ಮುಖದಲ್ಲಿರುವ ನೆರಿಗೆಗಳು ಅಥವಾ ಸುಕ್ಕುಗಳನ್ನು ಹೋಗಲಾಡಿಸಲು ನೀವು ವೈದ್ಯಕೀಯ ಚಿಕಿತ್ಸೆಯನ್ನು ಅಳವಡಿಸಿಕೊಂಡರೆ, ಹಬ್ಬದ ಹೊಳಪು ನಿಮ್ಮ ಮುಖದಲ್ಲೂ ಪ್ರತಿಫಲಿಸುತ್ತದೆ......!

39 ವರ್ಷದ ನಿಶಾ ಕನ್ನಡಿಯ ಮುಂದೆ ಬಂದು ಕುಳಿತು, ತನ್ನನ್ನೇ ತಾನು ದಿಟ್ಟಿಸಿ ನೋಡಿಕೊಳ್ಳುತ್ತಿದ್ದಳು. ಮುಖದ ಮೇಲಿನ ಸುಕ್ಕುಗಳು ಈಗ ಆಳವಾಗಿರುವುದನ್ನು ಅವಳು ಗಮನಿಸಿದಳು. ಅಲ್ಲಿಂದ ಅವಳಿಗೆ ತನ್ನ ಬಗ್ಗೆಯೇ ಚಿಂತೆ ಶುರುವಾಯಿತು.

ಅಷ್ಟರಲ್ಲಿ ನಿಶಾಳ ಪತಿ ವಿನೋದ್‌ ಕೋಣೆಗೆ ಬಂದರು. ಕನ್ನಡಿ ಮುಂದೆ ಕುಳಿತು ತನ್ನನ್ನೇ ತಾನು ನೋಡುತ್ತಿದ್ದ ನಿಶಾಳನ್ನು ನೋಡಿ, ``ಇಲ್ಲಿ ಕುಳಿತು ಏನು ನೋಡುತ್ತಿದ್ದೀಯಾ? ನೀನು ಬಹಳ ಸುಂದರ ಅಂದುಕೊಂಡಿದ್ದೀಯ! ನಿನ್ನ ಮುಖವನ್ನು ಸರಿಯಾಗಿ ಗಮನಿಸಿದರೆ ಅದರಲ್ಲಿ ಎಷ್ಟೊಂದು ರಿಂಕಲ್ಸ್ ತುಂಬಿಕೊಂಡಿದೆ ಅನ್ನೋದು ಗೊತ್ತಾಗುತ್ತೆ.''

ವಿನೋದ್‌ ಮಾತನ್ನು ಕೇಳಿ ಬೇಸರಗೊಂಡ ನಿಶಾ, ಅಲ್ಲಿಂದ ಎದ್ದು ಹೊರಟಳು. ಅವಳು ರೂಮಿನಿಂದ ಹೊರಬರುತ್ತಿದ್ದಂತೆ, ಅವಳಿಗೆ ಅಡ್ಡ ನಿಂತ ವಿನೋದ್‌, ``ಈಗ ನೀನು ಬರ್ತಾ ಬರ್ತಾ ಮುದುಕಿ ಆಗುತ್ತಿದ್ದೀಯಾ. ನಿನ್ನ ಮುಖದ ತುಂಬ ರಿಂಕಲ್ಸ್ ತುಂಬಿಕೊಂಡಿವೆ. ಅದೇ ನಿನ್ನ ಫ್ರೆಂಡ್‌ಸುಮಾಳನ್ನು ನೋಡು, 42ರ ವಯಸ್ಸಿನಲ್ಲೂ ಅವಳು 32ರ ಹೆಂಗಸಿನಂತೆ ಕಾಣುತ್ತಾಳೆ. ನೀನು 33ರ ಹರೆಯದಲ್ಲೇ 47 ವರ್ಷದವಳಂತೆ ಕಾಣ್ತಿದ್ದೀಯ. ನಮಗೆ ಇನ್ನು ಒಂದು ಮಗು ಕೂಡಾ ಆಗಿಲ್ಲ. ಆದರೆ ನಮಗೆ 2-3 ಮಕ್ಕಳಿದ್ದಾರೆ ಎಂಬಂತೆ ನಿನ್ನ ಪರಿಸ್ಥಿತಿ ಮಾಡಿಕೊಂಡಿದ್ದೀಯ. ನಿನ್ನ ಬಗ್ಗೆ ನೀನು ಸ್ವಲ್ಬ ಗಮನ ಕೊಡು.

