ಜೇಲು ಅಪರಾಧಗಳ ಸ್ಕೂಲು

ಜೇಲು ಅಪರಾಧಗಳಿಗೆ ಪರಿಹಾರವೇ ಇಲ್ಲ ಎಂಬಂತೆ ಆಗಿಬಿಟ್ಟಿದೆ, ಅದನ್ನು ಈ 3 ಪ್ರಕರಣಗಳು ಮತ್ತಷ್ಟು ಸ್ಪಷ್ಟಪಡಿಸಿವೆ. ದೆಹಲಿಯಲ್ಲಿ 25 ವರ್ಷದ ಒಬ್ಬ ವಿವಾಹಿತ ಮಹಿಳೆಯನ್ನು (ಇತ್ತೀಚೆಗೆ ಬೆಂಗಳೂರಿನಲ್ಲಿ ಹಾಡು ಹಗಲೇ ಅತ್ತೆಸೊಸೆಯರನ್ನು ಕೊಂದಂತೆ) ನೆರೆಮನೆಯವನು ಕೊಂದು ಹಾಕಿ ತಾನೂ ಆತ್ಮಹತ್ಯೆ ಮಾಡಿಕೊಂಡ. ಇದನ್ನು ಕಂಡ ಅಕ್ಕಪಕ್ಕದವರು ದಂಗುಬಡಿದುಹೋದರು. ಈ ಹೆಂಗಸರು ಆ ಕೊಲೆಗಡುಕನ ವಿರುದ್ಧ ಈಗಾಗಲೇ ದೂರು ಕೊಟ್ಟಿದ್ದಳು ಹಾಗೂ ಆತನನ್ನು 2 ತಿಂಗಳ ಮೊದಲೇ ಜೇಲಿಗೂ ಕಳುಹಿಸಲಾಗಿತ್ತು, ಆದರೆ ಜಾಮೀನು ಕೊಟ್ಟು ಹೊರಗೆ ಕರೆತರಲಾಗಿತ್ತು. 6 ತಿಂಗಳಿನಿಂದ ಆತ ಈಕೆಯನ್ನು ಹಿಂಸಿಸುತ್ತಿದ್ದ.

ಉ.ಪ್ರದೇಶದ ರಾಮಪುರದಲ್ಲಿ ಒಬ್ಬ ಯುವಕನನ್ನು ದಸ್ತಗಿರಿ ಮಾಡಲಾಯಿತು. ಏಕೆಂದರೆ ಆತ 10 ವರ್ಷದ ಬಾಲೆಯನ್ನು ರೇಪ್ ಮಾಡಿದ್ದ. ಅವನು ಈ ಹಿಂದೆ 2012ರಲ್ಲಿ 8 ವರ್ಷದ ಹುಡುಗಿಗೂ ಹೀಗೆ ಮಾಡಿದ್ದ, ಜೊತೆಗೆ 4 ವರ್ಷದ ಸೆರೆವಾಸ ಅನುಭವಿಸಿದ್ದ.

ಮತ್ತೊಂದು ಪ್ರಕರಣದಲ್ಲಿ 34 ವರ್ಷದ ಒಬ್ಬ ವ್ಯಕ್ತಿ 21 ವರ್ಷದ ತರುಣಿಯನ್ನು ನಡುಬೀದಿಯಲ್ಲಿ 24 ಸಲ ಕತ್ತರಿಯಿಂದ ಇರಿದು ಕೊಲೆ ಮಾಡಿದ್ದ. ಸುತ್ತಲೂ ನೋಡುತ್ತಿದ್ದವರು ಏನೂ ಮಾಡಲಾರದೆ ಹೋದರು. ಈ ಹುಡುಗ ಲವ್ ಲವ್ ಎಂದು ಅವಳ ಹಿಂದೆ ಅಲೆಯುತ್ತಿದ್ದ.

