ಸಮಾನತೆಗಾಗಿ ಮಹಿಳೆಯರ ಸಂಘರ್ಷ

1950ರಲ್ಲಿ ಸಂವಿಧಾನ ರಚನೆಗೊಂಡು ಸಮಾನತೆಯ ಹಕ್ಕು ಘೋಷಣೆಗೊಂಡಾಗಿನಿಂದ ಮಹಿಳೆ ತನ್ನ ಹಕ್ಕಿಗಾಗಿ ಹೋರಾಟ ನಡೆಸುತ್ತಲೇ ಇದ್ದಾಳೆ. ಇದರಲ್ಲಿ ಒಮ್ಮೆ ಅವಳು ಗೆದ್ದರೆ, ಮತ್ತೊಮ್ಮೆ ಸೋಲುತ್ತಾಳೆ. ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿ ಸೈನ್ಯದಲ್ಲಿ ಮಹಿಳೆಯ ಬಗ್ಗೆ ಭೇದಭಾವ ಸಲ್ಲದು, ಅವರಿಗೆ ಪುರುಷರಷ್ಟೇ ಸರಿಸಮಾನ ಸೌಲಭ್ಯ ನೀಡಬೇಕು ಎಂದು ಹೇಳಿತು.

ಸೈನ್ಯದಲ್ಲಿ ಉನ್ನತ ಸ್ಥಾನದಲ್ಲಿರುವ ಮಹಿಳೆಯರು ಅನೇಕ ವರ್ಷಗಳಿಂದ ಹೋರಾಟ ನಡೆಸುತ್ತಿದ್ದರು. ಆದರೆ ನ್ಯಾಯಾಲಯದ ಆಮೆ ಗತಿ ನಡಿಗೆಯಿಂದ ಈ ಪ್ರಕರಣ ಸುಪ್ರೀಂ ಕೋರ್ಟ್‌ ತಲುಪಲು ಹಲವು ವರ್ಷಗಳೇ ತಗುಲಿದ. ಮಹಿಳೆ ಹಾಗೂ ಪುರುಷರಲ್ಲಿ ದೈಹಿಕ ರಚನೆಯ ಕಾರಣ ಕೊಟ್ಟು ಸರ್ಕಾರ ಹಾಗೂ ಸೇವನೆ ಅವರಿಗಾಗಿ ಇಬ್ಬಗೆಯ ನೀತಿ ಅನುಸರಿಸುವುದು ಸರಿಯಲ್ಲ ಎಂದು ಹೇಳಿತು. ಪುರುಷ ಸೈನಿಕರು ಮಹಿಳಾ ಅಧಿಕಾರಿಯನ್ನು ತಮಾಷೆ ಮಾಡಬಹುದು ಅಥವಾ ಅವರ ಅಧೀನ ಕೆಲಸ ಮಾಡುವುದಿಲ್ಲ ಎಂದು ಹೇಳುವುದು ತಪ್ಪು. ಸಂವಿಧಾನ ಈ ತರ್ಕಕ್ಕೆ ಪುಷ್ಟಿ ಕೊಡುವುದಿಲ್ಲ.

ಲಿಂಗದ ಆಧಾರದಲ್ಲಿ ಸ್ತ್ರೀ ಪುರುಷ ಎಂಬ ಭೇದಭಾವ ಮಾಡಿ ಅವರಿಗಾಗಿ ಬೇರೆ ಬೇರೆ ಕಾನೂನು ರೂಪಿಸುವಂತಿಲ್ಲ, ಇಬ್ಬರಿಗೂ ಸಮಾನ ಅವಕಾಶ ಕೊಡಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿತು.

ಒಂದು ವೇಳೆ ಮಹಿಳಾ ಅಧಿಕಾರಿ ನಿಯುಕ್ತಿಗೊಂಡರೆ ಅವರನ್ನು 14 ವರ್ಷಗಳ ಸೇವೆಗಳ ಬಳಿಕ ನಿವೃತ್ತಿಗೊಳಿಸುವಂತಿಲ್ಲ. ಆ ಯೂನಿಟ್‌ನ ಪುರುಷ ಅಧಿಕಾರಿಗಳಿಗೆ ಲಭಿಸುವ ಷರತ್ತುಗಳು ಮಹಿಳೆಯರಿಗೂ ಅನ್ವಯಿಸಬೇಕೆಂದು ಅದು ಹೇಳಿತು.

ಸೈನಿಕರ ಶೌರ್ಯಕ್ಕೆ ಪುರುಷತ್ವದ ಹೆಸರು ಕೊಡುವುದು ಕೂಡ ವಾಸ್ತವದಲ್ಲಿ ಭೇದಭಾದ ಮೊದಲ ಮೆಟ್ಟಿಲಾಗಿದೆ. ಏಕೆಂದರೆ ಯುದ್ಧದ ಸ್ಥಿತಿಯಲ್ಲಿ ಶಕ್ತಿಗಿಂತ ಬುದ್ಧಿಯ ಅವಶ್ಯಕತೆ ಜಾಸ್ತಿ. ಕಳೆದ ಕೆಲವು ಶತಮಾನಗಳಲ್ಲಿ ಮಹಿಳೆಯನ್ನು ಕೋಮಲೆ ಎಂದು ಹೇಳಿರುವುದು ಸಾಮಾಜಿಕ ಷಡ್ಯಂತ್ರದ ಕಾರಣದಿಂದ. ಕೋಮಲ ಸ್ತ್ರೀಯರಿಗೆ ಒಳ್ಳೊಳ್ಳೆ ಬಟ್ಟೆ, ಭಾರಿ ಆಭರಣಗಳನ್ನು ಕೊಟ್ಟು ಅವರನ್ನು ಆಮಿಷಕ್ಕೆ ಒಳಪಡಿಸಲಾಯಿತು. ಪ್ರಾಣಿಗಳಲ್ಲಿ ಗಂಡು ಹೆಣ್ಣು ಸದಾ ಸಮಾನ ಸ್ಥಾನಮಾನ ಪಡೆಯುತ್ತವೆ.

ವಾದ ವಿವಾದದ ಸಮಯದಲ್ಲಿ ಸರ್ಕಾರ ಹಾಗೂ ಸೇನೆಯ ವತಿಯಿಂದ ನೀಡಲಾದ ಒಂದು ಸಮರ್ಥನೆ ಏನೆಂದರೆ, ಒಂದು ವೇಳೆ ಮಹಿಳೆ ಯುದ್ಧದಲ್ಲಿ ಹೋರಾಡುವಾಗ ವೈರಿ ಸೈನಿಕರಿಂದ ಸೆರೆ ಆಗಿಬಿಟ್ಟರೆ ಅವಳ ಮೇಲೆ ಬಲಾತ್ಕಾರ ಆಗಬಹುದು. ಆದರೆ ಈ ತರ್ಕ ಆಧಾರ ರಹಿತವಾದದ್ದು. ಏಕೆಂದರೆ ಪುರುಷ ಅಧಿಕಾರಿಗಳು ಸೆರೆಯಾಗಿಬಿಟ್ಟರೆ ಅವರ ಜೊತೆಗೂ ಈ ಘಟನೆ ನಡೆಯಬಹುದು. ಸಾಮಾನ್ಯವಾಗಿ ಎಲ್ಲ ಪುರುಷ ಖೈದಿಗಳೂ ಅತ್ಯಾಚಾರಕ್ಕೆ ತುತ್ತಾಗುತ್ತಾರೆ. ಮಹಿಳಾ ಜೈಲುಗಳಲ್ಲಿ ಮಹಿಳಾ ಖೈದಿಗಳಿಂದ ಹೊಸ ಖೈದಿಗಳಿಗೆ ಅತ್ಯಾಚಾರದ ಶಿಕ್ಷೆ ನೀಡಲಾಗುತ್ತದೆ. ಆದರೆ ಈ ಸಂಗತಿಯನ್ನು ಗುಪ್ತವಾಗಿಡಲಾಗುತ್ತದೆ. ಏಕೆಂದರೆ ಇದರ ಬಗ್ಗೆ ಚರ್ಚಿಸುವಾಗ ಅಶ್ಲೀಲತೆಯ ಪ್ರಶ್ನೆ ಏಳುತ್ತದೆ. ಯಾವ ದೇಶದಲ್ಲಿ ಅಶ್ಲೀಲತೆಯ ಕಾನೂನು ಸಡಿಸಲಾಗಿದೆಯೊ, ಅಲ್ಲಿ ಮಹಿಳಾ ಖೈದಿಗಳ ಮೇಲೆ ಮಹಿಳೆಯರೇ ಲೈಂಗಿಕ ಶೋಷಣೆ ನಡೆಸುತ್ತಾರೆ. ಈ ಕಾರಣ ಅವರ ಮೌಲಿಕ ಹಕ್ಕನ್ನು ಕಿತ್ತುಕೊಳ್ಳಲಾಗದು.

