ಯಾವ ತರಹ ಋತುಮಾನ ಬದಲಾಗುತ್ತದೋ ಅದೇ ತರಹ ಮೇಕಪ್ ಟ್ರೆಂಡ್ ಸಹ ಬದಲಾಗುತ್ತಿರುತ್ತದೆ. ಗಾರ್ಜಿಯಸ್, ಸ್ಮಾರ್ಟಿ ಮತ್ತು ಫ್ರೆಶ್ ಲುಕ್ಸ್ ಕಾಯ್ದಿರಿಸಿಕೊಳ್ಳಲು, ನೀವು ಮೇಕಪ್‌ನ ಹೊಸ ಟ್ರೆಂಡ್ ಜೊತೆ ಹೆಜ್ಜೆ ಹಾಕಬೇಕಾದುದು ಅನಿವಾರ್ಯ. ಬನ್ನಿ, ಇದರ ವಿವರಗಳನ್ನು ತಿಳಿದುಕೊಳ್ಳೋಣ :
ಹೈ ಡೆಫ್‌ನೇಶನ್ ಮೇಕಪ್
ಹೈ ಡೆಫ್‌ನೇಶನ್ ಕ್ಯಾಮೆರಾದ ಪಿಕ್ಚರ್ ಕ್ವಾಲಿಟಿ ಎಷ್ಟು ಶಾರ್ಪ್‌ಕ್ಲಿಯರ್ ಆಗಿರುತ್ತದೋ, ಟಿ.ವಿ. ನೋಡುವವರಿಗೆಲ್ಲ ಅದು ಗೊತ್ತಿರುತ್ತದೆ. ಈ ಟೆಕ್ನಿಕ್‌ನಿಂದಲೇ ವಿಡಿಯೋ ಮತ್ತು ಫೋಟೋಗಳಲ್ಲಿ ಅತಿ ಸಣ್ಣ ಸೂಕ್ಷ್ಮ ವಸ್ತು ಸುಸ್ಪಷ್ಟವಾಗಿ ಗೋಚರಿಸುತ್ತದೆ.
ಅದೇ ರೀತಿ ಕ್ಯಾಮೆರಾ ದೃಷ್ಟಿಯಲ್ಲಿ ಚರ್ಮದ ಮೇಲಿನ ಗುರುತು, ಕಲೆ, ಡಾರ್ಕ್ ಸರ್ಕಲ್ಸ್, ಆ್ಯಕ್ನೆ ಸ್ಪಾಟ್ಸ್, ಮೇಕಪ್ ಪದರಗಳು, ವಯಸ್ಸಿನ ಗುರುತುಗಳನ್ನು ಹೇಗೆ ಅಡಗಿಸುವುದು ಹಾಗೂ ಪ್ರತಿ ಯುವತಿಯೂ ಕರೀನಾ, ಕತ್ರೀನಾರಂಥ ನಿಷ್ಕಳಂಕ ಸೌಂದರ್ಯ ಪಡೆಯುವುದು ಹೇಗೆ?
ಈ ಎಲ್ಲಾ ಪ್ರಶ್ನೆಗಳಿಗೂ ಒಂದೇ ಉತ್ತರ ಮೇಕಪ್‌ನ ಲೇಟೆಸ್ಟ್ ಟ್ರೆಂಡ್‌ಅಂದರೆ ಹೈ ಡೆಫ್‌ನೇಶನ್ ಮೇಕಪ್‌ನ್ನು ಫಾಲೋ ಮಾಡುವುದು.
ಈ ಮೇಕಪ್ ಲೈಟ್ ಕ್ಯಾಚಿಂಗ್ ಮತ್ತು ರಿಫ್ಲೆಕ್ಷನ್ ಟೆಕ್ನಿಕ್ಸ್ ನ್ನು ಗಮನದಲ್ಲಿರಿಸಿಕೊಂಡು ರೂಪಿಸಲಾಗಿದೆ. ಇದು ಸುಲಭವಾಗಿ ಚರ್ಮದೊಂದಿಗೆ ವಿಲೀನವಾಗುತ್ತದೆ. ಆದ್ದರಿಂದ ಇದು ಫ್ರೆಶ್, ನ್ಯಾಚುರಲ್, ಕ್ಲಿಯರ್ ಲುಕ್ಸ್ ಗೆ ಪರ್ಫೆಕ್ಟ್ ಎನಿಸುತ್ತದೆ.
