ತುಟಿಗಳ ಸೌಂದರ್ಯದ ಬಗ್ಗೆ ಅವುಗಳ ಮಾದಕತೆಯ ಬಗ್ಗೆ ಕವಿಗಳು ಸಾಕಷ್ಟು ಹೊಗಳಿದ್ದಾರೆ. ಆ ಹಾಡುಗಳೇ ತುಟಿಗಳ ಸೌಂದರ್ಯ ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ಬಿಂಬಿಸುತ್ತವೆ. ತುಟಿಗಳು ಅಂದವಾಗಿದ್ದರೆ ಮುಖದ ಸೌಂದರ್ಯ ಮತ್ತಷ್ಟು ಎದ್ದು ಕಾಣುತ್ತದೆ. ಅಂದಹಾಗೆ ಸಾಮಾನ್ಯ ತುಟಿಗಳನ್ನು ಸರಿಯಾಗಿ ನಿರ್ವಹಣೆ ಮಾಡುವುದರ ಮೂಲಕ ಅವುಗಳ ಸೌಂದರ್ಯವನ್ನು ಹೆಚ್ಚಿಸಬಹುದಾಗಿದೆ.
ತುಟಿಗಳ ಮೇಲೆ ಹವಾಮಾನ ಕೂಡ ಪ್ರಭಾವ ಬೀರುತ್ತದೆ. ಬಿಸಿಲಿನ ಪ್ರಖರತೆ ಹಾಗೂ ಬಿಸಿಗಾಳಿಯಿಂದಾಗಿ ತುಟಿಗಳ ಚರ್ಮ ಕಪ್ಪಗಾಗುತ್ತದೆ ಹಾಗೂ ಅವು ಸೀಳಲಾರಂಭಿಸುತ್ತವೆ. ಇಂತಹ ಸಮಯದಲ್ಲಿ ತುಟಿಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ.
ತುಟಿಗಳ ಮೃತ ಚರ್ಮ ನಿವಾರಿಸಿ ತುಟಿಗಳ ತ್ವಚೆ ಸಾಕಷ್ಟು ಸಂವೇದನಾ ಶೀಲವಾಗಿರುತ್ತದೆ. ಅದನ್ನು ಬಹಳ ಎಚ್ಚರಿಕೆಯಿಂದ ಸ್ವಚ್ಛಗೊಳಿಸಬೇಕಾಗುತ್ತದೆ. ತುಟಿಗಳ ಮೃತ ಚರ್ಮ ನಿವಾರಿಸಲು ಹತ್ತಿಯ ತುಂಡನ್ನು ನೀರಿನಲ್ಲಿ ಅದ್ದಿ ತುಟಿಗಳ ಮೇಲೆ ಸ್ವಲ್ಪ ಹೊತ್ತು ಇಡಿ. ಇದರಿಂದ ತುಟಿಗಳ ಮೃತ ಚರ್ಮ ಮೃದುವಾಗುತ್ತದೆ. ಆ ಬಳಿಕ ಹತ್ತಿ ತುಂಡನ್ನು ನೀರಿನಲ್ಲಿ ಅದ್ದಿ ತುಟಿಗಳನ್ನು ಮೃದುವಾಗಿ ಸ್ವಚ್ಛಗೊಳಿಸಿ. ಪ್ರತಿದಿನ ಮಲಗುವ ಮುಂಚೆ ತುಟಿಗಳ ಮೇಲೆ ಪೆಟ್ರೋಲಿಯಂ ಜೆಲ್ಲಿಯಿಂದ ಸ್ವಲ್ಪ ಹೊತ್ತು ಮಸಾಜ್‌ಮಾಡಿ. ಇದರ ಹೊರತಾಗಿ ತುಟಿಗಳ ಮೇಲೆ ರಾತ್ರಿ ತುಪ್ಪ ಸವರಿಕೊಂಡು ಮಲಗಬಹುದು.
ತುಟಿಗಳ ತೇವಾಂಶ ಕಾಪಾಡಿ
ಲಿಪ್‌ಸ್ಟಿಕ್ ಹಚ್ಚುವ ಮುಂಚೆ ತುಟಿಗಳ ಮೇಲೆ ಸಾಕಷ್ಟು ಲಿಪ್ ಬಾಮ್ ಲೇಪಿಸಿ. ನಂತರ ಹೆಚ್ಚುವರಿ ಬಾಮ್ ನ್ನು ಹತ್ತಿ ತುಂಡಿನಿಂದ ನಿವಾರಿಸಿ ಲಿಪ್‌ಸ್ಟಿಕ್ ಲೇಪಿಸಿ. ಫ್ಲೇವರ್ಡ್ ಲಿಪ್ ಬಾಮ್ ನ ಬಳಕೆ ಮಾಡಬೇಡಿ. ಸೀಳಿದ ತುಟಿಗಳಿಗಾಗಿ ಯಾವುದಾದರೂ ಆ್ಯಂಟಿ ಬ್ಯಾಕ್ಟೀರಿಯಲ್ ಆಯಿಂಟ್‌ಮೆಂಟ್‌ನ್ನು ಬಳಸಿ. ಏಕೆಂದರೆ ಸೋಂಕು ತಗುಲಬಾರದು.
ಲಿಪ್‌ಸ್ಟಿಕ್ ಹೇಗಿರಬೇಕು?