ಮಹಿಳೆಯರಿಗೆ ಇನ್ನೂ ಹಲವು ಚಿಕ್ಕಪುಟ್ಟ ಯುದ್ಧಗಳನ್ನು ಮಾಡಬೇಕಿದೆ. ಮೊದಲು ಅವರು ತಮ್ಮ ಧರ್ಮ ಹಾಕಿರುವ ಕೈಕೋಳದ ವಿರುದ್ಧ ಹೋರಾಡಬೇಕಿದೆ. ಧರ್ಮವೇ ಅವರಿಗೆ ಪುರುಷ ಪ್ರಾಬಲ್ಯವನ್ನು ಒಪ್ಪಿಕೊಂಡುಬಿಡು ಎಂದು ಹೇಳುತ್ತದೆ. ಎಲ್ಲಿಯವರೆಗೆ ಅವರು ಪೂಜೆ ಪುನಸ್ಕಾರ, ವ್ರತ, ಉಪವಾಸ, ತೀರ್ಥ, ಆರತಿ ಇತ್ಯಾದಿಗಳಲ್ಲಿ ಮಗ್ನರಾಗಿರುತ್ತಾರೊ, ಅಲ್ಲಿಯವರೆಗೆ ಅವರ ವಿಧಿ ವಿಧಾನ ಒಪ್ಪಿಕೊಳ್ಳಲೇಬೇಕಾಗುತ್ತದೆ.

ತಮ್ಮ ಸಂವಿಧಾನಬದ್ಧ ಹಕ್ಕನ್ನು ಪಡೆಯಲೇಬೇಕಿದ್ದರೆ, ಮೊದಲು ಧಾರ್ಮಿಕ ಬಂಧನಗಳಿಂದ ಮುಕ್ತರಾಗಬೇಕು. ಆಗಲೇ ಕಾನೂನು, ರಾಜಕೀಯ ಹೋರಾಟ ಮಾಡಲು ಸಾಧ್ಯವಾಗುತ್ತದೆ. ಶಾಹೀನ್‌ ಬಾಗ್‌ನಲ್ಲಿ ಮುಸ್ಲಿಂ ಮಹಿಳೆಯರು ಒಂದು ದಾರಿ ತೋರಿಸಿದ್ದಾರೆ. ಆ ದಾರಿ ಹಾಗೂ ಸುಪ್ರೀಂ ಕೋರ್ಟ್‌ನ ಹಸಿರು ನಿಶಾನೆ ಮಹಿಳೆಯರಿಗೆ ಸ್ವಾತಂತ್ರ್ಯ ಹಾಗೂ ಸಮಾನತೆಗೆ ಸನ್ನದ್ದುಗೊಳಿಸಲಿದೆ.

