ಇನ್ನರ್‌ ವೇರ್‌ನಲ್ಲಿ ಬ್ರಾ ದೇಹದ ತ್ವಚೆಗೆ ಹೊಂದಿಕೊಂಡಿರುವ ಅಂತವರ್ಸ್ತ್ರವಾಗಿದೆ. ಇದು ಎಂತಹ ಒಂದು ಉಡುಪೆಂದರೆ ಬ್ರೆಸ್ಟ್ ನ ಸುರಕ್ಷತೆಯೊಂದಿಗೆ ಸೌಂದರ್ಯವನ್ನೂ ಕೊಡುತ್ತದೆ. ಇದು ಸರಿಯಾಗಿಲ್ಲದಿದ್ದರೆ ಪೋಸ್ಚರ್‌ ಹಾಳಾಗುತ್ತದೆ. ಅದರ ನೇರ ಪರಿಣಾಮ ಆರೋಗ್ಯದ ಮೇಲೆ ಬೀಳುತ್ತದೆ. ಬೆಂಗಳೂರಿನ ಬ್ರೈಡಲ್ ವೇರ್‌ನ ಸ್ಪೆಶಲಿಸ್ಟ್ ಸಂದೀಪ್‌ ಹೀಗೆ ಹೇಳುತ್ತಾರೆ, “ಹೇಳಲು ಸಂಕೋಚವಾದರೂ ನಮ್ಮ ದೇಶದಲ್ಲಿ ಸುಮಾರು ಶೇ.75ರಷ್ಟು ಮಹಿಳೆಯರು ತಪ್ಪು ಸೈಜ್‌ನ ಬ್ರಾ ಧರಿಸುತ್ತಾರೆ. ಅವರಿಗೆ ತಮ್ಮ ಸರಿಯಾದ ಅಳತೆ ತಿಳಿಯುವುದೇ ಇಲ್ಲ. ಸರಿಯಾದ ಸೈಜ್‌ನ ಬ್ರಾ ಧರಿಸದೇ ಇದ್ದುದರ ಪರಿಣಾಮವನ್ನು ಶರೀರ ಅನುಭವಿಸಬೇಕಾಗುತ್ತದೆ. ಉದಾಹರಣೆಗೆ, ಟೈಟ್‌ ಬ್ರಾ ಧರಿಸುವುದರಿಂದ ಬ್ರೆಸ್ಟ್ ನ ಸೂಕ್ಷ್ಮ ಟಿಶ್ಶೂಗಳು ಮುರುಟಿ ಹೋಗುತ್ತವೆ ಹಾಗೂ ಅವಕ್ಕೆ ಹಾನಿಯುಂಟಾಗುತ್ತದೆ.

“ಏಕೆಂದರೆ ಬ್ರೆಸ್ಟ್ ನಲ್ಲಿ ಮೂಳೆಗಳು ಇರುವುದಿಲ್ಲ. ಬೆನ್ನಿನ ಭಾಗದಲ್ಲಿ ಬಳುಕುವಿಕೆಯೂ ನಿಂತುಹೋಗುತ್ತದೆ. ಟೈಟ್‌ ಸ್ಟ್ರಾಪ್ಸ್ ನಿಂದಾಗಿ ಭುಜಗಳು, ಕುತ್ತಿಗೆ ಹಾಗೂ ಬೆನ್ನಿನಲ್ಲಿ ನೋವುಂಟಾಗುತ್ತದೆ. ಜೊತೆಗೆ ಮಾಂಸಖಂಡಗಳಲ್ಲೂ ಎಳೆತ ಉಂಟಾಗುತ್ತದೆ.”

