ಈಗಿನ ಕಾಲವೇ ಹೀಗೇ : ಮಿಸ್‌ ಕಂಟೆಸ್ಟ್ ಗಳ ಒಂದು ರೂಪ ಎಂದರೆ ಮಿಸ್‌ ನ್ಯಾಷನಲ್ ಅಚೀವ್ ‌ಮೆಂಟ್‌! ಅಮೆರಿಕಾದ ಇಂಥ ಪ್ರಸಕ್ತ ಮಿಸ್‌ ಅಂದ್ರೆ ಎರಿಕಾ ನೋಪ್ರಾಳ ಪ್ರಕಾರ, ಯಂಗ್‌ ವಿಮನ್‌ ತನ್ನ ಹೆಚ್ಚಿನ ಸಮಯವನ್ನು ಸೋಶಿಯಲ್ ಮೀಡಿಯಾಗೆ ನೀಡುತ್ತಾಳೆ. ಅವಳಿಗೆ ತನ್ನ ದೇಹದ ಕುರಿತಾಗಿ ತಲೆಬಾಲವಿಲ್ಲದ ಸಂದೇಹ ಮೂಡುತ್ತದೆ. ಅವಳು ಅದಕ್ಕಾಗಿ ಬಗೆಬಗೆಯ ಚಿಕಿತ್ಸೆಗೆ ಮೊರೆ ಹೋಗುತ್ತಾಳೆ, ಇದರಿಂದ ಅವಳ ದೇಹ, ಮನಶ್ಶಾಂತಿ ಎರಡೂ ಹಾಳಾಗುತ್ತದೆ. ಈಕೆಯ ಮಾತುಗಳೇನೋ ಸರಿ, ಆದರೆ ಈಗಿನ ಕಾಲವೇ ಹಾಗಿದೆ, ಏನು ಮಾಡುವುದು?

ಮಾರ್ಕೆಟ್ ಫಂಡಾ : ವೆಡ್ಡಿಂಗ್‌ ಬಿಸ್‌ ನೆಸ್‌ ಇದೀಗ ದಿನೇದಿನೇ ಹೆಚ್ಚು ಅಭಿವೃದ್ಧಿ ಹೊಂದುತ್ತಿದೆ. ಆದರೆ ಬಹುತೇಕರು ಲಿವ್ ಇನ್‌ ಬಯಸುತ್ತಾರೆ ಎಂಬುದು ಬೇರೆ ವಿಷಯ. ಹೀಗೆ ಅದ್ಧೂರಿಯಾಗಿ ಮದುವೆ ಆಗಿ, ಕೆಲವು ವರ್ಷ ಜೊತೆಗಿದ್ದ ನಂತರ, ಬೇರೆ ಆಗಬೇಕು ಅನ್ನುವ ತಮಾಷೆಯ ಹುನ್ನಾರ ಇಬ್ಬರಿಗೂ ಬರುತ್ತದೆ. ಹೀಗೆ ಬರುಬರುತ್ತಾ ಒಂದು ತಮಾಷೆ ಪ್ರಸಂಗ ಆಗುತ್ತಿದೆ.  ಹಿಂದಿನದನ್ನು ಬಿಟ್ಟರು ಹೊಸತನ್ನು ತಗುಲಿ ಹಾಕಿಕೊಳ್ಳುತ್ತಾ, ಇಂಥ ವೆಡ್ಡಿಂಗ್‌ ಬಿಸ್‌ ನೆಸ್‌ ಚಮಕಾಯಿಸಲು ಮತ್ತೆ ಮತ್ತೆ ಅವಕಾಶ ಕೊಡುತ್ತಿದ್ದಾರೆ. ಪಾಶ್ಚಾತ್ಯರಲ್ಲಂತೂ ವೆಡ್ಡಿಂಗ್‌ ಡ್ರೆಸ್‌ ಹಲವು ಲಕ್ಷಗಳನ್ನೂ ಮೀರಿಸುತ್ತದೆ. ಇಲ್ಲಿ ಸೂಜೀ ಟರ್ನರ್‌ ಳ ವೈಟ್‌ ಟೆರೂಸೋ ಇತ್ತೀಚೆಗೆ ಬಲು ಚರ್ಚೆಯಲ್ಲಿತ್ತು. ಬರೀ ಲಿವ್ ‌ಇನ್‌ ಗೆ ಅಂಟಿಕೊಂಡರೆ ಇಂಥ ಮೋಜು ಮಸ್ತಿ ಎಲ್ಲಿಂದ ಬರಬೇಕು?

