ಒಡವೆಗಳ ಕುರಿತು ಮಾತನಾಡುವಾಗ ನಾವು ಚಿನ್ನ ಬೆಳ್ಳಿ, ವಜ್ರ, ವೈಢೂರ್ಯ ಹಾಗೂ ಇನ್ನಿತರ ಮುತ್ತು ರತ್ನಗಳ ಕುರಿತು ಹೇಳುತ್ತಿರುತ್ತೇವೆ. ಜೊತೆಗೆ ಕೃತಕ ಆಭರಣಗಳಿಗೂ ಅಷ್ಟೇ ಮಹತ್ವವಿದೆ. ಅದರಲ್ಲೂ ಆಭರಣಗಳ ವ್ಯಾಮೋಹ ಅಧಿಕವಿರುವ ಮಂದಿ, ಚಿನ್ನ ವಜ್ರದ ಕುರಿತು ಹೆಚ್ಚು ಚಿಂತಿಸುತ್ತಾರೆ. ನಾವು ಕೇವಲ ಸ್ವರ್ಣಾಭರಣಗಳ ಕುರಿತು ಹೇಳುವುದಾದರೆ ಹೊಳೆ ಹೊಳೆಯುವ ಸುವರ್ಣ ಹಳದಿ ಬಣ್ಣ ಕಂಗಳ ಮುಂದೆ ಗೋಚರಿಸುತ್ತದೆ. ಕೇವಲ ಸ್ವರ್ಣಾಭರಣಗಳು ಮಾತ್ರವೇ ಅಲ್ಲದೆ, ಅಚ್ಚ ಧವಳ ಕಾಂತಿಯ ಆಭರಣಗಳು ಜ್ಯೂವೆಲರಿಗಳಲ್ಲಿ ಈಗ ಎಲ್ಲರನ್ನೂ ಆಕರ್ಷಿಸುತ್ತಿದೆ.

ಹೌದು, ಹೊಳೆ ಹೊಳೆಯುವ ಹಳದಿ ಚಿನ್ನದ ಹಾಗೆಯೇ ಬಿಳಿಯ ಚಿನ್ನದ ಒಡವೆಗಳೂ ಈಗ ಮಾರ್ಕೆಟ್‌ನಲ್ಲಿ ಎಲ್ಲರ ಕಣ್ಣು ಕುಕ್ಕುತ್ತಿದೆ. ಬಿಳಿಯ ಚಿನ್ನ ಎಂಬುದು ಬೆಳ್ಳಿ, ನಿಕಲ್, ಪೆಲೆಡಿಯಂ, ಪ್ಲಾಟಿನಂ, ರೇಡಿಯಂ, ಮ್ಯಾಂಗನೀಸ್‌ ಇತ್ಯಾದಿ ಲೋಹಗಳಿಂದ ತಯಾರಾಗುತ್ತದೆ. ಈ ಮಿಶ್ರ ಲೋಹಗಳ ಕಾರಣ ಇವು ಬೆಳ್ಳಗೆ ಕಂಡುಬರುತ್ತವೆ. ಬನ್ನಿ, ಬಿಳಿಯ ಚಿನ್ನದ ಯಾವ ಯಾವ ಬಗೆಯ ಆಭರಣಗಳನ್ನು ಇತರ ವಸ್ತುಗಳೊಂದಿಗೆ ಮ್ಯಾಚ್‌ ಮಾಡಿ ಬಳಸಬಹುದೆಂದು ನೋಡೋಣ :

ನೀವು ಅಚ್ಚ ಬಿಳಿಯ ಉಡುಗೆಗಳ ಜೊತೆ ಬಿಳಿಯ ಚಿನ್ನದ ಡಿಸೈನರ್‌, ಪ್ಲೇನ್‌ ಅಥವಾ ವಜ್ರಖಚಿತ ಬಳೆಗಳು ಮತ್ತು ಉಂಗುರ, ಚೇನ್‌ ಹಾಗೂ ಡಿಸೈನರ್‌ ಪೆಂಡೆಂಟ್‌ ಧರಿಸಬಹುದು.