ಇಂದಿಗೂ ಮಹಿಳೆಯರು ಒಂದಕ್ಕಿಂತ ಒಂದು ಚೆಂದದ ಬಟ್ಟೆಗಳನ್ನು ಕೊಂಡು ಧರಿಸುತ್ತಾರೆ. ಆದರೆ ಬ್ರಾ ವಿಷಯದಲ್ಲಿ ನಿರ್ಲಕ್ಷ್ಯತನ ತೋರುತ್ತಾರೆ. ಅದಂತೂ ಒಳಗೆ ಅಡಗಿರುತ್ತದೆ. ಯಾವುದು ತೆಗೆದುಕೊಂಡರೆ ಏನು ಎಂದುಕೊಳ್ಳುತ್ತಾರೆ. ಸರಿಯಾದ ಅಳತೆಯ ಬ್ರಾ ಮತ್ತು ಪ್ಯಾಂಟಿ ಧರಿಸುವುದರಿಂದ ಆರೋಗ್ಯ ಸರಿಯಾಗಿಟ್ಟುಕೊಳ್ಳಬಹುದು.

ಸ್ಪಾಂಡಿಲೈಟಿಸ್ನಿಂದ ರಕ್ಷಣೆ

ಸಾಮಾನ್ಯವಾಗಿ ಮಹಿಳೆಯರು ಭುಜಗಳ ಮೇಲೆ ಒತ್ತಡ ಹೇರುವಂತಹ ಬ್ರಾ ಅಂದರೆ ಟೈಟ್‌ ಸ್ಟ್ರಾಪ್‌ ಇರುವ ಬ್ರಾ ಧರಿಸುತ್ತಾರೆ. ಅದರಿಂದಾಗಿ ಅನೇಕ ಬಾರಿ ತಲೆಯಲ್ಲಿ, ಭುಜಗಳಲ್ಲಿ, ಕುತ್ತಿಗೆಯಲ್ಲಿ ಹಾಗೂ ಬೆನ್ನಿನಲ್ಲಿ ಮಾಂಸಖಂಡಗಳ ಎಳೆತದಿಂದ ನೋವುಂಟಾಗುತ್ತದೆ. ಟೈಟ್‌ ಸ್ಟ್ರಾಪ್‌ನಿಂದಲೇ ಸ್ಪಾಂಡಿಲೈಟಿಸ್‌ ಉಂಟಾಗುತ್ತದೆ. ಆದ್ದರಿಂದ ಬ್ರಾದ ಸ್ಟ್ರಾಪ್ಸ್ ಹೆಚ್ಚು ಬಿಗಿಯಾಗಿರಬಾರದು. ಸಾಮಾನ್ಯವಾಗಿ ಕಾಟನ್‌ ಬ್ರಾಗಳಲ್ಲಿ ಹಾಗಿರುತ್ತದೆ. ಅಂತಹ ಬ್ರಾದ ಸ್ಟ್ರಾಪ್ಸ್ ನಿಂದ ಭುಜಗಳ ಮೇಲೆ ಗಾಯಗಳಾಗುವ ಭಯ ಇರುತ್ತದೆ. ಒಳ್ಳೆಯ ಕಂಪನಿಯ ಸಾಫ್ಟ್ ಕಾಟನ್‌ ಬ್ರಾ ತೆಗೆದುಕೊಳ್ಳಿ. ಅದಲ್ಲದೆ ಬ್ರಾದಲ್ಲಿ ಪ್ಲಾಸ್ಟಿಕ್‌ ಸ್ಟ್ರಾಪ್ಸ್ ಇದ್ದರೆ ಅದರಿಂದ ತ್ವಚೆಗೆ ಇರಿಟೇಶನ್‌ ಆಗುವುದಿಲ್ಲವೆಂದು ಖಾತ್ರಿಪಡಿಸಿಕೊಳ್ಳಿ.

