ಹಿಂದಿ ಬಂಗಾಳಿ ಚಿತ್ರಗಳ ಖ್ಯಾತ ನಟಿ ಮೂನ್‌ ಮೂನ್‌ ಸೇನ್‌ ಳ ಮಗಳು ರೈಮಾ ಸೇನ್‌ ಬಲು ಬ್ಯೂಟಿಫುಲ್, ಸದಾ ಹನಸ್ಮುಖಿ, ಮೃದುಭಾಷಿಣಿ, ಸೌಮ್ಯ ಗುಣದವಳು. 70ರ ದಶಕದ ಹಿರಿಯ ಅಭಿನೇತ್ರಿ, ಇವಳ ಅಜ್ಜಿ ಸುಚಿತ್ರಾ ಸೇನ್‌ ರನ್ನು ಈಕೆ ಹೋಲುತ್ತಾಳೆ. ಹೀಗಾಗಿಯೇ ಇವಳಿಗೆ ಶಾಂತ, ಸೌಮ್ಯ ಸ್ವಭಾವದ ನಾಯಕಿ ಪಾತ್ರಗಳಷ್ಟೇ ಸಿಗುತ್ತಿವೆ, ಅದುವೇ ತನಗಿಷ್ಟ ಎನ್ನುತ್ತಾಳೆ ರೈಮಾ.

ಸಿನಿಮಾ ಎಂಬುದು ಇವಳ ಕೌಟುಂಬಿಕ ಹಿನ್ನೆಲೆಯಲ್ಲಿ ಹಾಸು ಹೊಕ್ಕಾಗಿದೆ. ಹೀಗಾಗಿ ನಟನೆ ಬಿಟ್ಟು ಇವಳು ಬೇರೆ ಕೆರಿಯರ್‌ ನತ್ತ ಮನಸ್ಸು ಕೊಡಲೇ ಇಲ್ಲ. 17ರ ಹರೆಯದಲ್ಲೇ ಇವಳು ಮೊದಲ ಹಿಂದಿ ಚಿತ್ರ `ಗಾಡ್‌ಮದರ್‌'ನಿಂದ ಬೆಳ್ಳಿ ತೆರೆಯಲ್ಲಿ ಮಿಂಚಿದಳು. ಇವಳ ಫಿಲ್ಮೀ ಕೆರಿಯರ್‌ ಬಹುತೇಕ ಯಶಸ್ವೀ ಎಂದೇ ಹೇಳಬಹುದು. ಆದರೆ ತನ್ನ ಖಾಸಗಿ ಬದುಕಿನಲ್ಲಿ ಇವಳು ಯಶಸ್ವೀ ಎನಿಸಲಿಲ್ಲ. ಇವಳ ಹೆಸರು ವಿಖ್ಯಾತ ಬಿಸ್‌ ನೆಸ್‌ ಮ್ಯಾಗ್ನೆಟ್‌ ವರುಣ್‌ ಥಾಪರ್‌, ಸಹ ನಟ ಕುನಾಲ್ ‌ಕಪೂರ್‌, ರಾಜಕೀಯ ಪುಢಾರಿ ಕಲಿಕೇಶ್‌ ಸಿಂಗ್‌ ಮುಂತಾದವರೊಂದಿಗೆ ಹರಿದು ಬಂದಿತ್ತು. ಆದರೆ ಇವಳು ಅವರಾರನ್ನೂ ವರಿಸದೆ, ತನ್ನ ಕೆರಿಯರ್ ನತ್ತಲೇ ಗಮನವಿಟ್ಟಳು. ಇವಳ `ದಿ ವ್ಯಾಕ್ಸಿನ್‌ ವಾರ್‌' ಹಿಂದಿ ಚಿತ್ರ ಇತ್ತೀಚೆಗಷ್ಟೆ ರಿಲೀಸ್‌ ಆಯಿತು. ತನ್ನ ಜರ್ನಿ ಕುರಿತು ಈಕೆ ಇಲ್ಲಿ ಮನ ಬಿಚ್ಚಿ ಮಾತನಾಡಿದ್ದಾಳೆ.

