ಹಬ್ಬಗಳ ಸಂದರ್ಭದಲ್ಲಿ ನಿಮ್ಮ ಮುಖ ಹೆಚ್ಚಿನ ಗ್ಲೋ ಗಳಿಸಿ ಕಾಂತಿಯುತವಾಗಿ ಲವಲವಿಕೆ ಗಳಿಸಬೇಕೇ.....?

ಶ್ರಾವಣ ಮಾಸದಿಂದ ಹಬ್ಬಗಳ ಮೇಲೆ ಹಬ್ಬಗಳು ಆರಂಭವಾಗುತ್ತವೆ! ಗೃಹಿಣಿ ಮನೆಯ ಗೃಹಾಲಂಕಾರದಲ್ಲಿ ಸದಾ ಬಿಝಿ ಆಗಿಬಿಡುತ್ತಾಳೆ. ಈ ಕೋಣೆ ಕ್ಲೀನಿಂಗ್‌, ಆ ಕೋಣೆ ಶೈನಿಂಗ್‌, ಕಿಚನ್‌ ಕ್ಲೀನಿಂಗ್‌, ಫ್ಯಾನ್‌ ಒರೆಸಾಟ...... ಇತ್ಯಾದಿಗಳಲ್ಲಿ ಮುಳುಗಿ ತನ್ನ ಸಮಯವನ್ನೆಲ್ಲ ಅದಕ್ಕೆ ಮೀಸಲಿಡುತ್ತಾಳೆ. ನಂತರ ಹಬ್ಬದ ಸಡಗರಸಂಭ್ರಮ ಹೆಚ್ಚಿಸಲು ಮನೆಮಂದಿಗೆಲ್ಲ ಬೇಕಾದ ಬಟ್ಟೆಬರೆ, ಒಡವೆ ಕೊಳ್ಳುವಿಕೆ, ಹಬ್ಬದ ಸಿಹಿ ತಿನಿಸುಗಳ ತಯಾರಿ ಇತ್ಯಾದಿಗಳಲ್ಲಿ ಮುಳುಗಿ ಹೋಗುತ್ತಾಳೆ. ಇಷ್ಟೆಲ್ಲ ಮಾಡುವ ತಾನು, ಹಬ್ಬದ ದಿನ ಅತಿಥಿಗಳು ಬಂದಾಗ ಅವರೆದುರು ನೀಟಾಗಿ ಕಾಣಿಸಿಕೊಳ್ಳಲು ತನ್ನ ಕುರಿತಾಗಿಯೂ ಕೇರ್ ತೆಗೆದುಕೊಳ್ಳಬೇಕು ಎಂಬುದನ್ನೇ ಮರೆಯುತ್ತಾಳೆ.

ಹಬ್ಬದ ಗಡಿಬಿಡಿಯ ತಯಾರಿಯಲ್ಲಿ ತನ್ನನ್ನು ತಾನು ಅಲಂಕರಿಸಿಕೊಳ್ಳಲು ಅವಳಿಗೆ ಹೆಚ್ಚಿನ ಬಿಡುವು ಎಲ್ಲಿಂದ ಸಿಗಬೇಕು? ತನ್ನ ಮುಖಕ್ಕೆ ಹೊಸ ಮೆರುಗು ಎಲ್ಲಿಂದ ಕೊಡಲು ಸಾಧ್ಯ? ಚಂದ್ರಮನಂಥ ಕಾಂತಿ ಗಳಿಸಿಕೊಳ್ಳುವುದು ಹೇಗೆ? ತಮ್ಮನ್ನು ತಾವೇ ನೋಡಿಕೊಳ್ಳಬೇಕು ಎಂಬುದನ್ನು ನೆನಪಿಡಬೇಕು. ಇದೆಲ್ಲದಕ್ಕೆ ಕಾರಣ ಸಮಯದ ಅಭಾವ. ಫೆಸ್ಟಿವ್ ‌ಸೀಸನ್‌ ನಲ್ಲಿ ಸ್ಪೆಷಲ್ ಆಗಿ ಕಂಡುಬರಲು ಹಲವು ಉಪಾಯ ಅನುಸರಿಸಬೇಕು. ಆಗ ಮಾತ್ರ ಕಲೆರಹಿತ (ಫ್ಲಾಲೆಸ್‌) ಅಕಳಂಕ ರೂಪ ಲಾವಣ್ಯ ನಿಮ್ಮದಾಗಲು ಸಾಧ್ಯ.