``ನನ್ನ ಸ್ನೆಹಿತರೂ ಸಹ ನನ್ನನ್ನು ಆಗಾಗ ಚುಡಾಯಿಸುತ್ತಾರೆ. ಯಾವಾಗ ಮಾತಾಡಿದರೂ ನಿನ್ನ ಹೆಂಡತಿ ನಿನ್ನ ತಾಯಿಯಂತೆ ಕಾಣುತ್ತಾಳೆ ಎಂದು ಕಾಲೆಳೆಯುತ್ತಾರೆ. ನಿನ್ನ ಹೆಂಡತಿಯನ್ನು ಏನು ನೋಡಿ ಅಟ್ರ್ಯಾಕ್ಟ್ ಆದೆ, ಎನ್ನುತ್ತಾರೆ. ನಿಜ ಹೇಳಬೇಕೆಂದರೆ, ನನಗೆ ನಿನ್ನ ಬಗ್ಗೆ ಯಾವುದೇ ಅಟ್ರ್ಯಾಕ್ಷನ್‌ ಇಲ್ಲ. ನಿನ್ನ ಜೊತೆಗೆ ಎಲ್ಲಾದರೂ ಹೊರಗೆ ಹೋಗಬೇಕೆಂದರೆ, ನನಗೆ ನಾಚಿಕೆ ಆಗುತ್ತೆ.'' ಎಂದ.

ನಿಮ್ಮ ಬಗ್ಗೆ ನಿಮಗೇಕೆ ನಿರ್ಲಕ್ಷ್ಯ

ಇದನ್ನೆಲ್ಲಾ ಕೇಳಿದ ನಿಶಾಗೆ ದುಃಖದಿಂದ ಕಣ್ಣೀರು ಬಂದಿತು. ಕಣ್ಣೀರು ಒರೆಸಿಕೊಳ್ಳುತ್ತಾ ಹಾಲ್ ‌ಗೆ ಹೋದಳು. ವಿನೋದ್‌ ಹೇಳಿದ ಮಾತುಗಳು ಮತ್ತೆ ಮತ್ತೆ ಅವಳ ಕಿವಿಗೆ ಅಪ್ಪಳಿಸಿದಂತಾದವು. ಇದ್ದಕ್ಕಿದ್ದಂತೆ ಅವಳ ಫೋನ್‌ ರಿಂಗಣಿಸಿತು. ಕರೆ ಮಾಡಿದ್ದು ಮೋನಿಕಾ. ಅವಳು ನ್ಯೂಯಾರ್ಕ್‌ ನಿಂದ ವಿಡಿಯೋ ಕಾಲ್ ‌ಮಾಡಿದ್ದಳು. ದುಃಖದಿಂದ ಹತಾಶಳಾದ ನಿಶಾಳ ಮುಖವನ್ನು ನೋಡಿದ ಮೋನಿಕಾ, ದುಃಖದ ಕಾರಣವನ್ನು ಕೇಳಿದಳು. ನಂತರ ನಿಶಾ, ವಿನೋದ್‌ ಆಡಿದ ಮಾತುಗಳನ್ನೆಲ್ಲಾ ಮೋನಿಕಾಗೆ ಹೇಳಿದಳು.

ಆಗ ಮೋನಿಕಾ, ``ನೀನು ವಿನೋದ್‌ ಗಾಗಿ ಅಲ್ಲ, ನಿನಗಾಗಿ ನೀನು ಮೇಕ್‌ ಓವರ್‌ ಮಾಡಿಕೊಳ್ಳಬೇಕು. ನಾವು ಮಹಿಳೆಯರು ನಮ್ಮ ಕುಟುಂಬ ಮತ್ತು ಜವಾಬ್ದಾರಿಗಳ ನಡುವೆ ಸಿಕ್ಕಿ ಹಾಕಿಕೊಂಡಿರುತ್ತೇವೆ. ಹಾಗಾಗಿ ನಮ್ಮ ಬಗ್ಗೆ ನಾವು ಸ್ವಲ್ಪ ಕಾಳಜಿ ವಹಿಸುವುದಿಲ್ಲ,'' ಎಂದು ಮೋನಿಕಾ ಹೇಳಿದಳು.

ಒಂದು ರೀತಿಯಲ್ಲಿ ನಾವು ನಮ್ಮನ್ನು ನಿರ್ಲಕ್ಷಿಸಿ ಬಿಡುತ್ತೇವೆ. ಇದರಿಂದಾಗಿ ನಾವು ನಮ್ಮ ಸಂಗಾತಿಯನ್ನು ಆಕರ್ಷಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಅವರು ನಮ್ಮಿಂದ ದೂರ ಉಳಿಯಲು ಪ್ರಾರಂಭಿಸುತ್ತಾರೆ. ಇದು ನಮ್ಮ ಸಂಬಂಧಕ್ಕೆ ಸರಿಯಲ್ಲ. ನಮ್ಮ ಬಗ್ಗೆ ಕಾಳಜಿ ವಹಿಸದ ಕಾರಣ, ನಮ್ಮ ವ್ಯಕ್ತಿತ್ವ ಕುಸಿಯಲು ಆರಂಭಿಸುತ್ತದೆ. ಆ ಕಾರಣದಿಂದಾಗಿ ನಾವು ನಮ್ಮ ಬಗ್ಗೆ ಆತ್ಮವಿಶ್ವಾಸವನ್ನೇ ಕಳೆದುಕೊಳ್ಳುತ್ತೇವೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