ಈ ಕುರಿತಾಗಿ ಅಪರಾಧ ತಜ್ಞರು ಸದಾ ಹೇಳುವುದೆಂದರೆ, ಜೇಲಿಗೆ ತಳ್ಳಿದರೆ ಅಪರಾಧಿ ಸುಧಾರಿಸುತ್ತಾನೆಯೇ ಅಥವಾ ಬಲಂತವಾಗಿ ಸಮಾಜದಿಂದ ಅವನನ್ನು ಅಷ್ಟು ಕಾಲ ದೂರ ಇರಿಸುವುದೇ? ಅವರು ಹೇಳುವ ಮತ್ತೊಂದು ವಿಷಯ, ಜೇಲಿನಲ್ಲಿ ಜೀವನ ಎಷ್ಟೇ ಕಷ್ಟಕರವಾಗಿರಲಿ ಅದು ಅಪರಾಧಗಳ ಸ್ಕೂಲು ಸಹ ಹೌದು! ಇಲ್ಲಿ ಅಪರಾಧ ಮಾಡುವುದು ಹೇಗೆಂದು ಕಲಿಸಲಾಗುತ್ತದೆ. (`ಮಿಂಚಿನ ಓಟ’ ಚಿತ್ರ ನೆನಪಿಸಿಕೊಳ್ಳಿ) ಅಪರಾಧಗಳ ಮೇಲೆ ನಿಯಂತ್ರಣ ಎಂಬುದು ಅಸಲಿಗೆ ಜೇಲುಗಳಲ್ಲಿ ಕಡಿಮೆ ಹಾಗೂ ಕಲಿಯುವ ಶಿಕ್ಷಣದಿಂದ ಹೆಚ್ಚು ದೊರಕುತ್ತದೆ ಎಂಬುದು ನಿಜ. ಪ್ರಾಮಾಣಿಕವಾಗಿ ನಡೆದುಕೊಂಡರೆ ಹೆಚ್ಚು ಆದಾಯ ಗಳಿಸಲು ಸಾಧ್ಯ ಎಂದು ಅರಿವಾದಾಗ, ಜನ ಅಪರಾಧ ಕಡಿಮೆ ಮಾಡುತ್ತಾರೆ. ಆದರೆ ಇದು ಅಕ್ಷರಶಃ ನಿಜವಲ್ಲ, ಏಕೆಂದರೆ, ಸಭ್ಯ ದೇಶ ಅಮೆರಿಕಾದಲ್ಲೂ ಸಹ ಜನಸಂಖ್ಯೆಯ ಅನುಪಾತದಲ್ಲಿ ಅತಿ ಹೆಚ್ಚು ಅಪರಾಧಗಳು ನಡೆಯುತ್ತಿರುತ್ತವೆ.

ಅಲ್ಲಿನ ಜೇಲುಗಳಂತೂ ಕೈದಿಗಳಿಂದ ಸದಾ ತುಂಬಿ ತುಳುಕುತ್ತಿವೆ. ಜೇಲಿಗೆ ಹೋಗಿಬರುವುದೇ ಅಲ್ಲಿ ದೊಡ್ಡ ಬಿಸ್‌ನೆಸ್‌. ಅಲ್ಲಿನ ಹಲವು ರಾಜ್ಯಗಳು ಈ ಕೆಲಸವನ್ನು ಕಾಂಟ್ರಾಕ್ಟ್ ಗೆ ಒಪ್ಪಿಸಿವೆ, ಅವು ನ್ಯಾಯಾಧೀಶರನ್ನು ಪ್ರಭಾವಿತಗೊಳಿಸಿ, ಗ್ರಾಹಕರು ಅಂದರೆ ಕೈದಿಗಳ ಸಂಖ್ಯೆ ಹೆಚ್ಚಿಸುವಲ್ಲಿ ಧಾವಿಸುತ್ತಿವೆ.

