ಇಡೀ ದಿನ ನಮ್ಮ ಕೈಗಳು ಅನೇಕ ಕೆಲಸಗಳಿಂದ ದಣಿಯುತ್ತವೆ. ಒಮ್ಮೆ ಸಾಬೂನಿನ ಶುಷ್ಕತೆ ಮತ್ತೊಮ್ಮೆ ಆಹಾರ ಪದಾರ್ಥಗಳ ಅಂಟಂಟು, ಮತ್ತೆ ಕೆಮಿಕಲ್ಸ್ ಎಫೆಕ್ಟ್, ಮತ್ತೊಮ್ಮೆ ಧೂಳುಮಣ್ಣು...... ಇತ್ಯಾದಿ. ಇದೆಲ್ಲದರಿಂದ ಟ್ಯಾನಿಂಗ್‌ನ ದುಷ್ಪ್ರಭಾವ ಆಗೇ ಆಗುತ್ತದೆ. ಕೈಗಳ ತ್ವಚೆಯಲ್ಲಿ ತೈಲೀಯ ಗ್ರಂಥಿಗಳು ಇಲ್ಲದ ಕಾರಣ ಅವಕ್ಕೆ ಹೆಚ್ಚಿನ ಸುರಕ್ಷತೆಯ ಅಗತ್ಯವಿದೆ. ಆಗ ಮಾತ್ರ ಅವು ಸ್ವಸ್ಥ, ಸುಂದರ ಆಗಿರಬಲ್ಲವು. ಕೈಗಳ ತ್ವಚೆಗೆ ಡ್ರೈ ಸ್ಕಿನ್, ಡಾರ್ಕ್ ಟ್ಯಾನಿಂಗ್, ಅಲರ್ಜಿ, ರಾಶೆಸ್, ಇನ್ಫೆಕ್ಷನ್, ತುರಿಕೆ, ನೇಲ್‌ಇಂಜುರಿ ಇತ್ಯಾದಿಗಳನ್ನೂ ಎದುರಿಸಬೇಕಾಗುತ್ತದೆ. ಹೀಗಿರುವಾಗ ಕೆಲವು ವಿಶೇಷ ಸಲಹೆಗಳ ಕಡೆ ಗಮನಹರಿಸಿದರೆ ಈ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ.
ಕೈಗಳ ರಕ್ಷಣೆ
ಕೈಗಳನ್ನು ತೊಳೆಯಲು ಕೆಮಿಕಲ್ ಯುಕ್ತ ಆ್ಯಂಟಿ ಸೆಪ್ಟಿಕ್ ಸಾಬೂನಿನ ಬದಲಿಗೆ ಸೌಮ್ಯ ಲಿಕ್ವಿಡ್ ಸೋಪ್ ಬಳಸಿರಿ. ವಾರದಲ್ಲಿ ಕನಿಷ್ಠ 2 ಸಲ ಕೈಗಳಿಗೆ ಮೈಲ್ಡ್ ಸ್ಕ್ರಬ್ ಮಾಡಿ, ಆಗ ಮಾತ್ರ ಡೆಡ್ ಸೆಲ್ಸ್ ನಿಂದ ಬಿಡುಗಡೆ ಸಿಗತ್ತದೆ. ಹಾರ್ಡ್ ನೇಲ್ಸ್ ಕತ್ತರಿಸಲು ಕಷ್ಟ ಎನಿಸಿದರೆ, ನೇಲ್ ಸಾಫ್ಟ್ ನರ್ ಬಳಸಬೇಕು. ಇದು ಯಾವುದೇ ಮೆಡಿಕಲ್ ಸ್ಟೋರ್‌ನಲ್ಲಿ ಸುಲಭವಾಗಿ ಸಿಗುತ್ತದೆ. ನೇಲ್ ಪಾಲಿಶ್ ರಿಮೂವ್ ಮಾಡಲು ಅಸೆಟೋನ್ ಫ್ರೀ ರಿಮೂವರ್ ಬಳಸಬೇಕು. ರಾತ್ರಿ ಮಲಗುವ ಮುನ್ನ ಬ್ರ್ಯಾಂಡೆಡ್ ಹ್ಯಾಂಡ್ ಕ್ರೀಂ ಆಯಿಲ್‌ನಿಂದ ಕೈಗಳಿಗೆ ನಿಯಮಿತವಾಗಿ ಮಸಾಜ್ ಮಾಡಿ, ಆಗ ಮಾತ್ರ ಕೈಗಳ ತ್ವಚೆ ಸೌಮ್ಯ ಹಾಗೂ ಹೈಡ್ರೇಟ್ ಆಗಿರುತ್ತದೆ.