ಈ ಚಿತ್ರದ ಕುರಿತಾಗಿ ರೈಮಾ ಬಲು ಉತ್ಸಾಹಿತಳಾಗಿದ್ದಾಳೆ. ಏಕೆಂದರೆ ಕೋವಿಡ್‌ ನಂತರ, ಬಲು ದಿನಗಳಾದ ಮೇಲೆ ಇವಳ ಚಿತ್ರ ಬೆಳಕು ಕಂಡಿದೆ. ಇದರಲ್ಲಿ ಕೊರೋನಾ ಹಾಗೂ ಆ ಸಮಸ್ಯೆಗಾಗಿ ಕಂಡುಹಿಡಿಯಾದ ವ್ಯಾಕ್ಸಿನ್‌ ಕುರಿತು ಇಲ್ಲಿ ವಿವರವಾಗಿ ಚರ್ಚಿಸಲಾಗಿದೆ. ಇಲ್ಲಿ ಮಹಿಳಾ ವಿಜ್ಞಾನಿಗಳ ಪರಿಶ್ರಮ, ಶ್ರದ್ಧೆ, ನಿಷ್ಠೆ, ಯಶಸ್ಸಿನ ಕುರಿತಾಗಿ ಹೇಳಲಾಗಿದೆ.

ರೈಮಾ ಹೇಳುತ್ತಾಳೆ, ``ಇದು ನಮ್ಮ ದೇಶದ ಮೊದಲ ಬಯೋ ಸೈನ್ಸ್ ಚಿತ್ರ. ಇದರಲ್ಲಿ ನಾನು ಒಬ್ಬ ಸೈನ್ಸ್ ಜರ್ನಲಿಸ್ಟ್ ಳ ಸ್ಟ್ರಾಂಗ್‌ ಪಾತ್ರ ನಿರ್ವಹಿಸಿದ್ದೇನೆ. ನಾನು ಈ ಪಾತ್ರವನ್ನು ಬಹಳ ಪ್ರಾಮಾಣಿಕವಾಗಿ ನಿಭಾಯಿಸಿದ್ದೇನೆ.''

ಇದಕ್ಕಾಗಿ ಏನೆಲ್ಲ ತಯಾರಿ ನಡೆದಿತ್ತು?

``ಈ ಚಿತ್ರದಲ್ಲಿ ಹಲವಾರು ಹಿರಿಯ ಸ್ಟಾರ್ಸ್‌ ನನ್ನೊಂದಿಗಿದ್ದಾರೆ. ಅವರ ಮುಂದೆ ನನ್ನ ನಟನೆ ಸಪ್ಪೆ ಆಗಬಾರದು ಎಂದು ಬಹಳ ಪ್ರಯತ್ನಪಟ್ಟಿದ್ದೇನೆ. ಇದಕ್ಕಾಗಿ ನಾನು ಹಲವು ಸೈನ್ಸ್ ವರ್ಕ್‌ ಶಾಪ್ಸ್ ಅಟೆಂಡ್‌ ಮಾಡಿದೆ. ಹಿರಿಯ ನಟಿ ಪಲ್ಲವಿ ಜೋಶಿ ಬಳಿ ಹಲವು ಸಲಹೆ ಪಡೆದಿದ್ದೇನೆ.''

ಚಿತ್ರ ನಮ್ಮ ವೀಕ್ಷಕರನ್ನು ಥಿಯೇಟರ್ಗೆ ಕರೆತರಬಲ್ಲದೇ?

``ಕೋವಿಡ್‌ ಕಾಲದಲ್ಲಿ ಜನ ಸಿನಿಮಾ ಥಿಯೇಟರ್‌ ಗೆ ಬರಲಾಗುತ್ತಿರಲಿಲ್ಲ, ನಿಜ. ಆದರೆ ಚಿತ್ರದ ಎಫೆಕ್ಟ್ ನಿಂದ ಸಿನಿಮಾ ಅವರನ್ನು ಖಂಡಿತಾ ಇಲ್ಲಿಗೆ ತರತರಬಲ್ಲದು. ಎಲ್ಲಾ ಮಾಮೂಲಿ ಮಸಾಲೆ ಚಿತ್ರಗಳ ಹಾಗಿರದೆ, ಇದು ರಿಯಲಿಸ್ಟಿಕ್‌ ಆಗಿರುವುದರಿಂದ, ಜನ ಖಂಡಿತಾ ಅಂಥದ್ದನ್ನು ನೋಡಲು ಬಯಸುತ್ತಾರೆ. ಜನ ಒಂದು ಚಿತ್ರದ ಕುರಿತು ಬಹಳ ಹೊಗಳಿ ವಿಮರ್ಶಿಸಿದಾಗ ಮಾತ್ರ ನಾನು ಅಂಥ ಚಿತ್ರ ನೋಡಲು ಥಿಯೇಟರ್‌ ಗೆ ಹೋಗ್ತೀನಿ. ಇಲ್ಲದಿದ್ದರೆ ಟಿವಿಯಲ್ಲೇ ಅದನ್ನು ನೋಡ್ತೀನಿ.''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