ನೀವು ಸಹ ತಲೆ ಹೊಟ್ಟಿನಿಂದ ಬಹಳ ತೊಂದರೆಗೆ ಒಳಗಾಗಿದ್ದೀರಾ? ಅದಕ್ಕೆ ಇಲ್ಲಿದೆ ಉಪಾಯ.....!

ಸಾಮಾನ್ಯವಾಗಿ ಹೆಂಗಸರು ತಮ್ಮ ಕೂದಲಿನ ವಿಷಯವಾಗಿ ಬಹಳ ಎಚ್ಚರಿಕೆ ವಹಿಸುತ್ತಾರೆ. ಇದಕ್ಕಾಗಿ ಅನೇಕ ಉಪಾಯ ಅನುಸರಿಸುತ್ತಾರೆ. ಆದರೆ ಎಷ್ಟೋ ಸಲ ಮಾಹಿತಿಯ ಅಭಾವದಿಂದ ಕೂದಲಿಗೆ ಮತ್ತಷ್ಟು ಹಾನಿ ತಂದುಕೊಳ್ಳುತ್ತಾರೆ. ಇದರಿಂದ ಅವರನ್ನು ತಲೆ ಹೊಟ್ಟಿನ (ಡ್ಯಾಂಡ್ರಫ್‌) ಸಮಸ್ಯೆ ಕಾಡುತ್ತದೆ. ಹೀಗಾಗಿ ಅವರ ಕೂದಲು ಅತಿ ಶುಷ್ಕ ಹಾಗೂ ನಿರ್ಜೀವ ಆಗುತ್ತದೆ.

ಇತ್ತೀಚೆಗೆ ಮಾರುಕಟ್ಟೆಯಲ್ಲಿ ಡ್ಯಾಂಡ್ರಫ್‌ ತೊಲಗಿಸುವುದಾಗಿ ಹೇಳಿಕೊಳ್ಳುವ ಅನೇಕ ಪ್ರಾಡಕ್ಟ್ಸ್ ಬಂದಿವೆ. ಆದರೆ ಇದರಲ್ಲಿ ಬೆರೆತಿರುವಂಥ ಕೆಮಿಕಲ್ಸ್ ನಿಮಗೆ ಹಾನಿ ಮಾಡಬಹುದು. ಹೀಗಾಗಿ ಇಲ್ಲಿ ನೈಸರ್ಗಿಕ, ಗಿಡಮೂಲಿಕೆಗಳ ಆಧಾರದಿಂದ ತಯಾರಿಸಲಾದ ಹೇರ್‌ ಮಾಸ್ಕ್ ಬಳಸಲು ಹೇರ್‌ ಸ್ಪೆಷಲಿಸ್ಟ್ ತಿಳಿಸುತ್ತಾರೆ. ಇದು ನಿಮ್ಮ ಕೂದಲಿನ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಒದಗಿಸುವುದರಲ್ಲಿ ಸಂದೇಹವಿಲ್ಲ.

ಮೊಸರು, ಜೇನು, ನಿಂಬೆಯ ಮಾಸ್ಕ್ : ನಿಂಬೆ ರಸದಲ್ಲಿನ ಸಿಟ್ರಿಕ್‌ ಆಮ್ಲ ಕೂದಲಿನ Ph ಲೆವೆಲ್ ಬ್ಯಾಲೆನ್ಸ್ ಮಾಡುವಲ್ಲಿ ಸಹಾಯ ಮಾಡುತ್ತದೆ. ಮೊಸರು ಕೂದಲಿಗೆ ಆಗಿರುವ ಡ್ಯಾಮೇಜ್‌ ನ್ನು ಸುಧಾರಿಸುತ್ತದೆ, ಕಂಡೀಶನಿಂಗ್‌ ಮಾಡುತ್ತದೆ. ಜೇನು ತಲೆಹೊಟ್ಟಿನ ಸಮಸ್ಯೆಯನ್ನು ಓಡಿಸುತ್ತದೆ.

ಸಾಮಗ್ರಿ : ಅರ್ಧ ಕಪ್‌ ಮೊಸರು, 2 ಚಮಚ ನಿಂಬೆರಸ, 1 ಚಮಚ ಜೇನುತುಪ್ಪ.

