ಜೀವನದ ಸಿಹಿಕಹಿ ಉಂಡು ಬದುಕಲ್ಲಿ ಬೆಂಡಾಗಿದ್ದ ವನಜಮ್ಮ, ಮಗಳು ಇದ್ದಕ್ಕಿದ್ದಂತೆ ಅಳಿಯನನ್ನು ತೊರೆದು ಬಂದು ವಿಚ್ಛೇದನಕ್ಕಾಗಿ ಮುಂದುವರಿದಾಗ ಅದನ್ನು ತಡೆಯಲು ಬಹಳ ಯತ್ನಿಸಿದರು. ಮುಂದೆ ಅವರ ಮಗಳ ಬಾಳು ಸರಿಹೋಯಿತೇ.....?

ಬೆಳಬೆಳಗ್ಗೆ ಮನೆಯ ಕರೆಗಂಟೆಯ ಸದ್ದಾದಾಗ, `ಇಷ್ಟೊತ್ತಿಗೆ ಯಾರಿರಬಹುದು,' ಎಂದು ಮನದಲ್ಲಿ ಅಂದುಕೊಳ್ಳುತ್ತಾ ಬಾಗಿಲನ್ನು ತೆಗೆದು ಹೊರಗೆ ಬಂದರು ವನಜಮ್ಮ. ಬಾಗಿಲಲ್ಲಿ ಮಗಳು ಅರುಂಧತಿ ಜೊತೆಗೆ ಮೊಮ್ಮಗಳು ಅನ್ವಿತಾ ನಿಂತಿದ್ದರು.

``ಇದೇನೇ ಅವರು, ಬ್ಯಾಗ್‌ ಸಮೇತ ಬಂದಿದ್ದೀಯಾ.... ನಿನ್ನ ಗಂಡ ಅಜಯ್‌ ಬಂದಿಲ್ವಾ....?  ಅನ್ವಿತಾ ಪುಟ್ಟ, ಅಜ್ಜಿಯ ಮನೆಗೆ ಬಂದ್ಯಾ ಕಂದಾ....'' ಎಂದರು ಅಕ್ಕರೆಯಿಂದ.

``ಇಲ್ಲಾ ಅಮ್ಮಾ..... ನಾನು ಅನ್ವಿತಾ ಇಬ್ಬರೇ ಬಂದ್ವಿ....'' ಎಂದಳು ಮಗಳು ಅರುಂಧತಿ.

ಅರುಂಧತಿಯ ಅಮ್ಮ ವನಜಮ್ಮ ಮೊಮ್ಮಗಳ ಕೈ ಹಿಡಿದುಕೊಂಡು ಮನೆಯ ಒಳಗೆ ಕರೆದುಕೊಂಡು ಹೋದರು.

ಮಗಳು ಅರುಂಧತಿ ತನ್ನ ಮನೆಗೆ ಬಂದು ಆಗಲೇ ಒಂದು ವಾರವಾಗಿದೆ. ಯಾಕೋ ಒಂಥರಾ ಇದ್ದಾಳೆ, ಗಂಡನಿಗೆ ಕಾಲ್‌ಮಾಡೋದು ಕಾಣ್ತಾ ಇಲ್ಲ. ಅವನೂ ಬರಲೇ ಇಲ್ಲ. ಯಾವಾಗಲೂ ತನ್ನ ಗಂಡನೊಬ್ಬನನ್ನೇ ಬಿಟ್ಟು ಬಂದು ಇಲ್ಲಿ ಉಳಿದದ್ದೇ ಇಲ್ಲ. ಅವಳೇ ಏನಾದರೂ ಹೇಳುತ್ತಾಳೇನೋ ಎಂದು ಕಾದದ್ದಷ್ಟೇ ಬಂತು. ಇನ್ನು ತನಗೆ ಕಾಯಲು ಸಾಧ್ಯವೇ ಇಲ್ಲ. ಏನಾದರೂ ಗಂಡನ ಜೊತೆಗೆ ಜಗಳ ಮಾಡಿಕೊಂಡು ಬಂದಿದ್ದಾಳೋ ಏನೋ.... ಏನೊಂದೂ ಅರಿಯದಾಯಿತು ವನಜಮ್ಮನಿಗೆ. ಏನಾಯಿತು  ಎಂದು ಇವತ್ತು ಕೇಳಲೇ ಬೇಕು ಎಂದು ತಮ್ಮಲ್ಲೇ ನಿರ್ಧರಿಸಿದರು ವನಜಮ್ಮ.

