ಮೇಕಪ್‌ನಿಂದ ಹೆಣ್ಣಿನ ಸೌಂದರ್ಯ ಎರಡುಪಟ್ಟು ಹೆಚ್ಚುತ್ತದೆ ಎಂಬುದೇನೋ ನಿಜ, ಆದರೆ ಮೇಕಪ್ ಜೊತೆ ಕೂದಲನ್ನು ಸ್ಟೈಲಿಶ್‌ಗೊಳಿಸಲು ಅದರ ಮೇಲೇನಾದರೂ ಪ್ರಯೋಗ ಮಾಡದಿದ್ದರೆ, ಸೌಂದರ್ಯ ಸಂವರ್ಧನೆಯ ನಿಮ್ಮೆಲ್ಲ ಪ್ರಯತ್ನಗಳೂ ವ್ಯರ್ಥವಾಗುತ್ತವೆ.
ನಿಮ್ಮ ಈ ಪ್ರಯತ್ನಗಳು ವ್ಯರ್ಥವಾಗಬಾರದೆಂದೇ ಹೇರ್‌ಸ್ಟೈಲ್ ಎಕ್ಸ್ ಪರ್ಟ್ಸ್ ವಿವಿಧ ಬಗೆಯ ಕೇಶಶೈಲಿಗಳ ಕುರಿತು ವಿವರಿಸುತ್ತಾ ಪೋನಿ ಪರ್ಮಿಂಗ್, ರಿಬೌಂಡಿಂಗ್, ಹೈಲೈಟಿಂಗ್ ಬಗ್ಗೆ ಹೇಳುತ್ತಾರೆ.
ಪೋನಿ ಪರ್ಮಿಂಗ್
ಆಧುನಿಕ ಯುವತಿಯರಲ್ಲಿ ಪರ್ಮಿಂಗ್ ಕುರಿತಾಗಿ ವಿಶೇಷ ಕ್ರೇಜ್ ಕಂಡುಬರುತ್ತದೆ. ನೀವು ಎಂದಾದರೂ ನಿಮ್ಮ ಕೂದಲಿಗೆ ಈ ಪರ್ಮಿಂಗ್ ಟ್ರೈ ಮಾಡಿದ್ದೀರಾ? ಇದರಿಂದ ನಿಮ್ಮ ಕೂದಲಿಗೆ 100% ಡಿಫರೆಂಟ್ ಲುಕ್ಸ್ ಸಿಗುತ್ತದೆ.
ಇದನ್ನು ಮಾಡುವುದು ಹೇಗೆ?
ಎಲ್ಲಕ್ಕೂ ಮೊದಲು ಕೂದಲನ್ನು ಚೆನ್ನಾಗಿ ತೊಳೆಯಿರಿ. ಅದಾದ ಮೇಲೆ ಅದನ್ನು 70% ಒಣಗಿಸಿ. ಆಮೇಲೆ ಇದರ ಮೇಲೆ ಸ್ಪ್ರೇ ಮಾಡಿ 90% ಒಣಗಿಸಿ.
ಇದಾದ ಮೇಲೆ ಒಂದು ಬಟ್ಟಲಲ್ಲಿ ಪರ್ಮಿಂಗ್ ಲೋಶನ್ ತೆಗೆದುಕೊಳ್ಳಿ. ನಂತರ ಕೂದಲಿಗೆ ಲೋಶನ್ ಹಚ್ಚಲು ಹತ್ತಿ ಬಳಸಿ. ಇದಾದ ಮೇಲೆ ಬಟರ್ ಪೇಪರ್‌ನ್ನು ಸಣ್ಣ ಸಣ್ಣ ತುಂಡಾಗಿಸಿ. ನಂತರ ಪೋನಿ ಮಾಡಿ ಅದರಿಂದ ತೆಳು ಸೆಕ್ಷನ್ಸ್ ಬೇರ್ಪಡಿಸಿ. ಪ್ರತಿ ಸೆಕ್ಷನ್ ಮೇಲೂ ಚೆನ್ನಾಗಿ ಬಾಚಣಿಗೆಯಾಡಿಸಿ, ಪರ್ಮಿಂಗ್ ಲೋಶನ್ ಅಪ್ಲೈ ಮಾಡಿ. ಆಮೇಲೆ ಕೂದಲಿನ ತುದಿಗೆ ಚೆನ್ನಾಗಿ ಬಟರ್ ಪೇಪರ್ ಸುತ್ತಿಕೊಳ್ಳಿ, ಅದರ ಅಂಚು ಚೆನ್ನಾಗಿ ಕವರ್ ಆಗಬೇಕು. ನೀವು ಎಷ್ಟು ಚೆನ್ನಾಗಿ ಬಟರ್ ಪೇಪರ್‌ನ್ನು ಕೂದಲಿಗೆ ಸುತ್ತುವಿರೋ ಅದರಲ್ಲಿ ಕರ್ಲ್ಸ್ ಅಷ್ಟೇ ಚೆನ್ನಾಗಿ ಮೂಡಿಬರುತ್ತದೆ.