ನ್ಯೂಟ್ರಿಜೀನಾ ಹ್ಯಾಂಡ್ ಕ್ರೀಂ ರೂ.1128/
ಬ್ಲಾಸಂ ಕೋಚರ್ ಆ್ಯರೋಮಾ ಮ್ಯಾಜಿಕ್‌ರೂ. 135/
ಎಚ್‌ಟುಓ + ಹ್ಯಾಂಡ್‌ನೇಲ್ ಕ್ರೀಂ ರೂ.1100/
ರಿನ್ಯೂ ರಿಪೇರ್‌ರೂ.169/
ನ್ಯಾಚುರಲ್ ಬೀವ್ಯಾಕ್ಸ್ ಹ್ಯಾಂಡ್ ಕ್ರೀಂ ರೂ.100/
ಸೆಲೂನ್/ ಪಾರ್ಲರ್ ಟ್ರೀಟ್‌ಮೆಂಟ್ ವಾರದಲ್ಲಿ 1-2 ಸಲ ಸೆಲೂನ್‌ಗೆ ಹೋಗಿ ನೇಲ್‌ಹ್ಯಾಂಡ್ ಟ್ರೀಟ್‌ಮೆಂಟ್ ಪಡೆಯಿರಿ. ಮೆನಿಕ್ಯೂರ್, ಮೆನಿಸ್ಪಾ, ಚಾಕಲೇಟ್ ಮೆನಿಕ್ಯೂರ್, ಸ್ಕಿನ್ ಪಾಲಿಶಿಂಗ್, ಹ್ಯಾಂಡ್ ಎಕ್ಸ್ ಪಾಲಿಯೇಶನ್, ಪ್ಯಾರಾಫಿನ್ ಟ್ರೀಟ್‌ಮೆಂಟ್, ಕೆಮಿಕಲ್ ಪೀಲಿಂಗ್ ಇತ್ಯಾದಿಗಳಲ್ಲಿ ನೀವು ನಿಮ್ಮ ಕೈಗಳ ಅಗತ್ಯಕ್ಕೆ ತಕ್ಕಂತೆ ಟ್ರೀಟ್‌ಮೆಂಟ್ ಪಡೆಯಬಹುದು.
ನೇಲ್ ಕೇರ್ ಬ್ಯೂಟಿಫುಲ್ ಲಾಂಗ್ ನೇಲ್ಸ್ ಪ್ರತಿಯೊಬ್ಬ ಮಹಿಳೆಯ ಆಸೆ. ಆದರೆ ಅಗತ್ಯಕ್ಕಿಂತಲೂ ಉದ್ದನೆ ಉಗುರು ಕೈಗಳ ಸೌಂದರ್ಯ ಹಾಳುಮಾಡುತ್ತವೆ. ಹೀಗಾಗಿ ಅವನ್ನು ಆಗಾಗ ಟ್ರಿಮ್ ಮಾಡುತ್ತಿರಿ. ಉಗುರಿನ ಪೋಷಣೆಗಾಗಿ ನಾರು ತುಂಬಿದ ಆಹಾರ ಸೇವಿಸಿ. ಉಗುರು ಶಕ್ತಿಯುತವಾಗಲು ನಿಮ್ಮ ಆಹಾರದಲ್ಲಿ ಸೋಯಾ, ಪಾಲಕ್ ಸೊಪ್ಪು, ಬೀಟ್‌ರೂಟ್, ಡ್ರೈಫ್ರೂಟ್ಸ್, ಯೋಗರ್ಟ್, ಮೀನು, ಮೊಟ್ಟೆ, ಬೆಳ್ಳುಳ್ಳಿ ಇತ್ಯಾದಿ ಬಳಸಿರಿ. ವಿಟಮಿನ್ `ಇ' ಕ್ಯಾಪ್ಸೂಲ್‌ನಿಂದ ಉಗುರುಗಳ ಮಸಾಜ್ ಮಾಡಿ. ಅಧಿಕ ಸಿಹಿ ತುಂಬಿದ ಸಾಫ್ಟ್ ಡ್ರಿಂಕ್ಸ್ ವರ್ಜಿಸಿ.
ಹಳದಿ ಉಗುರು
ಕೆಟ್ಟ ನೇಲ್ ಪಾಲಿಶ್‌ನ ಅತ್ಯಧಿಕ ಉಪಯೋಗದಿಂದ ಉಗುರು ಹಳದಿಯಾಗುತ್ತದೆ. ಆದ್ದರಿಂದ ಸದಾ ಬ್ರ್ಯಾಂಡೆಡ್ ನೇಲ್ ಪಾಲಿಶ್‌ನ್ನೇ ಉಪಯೋಗಿಸಿ. ಕೆಲವು ದಿನ ಉಗುರಿಗೆ ಬಣ್ಣ ಹಚ್ಚದೇ ಹಾಗೇ ಬಿಡಿ. ಈ ಹಳದಿ ಉಗುರಿನಿಂದ ಮುಕ್ತರಾಗಲು, ಉಗುರು ಬೆಚ್ಚಗಿನ ನೀರಿಗೆ ಕತ್ತರಿಸಿದ ನಿಂಬೆ ಹೋಳು ಅದ್ದಿ ಉಗುರಿನ ಮಸಾಜ್ ಮಾಡಿ. ಲೈಟ್ ವಿನಿಗರ್‌ನಿಂದ ಉಗುರಿನ ಸ್ಕ್ರಬಿಂಗ್ ಮಾಡಿ. ಪ್ರತಿದಿನದ ಬಳಕೆಯಿಂದ ಉಗುರು ಹೊಳೆಯವ ತೊಡಗುತ್ತದೆ.