ನನ್ನ ಹೊಸ ಸಂಕಲ್ಪ!'' ಎಂದಳು. ಈ ಬರಹಗಾರರು ತಮ್ಮ ಚಾಣಾಕ್ಷ ಮಾತುಗಳಿಂದ ಏನೋ ಒಂದು ಮೋಡಿ ಮಾಡುತ್ತಾರೆ ಎಂಬುದಂತೂ ನಿಜ.

ನಂತರ ಒಂದು ಖ್ಯಾತ ಖಾಸಗಿ ಕಂಪನಿಯಲ್ಲಿ ಡಿಜಿಎಂ ಆಗಿರುವ ನನ್ನ ಗೆಳತಿ ವಿಶಾಲಾಕ್ಷಿಯನ್ನು ಈ ಬಗ್ಗೆ ವಿಚಾರಿಸಿದೆ.

``ಈ ಹೊಸ ವರ್ಷದಿಂದ ಏನಾದರೂ ಮಾಡಿ ಬೇಗ ಆಫೀಸ್‌ನಿಂದ ಮನೆಗೆ ಹೊರಟು ಫ್ಯಾಮಿಲಿ ಜೊತೆ ಹೆಚ್ಚು ಹೊತ್ತು ಕಳೆಯಬೇಕೆಂಬುದೇ ನನ್ನ ಸಂಕಲ್ಪ,'' ಎಂದು ನುಡಿದಳು.

ಒಂದೇ ಸಮ ಹೊತ್ತು ಗೊತ್ತಿಲ್ಲದೆ ದುಡಿಯುವ ಉದ್ಯೋಗಸ್ಥ ವನಿತೆಯಾದ ಆಕೆ, ಸದಾ ತನ್ನ ಕುಟುಂಬದ ಸಾಂಗತ್ಯ ಬಯಸುವುದು ಸಹಜ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