ಇದು ತನ್ನ ಉತ್ಕೃಷ್ಟ ಗುಣದಿಂದಾಗಿ ಸ್ವಲ್ಪ ಕಾಲದಲ್ಲೇ ತಮ್ಮ ಸೌಂದರ್ಯದ ಬಗ್ಗೆ ಜಾಗರೂಕರಾದ ಮಹಿಳೆಯರು, ಸೆಲೆಬ್ರಿಟಿಗಳು, ಮೇಕಪ್ ಆರ್ಟಿಸ್ಟ್ ಗಳ ಮೊದಲ ಆಯ್ಕೆ ಎನಿಸಿದೆ. ಇದರಲ್ಲಿನ ಮೈಕ್ರೋಫೈನ್ ಕ್ರಿಸ್ಟ್ ಮತ್ತು ಸಿಲಿಕಾನ್ ಕಣಗಳು, ಚರ್ಮದ ಲೋಪದೋಷಗಳನ್ನು ಕವರ್ ಮಾಡಿ ಲೈಟ್ ರಿಫ್ಲೆಕ್ಷನ್‌ನಲ್ಲಿ ಸಹಾಯಕ ಎನಿಸಿದೆ. ಇದರಿಂದ ಕ್ಯಾಮೆರಾಗಳಲ್ಲಿ ಚರ್ಮದ ಯಾವ ಲೋಪದೋಷ ಕಾಣಿಸದೆ, ಅಕ್ಷರಶಃ ನಿಷ್ಕಳಂಕ ಸೌಂದರ್ಯ ಗೋಚರಿಸುತ್ತದೆ.
ನಿಮ್ಮ ಮುಖದ ಕಳೆಯನ್ನು ಹೆಚ್ಚಿಸಿ, ಕ್ಯಾಮೆರಾ ಮತ್ತು ವಿಡಿಯೋಗಳಲ್ಲಿ ನಿಮಗೆ ಪಿಕ್ಚರ್ ಪರ್ಫೆಕ್ಟ್ ಲುಕ್ಸ್ ನೀಡುತ್ತದೆ. ಈ ಮೇಕಪ್ ಪ್ರಾಡಕ್ಟ್ಸ್ ಚರ್ಮಕ್ಕೆ ಯಾವುದೇ ಹಾನಿ ಮಾಡುವುದಿಲ್ಲ. ಇದು ಎಷ್ಟು ಹಗುರ ಎಂದರೆ ನೀವು ಇದನ್ನು ಡೇಲಿ ರೊಟೀನ್ ಮೇಕಪ್‌ಗೂ ಬಳಸಬಹುದಾಗಿದೆ. ಜೊತೆಗೆ ಇವು ಬಳಸಲಿಕ್ಕೂ ಬಲು ಸುಲಭ. ಆದ್ದರಿಂದ ನಿಮ್ಮ ವ್ಯಾನಿಟಿ ಬ್ಯಾಗ್‌ನಲ್ಲಿ ಇನ್ನು ಅಗತ್ಯವಾಗಿ ಇರಿಸಿಕೊಳ್ಳಿ.
ಅರೇಬಿಕ್ ಐ ಮೇಕಪ್
ಈ ಬಾರಿ ಮಿಕ್ಸ್ ಕಲರ್ ಸ್ಮೋಕಿ ಕಂಗಳ ಟ್ರೆಂಡ್ ಜೊತೆಗೆ ಅರೇಬಿಕ್ ಐ ಮೇಕರ್ ವಿತ್ ಮೆಟ್ಯಾಲಿಕ್ ಐ ಶ್ಯಾಡೋದ ಸಂಚಲನ ಹೊಸ ರೂಪದಲ್ಲಿ ಕಂಡುಬರುತ್ತದೆ. ಅರೇಬಿಕ್ ಐ ಲುಕ್ಸ್ ಜೊತಿ ಆರ್ಟಿಫಿಶಿಯಲ್ ರಾಶೆಸ್ ಸಹ ಬಳಸಿ ನೋಡಿ. ಅದು ಬೇಡವೆನಿಸಿದರೆ, ಥಿಕ್ ಲಾಂಗ್ ಲ್ಯಾಶಸ್ ಮಸ್ಕರಾದ ಬಳಕೆ ಮಾಡುತ್ತಾ ಐ ವರ್ಕ್‌ನಿಂದ ಲ್ಯಾಶೆಸ್‌ಗೆ ವಾಲ್ಯೂಂ ಕೊಡಿ ಹಾಗೂ ಲೈನರ್‌ನಿಂದ ಕಂಗಳನ್ನು ಡಿಫೈನ್ ಮಾಡಿ.ಇಷ್ಟಲ್ಲದೆ, ಸ್ಮೋಕಿ ಐ ಮೇಕಪ್ ಮಾಡುವಾಗ ಪರ್ಫೆಕ್ಟ್ ಬ್ಲೆಂಡಿಂಗ್ ಬಳಸಲು ಮರೆಯದಿರಿ. ಇದರ ಜೊತೆ ಐ ಲೈನರ್ ಸ್ಟೈಲ್‌ನಲ್ಲಿ ಕಂಗಳ ಸೌಂದರ್ಯ ಹೆಚ್ಚಿಸಲು ಅದಕ್ಕೆ ಬಿಗ್ಗರ್ ಲುಕ್ಸ್ ಕೊಡಿ. ಪಾರ್ಟಿ ಮೇಕಪ್‌ನಲ್ಲಿ ಗಾರ್ಜಿಯಸ್ ಐ ಲುಕ್ಸ್ ಗಾಗಿ ಥಿಕ್ ಲಾಂಗ್ ಡಬಲ್ ಲೈನ್‌ಬಳಸಿರಿ.