ಅಮೆರಿಕಾ ಶ್ರೀಮಂತ ರಾಷ್ಟ್ರವಾದರೂ ಸುರಕ್ಷಿತವಲ್ಲ. ಅದು ನಗರ ಅಥವಾ ಗ್ರಾಮೀಣ ಪ್ರದೇಶವಾಗಿರಲಿ, ಅಪರಾಧಿಗಳಿಂದ ತುಂಬಿಹೋಗಿದೆ. ಹಾಗಾಗಿ ಅಲ್ಲಿ ಗನ್‌ ಕಂಟ್ರೋಲ್ ನಡೆಯದು. ಏಕೆಂದರೆ ಕೈಲಿ ಗನ್‌ ಇದೆ ಎಂಬುದನ್ನೇ ದೊಡ್ಡದಾಗಿಸಿಕೊಂಡರು ಎಷ್ಟೋ ಅಮಾಯಕರನ್ನು ನಿರ್ದಾಕ್ಷಿಣ್ಯವಾಗಿ ಕೊಂದಿದ್ದಾರೆ.

ಭಾರತದಲ್ಲಿ ಅತ್ಯಾಚಾರ, ಹೆಂಗಸರ ಮೇಲೆ ದೌರ್ಜನ್ಯ, ವರದಕ್ಷಿಣೆ ಹತ್ಯಾಕಾಂಡ…. ಇತ್ಯಾದಿಗಳಿಗೆ ಒಮ್ಮೆಲೇ ಆಪಾದಿತರನ್ನು ಜೇಲಿಗೆ ತಳ್ಳಿಬಿಡಬೇಕು ಅಥವಾ ಗಲ್ಲು ಶಿಕ್ಷೆ ಕೊಡಿಸಬೇಕು ಎಂಬುದು ಆಧಾರವಿಲ್ಲದ ಮಾತು. ಕೋರ್ಟುಗಳು  ಪ್ರತಿ ಅಪರಾಧಿಗೂ ಒಂದಿಷ್ಟು ಕಾಲಾವಕಾಶ ಕೊಡಬೇಕು, ಅವನು ತನ್ನನ್ನು ತಾನು ರಕ್ಷಿಸಿಕೊಳ್ಳಲು, ಜೊತೆಗೆ ಪೆರೋಲ್ ‌ಅಥವಾ ಜಾಮೀನಿನ ಸೌಲಭ್ಯಗಳೂ ಬೇಕು.

ಜೇಲು ಎಂದರೆ ಸಮಾಜದ ಸುರಕ್ಷತೆಗೆ ಒಂದು ದಾರಿಯೇನಲ್ಲ. ನೈತಿಕತೆಯ ಪಾಠ ಹೇಳುವುದೂ ಸುಲಭವೇನಲ್ಲ. ಅಪರಾಧ ಎಂದರೆ ರಸ್ತೆ ಮಧ್ಯೆ ಆಗುವಂಥ ಅಪಘಾತಗಳಲ್ಲಿನ ಮರಣ ಇದ್ದಂತೆ, ಅದು ನಡೆಯುತ್ತಲೇ ಇರುತ್ತದೆ. ಸಮಾಜ ಈ ದುಃಖದೊಂದಿಗೆ ಹೇಗೆ ಹೆಣಗಬೇಕು ಎಂಬುದನ್ನು ಕಲಿಯುವ, ಕಲಿಸುವ ಅಗತ್ಯವಿದೆ.

ಕುರ್ಚಿ ದೊಡ್ಡದೋ ಸಂಬಂಧ ದೊಡ್ಡದೋ?