ವಿಧಾನ : ಎಲ್ಲಾ ಸಾಮಗ್ರಿಗಳನ್ನೂ ಒಂದು ಬಟ್ಟಲಿಗೆ ಹಾಕಿಕೊಂಡು ಚೆನ್ನಾಗಿ ಗೊಟಾಯಿಸಿ. ಈ ಮಿಶ್ರಣವನ್ನು ತಲೆಗೂದಲಿನ ಬುಡದಿಂದ ಆರಂಭಿಸಿ, ಇನ್ನೊಂದು ತುದಿಯವರೆಗೂ ಹಚ್ಚಬೇಕು. ಹೀಗೆ ಅರ್ಧ ಗಂಟೆ ಬಿಡಿ. ನಂತರ ಹರ್ಬಲ್ ಶ್ಯಾಂಪೂ ಬಳಸಿ,  ತಲೆಗೂದಲನ್ನು ತೊಳೆಯಿರಿ. ಹೀಗೆ ವಾರಕ್ಕೆ 2 ಸಲ ಈ ಮಾಸ್ಕ್ ಬಳಸಿರಿ.

ಬಾಳೆ, ಜೇನು, ನಿಂಬೆ, ಹಿಪ್ಪೆ ಎಣ್ಣೆಯ ಮಾಸ್ಕ್ : ಮಾಗಿದ ಬಾಳೆಹಣ್ಣು ಕೂದಲನ್ನು ಆದಷ್ಟೂ ಮೃದುಗೊಳಿಸುತ್ತದೆ, ತಲೆಹೊಟ್ಟನ್ನು ನಿಯಂತ್ರಿಸುವಲ್ಲಿಯೂ ಸಹಾಯಕ. ಹಿಪ್ಪೆ ಎಣ್ಣೆ (ಆಲಿವ್‌ ಎಣ್ಣೆ) ಕೂದಲನ್ನು ಮೃದುಗೊಳಿಸಿ, ಸಶಕ್ತಗೊಳಿಸುತ್ತದೆ. ನಿಂಬೆ ಕೂದಲಿನ Ph ಲೆವೆಲ್ ಬ್ಯಾಲೆನ್ಸ್ ಮಾಡುತ್ತದೆ. ಜೇನು ತಲೆಹೊಟ್ಟಿನ ಸಮಸ್ಯೆ ನಿವಾರಿಸುತ್ತದೆ.

ಸಾಮಗ್ರಿ : 2 ಮಾಗಿದ ಬಾಳೆಹಣ್ಣು, 1-1 ದೊಡ್ಡ ಚಮಚ ಜೇನುತುಪ್ಪ, ಆಲಿವ್ ‌ಎಣ್ಣೆ, ನಿಂಬೆರಸ.

ವಿಧಾನ : ಒಂದು ಬಟ್ಟಲಿಗೆ ಬಾಳೆಹಣ್ಣು ಹಾಕಿ ಚೆನ್ನಾಗಿ ಕಿವುಚಿಡಿ. ನಂತರ ಇದಕ್ಕೆ ಉಳಿದ ಸಾಮಗ್ರಿ ಬೆರೆಸಿಕೊಂಡು ಪೇಸ್ಟ್ ರೆಡಿ ಮಾಡಿ. ಇದನ್ನು ನಿಮ್ಮ ನೆತ್ತಿಗೆ ಆಳವಾಗಿ ಒತ್ತಿಕೊಂಡು, ಬುಡದಿಂದ ಕೂದಲಿನ ತುದಿಯವರೆಗೂ ನೀಟಾಗಿ ಹಚ್ಚಿಕೊಳ್ಳಿ. ಅರ್ಧ ಗಂಟೆ ಹಾಗೇ ಬಿಡಿ, ನಂತರ ಹರ್ಬಲ್ ಶ್ಯಾಂಪೂ ಬಳಸಿ ತಲೆ ತೊಳೆಯಿರಿ.

ಮೊಟ್ಟೆ ಮೊಸರಿನ ಹೇರ್ಮಾಸ್ಕ್ : ಮೊಟ್ಟೆ ಮೊಸರು ಎರಡೂ ನೆತ್ತಿಗೆ ತಂಪು ಒದಗಿಸಿ, ಉತ್ತಮ ಪೋಷಣೆ ನೀಡುತ್ತವೆ, ಕೂದಲನ್ನು ಹೆಚ್ಚು ಮೃದುಗೊಳಿಸಿ, ಶೈನ್‌ಸಿಲ್ಕಿ ಮಾಡುತ್ತವೆ, ತಲೆಹೊಟ್ಟಿನ ಸಮಸ್ಯೆಯನ್ನು ನಿವಾರಿಸುತ್ತವೆ.

ಸಾಮಗ್ರಿ : 1 ಮೊಟ್ಟೆ, 2 ಚಮಚ ಆಲಿವ್ ‌ಎಣ್ಣೆ, 1 ಕಪ್‌ ಹುಳಿ ಮೊಸರು, 1 ಚಮಚ ನಿಂಬೆರಸ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