ಪ್ರಶಂಸನೀಯ ಪ್ರಯತ್ನ : ಅಮೆರಿಕಾದಲ್ಲಿ ಎಲ್ಲೆಲ್ಲೂ ಸಿರಿವಂತಿಕೆ ತಾಂಡವವಾಡುತ್ತಿದೆ, ಆದರೆ ಅಷ್ಟೇ ಯಾತನಾಮಯ ಬಡತನ ಇದೆ! ಬಡತನಕ್ಕೆ ಕಾರಣ ಬಹುಶಃ ಡ್ರಗ್ಸ್ ಇರಬಹುದು, ಅತಿ ಕುಡಿತ, ಡೈವೋರ್ಸ್, ಜಾಬ್ ಲಾಸ್, ಹೆತ್ತವರ ಸಾವು, ಹೋಮ್ ಲೆಸ್ ಸ್ಥಿತಿ..... ಏನೇ ಇರಬಹುದು. ಹಾಗಾಗಿ ಅಲ್ಲಿನ ಮಕ್ಕಳು ಸೂರು ಕಳೆದುಕೊಂಡು ಅನಾಥರಾಗುತ್ತಾರೆ. ಹಾಗಾಗಿ ಅಲ್ಲಿನ ಒಂದು ಸಂಸ್ಥೆ `ಸ್ಲೀಪ್ ಇನ್ ಹೆವನ್' ಸಂಸ್ಥೆಯು ಇಂಥ ಅನಾಥ ಮಕ್ಕಳಿಗಾಗಿ ಬಂಪರ್ ಬೆಡ್ಸ್ ನ್ನು ಉಚಿತವಾಗಿ ಹಂಚುತ್ತಿದೆ. ಹೀಗಾಗಿ ಎಲ್ಲೋ ಒಂದು ಕಡೆ ಈ ಮಕ್ಕಳು ಹಾಸಿಗೆ ಕಾಣುವಂತಾಗಲಿ ಎಂದು. ನಮ್ಮಲ್ಲಿಯೂ ಸಹ ಜನ ಗುಡಿ, ಚರ್ಚ್, ಮಸೀದಿಗಳಿಗೆ ದಾನ ನೀಡುವ ಬದಲು ಇಂಥ ಮಕ್ಕಳಿಗೆ ಚಾಪೆಯನ್ನಾದರೂ ಕೊಡಬಾರದೇ?

ಅದ್ಭುತ ಕಲಾಪ್ರತಿಭೆ : ಇದು ದ. ಭಾರತದ ಗುಡಿ ಗೋಪುರವಲ್ಲ, ಇಲ್ಲಿ ರಾಜನ ಸವಾರಿ ಆನೆ ಮೇಲಿಲ್ಲ. ಇದು ಇಟಲಿಯ ಕಲಾವಿದರು ಮಾಮೂಲಿ ಜನತೆಗಾಗಿ ನೀಡಿರುವ ಕೊಡುಗೆ. ಹೀಗೆ ಬೀದಿ ಬದಿ, ಸರ್ಕಲ್, ಚೌಕಿಗಳಲ್ಲಿ ಇದರಿಂದ ಸಿಂಗರಿಸಲಾಗುತ್ತದೆ. ಕೆಲವೇ ಕ್ಷಣಗಳಾದರೂ ನೋಡುಗರು ಅಲ್ಲೇ ನಿಂತು ಇದನ್ನು ಗಮನಿಸುತ್ತಾರೆ. ಒರಿಸ್ಸಾದ ಸ್ಯಾಂಡಲ್ ಆರ್ಟ್ ಫೆಸ್ಟಿವಲ್ ಸಹ ಇದೇ ತರಹದ ಪೇವಮೆಂಟ್ ಆರ್ಟ್ ಆಗಿದ್ದು, ಕೇವಲ ಚಾಕ್ ಪೀಸ್ ನಿಂದ ತೊಳೆಯಬಹುದಾದಂಥ ಅದ್ಭುತ ಕಲೆಯನ್ನು ಆರ್ಟಿಸ್ಟಿಕ್ ಪೇಂಟಿಂಗ್ ಆಗಿ ನಿರೂಪಿಸುತ್ತದೆ!