ಆಲಿಸಲಾಗದ ನೋವು

ದೆಹಲಿ ಗಲಭೆಗೆ ಮುಖ್ಯವಾಗಿ ಭಾಜಪಾದ ಕಪಿಲ್ ‌ಮಿಶ್ರಾ ಪೊಲೀಸ್‌ ಅಧಿಕಾರಿಯ ಸಮ್ಮುಖದಲ್ಲಿಯೇ ಕುಮ್ಮಕ್ಕು ನೀಡಿದ್ದರು. ಅದರಲ್ಲಿ ಹೆಚ್ಚು ನಷ್ಟಕ್ಕೊಳಗಾದರು ಮಹಿಳೆಯರು. ಅವರ ಮಕ್ಕಳು, ಗಂಡ, ತಂದೆ, ಮನೆ, ಆಸ್ತಿ ಹಾಗೂ ವಾಹನಗಳನ್ನು ಕಳೆದುಕೊಂಡರು. ವ್ಯಕ್ತಿಗಳು ಸಾಮಾನ್ಯವಾಗಿ ಈ ತೆರನಾದ ಅಪಾಯಗಳಿಗೆ ಸದಾ ಸನ್ನದ್ಧರಾಗಿರುತ್ತಾರೆ. ಆದರೆ ನಾಗರಿಕ ಸಮಾಜದಲ್ಲಿ ಮಹಿಳೆಯರು ತಮ್ಮ ಸುರಕ್ಷತೆಯ ಬಗ್ಗೆ ಸಡಿಲ ನೀತಿ ಅನುಸರಿಸುತ್ತಾರೆ.

ಗಲಭೆಗಳಲ್ಲಿ ಮನೆಗಳು ಸುಟ್ಟು ಹೋದರೆ ಅಮ್ಮ ಅಥವಾ ಹೆಂಡತಿಗೆ ಅದರ ಬಗ್ಗೆ ಚಿಂತೆಯಾಗುತ್ತದೆ. ಕೆಲವು ಗಂಟೆಗಳ ಬಳಿಕ ಹಸಿವಾದಾಗ ಆಕೆ ಆಹಾರವನ್ನು ಎಲ್ಲಿಂದ ತರಬೇಕು? ರಾತ್ರಿಯಾದರೆ ಹಾಲು ಗಲ್ಲದ ಮಕ್ಕಳಿಂದ ಹಿಡಿದು ವಯಸ್ಸಾದ ಹೆಣ್ಣುಮಕ್ಕಳ ತನಕ ಅವರನ್ನು ಎಲ್ಲಿ ಮಲಗಿಸಲಿ ಎಂಬ ಚಿಂತೆ ಕಾಡುತ್ತಿರುತ್ತದೆ. ಗಲಭೆಯಲ್ಲಿ ಮೃತಪಟ್ಟವರಿಗೆ ವರ್ಷಾನುವರ್ಷ ಅಷ್ಟೇ ಏಕೆ ಜೀವನವಿಡೀ ಪರಿತಪಿಸಬೇಕಾಗುತ್ತದೆ.

ಹಣ ಬರುತ್ತದೆ ಹೋಗುತ್ತದೆ, ರೋಗ ಅಥವಾ ಅಪಘಾತಗಳು ಘಟಿಸುತ್ತಿರುತ್ತವೆ. ಅದರಲ್ಲಿ ಮನೆಯ ಇತರೆ ಸದಸ್ಯರು ಸಾಂತ್ವನ ನೀಡುತ್ತಾರೆ. ಗಲಭೆಗಳು ಏಕಾಏಕಿ ಘಟಿಸುತ್ತವೆ. ಮನೆ ಅಥವಾ ರಸ್ತೆಯಲ್ಲಿ ತನ್ನ ತಪ್ಪಿಲ್ಪದೆ ಯಾರಾದರೂ ಸತ್ತುಬಿಟ್ಟರೆ ಅಥವಾ ಅವರನ್ನು ಸುಟ್ಟು ಹಾಕಿದರೆ ಅದು ಪ್ರಾಣಿಗಿಂತಲೂ ಕೀಳು ಸ್ಥಿತಿ ಆಗಿರುತ್ತದೆ. ಏಕೆಂದರೆ ಪ್ರಾಣಿ ತನ್ನ ಸುರಕ್ಷತೆಗಾಗಿ ಅಥವಾ ಆಹಾರಕ್ಕಾಗಿ ಸಾಯುತ್ತದೆ. ದಂಗೆಕೋರರು ತಾವು 10 ಜನರನ್ನು ಸಾಯಿಸಿದೆವು 100 ಜನರನ್ನು ಸಾಯಿಸಿದೆವು, 10 ಗಾಡಿಗಳನ್ನು ಸುಟ್ಟೆವು 100 ಗಾಡಿಗಳನ್ನು 10 ಮನೆಗಳನ್ನೂ ಲೂಟಿ ಮಾಡಿದೆವು ಅಥವಾ 100 ಮನೆಗಳನ್ನೂ ಎಂದು ಎಣಿಕೆ ಹಾಕುತ್ತಿರುತ್ತಾರೆ.