ಉತ್ತರ ಪ್ರದೇಶದಲ್ಲಿ, ಅತ್ತೆ ಸೊಸೆಯರ ಮಧ್ಯೆ ನಡೆಯುವಂತೆ ಮಗ, ತಂದೆ ಮತ್ತು ಚಿಕ್ಕಪ್ಪನ ಮಧ್ಯೆ ಜಗಳ ನಡೆಯುತ್ತಿದೆ. ಅಖಿಲೇಶ್‌ ಯಾದವ್ ಸರ್ಕಾರವನ್ನು ತನಗೆ ತಕ್ಕಂತೆ ನಡೆಸಲು ಇಚ್ಛಿಸುತ್ತಾರೆ. ತಂದೆ ಮತ್ತು ಚಿಕ್ಕಪ್ಪ ಅಂದರೆ ಚಿಕ್ಕಮ್ಮ ಮತ್ತು ಅತ್ತೆ ಸೇರಿಕೊಂಡು ತಮ್ಮ ಬಣ್ಣವನ್ನು ತೋರಿಸುತ್ತಿದ್ದಾರೆ. ಭಾರತೀಯ ಕೌಟುಂಬಿಕ ಪರಂಪರೆಯ ಈ ಉದಾಹರಣೆ ಇದೇ ಮೊದಲಲ್ಲ, ಇದೇ ಕೊನೆಯೂ ಅಲ್ಲ. ಪೌರಾಣಿಕ ಗ್ರಂಥಗಳೂ ಇವುಗಳಿಂದ ಕೂಡಿವೆ. ಕಥೆ ಕಾದಂಬರಿಗಳೂ ಇವುಗಳಿಂದ ಕೂಡಿವೆ, ಕೋರ್ಟುಗಳ ತೀರ್ಮಾನಗಳೂ ಇವುಗಳಿಂದ ಕೂಡಿವೆ.

ನಿಕಟತೆ, ಪ್ರೀತಿ ಮತ್ತು ಭರವಸೆ ಉತ್ಪತ್ತಿ ಮಾಡುವಂತೆ ಅಸಹಜತೆಯನ್ನೂ ಉತ್ಪತ್ತಿ ಮಾಡತ್ತದೆ, ತಿಳಿಯದವರಿಂದ ಕೊಡುವುದು ತೆಗೆದುಕೊಳ್ಳುವುದರಲ್ಲಿ ಶೇಷ ಉಳಿಯುವುದಿಲ್ಲ. ತಮ್ಮವರಿಂದ ಖಾತೆ ಎಂದೂ ಮುಕ್ತಾಯವಾಗುವುದಿಲ್ಲ. ಬ್ಯಾಕ್‌ ಡೇಟೆಡ್ ಎಂಟ್ರಿಗಳು ಆಗುತ್ತಿರುತ್ತವೆ. ಅಖಿಲೇಶ್‌, ಮುಲಾಯಂ ಮತ್ತು ಶಿಲ್ಪಾ ‌ಇದೇ ಸಿಕ್ಕಿನಲ್ಲಿ ಇದ್ದಾರೆ. ಅದೂ 2017ರ ಎಲೆಕ್ಷನ್‌ ತಲೆಯ ಮೇಲೆ ತೂಗುತ್ತಿರುವಾಗ, ತಾವು ಅಂದುಕೊಂಡಷ್ಟು ಲಾಭ ಸಿಗುತ್ತಿಲ್ಲ ಅನ್ನಿಸುತ್ತದೆ. ಅವರು ಅತ್ತೆ ಅಥವಾ ಸೊಸೆಯಂತೆ ಬಂಡಾಯದ ಬಾವುಟ ಹಾರಿಸುತ್ತಾರೆ.

ಅತ್ತೆ ತಾಯಿಯ ಸಮಾನ ಸೊಸೆ ಮಗಳ ಸಮಾನ ಎಂದು ನಾವು ಘೋಷಿಸುತ್ತಿರುತ್ತೇವೆ. ಆದರೆ ಅವರ ನಡುವೆ ಒಂದು ಅದೃಶ್ಯವಾದ ದಪ್ಪನೆಯ ಗೋಡೆ ಇರುತ್ತದೆ. ಜಗಳ, ಕದನ ಯಾವಾಗಲೂ ನಡೆಯುತ್ತಲೇ ಇರುತ್ತದೆ. ಅದರಿಂದ ಕುಟುಂಬಗಳು ಒಡೆಯುತ್ತವೆ. ತಾಯಿ ತಂದೆ ಅಂದರೆ ಅತ್ತೆ ಮಾವ ಹಾಗೂ ಮೊಮ್ಮಕ್ಕಳಿಗೂ ನಷ್ಟವಾಗುತ್ತದೆ. ಆದರೆ ಇದು ಪ್ರಕೃತಿ ನಿಯಮ. ಅದಕ್ಕೆ ದುಃಖಿಸಬೇಕಾಗಿಲ್ಲ.