ಕೂದಲಿನ ಎಲ್ಲಾ ಭಾಗಗಳಿಗೂ ಹೀಗೆ ಮಾಡಿ. ಇದಾದ ಮೇಲೆ ರೋಲರ್ಸ್ ಬಳಸಬೇಕು. ಹೀಗೆ 40-45 ನಿಮಿಷಗಳಾದ ಮೇಲೆ 1-2 ರೋಲರ್ ತೆರೆದು ನೋಡಿ ಕರ್ಲ್ಸ್ ಬಂದಿದೆಯೇ ಎಂದು ಖಾತ್ರಿಪಡಿಸಿಕೊಳ್ಳಿ. ಕರ್ಲ್ಸ್ ಕಾಣಿಸಿಕೊಂಡಿದ್ದರೆ, ರೋಲರ್ಸ್ ಜೊತೆಯಲ್ಲೇ ಸಾದಾ ನೀರಿನಿಂದ ತಲೆಗೂದಲು ತೊಳೆಯಿರಿ. ಆಗ ಕೂದಲಿನಿಂದ ಲೋಶನ್ ಉತ್ತಮ ರೀತಿಯಲ್ಲಿ ಬಿಟ್ಟುಹೋಗುತ್ತದೆ. ಇದಾದ ಮೇಲೆ 80-90% ಕೂದಲನ್ನು ಡ್ರೈ ಮಾಡಿ.
ಡ್ರೈ ಮಾಡಿದ ನಂತರ ಕೂದಲಿಗೆ ನ್ಯೂಟ್ರಿಲೈಸರ್ ಹಚ್ಚಿರಿ. ನ್ಯೂಟ್ರಿಲೈಸರ್ ಎಲ್ಲಾ ರೋಲರ್‌ಗಳ ಮೇಲೂ ಮೆತ್ತಿಕೊಳ್ಳುವಂತೆ ಎಚ್ಚರವಹಿಸಿ. ನಂತರ 20-25 ನಿಮಿಷಗಳಾದ ಮೇಲೆ ಸಾದಾ ನೀರಿನಿಂದ ಕೂದಲು ತೊಳೆಯಿರಿ. (ಸಾದಾ ನೀರು ಅಂದರೆ ಇಲ್ಲಿ ಜೊತೆಗೆ ಶ್ಯಾಂಪೂ ಹಾಕಬಾರದೆಂದು ಅರ್ಥ). ಅದಾದ 5 ನಿಮಿಷಗಳ ನಂತರ ಕಂಡೀಶನರ್ ಹಚ್ಚಿರಿ. ಅದಾಗಿ 10 ನಿಮಿಷ ಹಾಗೇ ಬಿಡಿ. ನಂತರ ಟವೆಲ್‌ನಿಂದ ಕೂದಲನ್ನು 50% ಒಣಗಿಸಿ. ರೋಲರ್ಸ್ ತೆಗೆದು, ಕರ್ಲ್ಸ್ ಮೇಲೆ ಕವರ್ ಕರ್ಲ್ಸ್ ಕಂಡೀಶನಿಂಗ್ ಕ್ರೀಂ ಬಳಸಿರಿ. ಇದರಿಂದ ಕರ್ಲ್ಸ್ ಸಾಫ್ಟ್ ಆಗುತ್ತದೆ.