ಬಿಳಿಯ ಚಿನ್ನದ ನೆಕ್‌ಲೇಸ್‌, ಮಂಗಳಸೂತ್ರ, ಕಿವಿಯೋಲೆ, ಮಾಟ್ಲು, ತೋಳುಬಂದಿ, ಬ್ರೇಸ್‌ಲೆಟ್‌ ಇತ್ಯಾದಿ ಸಹ ಧರಿಸಬಹುದು.

ಇತ್ತೀಚೆಗೆ ವೈಟ್‌ ಗೋಲ್ಡ್ ಪ್ಲೇಟೆಡ್‌ ಕಾರ್‌ ಸಹ ಮಾರುಕಟ್ಟೆಗೆ ಬಂದಿದೆ.

ಕೆಲವು ಸೈಕಲ್ ಕಂಪನಿಗಳಂತೂ ವೈಟ್‌ ಗೋಲ್ಡ್ ಪ್ಲೇಟೆಡ್‌ ಮತ್ತು ಹಳದಿ, ಬಿಳಿ ಚಿನ್ನದ ಕಾಂಬಿನೇಶನ್‌ನಲ್ಲಿ ಗೋಲ್ಡ್ ಪ್ಲೇಟೆಡ್ ಸೈಕಲ್‌ಗಳನ್ನೂ ತಯಾರಿಸಿವೆ.

ಕೆಲವು ಖಯಾಲಿ ರಸಿಕರಂತೂ ಚಪ್ಪಲಿ, ಬೂಟುಗಳಿಗೂ ವೈಟ್‌ ಗೋಲ್ಡ್ ನ್ನು ಬಳಸಿದ್ದಾರೆ!

ನೀವು ಸಹ ವೈಟ್‌ ಗೋಲ್ಡ್ ನ್ನು ಅತಿಯಾಗಿ ಪ್ರೀತಿಸುವಿರಾದರೆ, ನಿಮ್ಮದೇ ಆಯ್ಕೆಯ ವಿನ್ಯಾಸದ ವೈಟ್‌ ಗೋಲ್ಡ್ ಗಡಿಯಾರನ್ನು ಬಳಸಬಹುದು.

ಇತ್ತೀಚೆಗೆ ವೈಟ್‌ ಗೋಲ್ಡ್ ಕವರ್‌ ಹಾಗೂ ಬಾರ್ಡರ್‌ವುಳ್ಳ ಮೊಬೈಲ್ ಫೋನ್‌ಗಳೂ ಲಭ್ಯವಿವೆ.

ಬಿಳಿಯ ಚಿನ್ನದ ಜೊತೆಗೆ ಹೊಳೆಹೊಳೆಯುವ ಬಿಳಿಯ ವಜ್ರವನ್ನೂ ನೀವು ಫ್ಯಾಷನ್ನಿನ ರೂಪದಲ್ಲಿ ಬಳಸಬಹುದು. ಆದರೆ ಒಡವೆಗಳ ಚಿನ್ನವಂತೂ ಬಿಳುಪು, ಅದರಲ್ಲಿ ಹುದುಗಿಸಲಾದ ವಜ್ರ ಬಿಳುಪೇ ಆಗಿರುತ್ತದೆ.

Parineeta-PRAN1R033

ವಜ್ರಾಭರಣಗಳಲ್ಲಿ ಉಂಗುರ, ಕಿವಿಯೋಲೆ, ಟಾಪ್ಸ್, ನೆಕ್‌ಲೇಸ್‌, ಬಳೆಗಳು ಇತ್ಯಾದಿಗಳಿಗೆ ಹೆಚ್ಚಿನ ಬೇಡಿಕೆ ಇದೆ.