ಉತ್ತರ ಪ್ರದೇಶದಲ್ಲಿ ನಡೆದಿದ್ದು ಇಂದಿರಾಗಾಂಧಿಯ ಮನೆಯಲ್ಲೂ ನಡೆದಿದೆ. ಅದು ಜಯಲಲಿತಾರೊಂದಿಗೂ ಆಯಿತು. ಆಂಧ್ರಪ್ರದೇಶದಲ್ಲಿ ಚಂದ್ರಬಾಬು ನಾಯ್ಡುರೊಂದಿಗೂ ಆಯಿತು. ಶಿವಸೇನಾದ ಬಾಳಠಾಕ್ರೆ ಕುಟುಂಬದಲ್ಲೂ ಆಯಿತು. ಆದ್ದರಿಂದ ಇದು ಅದ್ಭುತ ಅಲ್ಲ, ಚಿಂತೆಯ ವಿಷಯ ಅಲ್ಲ. ರಾಜ್ಯದಲ್ಲಿ ಸರ್ಕಾರ ನಡೆಯುತ್ತಿರುತ್ತದೆ. ಅಡುಗೆಮನೆಯಲ್ಲಿ ಅಡುಗೆ ಬೇಯುತ್ತಿರುತ್ತದೆ. ಆದರೆ ಪಾತ್ರೆ ಕೊಂಚ ಜೋರಾಗಿ ಕುಕ್ಕಲ್ಪಡುತ್ತದೆ.

ಮನುಷ್ಯರಿಗೆ ಒಟ್ಟಿಗೇ ಬದುಕುವ ಗುಣ ಬಂದಿದೆ. ಆದರೆ ಈ ಗುಣ ನಮ್ಮ ಜೀನ್ಸ್ ನಲ್ಲಿ ಅಷ್ಟು ಗಾಢವಾಗಿ ಹೋಗಿಲ್ಲ ಅಂದರೆ ಎಲ್ಲ ಮನುಷ್ಯರೂ ಒಟ್ಟಿಗೆ ಒಂದೇ ರೀತಿ ಯೋಚಿಸುತ್ತಾರೆ ಎಂದಲ್ಲ. ಒಂದು ವೇಳೆ ಹಾಗೇನಾದರೂ ಆದರೆ ಶತಮಾನಗಳಿಂದ ನಡೆಯುತ್ತಿರುವ ಯುದ್ಧಗಳು ಆಗುತ್ತಿರಲಿಲ್ಲ, ಕೋಟಿಗಟ್ಟಲೆ ಜನ ಸಾಯುತ್ತಿರಲಿಲ್ಲ, ವಿಚ್ಛೇದನಗಳೂ ಆಗುತ್ತಿರಲಿಲ್ಲ. ಮನುಷ್ಯ ತನ್ನ ಹಿತಕ್ಕಾಗಿ ಸಂಗಾತಿಯನ್ನು ಹುಡುಕುತ್ತಾನೆ. ವಿಷಯ ಹಿತ ಅಹಿತದ ಎಲ್ಲೆಯವರೆಗೆ ತಲುಪಿದಾಗ ಬೇರೆಯಾಗುವ ವಿಧಾನ ಮಾತ್ರ ಉಳಿಯುತ್ತದೆ.