ಪರ್ಮಿಂಗ್ ಮಾಡುವಾಗ
ಕಲರ್ ಮಾಡಿದ ಕೂದಲಿಗೆ ಪರ್ಮಿಂಗ್ ಮಾಡಲು ಹೋಗಬೇಡಿ.
ಕೂದಲಿಗೆ ಲೋಶನ್ ಹಚ್ಚುವಾಗ, ಅಗತ್ಯ ಕೈಗವಸು ಧರಿಸಿರಿ.
ಕಂಡೀಶನರ್ ಅಗತ್ಯ ಬಳಸಬೇಕು, ಇದರಿಂದ ಕರ್ಲ್ಸ್ ಸಾಫ್ಟ್ ಆಗುತ್ತದೆ.
ರಿಬೌಂಡಿಂಗ್
ರಿಬೌಂಡಿಂಗ್ ಎಂದರೆ ಕೂದಲಿಗೆ ಸ್ಟ್ರೇಟ್ ಲುಕ್ ಕೊಡುವುದು ಎಂದರ್ಥ. ರಿಬೌಂಡಿಂಗ್ ಮಾಡಲು ಎಲ್ಲಕ್ಕಿಂತ ಮೊದಲು ಕೂದಲಿಗೆ ನಾರ್ಮಲ್ ಶ್ಯಾಂಪೂ ಹಚ್ಚಿರಿ. ನಾರ್ಮಲ್ ಶ್ಯಾಂಪೂ ಅಂದ್ರೆ ಅದರಲ್ಲಿ ಕಂಡೀಶರ್ ಬೆರೆತಿರಬಾರದು. ನಂತರ ಕೂದಲನ್ನು 70% ಡ್ರೈ ಮಾಡಿ. ಅದಾದ ಮೇಲೆ ಕೂದಲಿನ ಮೇಲೆ ಸ್ಪ್ರೇ ಮಾಡಿ 90 ಅಥವಾ 100% ಡ್ರೈ ಮಾಡಿ. ಈಗ ಕೂದಲಿಗೆ ಸ್ಟ್ರೇಟ್ ಹೇರ್ ರಿಬೌಂಡಿಂಗ್ ಕ್ರೀಂ ಹಚ್ಚಿ 40-45 ನಿಮಿಷ ಹಾಗೇ ಬಿಡಿ. ಕೂದಲಿನ ಟೆಕ್ಸ್ ಚರ್ ಆಧರಿಸಿ ಎಷ್ಟು ಹೊತ್ತು ರಿಬೌಂಡಿಂಗ್ ಕ್ರೀಂ ಹಚ್ಚಬೇಕೆಂಬುದನ್ನು ನಿರ್ಧರಿಸಿ.
ಅದಾದ ಮೇಲೆ ಕೂದಲು ಬೌನ್ಸ್ ಆಗಿದೆಯೇ ಇಲ್ಲವೇ ಎಂದು ಪರೀಕ್ಷಿಸಿ. ಇದಕ್ಕಾಗಿ ಒಂದು ಕೂದಲನ್ನು ತೆಗೆದುಕೊಂಡು ಬೆರಳಿಗೆ ಸುತ್ತಿಕೊಳ್ಳಿ ಅಥವಾ ಎಳೆದು ನೋಡಿ. ನಂತರ ಅದರಲ್ಲಿ ಸ್ಪ್ರಿಂಗ್ ಟೈಪ್ ಕರ್ಲ್ ಶೋ ಆಗುತ್ತಿದೆಯೇ ಇಲ್ಲವೇ ನೋಡಿ. ಕರ್ಲ್ ಕಾಣಿಸಿದರೆ ಕೂದಲನ್ನು ತೊಳೆಯಿರಿ. ನಂತರ ಅದರ ಮೇಲೆ ಮಾಸ್ಕ್ ಹಾಕಿ 5 ನಿಮಿಷಗಳ ನಂತರ ಮತ್ತೆ ತೊಳೆಯಿರಿ. ಕೂದಲು 50% ಒಣಗಿದ ನಂತರ ಅದರ ಮೇಲೆ ಹೀಟ್ ಪ್ರೊಟೆಕ್ಷನ್ ಸ್ಪ್ರೇ ಮಾಡಿ, ನಂತರ ಮತ್ತೆ 100% ಒಣಗಿಸಿ.