ರಾತ್ರಿ ಊಟವಾದ ಮೇಲೆ ಅನ್ವಿತಾ ಬೇಗನೆ ನಿದ್ದೆ ಮಾಡಿದಳು. ಅರುಂಧತಿಗೆ ನಿದ್ದೆ ಬರದೇ ಹಾಸಿಗೆಯ ಮೇಲೆ ಒದ್ದಾಡುತ್ತಿದ್ದಳು. ವನಜಮ್ಮ ಸೀದಾ ಮಗಳ ರೂಮಿಗೆ ಹೋದರು. ಅಮ್ಮ ತನ್ನ ರೂಮಿಗೆ ಬಂದದ್ದನ್ನು ನೋಡಿ ಅರುಂಧತಿ ಎದ್ದು ಕುಳಿತಳು. ಮಗಳಿಗೆ ರೂಮಿನಿಂದ ಹೊರಗಡೆ ಬರುವಂತೆ ಸನ್ನೆ ಮಾಡಿದರು ವನಜಮ್ಮ.

``ಅಮ್ಮಾ ಏನಾಯಿತು.....?'' ಎಂದು ಕೇಳಿದಳು ಅರುಂಧತಿ.

``ಶ್‌... ಮಾತನಾಡಬೇಡ ಅನ್ವಿತಾ ಎದ್ದುಬಿಡುತ್ತಾಳೆ.....'' ಎಂದರು ವನಜಮ್ಮ.

ಅಮ್ಮ ತನ್ನನ್ನು ಏನೋ ಕೇಳಬೇಕೆಂದಿದ್ದಾಳೆ ಎಂಬ ವಿಷಯ ಅರುಂಧತಿಗೆ ಚೆನ್ನಾಗಿ ಗೊತ್ತಿತ್ತು. ತನ್ನ ಅಮ್ಮನ  ಹಿಂದೆಯೇ ಕೊಠಡಿಯಿಂದ ಹೊರಗೆ ಬಂದಳು ಅರುಂಧತಿ.

``ಅವರು, ನೀನು ಬಾಯಿಬಿಟ್ಟು ಹೇಳದಿದ್ದರೂ ಅರ್ಥವಾಗದಷ್ಟು ಪೆದ್ದಿ ನಾನಲ್ಲ ಕಂದಾ.... ನೀನೇ ಏನಾದರೂ ಹೇಳತ್ತಿಯೇನೋ ಎಂದು ಕಾದೆ. ನನ್ನ ಸಹನೆಗೂ ಒಂದು ಮಿತಿ ಇದೆ.''

``ಅಮ್ಮಾ , ಅಜಯ್‌ ನಾವು ತಿಳಿದುಕೊಂಡಿರುವಷ್ಟು ಒಳ್ಳೆಯವನಲ್ಲ. ಅವನಿಗೆ ಬೇರೆ ಹುಡುಗಿಯ ಜೊತೆಗೆ ಸಹವಾಸ ಇದೆ.''

``ಅಜಯ್‌ ವಿಷಯದಲ್ಲಿ ನೀನು ಹಾಗೆ ಹೇಳಿದರೆ ನಾನು ನಂಬೋದಿಲ್ಲ ಅರುಂಧತಿ...  ಆತ ಅಂಥನನಲ್ಲ....'' ಎಂದರು ವನಜಮ್ಮ.

``ನಾನೂ ಹಾಗೇ ಅಂದುಕೊಂಡಿದ್ದೆ ಅಮ್ಮಾ..... ಆದರೆ ನನ್ನ ಕಣ್ಮುಂದೆ ಅಜಯ್‌ ಸಿಕ್ಕಿಬಿದ್ದಾಗ ನಾನು ನಂಬದಿರಲು ಹೇಗಮ್ಮಾ ಸಾಧ್ಯ....?'' ಎಂದಳು ಅರುಂಧತಿ.

``ಆ ಹುಡುಗಿಯ ಜೊತೆ ಅಜಯ್‌ ತಪ್ಪಾಗಿ ನಡೆದುಕೊಂಡಿದ್ದನ್ನು ನೀನು ನೋಡಿದೆಯಾ....?''

``ಹಾಗೇನೂ ನೋಡಿಲ್ಲಮ್ಮಾ.....! ಆದರೆ ಇತ್ತೀಚೆಗೆ ಒಂದು ಹುಡುಗಿಯ ಜೊತೆಗೆ ಅವರು ತುಂಬಾ ಮಾತನಾಡುತ್ತಾರೆ. ಹಗಲು ರಾತ್ರಿ ಅಂತಲ್ಲ, ಅವಳ ಫೋನ್‌ ಬಂದರೆ ರೂಮಿನಿಂದ ಹೊರಗಡೆ ಹೋಗಿ ಮಾತನಾಡುತ್ತಾರೆ.''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