ಪೀರಿಯಡ್ಗೆ ಮುಂಚೆ ಸ್ತನಗಳಲ್ಲಿ ನೋವಿನಿಂದ ಮುಕ್ತಿ

ಅನೇಕ ಮಹಿಳೆಯರು ಮತ್ತು ಹುಡುಗಿಯರಿಗೆ ಪೀರಿಯಡ್‌ಗೆ ಮುಂಚೆ ಸ್ತನಗಳಲ್ಲಿ ನೋವಿರುತ್ತದೆ. ಅದರಿಂದಾಗಿ ಅವರು ಸಡಿಲವಾದ ದೊಡ್ಡ ಸೈಜ್‌ನ ಬ್ರಾ ಧರಿಸುತ್ತಾರೆ. ಆಗ ಧರಿಸಿದ ವಸ್ತ್ರದ ಸೌಂದರ್ಯ ಕಡಿಮೆಯಾಗುತ್ತದೆ. ಜೊತೆಗೆ ನೋವು ಆಗುತ್ತಿರುತ್ತದೆ. ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ಮಾಡೆಲ್ ‌ಫ್ಯಾಬ್ರಿಕ್‌ನಿಂದ ತಯಾರಾದ ಬ್ರಾ ಮಾರುಕಟ್ಟೆಗೆ ಬಂದಿದೆ. ಇದನ್ನು ಮಿನಿಮೈಸರ್‌ ಬ್ರಾ ಎನ್ನುತ್ತಾರೆ. ಇದನ್ನು ಧರಿಸುವುದರಿಂದ ಸ್ತನಗಳಲ್ಲಿ ಉಂಟಾಗುವ ನೋವಿನಿಂದ ಮುಕ್ತಿ ಸಿಗುತ್ತದೆ. ಜೊತೆಗೆ ದಿನವಿಡೀ ಉಂಟಾಗುವ ನೋವೇ ತಿಳಿಯುವುದಿಲ್ಲ. ಇದು ಮಾಡೆಲ್ ‌ಬ್ಯಾಂಬೂನಿಂದ ತೆಗೆದ ಎಳೆಗಳಿಂದ ತಯಾರಾದ ಫ್ಯಾಬ್ರಿಕ್‌ ಆಗಿದೆ.

ಫೀಡಿಂಗ್ಬ್ರಾ

ಫೀಡ್‌ ಮಾಡುವ ತಾಯಂದಿರ ಸಮಸ್ಯೆಯೆಂದರೆ ಮಗುವಿಗೆ ತಾಯಿ ಹಾಲು ಕುಡಿಸಲು ಬ್ರಾ ಹುಕ್‌ ಬಿಡಿಸಬೇಕಾಗುತ್ತದೆ. ಅನೇಕ ಮಹಿಳೆಯರು ಅಂತಹ ಪರಿಸ್ಥಿತಿಯಲ್ಲಿ ಬ್ರಾ ಧರಿಸುವುದೇ ಇಲ್ಲ. ಅದರಿಂದಾಗಿ ಸ್ತನಗಳು ಕುರೂಪಗೊಳ್ಳುತ್ತವೆ. ಅನೇಕ ಬಾರಿ ಜೋತು ಬೀಳುತ್ತವೆ. ಈಗ ಕಪ್‌ಗಳ ಮೇಲೆ ಒಂದು ಹೆಚ್ಚುವರಿ ಪದರ ಇರುತ್ತದೆ. ಅದು ಬ್ರೆಸ್ಟ್ ನ್ನು ಕವರ್‌ ಮಾಡುತ್ತದೆ. ಕಪ್ಸ್ ನ ನಿಪ್ಪಲ್ ಭಾಗ ತೆರೆದಿರುತ್ತದೆ. ಅಗತ್ಯ ಬಂದಾಗ ಮೇಲಿನ ಪದರವನ್ನು ಸರಿಸಿ ಆರಾಮವಾಗಿ ಮಗುವಿಗೆ ಫೀಡ್ ಮಾಡಬಹುದು.

