ಸ್ವಪ್ನಾ ತನ್ನ ಗೆಳತಿ ಜ್ಯೋತಿಯ ಮದುವೆಗೆ ಗಂಡನ ಜೊತೆ ಹೋಗಿದ್ದಳು. ಅಲ್ಲಿ ಜ್ಯೋತಿ ತನ್ನ ತಂಗಿ ಆರತಿಯನ್ನು ಸ್ವಪ್ನಾಳಿಗೆ ಪರಿಚಯಿಸಿದಳು. ಆಗ ಅವಳು, ``ಹಲೋ ಸ್ವಪ್ನಕ್ಕಾ.... ನಮಸ್ತೆ ಅಂಕಲ್, ಅಕ್ಕಾ.... ನಿನ್ನ ಜೊತೆ ಭಾವ ಬರಲಿಲ್ವಾ?'' ಎಂದು ಕೇಳಿದಳು.

``ಏ ಆರತಿ..... ಇವರೇ ಸ್ವಪ್ನಾಳ ಪತಿ. ಇವರು ಅಂಕಲ್ ಅಲ್ಲ, ಭಾವ,'' ಎಂದು ಜ್ಯೋತಿ ತಿದ್ದಿದಳು.

ಅದನ್ನು ಕೇಳಿಸಿಕೊಂಡ ಆರತಿ, ``ಸಾರಿ ಸ್ವಪ್ನಕ್ಕಾ.... ನಂಗೆ ಗುರುತು ಸಿಗಲಿಲ್ಲ,'' ಎಂದು ಬೇರೆ ಅತಿಥಿಗಳನ್ನು ವಿಚಾರಿಸಲು ಹೋದಳು. ಅದಾದ ಮೇಲೆ ಈ ದಂಪತಿಗಳು ಒಲ್ಲದ ಮನದಿಂದಲೇ ಮದುವೆ ಅಟೆಂಡ್‌ ಮಾಡಿ ಮನೆಗೆ ಹೊರಟರು. ಸ್ವಪ್ನಾಳಿಗಂತೂ ಆರತಿಯ ಮಾತುಗಳೇ ಮತ್ತೆ ಮತ್ತೆ ಇರಿಯುತ್ತಿದ್ದವು.

ಇಂದಿನ ಧಾವಂತದ ಜೀವನದಲ್ಲಿ ಗಂಡಸರು ತಮ್ಮ ನಿರ್ಲಕ್ಷ್ಯದಿಂದಾಗಿ ಇಂಥ ಅಪಹಾಸ್ಯಕ್ಕೆ ಗುರಿಯಾಗುತ್ತಾರೆ. ಮದುವೆ ಅಥವಾ ಫೆಸ್ಟಿವಸ್ ‌ಸೀಸನ್‌ ಇರಲಿ, ಮಹಿಳೆಯರಂತೂ ಸರ್ವಾಲಂಕೃತರಾಗಿ ಹೊರಟುಬಿಡುತ್ತಾರೆ. ಪಾಪ, ಗಂಡಸರು ಯಾವುದೋ ಪ್ಯಾಂಟ್‌ ಶರ್ಟ್‌ ಧರಿಸಿ ತಮ್ಮನ್ನು ಯಾರು ಕೇಳುತ್ತಾರೆ ಎಂಬಂತೆ ಇರುತ್ತಾರೆ. ಹೀಗಿರುವಾಗ ಮಾಡರ್ನ್ ಆರತಿಯರು `ಅಂಕಲ್' ಅಂದರೆ, ಗಂಡಂದಿರಿಗಿಂತ ಹೆಚ್ಚಾಗಿ ಅವರ ಹೆಂಡತಿಯರಿಗೆ ಅವಮಾನ ಅನಿಸುತ್ತದೆ. ಆದ್ದರಿಂದ ಗಂಡಸರು ತಾವಾಗಿ ಅಪಹಾಸ್ಯಕ್ಕೆ ಈಡಾಗುವ ಇಂಥ ಸಂದರ್ಭಗಳನ್ನು ತಂದುಕೊಳ್ಳಬಾರದು.

