ನಮ್ಮ ಭಾರತೀಯ ಹಿಂದೂ ಸಂಸ್ಕೃತಿಯಲ್ಲಿ ಹಬ್ಬ ಹರಿದಿನಗಳು ಸಹಜ ಮತ್ತು ಸರ್ವೇ ಸಾಮಾನ್ಯ. ಅದರಂತೆ ಊರ ಹಬ್ಬ, ಜಾತ್ರೆ, ಸಾಮೂಹಿಕ ಸಮಾರಂಭಗಳಾಗಲೀ ಅಥವಾ ಮನೆಗಳಲ್ಲಿ ಮದುವೆ,ಮುಂಜಿ, ನಾಮಕರಣ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಸದಾ ನಡೆಯುತ್ತಲೇ ಇರುತ್ತವೆ. ಈ ಎಲ್ಲಾ ಕಾರ್ಯಕ್ರಮಗಳ ವಿಧಿ ವಿಧಾನಗಳು ಬೇರೆ ಬೇರೆ ತರಹದ್ದಾದರೂ, ಎಲ್ಲದರಲ್ಲೂ ಸಾಮಾನ್ಯವಾಗಿ ಎದ್ದು ಕಾಣುವ ಒಂದು ಅಂಶವೆಂದರೆ ಮಾವಿನ ತಳಿರು ತೋರಣ. ಅದು ಊರ ಹೆಬ್ಬಾಗಿಲೇ ಆಗಿರಬಹುದು, ದೇವಸ್ಥಾನದ ಮುಖ್ಯಾದ್ವಾರವಾಗಿರ ಬಹುದು, ಮನೆಯ ಮುಂಬಾಗಿಲಾಗಿರಬಹುದು, ದೇವರ ಕೋಣೆಯ ಬಾಗಿಲಾಗಿರಬಹುದು ಅಥವಾ ಧಾರ್ಮಿಕ ಮಂಟಪ ಇಲ್ಲವೇ ತೆರೆದ ಚಪ್ಪರಗಳಾಗಿರಬಹುದು ಈ ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಮಾವಿನ ತಳಿರು ತೋರಣ ಕಣ್ಣಿಗೆ ಎದ್ದು ಕಾಣುತ್ತಿರುತ್ತದೆ ಮತ್ತು ಅತ್ಯಂತ ಮಹತ್ವವನ್ನು ಪಡೆದಿರುತ್ತದೆ. ಹಾಗಾದರೆ ಮಾವಿನ ಎಲೆಯ ತೋರಣವನ್ನೇ ಏಕೆ ಕಟ್ಟಬೇಕು? ಅದರ ಮಹತ್ವವೇನು? ಎಂದು ಯೋಚಿಸಿದರೆ,
ಮನೆಯ ಮುಂದೆ ರಂಗು ರಂಗಾದ ರಂಗೋಲಿ ಇಡುವುದು, ಹೊಸಿಲಿಗೆ ತೋರಣ ಕಟ್ಟುವುದು, ಹೆಂಗಸರು ಕೈತುಂಬಾ ಬಳೆ ತೊಟ್ಟು ಹಣೆಗೆ ಸಿಂಧೂರ ಧರಿಸುವುದು, ಗಂಡಸರು ಹಣೆಯಲ್ಲಿ ಕುಂಕುಮ ಅಥವಾ ತಿಲಕಗಳನ್ನು ಧರಿಸುವುದು,ದೇವರಿಗೆ ಹೂವಿನ ಹಾರಗಳನ್ನು ಹಾಕುವುದು ಇವುಗಳೆಲ್ಲವೂ ಅಲಂಕಾರಿಕವೂ ಹೌದು ಮತ್ತು ಶುಭ ಕಾರ್ಯಕ್ರಮಗಳ ಸಂಕೇತವೂ ಹೌದು. ಆದರೆ ಇವೆಲ್ಲವುಗಳ ಹಿಂದೆ ಕೆಲವು ವೈಜ್ಞಾನಿಕ ಸತ್ಯಗಳಿವೆ. ಹಾಗಾಗಿಯೇ, ನಮ್ಮ ಪೂರ್ವಜರು ಸಂಪ್ರದಾಯದ ಹೆಸರಿನಲ್ಲಿ ಇಂತಹ ಪದ್ದತಿಗಳನ್ನು ರೂಢಿ ತಂದಿದ್ದಾರೆ.
ಮರಗಳ ಹಸಿರು ಎಲೆಗಳು ದ್ಯುತಿಸಂಶ್ಲೇಷಣ ಕ್ರಿಯೆಯ ಮೂಲಕ ಇಂಗಾಲದ ಡೈಆಕ್ಸೈಡನ್ನು ಹೀರಿಕೊಂಡು ಅದರ ಬದಲಿಗೆ ಶುಧ್ಧವಾದ ಆಮ್ಲಜನಕವನ್ನು ಬಿಡುಗಡೆ ಮಾಡುತ್ತವೆ. ಶುಭ-ಸಮಾರಂಭಗಳಲ್ಲಿ
ಇನ್ನು ಮನೆಯ ಮುಂಬಾಗಿಲು ಮತ್ತು ದೇವರ ಮನೆಯ ಬಾಗಿಲಿಗೆ ಮಾವಿನ ತೋರಣ ಕಟ್ಟುವುದರಿಂದ ಮನೆಯಲ್ಲಿ ಹಬ್ಬದ ವಾತಾವರಣ ಮೂಡಿ ಎಲ್ಲರ ಮನಸ್ಸು ಉತ್ಸಾಹ ಮತ್ತು ಆಹ್ಲಾದಕರವಾಗಿಡಲು ಸಹಾಯ ಮಾಡುತ್ತದೆ. ಅದೆ ರೀತಿ ಮನೆಯನ್ನು ಪ್ರವೇಶಿಸುತಿದ್ದಂತೆಯೇ ಹಚ್ಚ ಹಸಿರ ತೋರಣ ಕಣ್ಣಿಗೆ ತಂಪನ್ನು ನೀಡುತ್ತದೆ ಮತ್ತು ಮನೆಯ ವಾತವಾರಣ ಶುಭ್ರವಾಗಿಗಿದ್ದು ಆ ವ್ಯಕ್ತಿಯ ಮನಸ್ಸು ತಾಜಾತನವಾಗಿ ಮತ್ತು ಧನಾತ್ಮಕವಾಗಿ ಯೋಚಿಸಲು ಸಹಕಾರಿಯಾಗಿರುತ್ತದೆ.
ಹಾಗೆಯೇ ಮನೆಯ ಬಾಗಿಲಿಗೆ ಮಾವಿನ ತಳಿರು ತೋರಣದ ಜೊತೆಗೆ ಬೇವಿನ ಸೊಪ್ಪಿನ ಎಲೆ ಅಥವಾ ಟೊಂಗೆಗಳನ್ನು ಸಿಕ್ಕಿಸುವುದರಿಂದ, ಮಾವು ಮತ್ತು ಬೇವಿನ ಎಲೆಯಲ್ಲಿ ಔಷಧೀಯ ಗುಣಗಳು ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಾಗಿರುವುದರಿಂದ, ಮನೆಯ ದ್ವಾರದ ಮೂಲಕ ಪ್ರವೇಶಿಸುವ ಗಾಳಿಯೊಂದಿಗೆ ಮನೆಯೊಳಗೆಲ್ಲಾ ಹರಡಿ ಆರೋಗ್ಯ ದೃಷ್ಟಿಯಿಂದ ಮನೆಯಲ್ಲಿ ಉತ್ತಮ ವಾತಾವರಣ ಮೂಡಿಸುತ್ತದೆ.






