ಇಂದಿನ ಮಾರುಕಟ್ಟೆಯಲ್ಲಿ ಹಲವು ಬಗೆಯ ಫೇಸ್ ಸೀರಮ್ ಲಭ್ಯವಿವೆ, ಆದರೆ ಯಾವುದು ನಿಮ್ಮ ಚರ್ಮಕ್ಕೆ ಅತಿ ಸೂಕ್ತವಾಗಬಲ್ಲದು ಎಂದು ತಜ್ಞರಿಂದ ತಿಳಿಯೋಣವೇ.....?
ಪ್ರತಿ ವಯಸ್ಸಿನಲ್ಲೂ ಹಾರ್ಮೋನ್ ಬದಲಾವಣೆಗಳು ಮುಖದ ಮೇಲೆ ಹೆಚ್ಚಿನ ಪರಿವರ್ತನೆಗೆ ಕಾರಣವಾಗುತ್ತದೆ. ಇದರ ಪರಿಣಾಮವಾಗಿ ಮುಖ ಕಲೆಗುರುತು, ಆ್ಯಕ್ನೆ, ಮೊಡವೆಗಳಿಂದ ಪಾರಾಗಲು, ನಾವು ಏನೇನೋ ಹರಸಾಹಸ ಮಾಡುತ್ತೇವೆ, ಕೈಗೆ ಸಿಕ್ಕಿದ ಕಾಸ್ಮೆಟಿಕ್ಸ್ ನೆಲ್ಲ ಮುಖದ ಮೇಲೆ ಪ್ರಯೋಗಿಸುತ್ತೇವೆ. ಆದರೆ ನಿಮಗೆ ಬೇಕಾದಂಥ ರೇಡಿಯೆಂಟ್ ಸ್ಕಿನ್ ಮಾತ್ರ ಇವುಗಳಿಂದ ಸಿಗುವುದಿಲ್ಲ. ಇದಕ್ಕಾಗಿ ಲಕ್ಷಾಂತರ ರೂ. ನಮ್ಮ ಕೈ ಬಿಟ್ಟು ಹೋಗಿರುತ್ತದೆ, ಅತ್ತ ಫಲ ಇಲ್ಲ.... ಇತ್ತ ಹಣ ಪೋಲು! ಇದಕ್ಕೆಲ್ಲ ಒಂದೇ ಕಾರಣ ಎಂದರೆ, ನಾವು ಸೂಕ್ತ ಸೀರಮ್ ಬಳಸದೇ ಇರುವುದು! ಅದರಲ್ಲೂ 30+ನವರಿಗೆ ಇಂಥ ಸ್ಪೆಷಲ್ ಸೀರಮ್ ಬೇಕೇ ಬೇಕು.
ಹೀಗಾಗಿ ನಿಮ್ಮ ರೆಗ್ಯುಲರ್ ಸ್ಕಿನ್ ಕೇರ್ ರೊಟೀನ್ ಗಾಗಿ ಎಂಥ ಘಟಕಗಳುಳ್ಳ ಸೀರಮ್ ಇರಬೇಕು ಎಂಬುದನ್ನು ತಜ್ಞರಿಂದ ವಿವರವಾಗಿ ಕೇಳಿ ತಿಳಿಯೋಣ :
ವಿಟಮಿನ್ ಸಿ ಅರಿಶಿನಯುಕ್ತ ಸೀರಮ್
ವಿಟಮಿನ್ ಸಿ ಆ್ಯಂಟಿ ಆಕ್ಸಿಡೆಂಟ್ ನ ಕೆಲಸ ನಿರ್ವಹಿಸುತ್ತದೆ, ಅದು ಹಾನಿಕಾರಕ ಅಂಶಗಳಿಂದ ಚರ್ಮವನ್ನು ರಕ್ಷಿಸುತ್ತದೆ, ಜೊತೆಗೆ ನಾವು ನಮ್ಮ ಡಯೆಟ್ ಕಾಸ್ಮೆಟಿಕ್ಸ್ ಮೂಲಕ ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್ ಸಿ ಗಳಿಸುತ್ತೇವೆ. ಹಾಗಾಗಿ ಇದು ನಮ್ಮ ಇಮ್ಯೂನಿಟಿಯನ್ನು ಬೂಸ್ಟ್ ಮಾಡುವ ಜೊತೆ ಜೊತೆಗೆ, ನಮ್ಮ ಚರ್ಮಕ್ಕೆ ಹೊಸ ಕೊಲೋಜೆನ್ ನ್ನು ಸಹ ಒದಗಿಸುತ್ತದೆ. ಇದು ನಮ್ಮ ಚರ್ಮವನ್ನು ಸೂರ್ಯನ UV ಕಿರಣಗಳ ಹಾನಿಯಿಂದ ರಕ್ಷಿಸುವುದರ ಜೊತೆಗೆ, ಚರ್ಮದ ಡ್ರೈನೆಸ್ ನ್ನು ಸಹ ದೂರಗೊಳಿಸುತ್ತದೆ ಹಾಗೂ ಮಾಯಿಶ್ಚರೈಸ್ ಮಾಡುತ್ತದೆ. ಇದು ನಮ್ಮ ಸ್ಕಿನ್ ಟೋನ್ ನ್ನು ಸುಧಾರಿಸಿ, ಹೊಸ ಟಿಶ್ಯೂಸ್ ನ್ನು ಇಂಪ್ರೂವ್ ಮಾಡಿ, ಸ್ಕಿನ್ ಏಜಿಂಗ್, ಫೈನ್ ಲೈನ್ಸ್ ನ್ನು ಕಡಿಮೆಗೊಳಿಸಲು ಬಹಳ ಸಹಾಯ ಮಾಡುತ್ತದೆ.
ಅದೇ ತರಹ ಅರಿಶಿನ ಆ್ಯಂಟಿ ಆಕ್ಸಿಡೆಂಟ್ಸ್ ಆ್ಯಂಟಿ ಇನ್ ಫ್ಲಮೇಟರಿ ಪೋಷಕಾಂಶಗಳಿಂದ ಕೂಡಿದೆ. ಇದು ಚರ್ಮಕ್ಕೆ ಹೆಚ್ಚಿನ ಗ್ಲೋ ನೀಡಿ, ಕಾಂತಿ ತುಂಬಿಸುವಲ್ಲಿ ಸಹಕಾರಿ. ಇದು ಒಂದು ರೀತಿಯಲ್ಲಿ ಚರ್ಮವನ್ನು ತಿಳಿಯಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರಲ್ಲಿನ ಕರ್ಕ್ಯುಮಿನ್ ಚರ್ಮದ ಹೆಚ್ಚುವರಿ ಮೆಲನಿನ್ ಉತ್ಪಾದನೆಯನ್ನು ತಡೆದು, ನಮ್ಮ ಸ್ಕಿನ್ ಟೋನ್ ನ್ನು ಇಂಪ್ರೂವ್ ಮಾಡಿ, ನವೀನ ಕಾಂತಿ ತುಂಬುತ್ತದೆ.
ಹೀಗಿರುವಾಗ ಎಂಥ ಫೇಸ್ ಸೀರಮ್ ಆರಿಸಬೇಕು? ಇದಕ್ಕಾಗಿ ನೀವು ಮಾಮಾ ಅರ್ಥ್ ನ ಸ್ಕಿನ್ ಇಲ್ಯುಮಿನೇಟ್ ವಿಟಮಿನ್ ಸಿ ಇರುವ ಫೇಸ್ ಸೀರಮ್ ಫಾರ್ ರೇಡಿಯಂಟ್ ಸ್ಕಿನ್, ಕ್ರೀಮನ್ನು ಆರಿಸಿಕೊಳ್ಳಿ. ಏಕೆಂದರೆ ಇದು ವಿಟಮಿನ್ ಸಿ ಅರಿಶಿನದಂಥ ನೈಸರ್ಗಿಕ ಘಟಕಗಳನ್ನು ಹೊಂದಿದ್ದು ಡರ್ಮಟಾಲಜಿಸ್ಟ್ ಟೆಸ್ಟೆಡ್ ಆಗಿದೆ. ಇದು ಹಾನಿಕಾರಕ ಸಲ್ಫೇಟ್, ಪ್ಯಾರಾಬೀನ್ಸ್, ಪ್ರಿಸರ್ ವೇಟಿವ್ಸ್ ಕೃತಕ ಬಣ್ಣಗಳಿಂದ ದೂರವಾಗಿದೆ. ಇದರ 30 ಗ್ರಾಂ ಪ್ಯಾಕ್ ನ ಬೆಲೆ ಸುಮಾರು 700 ರೂ. ಆಗುತ್ತದೆ.





