CATEGORY : SOCIETY
URL : SARAKARA
ಈಗ ಎಲ್ಲೆಲ್ಲೂ ಲಿವ್ ಇನ್ ರಿಲೇಶನ್ ಶಿಪ್ ಕುರಿತು ಪರ/ವಿರೋಧದ ಮಾತುಗಳು ಕೇಳಿ ಬರುತ್ತಿರುತ್ತಿ. ಆದರೆ ಈ ಸಂಬಂಧ ಹಲವು ಅಪಾಯಗಳಿಂದ ತುಂಬಿದೆ ಎಂಬುದು ಸುಳ್ಳಲ್ಲ. ಏಕೆಂದರೆ ಈ ಕುರಿತು ಕಾನೂನಿನ ವ್ಯವಸ್ಥೆ ಹೇಗಿದೆ ಅಂದ್ರೆ, ಯಾವುದೇ ಹಕ್ಕಾಗಲಿ, ಕಾನೂನುಬದ್ಧ ವಿವಾಹದಿಂದ ಮಾತ್ರ ಸಿಗಲಿದೆ. ಈ ಲಿವ್ ಇನ್ ಗೆ ಕಾನೂನಿನ ಚೌಕಟ್ಟು ನೀಡಲು ಸರ್ಕಾರ ಖಂಡಿತಾ ಸಿದ್ಧವಿಲ್ಲ, ಕೋರ್ಟುಗಳೂ ಸಹ, ಇಂಥ ಜೋಡಿಗಳು ಪರಸ್ಪರ ಯಾವುದೇ ಕಾಂಟ್ರಾಕ್ಟ್ ಮಾಡಿಕೊಳ್ಳುವಂತಿಲ್ಲ.
ಗುಜರಾತ್ ನ `ಮೈತ್ರಿ ಕರಾರ್' ಒಂದು ಹಳೆಯ ಪದ್ಧತಿ, ನಮ್ಮಲ್ಲಿನ ಕೂಡಾಳಿ ಹಾಗೆ. ಆದರೆ ಇದಕ್ಕೂ ಕಾನೂನಿನ ಅಸ್ತು ಇಲ್ಲ. ಏಕೆಂದರೆ ಸೋಶಿಯಲ್ ಪಾಲಿಸಿಗಳ ವಿರುದ್ಧ ಮಾಡಿಕೊಳ್ಳಲಾದ ಕಾಂಟ್ರಾಕ್ಟ್ ಗೆ ಯಾವುದೇ ಮಾನ್ಯತೆ ಇಲ್ಲ.
ಹ್ಞಾಂ, ಇಂದಿನ ಆಧುನಿಕ ಜೋಡಿಗಳು ಹೀಗೇ ಬದುಕಲು ಬಯಸಿದರೆ, ಇದು ಕಾನೂನುಬಾಹಿರ ಅಂತೂ ಖಂಡಿತಾ ಅಲ್ಲ. ಇಬ್ಬರೂ ಪ್ರಾಪ್ತ ವಯಸ್ಕರಾಗಿದ್ದು ತಾವಾಗಿ ಇಷ್ಟಪಟ್ಟರೆ, ಹೀಗೆ ಬದುಕಬಹುದು. ಇವರಲ್ಲಿ ಒಬ್ಬರೇನಾದರೂ ವಿವಾಹಿತರಾಗಿದ್ದರೆ, ಅವರ ಸಂಗಾತಿ ಅಡಲ್ಟ್ರಿ ಹಕ್ಕು ಮೀರಲಾಗಿದೆ ಎಂದು ವಿಚ್ಛೇದನ ಕೋರಬಹುದು.
