ಶರತ್ ಚಂದ್ರ

ಸಿಂಪಲ್ ಸುನಿ ಅವರು ತಮ್ಮ ಸಿಂಪಲ್ ಮೂವಿಗಳಿಂದ ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಇದೇ ಶುಕ್ರವಾರದಂದು ಹಾಡಿನ ಚಿತ್ರೀಕರಣವನ್ನು ಕಂಠೀರವ ಸ್ಟುಡಿಯೋದಲ್ಲಿ ಚಿತ್ರೀಕರಿಸಲಾಗಿತ್ತು. ಚಿತ್ರದ ನಾಯಕ ಶೀಲಮ್ ಮತ್ತು ಚಿತ್ರದ ನಾಯಕಿ  ಸಾತ್ವಿಕ ಈ ಹಾಡಿನಲ್ಲಿ ಭಾಗವಹಿಸಿದ್ದರು.

ಕೊರಿಯೋಗ್ರಾಫರ್,  ನಾಯಕ ಮತ್ತು ನಾಯಕಿಯ ನೃತ್ಯವನ್ನು ರೋಪ್ ಬಳಸಿ ಒಂದು ವಿಭಿನ್ನ ನೃತ್ಯ ಸಂಯೋಜನೆಯನ್ನು ಅಳವಡಿಸಿದ್ದರು.

ಇಂತಹ ಸನ್ನಿವೇಶಗಳನ್ನು ಚಿತ್ರೀಕರಿಸುವಾಗ ಸಾಕಷ್ಟು ಎಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ. ಆದರೆ ಒಂದು ಶಾಟ್ ನಲ್ಲಿ ನೋಡು ನೋಡುತ್ತಿದ್ದಂತೆ ನಾಯಕಿ ಸಾತ್ವಿಕಾ ಆಯಾ ತಪ್ಪಿ ನೆಲಕ್ಕೆ ಬಿದ್ದಿದ್ದಾರೆ.

1000598675

ಈ ರೀತಿಯ ಸನ್ನಿವೇಶಗಳಲ್ಲಿ ಫ್ಲೋರ್ ನಲ್ಲಿ ಸುರಕ್ಷತೆಗಾಗಿ ಬೆಡ್ ಬಳಸುವುದರಿಂದ ಸಾತ್ವಿಕಾಗೆ ಹೆಚ್ಚಿನ ಗಾಯಗಳಾಗಿಲ್ಲ. ಈ ಒಂದು ಅನಿರೀಕ್ಷಿತ ಘಟನೆ ಯಿಂದ ಸೆಟ್ ನಲ್ಲಿ ಒಂದಷ್ಟು ಹೊತ್ತು ಮೋಡ ಕವಿದ ವಾತಾವರಣ ನಿರ್ಮಾಣ ಆಗಿತ್ತು. ಕಾಲು ಕುಂಟುತ್ತಲೆ ಸಾತ್ವಿಕ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದರು.

1000598679

ಅಂದ ಹಾಗೆ ಈ ಹೊಸ ಚಿತ್ರಕ್ಕೆ ಮೋಡ ಕವಿದ ವಾತಾವರಣ ಎಂದು ಹೆಸರಿಡಲಾಗಿದೆ. ಸಿಂಪಲ್ ಸುನಿ ಅವರ ಗತವೈಭವ, ದೇವರು ರುಜು ಹಾಕಿದನು ಚಿತ್ರಗಳ ಚಿತ್ರೀಕರಣ ನಿಧಾನ ಗತಿ ಯಲ್ಲಿ ಸಾಗುತ್ತಿದೆ.  ಒಂದು ಸರಳ ಪ್ರೇಮ ಕಥೆಯ ನಂತರ ಸಿಂಪಲ್ ಸುನಿ ವೇಗವಾಗಿ ಚಿತ್ರೀಕರಣ ಮುಗಿಸಿರುವ ಈ ಚಿತ್ರ ಆದಷ್ಟು ಬೇಗ ಬಿಡುಗಡೆಯಾಗಲಿದೆ.

1000598677

ಈ ಚಿತ್ರದಲ್ಲಿ ಸಾತ್ವಿಕ ಹೊರತುಪಡಿಸಿ ಇನ್ನೊರ್ವ ನಾಯಕಿಯಾಗಿ ಕೋಟಿ ಚಿತ್ರದ ನಾಯಕಿ ಮೋಕ್ಷ ಕುಶಾಲ್ ಅಭಿನಯಿಸಿದ್ದಾರೆ. ಸಿಂಪಲ್ ಸುನಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ ಶೀಲಮ್ ಎಂಬ ಯುವಕ ನಾಯಕನಾಗಿ ನಟಿಸುತ್ತಿದ್ದಾರೆ. ಹಿಂದೆ ಒಂದು ಸರಳ ಪ್ರೇಮ ಕಥೆ ಚಿತ್ರವನ್ನು ನಿರ್ಮಿಸಿದ ಮೈಸೂರ್ ರಮೇಶ್ ನಮ್ಮ ಸ್ನೇಹಿತರೊಂದಿಗೆ ಈ ಚಿತ್ರವನ್ನು ತಮ್ಮ ರಾಮ್ ಮೂವೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸುತ್ತಿದ್ದಾರೆ.

 

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