ದಂಗೆಕೋರರಿಗೆ ತಾವು ಜನಸಮೂಹದ ಒಂದು ಭಾಗ. ನಾವು ಹೇಗೂ ಬಚಾವಾಗಬಹುದು. ಸರ್ಕಾರ ತಮ್ಮನ್ನು ರಕ್ಷಣೆ ಮಾಡಬಹುದು. ಸಂತ್ರಸ್ಥರನ್ನೇ ತಪ್ಪಿತಸ್ಥರನ್ನಾಗಿಸಬಹುದು ಎಂದು ಅವರಿಗೆ ಅನ್ನಿಸುತ್ತಿರುತ್ತದೆ. ಈ ಸತ್ಯ ಕೂಡ ಅವರಿಗೆ ಬಹಳ ನೋವು ನೀಡುತ್ತದೆ.

ಮಹಿಳೆಯರ ನೆನಪಿನ ಶಕ್ತಿ ಬಹಳ ತೀವ್ರವಾಗಿರುತ್ತದೆ. ಅದು ಅವರ ನೈಸರ್ಗಿಕ ಗುಣ ಹೌದು. ಮಹಿಳೆ ಮಗುವಿಗೆ ಜನ್ಮ ನೀಡುತ್ತಾಳೆಂದರೆ ಅವಳು ಬಾಹ್ಯ ಅಪಾಯಗಳನ್ನು ಎದುರಿಸುವ ಸಹನಶೀಲೆ ಕೂಡ ಆಗಿರುತ್ತಾಳೆ.

ಮಹಿಳೆಯರು ಗಲಭೆಗಳಲ್ಲಿ ಅತ್ಯಾಚಾರಕ್ಕೂ ತುತ್ತಾಗುತ್ತಾರೆ. ಹಿಂದೆ ರಾಜರು ತಮ್ಮ ಸೈನಿಕರಿಗೆ ಗೆದ್ದ ಪ್ರದೇಶದಲ್ಲಿ ಲೂಟಿ ಮಾಡಿ ಮಹಿಳೆಯರ ಮೇಲೆ ಅತ್ಯಾಚಾರ ಮಾಡಿ ಎಂದು ರಿಯಾಯ್ತಿ ಕೊಟ್ಟುಬಿಟ್ಟಿದ್ದರು. ಗಲಭೆಗಳು ಹುಡುಗಿಯರನ್ನು ಅಪಹರಿಸಿಕೊಂಡು ಹೋಗುವ ಎಲ್ಲಕ್ಕೂ ಪರಿಣಾಮಕಾರಿ ಉಪಾಯವಾಗಿರುತ್ತದೆ.

ಖೇದದ ಸಂಗತಿಯೆಂದರೆ, ಇದೇ ಮಹಿಳೆಯರು ಗಲಭೆಗೆ ಮುಖ್ಯ ಕಾರಣವಾಗಿರುವ ಧರ್ಮವನ್ನು ಪಾಲನೆ ಪೋಷಣೆ ಮಾಡಿ ಗಿಡಗಂಟಿಯಾಗಿಸುತ್ತಾರೆ. ಅವರು ತಮ್ಮ ಮಕ್ಕಳನ್ನು ಧರ್ಮದ ಅಂಧಭಕ್ತರನ್ನಾಗಿಸುತ್ತಾರೆ. ಇತರೆ ಧರ್ಮವನ್ನು ಟೀಕಿಸುತ್ತಿರುತ್ತಾರೆ. ಅವರೇ ಜಾತಿ, ರೀತಿನೀತಿ, ಜಾತಕಗಳ ಬಗ್ಗೆ ಮಾತನಾಡುತ್ತಾರೆ. ಅವರೇ ತಮ್ಮ ಗಂಡಂದಿರನ್ನು ಧರ್ಮದ ಅಂಗಡಿಗಳ ತನಕ ಕರೆದೊಯ್ಯುತ್ತಾರೆ.