ಸ್ಯಾಗಿಂಗ್ಸ್ತನಗಳಿಗೆ ಸಪೋರ್ಟ್ಬ್ರಾ ಅಗತ್ಯ

ವಿದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಮಹಿಳೆಯರ ಸ್ತನಗಳು ಬಹಳ ಬೇಗ ಜೋತು ಬೀಳುತ್ತವೆ. ಅದಕ್ಕೆ ಕಾರಣ ಮಹಿಳೆಯರು ಸರಿಯಾದ ಅಳತೆ ತಿಳಿದುಕೊಳ್ಳದೇ ಜೀವನವಿಡೀ ತಪ್ಪು ಅಳತೆಯ ಬ್ರಾ ಧರಿಸುತ್ತಿರುತ್ತಾರೆ. ಸ್ತನಗಳ ಅಳತೆ ಯಾವಾಗಲೂ ಒಂದೇ ರೀತಿ ಇರುವುದಿಲ್ಲ ಎಂಬುದು ನಿಜವಾದರೂ ಅದರ ಬಗ್ಗೆ ಜಾಗರೂಕತೆ ಅಗತ್ಯವಾಗಿದೆ. ಬ್ರಾ ಕೊಳ್ಳುವಾಗೆಲ್ಲಾ ನಿಮ್ಮ ಅಳತೆ ತೆಗೆದುಕೊಂಡು ಸರಿಯಾದ ಬ್ರಾ ಆರಿಸಿಕೊಳ್ಳಿ. ಜೋತಾಡುವ ಸ್ತನಗಳನ್ನು ಸುಂದರವಾಗಿ ಕಾಣಿಸಲು ವೈರ್‌ಯುಕ್ತ ಬ್ರಾ ಧರಿಸಬೇಕು. ಇದು 2 ಪ್ರಕಾರ ಇರುತ್ತದೆ. ಒಂದು ಅಂಡರ್‌ ವೇರ್‌ ಬ್ರಾ ಇನ್ನೊಂದು ಸೈಡ್‌ ವೇರ್ ಬ್ರಾ. ಅವುಗಳಲ್ಲಿರುವ ವೈರ್‌ ಸಪೋರ್ಟರ್‌ನಂತೆ ಕೆಲಸ ಮಾಡುತ್ತದೆ. ಫಿಟಿಂಗ್‌ ಕೂಡ ಚೆನ್ನಾಗಿರುತ್ತದೆ. ಇದಲ್ಲದೆ ಸ್ತನಗಳಿಗೆ ಸಪೋರ್ಟ್‌ ಕೂಡ ಸಿಗುತ್ತದೆ. ವೈರ್‌ ಇಲ್ಲದ ಸಪೋರ್ಟ್‌ ಬ್ರಾ ಕೂಡ ಇದ್ದು ಅದನ್ನೂ ಉಪಯೋಗಿಸಬಹುದು.

ಭಾರಿಯಾದ ಬ್ರೆಸ್ಟ್ಗಳಿಗೂ ಸಪೋರ್ಟ್‌ ಬ್ರಾ ಚೆನ್ನಾಗಿರುತ್ತದೆ. ಈಗಂತೂ ಲವ್ ಬರ್ಡ್‌, ಟ್ರೋವೆನಲ್ಲಿ `ಜೆ’ ಕಪ್‌ ಸೈಜ್‌ವರೆಗೆ ಬರುತ್ತಿವೆ. ಆದರೆ ಅಳತೆ ಸರಿಯಾಗಿ ತೆಗೆದುಕೊಂಡು ಸರಿಯಾದ ಬ್ರಾ ಆರಿಸಿಕೊಳ್ಳಬೇಕು.