ಡೈಮಂಡ್‌ ಡಿಸೈನ್ಡ್ ವಾಚಸ್‌ ಹೆಚ್ಚು ಚಾಲ್ತಿಯಲ್ಲಿವೆ.

ಕೆಲವು ರಸಿಕರಂತೂ ತಮ್ಮ ದುಬಾರಿ ಡ್ರೆಸ್‌ಗಳ ಮೇಲೆ ಬಿಳಿಯ ಚಿನ್ನದ ಎಳೆಗಳ ಡಿಸೈನ್‌ ಹಾಗೂ ವಜ್ರಗಳ ಎಂಬ್ರಾಯಿಡರಿ ಬಿಡಿಸಿರುತ್ತಾರೆ.

ವೈಟ್‌ ಗೋಲ್ಡ್ ನ ಚೇನ್‌, ನೆಕ್‌ಲೇಸ್‌, ಮಾಂಗಲ್ಯಗಳಲ್ಲೂ ನೀವು ವಜ್ರ ಹುದುಗಿಸಿದ ಪೆಂಡೆಂಟ್‌ ಬಳಸಬಹುದು.

ಬಿಳಿ ಚಿನ್ನದ ವಜ್ರ ಖಚಿತ ಕಾಲ್ಗೆಜ್ಜೆ, ಕಾಲುಂಗುರಗಳನ್ನೂ ನೀವು ಬಳಸಬಹುದು.

diamond-faceal

ಬ್ಯೂಟಿ ಪ್ರಾಡಕ್ಟ್ಸ್ ನಲ್ಲೂ ಬಳಕೆ

ಇವೆಲ್ಲ ಬಾಹ್ಯ ಸೌಂದರ್ಯ ಹೆಚ್ಚಿಸುವ ಆಭರಣಗಳಾದರೆ, ಹಳದಿ ಚಿನ್ನದಂತೆಯೇ ಬಿಳಿ ಚಿನ್ನ ವಜ್ರಗಳನ್ನು ಬ್ಯೂಟಿ ಪ್ರಾಡಕ್ಟ್ಲ್ ನಲ್ಲಿ ಬಳಸಲಾಗುತ್ತದೆ. ಇದರಿಂದಾಗುವ ಲಾಭದ ಬಗ್ಗೆ ತಿಳಿಯೋಣ ಬನ್ನಿ.

ಬಿಳಿಯ ಚಿನ್ನ ಅಥವಾ ವಜ್ರಖಚಿತ ಬ್ಯೂಟಿ ಪ್ರಾಡಕ್ಟ್ಸ್ ಬಳಸುವುದರಿಂದ, ನಿಮ್ಮ ತ್ವಚೆಯ ರಕ್ತ ಸಂಚಾರ ಹೆಚ್ಚುತ್ತದೆ. ಇದರಿಂದ ಚರ್ಮ ಲವಲವಿಕೆ ಗಳಿಸಿ ಲಕಲಕ ಹೊಳೆಯುತ್ತದೆ.

ವೈಟ್‌ ಗೋಲ್ಡ್ ಡೈಮಂಡ್‌ ಬೆರೆತ ಕ್ರೀಂ, ಮಾಯಿಶ್ಟರೈಸರ್‌ಗಳನ್ನು ಬಳಸುವುದರಿಂದ ತ್ವಚೆಯ ಗುಣಮಟ್ಟ ಎಷ್ಟೋ ಸುಧಾರಿಸುತ್ತದೆ, ಅದರ ಇಮ್ಯುನಿಟಿ ಹೆಚ್ಚುತ್ತದೆ.