ಈ ಕೆಳಗಿನ ಸ್ಪೆಷಲ್ ಪ್ರಾಡಕ್ಟ್ಸ್ ಕಡೆ ಗಮನಹರಿಸಿ ಗೃಹಿಣಿ ಇಂಥ ಅಪೂರ್ವ ಸೌಂದರ್ಯ ಪಡೆಯಬಹುದು. ಇದರಿಂದ ಚರ್ಮಕ್ಕೆ ವಿಶೇಷ ಕಾಂತಿ, ಹೊಳಪು, ರಂಗು, ಚೆಲುವು ಎಲ್ಲ ಕೂಡುತ್ತದೆ. ಇವುಗಳತ್ತ ತುಸು ವಿವರವಾಗಿ ಗಮನಿಸೋಣವೇ? :

ಫೇಸ್ಮಾಸ್ಕ್

ಬೇವು, ಪ್ಲಮ್, ಬೀಟ್‌ರೂಟ್‌, ಅರಿಶಿನ, ಚಂದನ ಇತ್ಯಾದಿಗಳ ಫೇಸ್‌ ಮಾಸ್ಕ್ ಈಗ ಹಳೆಯದಾಯಿತು. ನಿಮಗೆ ಇನ್‌ ಸ್ಟೆಂಟ್‌ ಗ್ಲೋ ಬೇಕೇ? ಇದಕ್ಕಾಗಿ ಅತ್ಯಾಧುನಿಕ ಟೆಕ್ನಾಲಜಿ ಅನುಸರಿಸಿ ಬಂದಿದೆ ಫೇಸ್‌ ಮಾಸ್ಕ್. ಇದು ನಿಮ್ಮ ಮುಖಕ್ಕೆ ಕೇವಲ ಇನ್‌ ಸ್ಟೆಂಟ್‌ ಗ್ಲೋ ನೀಡುವುದಲ್ಲದೆ, ನಿಮ್ಮ ಮುಖದ ಪಿಗ್ಮೆಂಟೇಶನ್ನಿನ ಸಮಸ್ಯೆಗಳನ್ನೂ ದೂರ ಮಾಡುತ್ತದೆ! ಹಾಗೆಯೇ ಮುಖದ ಡೀಪ್‌ ಕ್ಲೀನಿಂಗ್‌ ನಲ್ಲೂ ನೆರವಾಗುತ್ತದೆ.

ನೀವು ಉತ್ತಮ ಫೇಸ್‌ ಮಾಸ್ಕ್ ಬಯಸಿದರೆ, ಪ್ರೋಟಚ್‌ ಕಂಪನಿಯ 3 ಇನ್‌ 1 ಫೇಸ್‌ ಮಾಸ್ಕ್ ಟ್ರೈ ಮಾಡಿ ನೋಡಿ. ಇದರ ಬೆಲೆ ಸುಮಾರು 2 ಸಾವಿರ ಆಗಬಹುದು. ಇದನ್ನು ನೀವು ವಾರಕ್ಕೆ 2-3 ಸಲ ಬಳಸಿದರೂ ಸಾಕು. ಇದು ಅಮೆಝಾನ್‌, ಮಿಂತ್ರಾ ಮೂಲಕ ಸುಲಭ ಲಭ್ಯ.

ನೋಸ್‌ ಸ್ಟ್ರಿಪ್ಸ್ ನಿಮ್ಮ ಮೂಗಿನ ಮೇಲೆ ಹೇರಳ ಬ್ಲ್ಯಾಕ್‌ ಹೆಡ್ಸ್ ಆಗಿವೆಯೇ? ಪಾರ್ಲರ್‌ ಗೆ ಹೋಗಲು ಟೈಮಿಲ್ಲ ಅಂತೀರಾ? ನೋ ಪ್ರಾಬ್ಲಂ! ನೋಸ್‌ ಸ್ಟ್ರಿಪ್ಸ್ ನೆರವಿನಿಂದೆ ಕೇವಲ 5 ನಿಮಿಷಗಳಲ್ಲಿ ನಿಮ್ಮ ಮೂಗಿನ ಮೇಲಿನ ಎಲ್ಲಾ ಬ್ಲ್ಯಾಕ್‌ ಹೆಡ್ಸ್ ನ್ನೂ ತೊಲಗಿಸಬಹುದು. ಈ ನೋಸ್‌ ಸ್ಟ್ರಿಪ್ಸ್ ಖಂಡಿತಾ ಪಾಕೆಟ್‌ ಫ್ರೆಂಡ್ಲಿ ಎನಿಸಿದೆ. ಕೇವಲ 200 ರೂ. ಬಳಸಿ ನೀವು ಪರ್ಫೆಕ್ಟ್ ಕ್ಲೀನ್ ನೋಸ್‌ ಪಡೆಯಬಹುದು. ಇದನ್ನು ನೀವು ಅಮೆಝಾನ್‌, ಮಿಂತ್ರಾ, ಫ್ಲಿಪ್‌ ಕಾರ್ಟ್‌, ಮೀಶೋ, ನೈಕಾ, ಅಜಿಯೋಗಳಿಂದ ಪಡೆಯಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