sfsp-blog-photo

ಭವಿಷ್ಯದ ಚಿಂತೆ : ನಮ್ಮಲ್ಲಿ ಶಾಲೆಗಳ ಮಿಡ್‌ ಡೇ ಮೀಲ್ಸ್ ಕುರಿತು ಬಹಳ ಹುಯಿಲೆಬ್ಬಿಸಲಾಗುತ್ತದೆ. ಹೀಗೆ ಆಹಾರ ಕೊಟ್ಟು ಮಕ್ಕಳ ಹೆತ್ತರವನ್ನು ಸೋಮಾರಿಗಳಾಗಿಸುತ್ತಿದ್ದಾರೆ ಎಂದು ದೂರಲಾಗುತ್ತದೆ. ಆದರೆ ಅಮೆರಿಕಾದಂಥ ಅತಿ ಶ್ರೀಮಂತ ದೇಶಗಳಲ್ಲೂ 3 ಕೋಟಿ ಮಕ್ಕಳಿಗೆ ಊಟ-ತಿಂಡಿ ಎರಡೂ ಒದಗಿಸಲಾಗುತ್ತದೆ, ಆ ಮಕ್ಕಳಿಗೆ ಅಪೌಷ್ಟಿಕತೆ ಆಗಬಾರದೆಂಬುದೇ ಉದ್ದೇಶ. ಇದೀಗ ಬೇಸಿಗೆ ರಜೆ ಬಂತೆಂದು, ಮಕ್ಕಳಿಗೆ ಆಯಾ ಜಾಗದಲ್ಲೇ ಮನೆ ಬಳಿ ಉಚಿತ ಪೌಷ್ಟಿಕ ಆಹಾರ ಒದಗಿಸುವ ಬಗ್ಗೆ ಸರ್ಕಾರ ಕಾರ್ಯಗತವಾಗಿದೆ. ನಮ್ಮಲ್ಲಿ ಎಲ್ಲವನ್ನೂ ಪಾಪಪುಣ್ಯದ ಲೆಕ್ಕಾಚಾರಕ್ಕೆ ಥಳಕು ಹಾಕಿದರೆ, ಅಮೆರಿಕಾದಲ್ಲಿ ಇಂಥ ಅದೃಷ್ಟದ ಬಗ್ಗೆ ನಮ್ಮಲ್ಲಿರುವಷ್ಟು ಹೆಚ್ಚು ನಂಬಿಕೆ ಇಲ್ಲ.

dameron

ಭೇದಭಾವ ಮುಗಿಯಲಿ : ಆ್ಯಪ್ರೇ ಅಮೆರಿಕನ್‌ ಅಂದ್ರೆ ಅಮೆರಿಕಾದ ಕರಿಯರು, ಅಲ್ಲೀಗ ಬಹುತೇಕ ಸರಿಸಮ ಆಗಿದ್ದಾರೆ. ಹೀಗಾಗಿ ಅಲ್ಲಿನ 47% ಕರಿಯರು, ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಭೇದಭಾವ ಕಂಡುಬರುತ್ತಿಲ್ಲ ಎನ್ನುತ್ತಾರೆ. ಆದರೆ.... ಇನ್ನಷ್ಟು ಕರಿ ಮಂದಿಯೇ ವೈದ್ಯರಾಗಲಿ ಎಂಬುದು ಇವರಾಸೆ. ಆಗ ಅವರಿಗೆ ತಮ್ಮವರು ಎಂಬ ಆಪ್ತತೆ ಹೆಚ್ಚು ದೊರಕಲಿದೆ. ಶೈನೆ, ಶೈಲಿ, ಕಾರ್ಲೆ, ಮಲೈಕಾ... ಎಲ್ಲರೂ ಅಲ್ಲಿನ ಆಸ್ಪತ್ರೆಯ ಗೋಲ್ಡ್ ಸ್ಟಾಂಡರ್ಡ್‌ ನಿಂದ ಬಲು ಖುಷಿಗೊಂಡಿದ್ದಾರೆ. ನಮ್ಮಲ್ಲಂತೂ ಸರ್ಕಾರಿ ಆಸ್ಪತ್ರೆಯ ಸಹವಾಸವೇ ಬೇಡ ಎಂಬಂತಾಗಿದೆ. ಇರುವುದರಲ್ಲಿಯೂ ದಲಿತರು, ಅಲ್ಪಸಂಖ್ಯಾತರತ್ತ ತೋರಲಾಗುವ ವ್ಯವಹಾರದ ಬಗ್ಗೆ ಮಾತನಾಡದಿರುವುದೇ ಮೇಲು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