ಇಲ್ಲಿ ಸಮಸ್ಯೆ ಶುರುವಾಗಿದ್ದು, ಒಬ್ಬ ವಿವಾಹಿತೆ ಗಂಡನನ್ನು ಬಿಟ್ಟು, ಮತ್ತೊಬ್ಬನೊಡನೆ ಲಿವ್ ಇನ್ ನಲ್ಲಿದ್ದು, ಮಗು ಪಡೆದಾಗ! ಆಕೆ ಮಗುವಿನ ಬರ್ತ್ ಸರ್ಟಿಫಿಕೇಟ್ ನಲ್ಲಿ ಲಿವ್ ಇನ್ ಪಾರ್ಟ್ ನರ್‌ಬಯಲಾಜಿಕಲ್ ಫಾದರ್ ಹೆಸರು ಬರಲಿ ಎಂದು ಕೋರಿದಾಗ, ಮುಂಬೈನ ಮುನಿಸಪಲ್, ಫ್ಯಾಮಿಲಿ ಕೋರ್ಟ್ ಮ್ಯಾಜಿಸ್ಟ್ರೇಟ್ ಅಥವಾ ಹೈಕೋರ್ಟ್ ಸಹ ಒಪ್ಪಲಿಲ್ಲ. ಇದಕ್ಕೆ ಕಾರಣ, ಮದುವೆಯಿಂದ ಹುಟ್ಟಿದ ಮಗು, ಕಾನೂನುಬದ್ಧವಾಗಿ ತಂದೆಗೆ ಸೇರುತ್ತದೆ, ಆಕೆ ಯಾರಿಂದ ಟೆಸ್ಟ್ ಟ್ಯೂಬ್ ಬೇಬಿ ಪಡೆದಳೆಂಬುದು ಇಲ್ಲಿ ಮುಖ್ಯವಲ್ಲ. ಹಿಂದೆಲ್ಲ ಇದು ನಿಯೋಗದ ಹೆಸರಿನಲ್ಲಿ ಹೇಗೋ ನಡೆಯುತ್ತಿತ್ತು, ಆದರೆ ಈಗ ಸ್ಪರ್ಮ್ ಡೋನರ್ಸ್ ಹೆಚ್ಚಿರುವುದರಿಂದ, ಮಗು ಅನೈತಿಕ ಸಂತಾನ ಆಗಬಾರದೆಂದು, ವಿವಾಹಿತ ಪತಿಯನ್ನೇ ತಂದೆ ಎಂದು ಪರಿಗಣಿಸಲಾಗುತ್ತದೆ. ಆ ಮಗುವಿಗೆ ಈ ತಂದೆಯ ಆಸ್ತಿ ಖಂಡಿತಾ ಕಾನೂನುಬದ್ಧವಾಗಿ ದಕ್ಕುತ್ತದೆ.
ಆ ಮಗುವಿನ ಪಾಲನೆ ಪೋಷಣೆ ಈ ತಂದೆಯದೇ ಜವಾಬ್ದಾರಿ. ಇಲ್ಲಿ ಬಯಲಾಜಿಕಲ್ ಫಾದರ್ ನ ಪಾತ್ರ ಗೌಣ. ಹೀಗೆ ಎಚ್ಚರಿಕೆ ಕ್ರಮ ಕೈಗೊಳ್ಳದಿದ್ದರೆ, ಇಂಥ ದಂಪತಿ ವಿಚ್ಛೇದನ ಎದುರಿಸುವಾಗ, ಆ ಪತಿ, ಈ ಮಕ್ಕಳು ತನ್ನದಲ್ಲ ಎಂದು ವಾದಿಸಬಹುದು. ವಾಸ್ತವದಲ್ಲಿ ಅಲ್ಲದಿದ್ದರೂ, ನೈತಿಕ ಹೊಣೆ ಹೊರಲೇಬೇಕಾಗುತ್ತದೆ.
ಲಿವ್ ಇನ್ ಬಯಸುವ ಹುಡುಗಿಯರು ಡೊಮೆಸ್ಟಿಕ್ ವೈಲೆನ್ಸ್ ನಿಂದಲೂ ಸಂರಕ್ಷಣೆ ಸಿಗಲಾರದು. ಇವರಿಬ್ಬರಲ್ಲಿ ಜಗಳವಾಗಿ ಅವನು ಇವಳನ್ನು ಹೊಡೆದುಬಡಿದರೆ, ಪೊಲೀಸರು ಇದರ ಮೇಲೆ ಡೊಮೆಸ್ಟಿಕ್ ವೈಲೆನ್ಸ್ ಆ್ಯಕ್ಟ್ ಕ್ರಮ ಕೈಗೊಳ್ಳಲಾಗದು ಎಂದೇ ಕೈ ಚೆಲ್ಲುತ್ತಾರೆ. ಹೋಗಲಿ ಅಂತ ಸಾಧಾರಣ ವೊಕದ್ದಮೆ ಹೂಡಬಹುದು, ಇದರಲ್ಲಿ ಅವನಿಗೆ ತಕ್ಷಣ ಜೈಲೇನೂ ಆಗದು. ಹೈಕೋರ್ಟ್ ನ ನ್ಯಾಯಾಧೀಶರಲ್ಲಿ ಕೆಲವರು ಇದಕ್ಕೆ ಪರವಾದರೆ, ಬಹಳಷ್ಟು ಮಂದಿ ವಿರೋಧ.