ಶರತ್ ಚಂದ್ರ
ಕಿರುತೆರೆಯ ಜನಪ್ರಿಯ ಅನುಶ್ರೀ ಅವರ ಮದುವೆಗೆ ಇವತ್ತು ಬೆಂಗಳೂರಿನ ಕಗ್ಗಲಿಪುರದ ಸಂಭ್ರಮ ಸ್ವಾನ್ ಲೈನ್ ರೆಸಾರ್ಟ್ ನಲ್ಲಿ ನಡೆದಿದೆ. ಕೊಡಗಿನ ಮೂಲದ ಉದ್ಯಮಿ ರೋಷನ್ ಅವರನ್ನು ಅನುಶ್ರೀ ವರಿಸಿದ್ದು ಚಿತ್ರರಂಗದ ಗಣ್ಯಾತಿಗಣ್ಯರು ಈ ಮದುವೆಗೆ ಬಂದು ಹರಸಿದ್ದಾರೆ.
ಕೆಲವು ವರ್ಷಗಳಿಂದ ಅನುಶ್ರೀ ಮದುವೆ ಬಗ್ಗೆ ಸಾಕಷ್ಟು ಬಾರಿ ಮಾಧ್ಯಮದಲ್ಲಿ ಸುದ್ದಿ ಗಳು ಹರಿದಾಡುತ್ತಿತ್ತು. ಆಹಾ ಅನುಶ್ರೀ ಮದುವೆ ಯಂತೆ! ಹೀಗೆ ಒಂದಷ್ಟು ಸುದ್ದಿಗಳು ಸದ್ದು ಮಾಡುತಿತ್ತು.ಪ್ರತಿ ಬಾರಿ ಮದುವೆ ಸುದ್ದಿ ಬಂದಾಗ ನಾನು ಮದುವೆಯಾದಾಗ ಅಧಿಕೃತವಾಗಿ ನಿಮಗೆಲ್ಲ ತಿಳಿಸುತ್ತೇನೆ ಎಂದು ಅನುಶ್ರೀ ನಕ್ಕು ಸುಮ್ಮನಾಗುತ್ತಿದ್ದರು.
ಆದರೆ ಕೊನೆಗೂ ಆಮಂತ್ರಣ ಪತ್ರವನ್ನು ನೀಡುವುದರ ಮೂಲಕ ತಾನು ಹಸೆ ಮನೆ ಏರಲಿರುವ ಸುದ್ದಿಯನ್ನು ಅಧಿಕೃತವಾಗಿ ಮಾಧ್ಯಮದೊಂದಿಗೆ ಹಂಚಿಕೊಂಡಿದ್ದರು.
ಮೊನ್ನೆ ಹಳದಿ ಶಾಸ್ತ್ರದ ಕಾರ್ಯಕ್ರಮ ವರ್ಣ ರಂಜಿತವಾಗಿ ನಡೆದಿದ್ದು, ಕಾರ್ಯಕ್ರಮದ ಫೋಟೋಗಳು ಮತ್ತು ವಿಡಿಯೋಗಳು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ವೈರಲಾಗಿದೆ.
ತಾಳಿ ಕಟ್ಟುವಾಗ ಬಾವುಕ ಳಾದ ಅನುಶ್ರೀ ಮಾಧ್ಯಮದವರಿಗೆ ತನ್ನ ಪತಿ ರೋಷನ್ ರನ್ನು ಪರಿಚಯ ಮಾಡಿ ಕೊಟ್ಟರು. ಈ ಹಿಂದೆ ಪುನೀತ ಪರ್ವ ಕಾರ್ಯಕ್ರಮದಲ್ಲಿ ಪರಿಚಯವಾದ ರೋಷನ್ ಗೆಳತನ ಪ್ರೇಮಕ್ಕೆ ತಿರುಗಿತ್ತು. ಅನುಶ್ರೀ ಆತ್ಮೀಯ ವಲಯ ಕ್ಕೆ ಬಿಟ್ಟರೆ ತನ್ನ ಪ್ರೇಮ ಕಹಾನಿ ಯನ್ನು ಯಾರಿಗೂ ಬಿಟ್ಟು ಕೊಟ್ಟಿರಲಿಲ್ಲ.
ಮದುವೆಗೆ ಅನುಶ್ರೀ ಯಾವಾಗಲು ಅಣ್ಣ ಅಂತ ಪ್ರೀತಿಯಿಂದ ಕರೆಯುವ ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್,ರಚಿತಾ ರಾಮ್ ಚೈತ್ರ ಆಚಾರ್,ನೆನಪಿರಲಿ ಪ್ರೇಮ್ ಸೋನಲ್ ಮಾಂತೋರೊ,ತರುಣ್ ಸುಧೀರ್,ಶರಣ್,ನಾಗಭೂಷಣ್, ತಾರಾ ಅನುರಾಧ,ಹಂಸಲೇಖಾ ಹೀಗೆ ಇನ್ನೂ ಅನೇಕ ಸ್ಯಾಂಡಲ್ ವುಡ್ ತಾರೆಯರು ಬಂದು ನವ ವಧುವರರನ್ನು ಹರಸಿದರು.
ಅನುಶ್ರೀ ಪುನೀತ್ ರಾಜ್ ಅವರ ದೊಡ್ಡ ಅಭಿಮಾನಿ ಎಂದು ಎಲ್ಲರಿಗೂ ಗೊತ್ತಿದೆ, ರಿಯಾಲಿಟಿ ಶೋ ಕಾರ್ಯಕ್ರಮ ದಲ್ಲಿ ಅಪ್ಪು ವಿಷಯ ಬಂದಾಗಲೆಲ್ಲ ಆಕೆಯ ಕಣ್ಣಾಲಿಗಳು ತುಂಬಿ ಬರುತ್ತಿತ್ತು. ಅನುಶ್ರೀ ಮದುವೆ ನಡೆದ ಸ್ಥಳದಲ್ಲಿ ಪುನೀತ್ ಅವರ ಭಾವ ಚಿತ್ರವನ್ನು ಇಟ್ಟು ಪರಮಾತ್ಮ ನ ಆಶೀರ್ವಾದ ಪಡೆದು ಮದುವೆಯಾಗಿದ್ದಾರೆ
ಮಂಗಳೂರಿನಲ್ಲಿ ಸಣ್ಣ ಪುಟ್ಟ ಕಾರ್ಯಕ್ರಮ ಗಳಲ್ಲಿ, ಲೋಕಲ್ ಚಾನೆಲ್ನಲ್ಲಿ ಆಂಕರಿಂಗ್ ಮಾಡಿ ಜೀ ಕನ್ನಡದ ರಿಯಾಲಿಟಿ ಶೋ ನಡೆಸಿಕೊಂಡು ಕನ್ನಡಿಗರ ಮನೆ ಮಾತಾಗಿ ನಂಬರ್ ಒನ್ ಸ್ಟಾರ್ ಆಂಕರ್ ಆಗಿ ಸುಮಾರು ವರ್ಷಗಳಿಂದ ಕನ್ನಡಿಗರ ಮನೆಮಗಳಾಗಿ ಬೆಳೆದಿರುವ ಅನುಶ್ರೀ ಅವರ ವೈವಾಹಿಕ ಜೀವನ ಸುಖಮಯವಾಗಿರಲಿ ಎಂದು ನಮ್ಮ ಹಾರೈಕೆ