ಟಮಿ ಟೈಟರ್ಹೊಲಿಗೆಯನ್ನು ಬೇಗ ಒಣಗಿಸುತ್ತದೆ

ಯಾವುದೋ ಕಾರಣಗಳಿಂದಾಗಿ ಹೊಟ್ಟೆಯ ಆಪರೇಷನ್‌ ಆಗಿದ್ದರೆ, ಹೊಲಿಗೆ ಹಾಕಿದ್ದರೆ ಅಥವಾ ಸಿಸೇರಿಯನ್‌ ಮೂಲಕ ಮಗು ಆಗಿದ್ದರೆ ಡಾಕ್ಟರ್‌ಗಳು ಟಮಿ ಟೈಟರ್‌ ಧರಿಸಲು ಸಲಹೆ ನೀಡುತ್ತಾರೆ. ಅದರಿಂದ ಹೊಟ್ಟೆಯ ಹೊಲಿಗೆಗಳು ಬೇಗ ಒಣಗುತ್ತವೆ. ಇದು ಸ್ಕಿನ್‌ಗೆ ಅಂಟಿಕೊಂಡಿರುವ ಒಂದು ವಸ್ತ್ರ. ಇಡೀ ಹೊಟ್ಟೆಯನ್ನು ಮುಚ್ಚುವ ಇದು ಮೊಣಕಾಲಿನಿಂದ ಮೇಲಿರುತ್ತವೆ. ಫ್ಯಾಬ್ರಿಕ್‌ ಚೆನ್ನಾಗಿರಬೇಕಷ್ಟೆ. ವಿದೇಶಗಳಲ್ಲಂತೂ ಇದು ಬಹಳ ಅಗತ್ಯವಾದ ಅಂತವರ್ಸ್ತ್ರವಾಗಿದೆ.

ನಮ್ಮಲ್ಲಿ ಒಳ್ಳೆಯ ಕಾಟನ್‌ನ ಬಾಡಿ ಶೇಪರ್‌ 695/ ರೂ.ಗೆ ಇದೆ. ಅದು ಹೊರಗೆ 1000 ರೂ. ಆಗುತ್ತದೆ. ಅಗತ್ಯಬಿದ್ದಾಗ ಇದನ್ನು ಖಂಡಿತಾ ಉಪಯೋಗಿಸಿ. ಇದರಿಂದ ಹೊಟ್ಟೆ ಜೋತು ಬೀಳುವುದಿಲ್ಲ ಎಂದು ಸಂದೀಪ್‌ ಹೇಳುತ್ತಾರೆ.

ಯೂರಿನ್‌ ಟ್ರ್ಯಾಕ್ಟ್ ಇನ್‌ಫೆಕ್ಷನ್‌ನಿಂದ ಪ್ಯಾಂಟಿ ರಕ್ಷಿಸುತ್ತದೆ ಯು.ಟಿ.ಐ. ಇನ್‌ಫೆಕ್ಷನ್‌ ವಿಶೇಷವಾಗಿ ಗರ್ಭಾವಸ್ಥೆಯಲ್ಲಿ ಉಂಟಾಗುತ್ತದೆ. ಇದಕ್ಕಾಗಿ ಮಾಡೆಲ್ ಯಾರ್ನ್‌ನಿಂದ ತಯಾರಾದವು ಇಡೀ ಹೊಟ್ಟೆಯನ್ನು ಕವರ್‌ ಮಾಡುವಂತಹ ಪ್ಯಾಂಟಿ ಚೆನ್ನಾಗಿರುತ್ತದೆ. ಇದರಿಂದ ಯು.ಟಿ.ಐ. ಇನ್‌ಫೆಕ್ಷನ್‌ನಿಂದಲೂ ರಕ್ಷಣೆ ಸಿಗುತ್ತದೆ ಹಾಗೂ ಸೋಂಕಿನ ಅಪಾಯ ಕಡಿಮೆ ಇರುತ್ತದೆ. ಆದರೆ ಉಪಯೋಗಿಸುವ ಮೊದಲು ಇದನ್ನು ಸರಿಯಾದ ರೀತಿಯಲ್ಲಿ ಸ್ವಚ್ಛಗೊಳಿಸಬೇಕು.

ಜಿ. ಸುಮಿತ್ರಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