ನಿಮ್ಮ ಲಿಪ್‌ಸ್ಟಿಕ್ ನಾಲ್ಕೂ ಬದಿ ಪಸರಿಸದಿರಲು ಲಾಂಗ್ ಸ್ಟೇ ಲಿಪ್‌ಸ್ಟಿಕ್‌ನ ಬಳಕೆ ಮಾಡಿ ಅಥವಾ ಲಿಪ್‌ಸ್ಟಿಕ್ ಲೇಪಿಸುವ ಮುಂಚೆ ನಿಮ್ಮ ತುಟಿಗಳ ಮೇಲೆ ಹಗುರವಾಗಿ ಫೌಂಡೇಶನ್ ಲೇಪಿಸಿ. ಆದರೆ ಅದರ ಮೇಲೆ ಗ್ಲಾಸ್ ಲಿಪ್‌ಸ್ಟಿಕ್‌ನ ಉಪಯೋಗ ಮಾಡಬೇಡಿ. ಬೇಸಿಗೆಯಲ್ಲಿ ಬೆವರಿನ ಕಾರಣದಿಂದ ಲಿಪ್‌ಸ್ಟಿಕ್ ಅತ್ತಿತ್ತ ಪಸರಿಸುವ ಭಯ ಇರುತ್ತದೆ. ಒಂದು ವೇಳೆ ನೀವು ಮ್ಯಾಟ್ ಫಿನಿಶ್ ಲಿಪ್‌ಸ್ಟಿಕ್ ಇಷ್ಟಪಡದಿದ್ದರೆ, ನ್ಯೂಟ್ರಲ್ ಲೈನರ್‌ನೊಂದಿಗೆ ಲಿಪ್ ಪೆನ್ಸಿಲ್‌ನ ಪ್ರಯೋಗ ಮಾಡಿ. ಹೀಗೆ ಮಾಡುವುದರಿಂದ ನಿಮ್ಮ ಲಿಪ್‌ಸ್ಟಿಕ್ ಲೈಟ್ ಆಗಲಾರಂಭಿಸಿದಾಗ ನಿಮಗೆ ಔಟ್‌ಲೈನ್ ಮಾಡಿಕೊಳ್ಳುವ ಅವಶ್ಯಕತೆ ಉಂಟಾಗುವುದಿಲ್ಲ.
ತುಟಿಗಳು ತುಂಬಿದಂತಿರಲಿ
ತುಟಿಗಳು ತುಂಬಿದಂತೆ ಕಂಡುಬರಬೇಕೆಂದರೆ ಲೈಟ್ ಹಾಗೂ ಹೊಳಪುಳ್ಳ ಶೇಡ್‌ಗಳು ಹೆಚ್ಚು ಉತ್ತಮವಾಗಿರುತ್ತವೆ. ಗಾಢವರ್ಣದ ಲಿಪ್‌ಸ್ಟಿಕ್‌ಗಳಿಂದ ತುಟಿಗಳು ಚಿಕ್ಕ ಹಾಗೂ ತೆಳ್ಳಗಿರುವಂತೆ ಗೋಚರಿಸುತ್ತವೆ. ನೀವು ಇಷ್ಟಪಟ್ಟರೆ ಕೆಳಭಾಗದ ತುಟಿಯ ನಟ್ಟನಡುವೆ ಗ್ಲಾಸ್‌ನ ಒಂದು ಚುಕ್ಕಿ ಇಡಿ ಹಾಗೂ ಬೆರಳಿನಿಂದ ಅದನ್ನು ಅತ್ತಿತ್ತ ಮಾಡಿ. ಇದರಿಂದ ತುಟಿಗಳು ಉದ್ದ ಹಾಗೂ ಚಾಚಿಕೊಂಡಂತೆ ಭಾಸವಾಗುತ್ತವೆ.
ಶಿಮ್ಮರ್ನಿಂದ ತುಟಿಗಳಿಗೆ ಸೌಂದರ್ಯ
ನಿಮಗೆ ಗಾಢ ಕೆಂಪು ಅಥವಾ ಬರಗಂಡಿ ಬಣ್ಣ ಹೆಚ್ಚು ಇಷ್ಟು. ಆದರೆ ನಿಮ್ಮ ತುಟಿಗಳ ಮೇಲೆ ಅದು ಸ್ವಲ್ಪ ಶೋಭಿಸದು. ಅಂತಹ ಸಂದರ್ಭದಲ್ಲಿ ಲೈಟಾಗಿ ಗ್ಲಾಸ್ ಹಚ್ಚಿ. ಏಕೆಂದರೆ ಅದರ ಬಣ್ಣ ಲೈಟಾಗಿ ಕಾಣಬೇಕು ಹಾಗೂ ಆಕರ್ಷಕವಾಗಿ ಗೋಚರಿಸಬೇಕು. ನಿಮ್ಮ ತುಟಿಗಳು ಗುಂಡಾಗಿದ್ದರೆ, ಹಗುರವಾಗಿ ತುಟಿಗಳ ನಟ್ಟನಡುವೆ ಶಿಮ್ಮರ್ ಲೇಪಿಸಿ. ಬೇರೆ ಪ್ರಕಾರದ ತುಟಿಗಳಿಗೆ ತುಟಿಗಳ ಅಂಚಿನ ತನಕ ಶಿಮ್ಮರ್ ಹಚ್ಚಬಹುದು.