ಗಲಭೆಗಳಿಗೆ ಗೂಂಡಾಗಳು ಹೊಣೆಗಾರರು. ಅದಕ್ಕೂ ಹೆಚ್ಚಾಗಿ ಧರ್ಮದ ನೆರಳಿನಲ್ಲಿ ಪೋಷಿಸುವ ಗೂಂಡಾಗಳ ತಾಯಂದಿರು ಕೂಡ ಹೊಣೆಗಾರರು. ಅವರು ಗಲಭೆ ಎಬ್ಬಿಸಿ ಬಂದ ತಮ್ಮ ಮಕ್ಕಳಿಗೆ ಆರತಿ ಎತ್ತುತ್ತಾರೆ.

ಈ ಗಲಭೆಗಳ ಬಳಿಕ ಎಷ್ಟು ಜನ ಹಿಂದೂ ಮಹಿಳೆಯರು ತಮ್ಮ ಗಲಭೆಕೋರ ಮಕ್ಕಳಿಗೆ ಮನೆಯಲ್ಲಿ ಪ್ರವೇಶ ಕೊಡಲಿಲ್ಲ? ಎಷ್ಟು ಜನ ಗಂಡಂದಿರನ್ನು ತೊರೆದರು? `ಥಪ್ಪಡ್‌’ ಚಿತ್ರದಲ್ಲಿ ಗಂಡನಿಂದ ಕಪಾಳಮೋಕ್ಷಕ್ಕೊಳಗಾಗಿ ವಿಚ್ಛೇದನ ಬೇಡಿದ ತಾಪಸಿ ಪನ್ನೂಳ ಶೌರ್ಯಕ್ಕೆ ಚಪ್ಪಾಳೆ ತಟ್ಟುವ ಮಹಿಳಾ ಸಮೂಹ ಯಾವಾಗ, ಎಲ್ಲಿ ಮಹಿಳೆಯರನ್ನು ಲೂಟಿ ಮಾಡಿದ, ಅವರ ಮನೆಯನ್ನು ಸುಟ್ಟು ಹಾಕಿದ ದುರುಳರನ್ನು ಮನೆಯಿಂದ ಹೊರ ಹಾಕುತ್ತಾರೆ?

ಆತ್ಮಹತ್ಯೆಯ ದಾರಿ

ರೈತರ ಆತ್ಮಹತ್ಯೆಯ ಪ್ರಕರಣಗಳು ಹಲವು ವರ್ಷಗಳಿಂದ ಸುದ್ದಿ ಮಾಡುತ್ತಿವೆ. ಏಕೆಂದರೆ ಕೃಷಿ ನಮಗೆ ಲಾಭ ತರುತ್ತದೆ ಎಂಬ ಗ್ಯಾರಂಟಿ ರೈತರಲ್ಲಿ ಉಳಿದಿಲ್ಲ. ಹೀಗಾಗಿ ರೈತರು ಸದಾ ಸಾಲದಲ್ಲಿ ಮುಳುಗಿರುತ್ತಾರೆ. ಅನಕ್ಷರಸ್ಥ ರೈತರು ಬ್ಯಾಂಕುಗಳನ್ನು ಹೊರತುಪಡಿಸಿ ಸಾಹುಕಾರರಿಂದಲೂ ಸಾಲ ಪಡೆಯುತ್ತಾರೆ. ಸಾಲ ತೀರಿಸದೇ ಇದ್ದಾಗ ಆತ್ಮಹತ್ಯೆಯೊಂದೇ ಅವರಿಗೆ ಕೊನೆಯ ದಾರಿ ಎನಿಸುತ್ತದೆ. ಈಗ ಅದೇ ಪ್ರವೃತ್ತಿ ಓದು ಬರಹ ಬಲ್ಲ ಯುವಕರಲ್ಲೂ ಕಂಡುಬರುತ್ತಿದೆ.