ವೈಟ್‌ ಗೋಲ್ಡ್ ಡೈಮಂಡ್‌ ಫೇಶಿಯಲ್‌ನಿಂದ ತ್ವಚೆಯ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಇದರಿಂದ ಚರ್ಮ ನಿರ್ಜೀವ ಹಾಗೂ ನಿಸ್ತೇಜವಾಗಿ ಕಂಗೊಳಿಸುವುದು ತಪ್ಪುತ್ತದೆ, ಜೊತೆಗೆ ಶ್ಯಾಮಲವರ್ಣ ತಗ್ಗುತ್ತದೆ. ಜೊತೆಗೆ ಚರ್ಮ ಡ್ರೈ, ರಫ್‌, ಅಗ್ಲಿನೆಸ್ ಕಳೆದುಕೊಳ್ಳುತ್ತದೆ.

ವೈಟ್‌ ಗೋಲ್ಡ್ ಡೈಮಂಡ್‌ ಫೇಸ್‌ ಪ್ಯಾಕ್‌ಗಳಿಂದ ಮೊಡವೆಗಳು, ಕಲೆಗಳು ದೂರವಾಗಿ ಮುಖದಲ್ಲಿ ಬಿಗಿತ ಕಂಡುಬರುತ್ತದೆ, ಸಣ್ಣ ಸಣ್ಣ ಸೂಕ್ಷ್ಮ ಗೆರೆಗಳು ಮರೆಯಾಗುತ್ತವೆ. ತ್ವಚೆ ಕಳೆಗಟ್ಟಿ, ಆರ್ದ್ರತೆ ತುಂಬಿಕೊಳ್ಳುತ್ತದೆ. ಚರ್ಮದ ಡ್ರೈನೆಸ್‌ ಹೋದಾಗ ಮಾತ್ರ ಇವು ಗೋಚರಿಸುತ್ತವೆ.

ವೈಟ್‌ ಗೋಲ್ಡ್ ಡೈಮಂಡ್‌ ಪ್ಯಾಕ್‌ನಿಂದ ಚರ್ಮದಲ್ಲಿನ ಬ್ಲ್ಯಾಕ್‌ ಹೆಡ್ಸ್ ವೈಟ್‌ ಹೆಡ್ಸ್ ದೂರಾಗುತ್ತವೆ. ಇದರಿಂದ ಚರ್ಮ ಹೆಚ್ಚು ತಾಜಾ ಆಗಿ ಕಾಂತಿ ಗಳಿಸುತ್ತದೆ.

ವೈಟ್‌ ಗೋಲ್ಡ್ ಡೈಮಂಡ್‌ನ ಬ್ಯೂಟಿ ಪ್ರಾಡಕ್ಟ್ಸ್ ಎಂದರೆ : ಡೈಮಂಡ್‌ವೈಟ್‌ ಗೋಲ್ಡ್ ಪೀಲ್ ‌ಆಫ್‌ ಮಾಸ್ಕ್, ಬೀಬೀ ಕ್ರೀಂ, ಶ್ಯಾಂಪೂ, ಸ್ಕಿನ್‌ ಸ್ಕ್ರಬರ್‌, ನೇಲ್ ‌ಪಾಲಿಶ್‌ ಕ್ರೀಂ ಮಾಯಿಶ್ಚರೈಸರ್‌, ಡೈಮಂಡ್‌ ಗ್ಲೋಯಿಂಗ್‌ ಫೇಸ್‌ ಪ್ಯಾಕ್‌ ಇವುಗಳನ್ನು  ಬಳಸಿ ನಿಮ್ಮ ಚರ್ಮಕ್ಕೆ ಹೊಸ ಸೌಂದರ್ಯ ಒದಗಿಸಿ.