ಅಖಿಲೇಶ್‌ಗೆ ಉತ್ತರಪ್ರದೇಶದ ಮುಖ್ಯಮಂತ್ರಿ ಪದವಿ ಬಿಡಬೇಕಾಗಬಹುದು. 2017ರ ಚುನಾವಣೆಯಲ್ಲಿ ಯಾವುದೇ ಪಕ್ಷ ಭಾಜಪಾ ಅಥವಾ ಮಾಯಾವತಿಯ ಕಡೆ ಸೇರಿಕೊಳ್ಳಬಹುದು. ಹಾಗೇನಾದರೂ ಆದರೆ ಸಮಾಜಾದಿ ಪಕ್ಷ ಸಮಾಪ್ತಿಯಾಗಬಹುದು. ಆದರೆ ಯಾವುದೇ ಪರಿಶ್ರಮವಿಲ್ಲದೆ ಇನ್ನೊಬ್ಬರ ತಟ್ಟೆಯಲ್ಲಿ ಹಲ್ವಾ ಪೂರಿ ಬಂದು ಬೀಳುತ್ತದೆ. ಇದು ಕೊಂಚ ಬೆಚ್ಚಿ ಬೀಳಿಸುವ ವಿಷಯವಾಗಿದೆ, ಆದರೆ ವಿಚಿತ್ರವಲ್ಲ. ಆದ್ದರಿಂದ 3-4 ತಿಂಗಳುಗಳ ನಂತರ ಅವರ ಗೆರೆಗಳೂ ಮರಳಿನ ನೆಲದ ಮೇಲೆ ಉಳಿಯುವುದಿಲ್ಲ.

ಪ್ರಭುವಿನ ಲೀಲೆ!

ಈಗ ತವರುಮನೆಗೆ ಹೋಗುವುದು ಅಷ್ಟು ಸುಲಭವಲ್ಲ. ಪ್ರಭು (ಭಗವಂತನಲ್ಲ, ರೈಲ್ವೆ ಮಂತ್ರಿ) ಶೇ.50ರಷ್ಟು ಬಾಡಿಗೆ ಹೆಚ್ಚಿಸಲು ವ್ಯವಸ್ಥೆ ಮಾಡುತ್ತಿದ್ದಾರೆ. ಒಂದು ಕಡೆ ರೈಲ್ ‌ಟಿಕೆಟ್‌ ತೆಗೆದುಕೊಳ್ಳುವುದು ಲಾಟರಿಯಂತಾಗಿದೆ. ಈಗ ಮೊದಲು ಶೇ.10ರಷ್ಟು ಜನಕ್ಕೆ ಸಾಮಾನ್ಯ ದರದಲ್ಲಿ ಟಿಕೆಟ್‌ ಸಿಗುತ್ತದೆ. ನಂತರ ಪ್ರತಿ ಶೇ.10ರಷ್ಟು ಜನಕ್ಕೆ ಮೊದಲಿಗಿಂತ ಶೇ.10ರಷ್ಟು ಹೆಚ್ಚು ಕೊಡಬೇಕಾಗುತ್ತದೆ ಮತ್ತು ಶೇ.50ರವರೆಗೆ ಹೆಚ್ಚು ಕೊಡಬೇಕಾಗುತ್ತದೆ.

ಇದು ರೈಲುಗಳ ಏಕಾಧಿಕಾರದ ದುರುಪಯೋಗವಾಗಿದೆ. ರೈಲುಗಳು ಅಗ್ಗವೇ ಅಲ್ಲವೇ ಎಂದು ಅಂದಾಜಿಸುವುದು ಸುಲಭವಲ್ಲ. ಏಕೆಂದರೆ ಅದರ ಮೇಲೆ ಸರ್ಕಾರಿ ಹಿಡಿತವಿದೆ. ಎಲ್ಲಿ ಹಾಳಾಗುತ್ತಿದೆ ಎಂದು ಹೇಗೆ ಗೊತ್ತಾಗುತ್ತದೆ? ಸರ್ಕಾರವಂತೂ ರೈಲ್ವೆ ಸಚಿವಾಲಯವನ್ನು ಪೊಲೀಸ್‌ ಠಾಣೆಗಳಂತೆ ನಡೆಸಿಕೊಳ್ಳುತ್ತದೆ. ಅಲ್ಲಿ ಎಲ್ಲ ನೌಕರರು ಸೇವೆಗಲ್ಲ, ವಸೂಲಿಗೆ ನಿಂತಿರುತ್ತಾರೆ.  ಸೇವೆ ಎನ್ನುವುದು ಸುಳ್ಳು. ನೌಕರಿ ಸುರಕ್ಷಿತವಾಗಿಟ್ಟುಕೊಳ್ಳುವುದು ಉದ್ದೇಶವಾಗಿದೆ.