ಆಕರ್ಷಣೆ : ಇಬ್ಬರಿಗೂ ಅಗತ್ಯ ಸೌಂದರ್ಯ ಮತ್ತು ಆಕರ್ಷಣೆ ಎರಡನ್ನೂ ಮೊದಲಿನಿಂದಲೂ ಹೆಣ್ಣಿಗೆ ಅನ್ವಯಿಸಿಯೇ ಹೇಳುತ್ತಾರೆ. ಆದರೆ ವಾಸ್ತವ ಎಂದರೆ, ಯಾವ ರೀತಿ ಗಂಡಸರು ಸುಂದರವಾದ ಹೆಂಗಸರನ್ನು ಬಯಸುತ್ತಾರೋ, ಅದೇ ರೀತಿ ಹೆಂಗಸರೂ ಸಹ ತಮ್ಮ ಗಂಡಂದಿರು ಬೇರೆಯವರಿಗಿಂತ ಕಡಿಮೆ ಅಲ್ಲ ಎಂಬಂತೆ ಇರಬೇಕೆಂದು ಬಯಸುತ್ತಾರೆ. ಹೀಗಾಗಿಯೇ ಲಭ್ಯವಿರುವ ಸಮಯದಲ್ಲಿ ಪ್ರತಿ ಸಣ್ಣಪುಟ್ಟ ನಗರಗಳಲ್ಲಿ ಇರುವಂಥ ಯೂನಿಸೆಕ್ಸ್ ಸೆಲೂನ್‌ಗೆ ಹೋಗಿ ಸಂಗಾತಿಗಳಿಬ್ಬರೂ ಸೌಂದರ್ಯ ಸಂವರ್ಧನೆಗೆ ಪ್ರಯತ್ನಿಸಬಹುದು. ಹೀಗಾದರೂ ಕೆಲವರು ತಮ್ಮ ಪಟ್ಟು ಬಿಟ್ಟುಕೊಡದೆ, ಯಾರೇನಾದರೂ ಅಂದುಕೊಳ್ಳಲಿ ಎಂದು ಒಡ್ಡೊಡ್ಡರಾಗಿಯೇ ಇದ್ದುಬಿಡುತ್ತಾರೆ. ಅಂಥವರು ಸಹಜವಾಗಿ ಅಪಹಾಸ್ಯಕ್ಕೆ ಗುರಿಯಾಗುತ್ತಾರೆ.

ಸಕಾರಾತ್ಮಕ ವಿಚಾರಧಾರೆ

ಪತಿಯನ್ನು ಸೌಂದರ್ಯದತ್ತ ಜಾಗರೂಕರಾಗಿಸಲು ಸದಾ ಸಕಾರಾತ್ಮಕ ವಿಚಾರಧಾರೆ ಬೆಳೆಸಿಕೊಳ್ಳಿ. ಅವರು ನಿಮ್ಮನ್ನು ಸದಾ ಸುಂದರವಾಗಿ ಅಲಂಕರಿಸಿಕೊಂಡು ಇರಬೇಕೆಂದು ಬಯಸುವಂತೆ ನೀವು ಸಹ ಅವರು ಹ್ಯಾಂಡ್‌ಸಮ್ ಆಗಿರಬೇಕೆಂದು ಬಯಸುತ್ತೀರಿ ಎಂದು ತಿಳಿಯಪಡಿಸಿ. ಅವರು `ಬೇಡ' ಎಂದರೆ `ಬೇಕು' ಎಂಬಂತೆ ಬದಲಾಯಿಸಿ.

ರಿಲ್ಯಾಕ್ಸ್ ಥೆರಪಿ

ಕೆಲಸದ ಒತ್ತಡ, ಟೆನ್ಶನ್‌ ಇತ್ಯಾದಿಗಳಿಂದ ದೇಹ ಮತ್ತು ಬುದ್ಧಿಗೆ ಸುಸ್ತು ಎನಿಸುತ್ತದೆ. ಹೀಗಾಗಿ ಬಾಡಿ ಮೈಂಡ್‌ ಎರಡನ್ನೂ ರಿಲ್ಯಾಕ್ಸ್ ಗೊಳಿಸಲು ಯಾವುದಾದರೂ ಉತ್ತಮ ಸ್ಪಾ ಸೆಂಟರ್‌ಗೆ ಹೋಗಿ ನೀವಿಬ್ಬರೂ ಬಾಡಿ ಸ್ಪಾ, ಸೋನಾ, ಪೂಲ್‌, ಸ್ಟೀಂ ರೂಂನಂಥ ಸೌಲಭ್ಯಗಳ ಲಾಭ ಪಡೆಯಿರಿ. ಇದರಿಂದ ಇಬ್ಬರಿಗೂ ಬಾಡಿ ರಿಲ್ಯಾಕ್ಸ್ ಆದ ಅನುಭವದ ಜೊತೆಗೆ ನವ ಸ್ಛೂರ್ತಿ ಹಾಗೂ ತಾಜಾತನ ತುಂಬಿಕೊಳ್ಳುತ್ತದೆ. ಈ ಪಾಸಿಟಿವ್ ‌ಬದಲಾವಣೆಯ ನಂತರ ಅವರು ಮುಂದಿನ ತಮ್ಮ ಕಾಯಕಲ್ಪಕ್ಕಾಗಿ ಹಿಂಜರಿಯಲಾರರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