ಇದಾದ ಮೇಲೆ ಕೂದಲಿನ ತೆಳು ಸೆಕ್ಷನ್ ಮಾಡಿ, ಸ್ಟ್ರೇಟ್‌ನಿಂಗ್ ಮೆಶೀನ್‌ನಿಂದ ಪ್ರೆಸಿಂಗ್ ಶುರು ಮಾಡಿ. ಮೊದಲು ಕೂದಲಿನ ಬುಡ ಭಾಗದಲ್ಲಿ ನಂತರ ಇಡೀ ಉದ್ದನೆ ಕೂದಲಿಗೆ ಪ್ರೆಸಿಂಗ್ ಮಾಡಿ. ಪ್ರೆಸಿಂಗ್ ಕಂಪ್ಲೀಟ್ ಆದ ನಂತರ ಕೂದಲಿಗೆ ನ್ಯೂಟ್ರೈಸರ್ ಕ್ರೀಂ ಅಪ್ಲೈ ಮಾಡಿ ಹಾಗೂ 10-15 ನಿಮಿಷದ ನಂತರ, ಕೂದಲನ್ನು ಹಿಂಭಾಗದಲ್ಲಿ ಇಳಿಬಿಟ್ಟು ತೊಳೆಯಿರಿ.
ನಂತರ ಅದಕ್ಕೆ ಮಾಸ್ಕ್ ಬಳಸಿ, 5-10 ನಿಮಿಷಗಳಾದ ಮೇಲೆ ಮತ್ತೆ ತೊಳೆಯಿರಿ. ನಂತರ 50% ಒಣಗಿಸಿ. ಆಮೇಲೆ ಲಘುವಾಗಿ ತಲೆಗೂದಲಲ್ಲಿ ಬಾಚಣಿಗೆ ಆಡಿಸಿ, ಹೇರ್ ಕೋಟ್ ಆಯಿಲ್‌ನ 2-3 ಹನಿ ಕೈಗೆ ಹಾಕಿಕೊಂಡು ಕೂದಲಿಗೆ ಚೆನ್ನಾಗಿ ತೀಡಿರಿ. ನಂತರ ಕೂದಲಿನ ದೊಡ್ಡ ದೊಡ್ಡ ಸೆಕ್ಷನ್ ಮಾಡಿ ಸ್ಟ್ರೇಟ್‌ನಿಂಗ್ ಮೆಶೀನ್‌ನಿಂದ ರಿಬೌಂಡಿಂಗ್‌ಗೆ ಫೈನಲ್ ಟಚ್ ಕೊಡಿ.
ಗಮನಿಸಿ
ಕೂದಲಿನ ಟೆಕ್ಸ್ ಚರ್ ಗಮನಿಸಿಕೊಂಡೇ ರಿಬೌಂಡಿಂಗ್ ಮಾಡಿ.
ನೆತ್ತಿ (ಸ್ಕಾಲ್ಪ್)ಯಲ್ಲಿ ಸೋಂಕು (ಇನ್‌ಫೆಕ್ಷನ್) ಆಗಿದ್ದರೆ ರಿಬೌಂಡಿಂಗ್ ಮಾಡಬೇಡಿ.
ರಿಬೌಂಡಿಂಗ್ ಮಾಡುವಾಗ ಮುಂದೆ ಕೂರಬೇಡಿ.
ರಿಬೌಂಡಿಂಗ್ ನಂತರ 3 ದಿನ ತಲೆಗೆ ನೀರು ತಾಕಿಸಬೇಡಿ, ಹಾಗೆಯೇ ಓಪನ್ ಹೇರ್ ಇರಲಿ.