ಹೆಂಡತಿ ಮಕ್ಕಳನ್ನು ಸಾಯಿಸಿ ತಾವು ಸಾಯುವ ಕೆಲವು ರೈತರ ಆತ್ಮಹತ್ಯೆ ಪ್ರಕರಣಗಳು ನಡೆದಿವೆ. ನೋಟು ಅಮಾನ್ಯೀಕರಣದ ಬಳಿಕ ವ್ಯಾಪಾರ ವಲಯದಲ್ಲಿ ಹಾಹಾಕಾರ ಎದ್ದಿತು. ಅದರಿಂದಾಗಿ ಈ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ಹೈದರಾಬಾದ್‌ನ ಒಬ್ಬ ಸಾಫ್ಟ್ ವೇರ್‌ ಎಂಜಿನಿಯರ್‌ ಮಾರ್ಚ್‌ ಮೊದಲ ವಾರ ತನ್ನ ಹೆಂಡತಿ ಹಾಗೂ ಮಕ್ಕಳನ್ನು ಸಾಯಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡ. ಏಕೆಂದರೆ ಅವನ ತಲೆಯ ಮೇಲೆ 22 ಲಕ್ಷ ರೂ.ಗಳಿಗೂ ಹೆಚ್ಚು ಸಾಲವಿತ್ತು.

ಅವನು ತನ್ನ ಆತ್ಮಹತ್ಯಾ ಪತ್ರದಲ್ಲಿ ತಾನು ತಂದೆ ತಾಯಿಯ ಕಾಳಜಿ ವಹಿಸಬೇಕಾಗಿತ್ತು. ಆದರೆ ತಾನೇ ಅವರ ಮೇಲೆ ಅವಲಂಬಿಸಬೇಕಾಗಿ ಬಂತು. ಅವನು ನೌಕರಿ ಬಿಟ್ಟು ವ್ಯಾಪಾರ ಮಾಡಲು ನಿರ್ಧರಿಸಿದ್ದ. ಆದರೆ ಏನು ಮಾಡಿದರೂ ತುಂಬಾ ಹಾನಿಯಾಯಿತು. ಸಾಲ ತೀರಿಸಲು ಅವನಿಗೆ ಯಾವುದೇ ಮಾರ್ಗ ತೋಚಲಿಲ್ಲ.

1991ರಲ್ಲಿ ಆರ್ಥಿಕ ಸುಧಾರಣೆಗಳ ಬಳಿಕ ದೇಶದಲ್ಲಿ ನೌಕರಿ ಹಾಗೂ ವ್ಯಾಪಾರಕ್ಕೆ ವಿಪುಲ ಅವಕಾಶಗಳು ದೊರೆತಿದ್ದವು. ಆಗ ಉದ್ಯೋಗದಾತರು ಎಲ್ಲಿ ತಮ್ಮ ಉದ್ಯೋಗಿ ಬೇರೆ ಕಡೆ ಹೊರಟುಹೋಗಿ ಬಿಡುತ್ತಾನೋ ಎಂದು ಆತಂಕಪಡುತ್ತಿದ್ದರು. ಸಂಬಳದಲ್ಲಿ ಏರಿಕೆ, ವ್ಯಾಪಾರದಲ್ಲಿ ವೃದ್ಧಿಯಾಗುತ್ತಿತ್ತು. 2014ರ ಬಳಿಕ ಈ ಆಸೆಗಳು ನಿರಾಶೆಯಲ್ಲಿ ಪರಿವರ್ತನೆಗೊಂಡವು. ವ್ಯಾಪಾರ ನಡೆಸುವುದು ಕಷ್ಟಕರ ಎನಿಸತೊಡಗಿತು. ನಿಯಮಗಳು ಕಠೋರವಾಗತೊಡಗಿದವು. ಬ್ಯಾಂಕುಗಳು ದಿವಾಳಿಯಾಗುವ ಸ್ಥಿತಿ ಒದಗಿತು. ಸಾಹುಕಾರರಿಗೂ ಕಷ್ಟಕರ ಆಗತೊಡಗಿತು. ಏಕೆಂದರೆ ಅವರ ಹಣ ಕೂಡ ಮುಳುಗತೊಡಗಿತ್ತು.