ನಿಜ ಯಾವುದು? ಸುಳ್ಳು ಯಾವುದು? : ಆರ್ಟಿಫಿಶಿಯ್ ಇಂಟೆಲಿಜೆನ್ಸ್ ಅಂದ್ರೆ ಕೃತಕ ಬುದ್ಧಿಮತ್ತೆಯಿಂದ ದೊಡ್ಡ ಲಾಭವಿದೆ. ಪ್ರವಾಸಿಗರಿಗೆ ಇದರಿಂದ ತಮಗೆ ಬೇಕಾದ, ಟ್ರಾವೆಲ್ ಬ್ರೋಶರ್ಸ್ ನಲ್ಲಿ ಇಲ್ಲದ ವಿಶೇಷ ಮಾಹಿತಿ ಸಿಗುತ್ತದೆ. ಒಂದು ಟ್ರಾವೆಲ್ ಏಜೆನ್ಸಿ ಕೊಟ್ಯಂತರ ಮಂದಿಗೆ ಟೆಂಪ್ಲೆಟ್ ಸಿದ್ಧಪಡಿಸುತ್ತದೆ. ಟ್ರಾವೆಲ್ ಏಜನ್ಸಿ ಕಂಪನಿ ಹೇಳುವುದೆಂದರೆ, ಅದರ ಸೈಟ್ ನಿಂದ ನೆರವಿನ ಮೂಲಕ ಬೇಕಾದ ಅತ್ಯಗತ್ಯ ಮಾಹಿತಿ ಸುಲಭ ಲಭ್ಯ, ಅದು ಎಂಥ ಪಾರ್ಟ್ ನರ್ ಜೊತೆ ಟ್ರಾವೆಲ್ ನಲ್ಲಿ ಹೇಗೆ ಆನಂದಿಸಬಹುದು ಎಂಬುದನ್ನೂ ಒಳಗೊಂಡಂತೆ! ನೀವು ಕಣ್ಣುಮುಚ್ಚಿ ಎಷ್ಟು ನಂಬುತ್ತೀರಿ ಎಂಬುದನ್ನು ಇದು ಅವಲಂಬಿಸಿದೆ. ಆದರೆ ಇದು ಸೋಶಿಯಲ್ ಮೀಡಿಯಾಗಳಂತೆ ಸರಿಯನ್ನು ತಪ್ಪು ಅಥವಾ ತಪ್ಪನ್ನು ಸರಿ ಎಂದು ತೋರಿಸಿ ಬಿಡಬಾರದಷ್ಟೇ!

ಮಕ್ಕಳ ಕಪ್ ಆದರೆ ಏನಂತೆ? : ಇಗೊಳ್ಳಿ, ಇದೀಗ ಮಕ್ಕಳ ಕಪ್ ಗೂ ಹೊಸ ಹೊಸ ಇನ್ವೆನ್ಶನ್ಸ್ ಆಗತೊಡಗಿವೆ. ಆ್ಯಶ್ ಟೆವಲ್ ಸ್ಟುಡಿಯೋ ನಿರ್ಮಿಸಿರುವ ಟಾಡ್ಲರ್ಸ್ ಕಪ್ ಗಳನ್ನು ಭೀ ಸುಪರ್ಬ್ ಎಂದೇ ಮಾರಾಟ ಮಾಡಲಾಗುತ್ತಿದೆ. ಇದರ ಬಣ್ಣಗಳೂ ಬಲು ವಿಭಿನ್ನ, ಇದರ ಗ್ರಿಪ್ ಸಹ ಅಷ್ಟೇ ಬೆಟರ್. ಅಂದ ಮಾತ್ರಕ್ಕೆ ಜನ ವಾಲ್ ಮಾರ್ಟ್ ಸ್ಟೋರ್ ನಲ್ಲಿ ಇದನ್ನು ಖರೀದಿಸಲು ಧಾವಂತದಿಂದ ನುಗ್ಗುತ್ತಾರೆ ಎಂಬ ಗ್ಯಾರಂಟಿ ಏನೂ ಇಲ್ಲ.

ಬೋಲ್ಡ್ ನೆಸ್ ಅತ್ಯಗತ್ಯ : ಇದೀಗ ಸಿಂಗರ್, ಸೆಲ್ಪ್ ಡಿಪೆಂಡೆಂಟ್, ಬೋಲ್ಡ್, ಸೆಕ್ಸಿ, ಎಫಿಶಿಯೆಂಟ್ ಹುಡುಗಿಯರಿಗೆ ಏನೂ ಕೊರತೆ ಇಲ್ಲ, ಇಂಥಲರು ಎಲ್ಲಾ ಕಛೇರಿಗಳಲ್ಲೂ ಕಂಡುಬರುತ್ತಾರೆ. ಇಂಥವರಿಗಾಗಿ ಹೊಸ ಬಗೆಯ ಎಂಟರ್ ಟೇನಿಂಗ್ ಇದೀಗ OTT ಸೀರಿಸ್ ನಲ್ಲಿ ಲಭ್ಯ. ಇದರಲ್ಲಿ ಯಾವುದೇ ಸಂಕೋಚ, ಲಜ್ಜೆ, ಮಡಿವಂತಿಕೆ ಇಲ್ಲದ ಪಾತ್ರಗಳೇ ತುಂಬಿರುತ್ತವೆ, ಇಂಥವರು ಎಂಥ ಪ್ರಯೋಗಕ್ಕೂ ಎವರ್ ರೆಡಿ! ಇಂಥದ್ದೇ ಸೀರಿಯಲ್ ಗಳಲ್ಲಿ `ವೀಕೆಂಡ್' ಸಹ ಒಂದು. ಇದು ಅಮೆರಿಕಾದಲ್ಲಿ ಈಗಾಗಲೇ ರಿಲೀಸ್ ಆಗಿದೆ, ಇಲ್ಲೂ ಆಗಬಹುದು. ಇದರ ಅರ್ಧಂಬರ್ಧ ವರ್ಷನ್ ಇಂಡಿಯನ್ ಆಗಿರುತ್ತದಂತೆ! ಆದರೆ ನಿಜ ಜೀವನದ ಬೋಲ್ಡ್ ನೆಸ್‌ಅದರಲ್ಲಿ ಇರಲಾರದೇನೋ, ಜನ ಅದನ್ನು ಬೇಕೆಂದೇ ಮುಚ್ಚಿಟ್ಟು, ಫಿಲ್ಟರ್ ಹಾಕಿ ಮಾತನಾಡುತ್ತಾರೆ.