ಕೂದಲು ಹೆಚ್ಚು ಡ್ರೈ ಆಗಿದ್ದರೆ ರಿಬೌಂಡಿಂಗ್‌ಗೆ ಮುಂಚೆ ಅಗತ್ಯ ಸ್ಪಾ ಮಾಡಿಸಿ. ಸ್ಪಾ ಮಾಡಿಸುವುದರಿಂದ ಕೂದಲಿನ ಒಳಭಾಗದ ಡ್ರೈನೆಸ್ ರಿಲ್ಯಾಕ್ಸ್ ಆಗುತ್ತದೆ.
ಹೇರ್ ಕೋಟ್ ಅಂದ್ರೆ ಕೂದಲಿನ ಸನ್‌ಸ್ಕ್ರೀನ್ ಮಾಡಿಸುವುದು ಎಂದರ್ಥ.
ಹೈಲೈಟಿಂಗ್
ಹೈಲೈಟಿಂಗ್‌ನ ಅರ್ಥ ಕೂದಲಿನ ಯಾವುದೇ ಲೇಯರ್‌ಗೆ ಗಾಢ ಕಲರ್ ಹಚ್ಚುವುದು.
ಇದನ್ನು ಮಾಡುವುದಕ್ಕಾಗಿ ಎಲ್ಲಕ್ಕೂ ಮೊದಲು ಕೂದಲನ್ನು ನಾರ್ಮಲ್ ಶ್ಯಾಂಪೂನಿಂದ ತೊಳೆಯಿರಿ. ಅದಾದ ನಂತರ ಕೂದಲನ್ನು ಸೆಕ್ಷನ್ ಮಾಡಿ, ಯಾವ ಭಾಗಕ್ಕೆ ಬೇಕೋ ಅದನ್ನು ಮಾತ್ರ ಹೈಲೈಟ್ ಮಾಡಿ. ಇದಾದ ಮೇಲೆ ಬ್ಲೀಚ್ ಪೌಡರ್‌ತೆಗೆದುಕೊಂಡು ಅದಕ್ಕೆ 9-12% ಡೆವಲಪರ್ ಬೆರೆಸಿ ಪೇಸ್ಟ್ ತಯಾರಿಸಿಕೊಳ್ಳಿ.
ಮೇಲ್ಭಾಗದ ಕೂದಲನ್ನು ಚೆನ್ನಾಗಿ ಕಟ್ಟಿ, ಯಾವ ಭಾಗ ಬೇಕೋ ಅದಕ್ಕೆ ಸಿದ್ಧಪಡಿಸಿದ ಪೇಸ್ಟ್ನ್ನು ಹಚ್ಚಬೇಕು. 10 ನಿಮಿಷ ಬಿಟ್ಟು ಪ್ಯಾಕ್ ಮಾಡಿ. ಇದು ಆರಂಭದಲ್ಲಿ ಬ್ಲಾಂಡ್ ಕಲರ್ ಶೋ ಮಾಡುತ್ತದೆ. ಅದಾದ ಮೇಲೆ ಲೇಯರ್ ಮೇಲೆ ಹಚ್ಚಬೇಕಾದ ಕಲರನ್ನು ಅಪ್ಲೈ ಮಾಡಿ. ಅದಾದ 30 ನಿಮಿಷ ಕೂದಲನ್ನು ಹಾಗೇ ಬಿಡಿ, ನಂತರ ಮತ್ತೆ ತೊಳೆಯಿರಿ. ಆಮೇಲೆ ಕಂಡೀಶನರ್ ಹಚ್ಚಿ ಕೂದಲನ್ನು ಮತ್ತೆ ತೊಳೆದು ಚೆನ್ನಾಗಿ ಒಣಗಿಸಿ. ಲೇಯರ್ ಮೇಲೆ ಹೈಲೈಟಿಂಗ್ ಶೋ ಇರುತ್ತದೆ.
– ಬಿ. ಪಾರ್ವತಿ ಭಟ್