12PTRJX1

ಬಿ. ಸಂಧ್ಯಾ ರೆಡ್ಡಿ

ಡೈಮಂಡ್‌ ಫೇಶಿಯಲ್ ಇದಕ್ಕಾಗಿ ಮೊದಲು ಮುಖಕ್ಕೆ ಡೈಮಂಡ್‌ ರೀಹೈಡ್ರೇಟಿಂಗ್‌ ಕ್ಲೆನ್ಸರ್‌ ಹಚ್ಚಿ ಹತ್ತಿಯಿಂದ ಚರ್ಮ ಒರೆಸಿಕೊಳ್ಳಿ. ಇದರಿಂದ ಡೆಡ್‌ ಸ್ಕಿನ್‌ ತಾನಾಗಿ ದೂರ ಸರಿಯುತ್ತದೆ. ನಂತರ ಅಗತ್ಯ ಪ್ರಮಾಣದಲ್ಲಿ ಡೈಮಂಡ್‌ ಮಸಾಜ್‌ ಜೆಲ್ ತೆಗೆದುಕೊಂಡು 20 ನಿಮಿಷಗಳ ಕಾಲ ಮುಖದ ಮಸಾಜ್‌ ಮಾಡಿ. ನಂತರ ಡೈಮಂಡ್‌ ಗ್ಲೋಯಿಂಗ್‌ ಮಾಸ್ಕ್ ನ ದಪ್ಪ ಪದರವನ್ನು ಮುಖಕ್ಕೆ ಹಚ್ಚಿ, 15 ನಿಮಿಷ ಒಣಗಲು ಬಿಡಿ. ನಂತರ ತಣ್ಣೀರಿನಿಂದ ಮುಖ ತೊಳೆಯಿರಿ. ನಂತರ ಸೂಕ್ತ ಪ್ರಮಾಣದ ಬಾಡಿಕೇರ್‌ 24 ಕ್ಯಾರೆಟ್‌ ಡೈಮಂಡ್‌ ಸ್ಕಿನ್‌ ಸೀರಮ್ ನ್ನು ತ್ವಚೆಯ ಮೇಲೆ ಹಚ್ಚಿ, 10 ನಿಮಿಷಗಳ ನಂತರ ತೊಳೆಯಿರಿ. ಇದನ್ನು ನೀವು ಮನೆಯಲ್ಲೇ ಮಾಡಿಕೊಳ್ಳಬಹುದು. ಆದರೆ ಮೊದಲ ಬಾರಿ ಇದನ್ನು ಬ್ಯೂಟೀಷಿಯನ್‌ ಬಳಿ ಮಾಡಿಸಿ, ಆಕೆಯ ಸಲಹೆಯ ಪ್ರಕಾರ ಮುಂದೆ ಮನೆಯಲ್ಲೇ ಮಾಡಿಕೊಳ್ಳಿ, ಏಕೆಂದರೆ ಈ ಉತ್ಪನ್ನಗಳು ಬಲು ದುಬಾರಿ.

wedding

ಡಿಸೈನಿಂಗ್ವಿಧಾನ

ವಜ್ರ ಖಚಿತ ಪೆನ್‌ನಲ್ಲಿ ಪೆನ್ನಿನ ಮೇಲ್ಭಾಗದಲ್ಲಿ ವಜ್ರದ ಡಿಸೈನರ್‌ ಟಾಪ್‌ ಇರುತ್ತದೆ.

ಮೊಬೈಲ್ ಫೋನಿನ ಎಲ್ಲಾ ಕಡೆ ವೈಟ್‌ ಗೋಲ್ಡ್ ಪ್ಲೇಟೆಡ್‌ ಬಾರ್ಡರ್‌ ಇರುತ್ತದೆ ಮತ್ತು ಅದರಲ್ಲಿ ವಜ್ರ ಹುದುಗಿಸಲ್ಪಟ್ಟಿರುತ್ತದೆ.

ವೈಟ್‌ ಗೋಲ್ಡ್ ಮತ್ತು ವಜ್ರದ ವಾಚ್‌ಗಳಲ್ಲಿ, ವಾಚ್‌ ವೈಟ್‌ ಗೋಲ್ಡ್ ನದಾಗಿದ್ದು, ಅದರಲ್ಲಿ 112ರ ಅಂಕಿಗಳ ಜಾಗದಲ್ಲಿ ವಜ್ರ ಹುದುಗಿಸಲ್ಪಟ್ಟಿರುತ್ತದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