ಅವರು ಸಾಲ ಕೊಡುತ್ತಿದ್ದರು. ಆದರೆ ವಸೂಲಿಗಾಗಿ ಪ್ರತಿಯೊಂದು ತಂತ್ರ ಅನುಸರಿತ್ತಿದ್ದರು. ಆದರೆ ಸಾಲ ತೆಗೆದುಕೊಂಡವರಿಗೆ ಹಾನಿಯಾದಾಗ ಅವರಿಗೆ ಆತ್ಮಹತ್ಯೆ ಹೊರತುಪಡಿಸಿ ಬೇರೆ ದಾರಿಯೇ ಗೋಚರಿಸುತ್ತಿರಲಿಲ್ಲ. ಸಾಲಗಾರರು ಮೊದಲು ಒಬ್ಬೊಬ್ಬರೇ ಸಾವು ತಂದುಕೊಳ್ಳುತ್ತಿದ್ದರು ಹಾಗೂ ತಮ್ಮ ಹೆಂಡತಿಮಕ್ಕಳನ್ನು ತಾಯಿತಂದೆಯ ವಶಕ್ಕೆ ಒಪ್ಪಿಸುತ್ತಿದ್ದರು. ಆದರೆ ಈಗ ಅವರು ತಮ್ಮ ಇಡೀ ಕುಟುಂಬದೊಂದಿಗೆ ಸಾಯುತ್ತಿದ್ದಾರೆ. ಕುಟುಂಬದ ಹೊಣೆ ಹೊತ್ತ ಯುವಕರು ತಮ್ಮ ಬಳಿಕ ಹೆಂಡತಿ ಮಕ್ಕಳನ್ನು ನೋಡಿಕೊಳ್ಳಲು ಯಾರೂ ಇಲ್ಲ. ಅವರು ಮುಂದೆ ತೊಂದರೆಪಡಬಾರದೆಂದೇ ಈ ನಿರ್ಧಾರಕ್ಕೆ ಬರುತ್ತಾರೆ.

ಹೈದರಾಬಾದ್‌ನ 36 ವರ್ಷದ ಈ ಯುವಕ ಐಬಿಎಂ ಕಂಪನಿಯಲ್ಲಿ ಸಾಫ್ಟ್ ವೇರ್‌ ಎಂಜಿನಿಯರ್‌ ಆಗಿದ್ದ. ಈ ವ್ಯಕ್ತಿಯಂಥವರೇ ನಿರಾಶರಾಗುತ್ತಾ ಹೊರಟಾಗ ದೇಶದಲ್ಲಿ ಎಂತಹ ಪರಿಸ್ಥಿತಿ ಇರಬಹುದು ನೀವೇ ಯೋಚಿಸಿ.

ದೇಶದಲ್ಲಿ ಧರ್ಮದ ಪಟ್ಟಿಯನ್ನು ದಿನ ಬೋಧಿಸಲಾಗುತ್ತಿದೆ. ಆದರೆ ಕರ್ಮದ ದಾರಿಯನ್ನು ಯಾರೂ ಸೃಷ್ಟಿಸುತ್ತಿಲ್ಲ ಹಾಗೂ ಸೃಷ್ಟಿಸಲು ಅವಕಾಶ ಕೂಡ ಕೊಡುತ್ತಿಲ್ಲ. ಈ ನಿರುದ್ಯೋಗಿ ಯುವಕರಲ್ಲಿ ಎಷ್ಟೊಂದು ಜನ ದಂಗೆಕೋರರಾಗಬಹುದು, ಕಳ್ಳರಾಗಬಹುದು, ಎಷ್ಟು ಜನ ಆತ್ಮಹತ್ಯೆ ಮಾಡಿಕೊಳ್ಳಬಹುದು ಎನ್ನುವುದನ್ನು ಊಹಿಸಲೂ ಆಗುವುದಿಲ್ಲ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