ರೈಲ್ವೆ ಬಾಡಿಗೆ ಹೆಚ್ಚಿಸುವುದು ಅದೂ ಈ ರೀತಿ, ಬಹಳ ಅನ್ಯಾಯವಾಗಿದೆ. ರೈಲಿನ ಒಂದು ಭೋಗಿಯಲ್ಲಿ ಕುಳಿತ ಶೇ.10ರಷ್ಟು ಪ್ರಯಾಣಿಕರಿಗೆ ಶೇ.50ರಷ್ಟು ರಿಯಾಯಿತಿ ಸಿಕ್ಕರೆ ಹೇಗೆ ಒಪ್ಪಲು ಸಾಧ್ಯ? ತತ್ಕಾಲ್ ಸೌಲಭ್ಯದ ಮೂಲಕ ರೈಲ್ವೆ ಮೊದಲೇ ಕೆಲವು ಸೀಟುಗಳನ್ನು ರಿಸರ್ವ್ ‌ಮಾಡಿ ಹೆಚ್ಚು ವಸೂಲಿ ಮಾಡುತ್ತಿತ್ತು. ಈಗ ಖಾಲಿ ಟ್ರೇನ್‌ಗಳಲ್ಲೂ ಕೇವಲ ಶೇ.10ರಷ್ಟು ನಿರ್ಧಾರಿತ ಬಾಡಿಗೆ ಕೊಡುವುದು ಮನಸ್ಸಿಗೆ ಬಂದಂತಾಗುತ್ತದೆ. ಇದು ಯಾವುದೇ ರೀತಿಯಲ್ಲೂ ಮಾನ್ಯವೆಂದು ತಿಳಿಯಲಾಗುವುದಿಲ್ಲ. ರೈಲುಗಳಿಗಾಗಿ ಇಂದೂ ಸಹ ಸರ್ಕಾರ ಮನಸ್ಸಿಗೆ ಬಂದ ದರದಲ್ಲಿ ಜಮೀನುಗಳನ್ನು ಖರೀದಿಸುತ್ತದೆ.  ತೆರಿಗೆಯಿಂದ ಬಂದ ಹಣವನ್ನು ಹೂಡಿಕೆ ಮಾಡುತ್ತದೆ. ಇದು ನಾಗರಿಕರ ಸೇವೆಗಾಗಿ ಇದೆ. ಪ್ರತಿ ನಾಗರಿಕನಿಗೆ ಸಂಪಾದಿಸಿದ ಹಣಕ್ಕೆ ತಕ್ಕ ಹಾಗೆ ಕೊಡುವ ಹಕ್ಕಾಗುತ್ತದೆ. ಮೊದಲ ಶೇ.10ರಲ್ಲಿ ಬರಲು ಟಿಕೆಟ್‌ ಬುಕಿಂಗ್‌ ಮಾಡುವುದು, ಪಿ.ಟಿ. ಉಷಾರಂತೆ ಓಡಬೇಕು. ಅದರಲ್ಲೂ ಪದಕ ಸಿಗದಿರುವ ಅಪಾಯವಿದೆ.

ಈ ನಿಯಮವನ್ನು ಕೂಡಲೇ ವಾಪಸ್‌ ಪಡೆಯಬೇಕು. ಹೌದು, ಕೆಲವು ಸೀಟುಗಳ ಶೇ.10ರಷ್ಟು ಹರಾಜಾಗುತ್ತವೆ. ಅದರಲ್ಲಿ ದಲ್ಲಾಳಿಗಳ ಕೈವಾಡವಿರುವುದಿಲ್ಲ. ಜೊತೆಗೆ ಕೋಪಿಸಿಕೊಂಡು ಇಂದೇ ತವರುಮನೆಗೆ ಹೋಗುವವರು ಟಿಕೆಟ್‌ ಸಿಗದೆ ಮತ್ತೆ ಸ್ಟೇಷನ್‌ನಿಂದ ಗಂಡನ ಮನೆಗೆ ವಾಪಸ್‌ ಬರುವಂತಿಲ್ಲ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