ಸುಂದರ ಹಾಗೂ ಸ್ವಸ್ಥ ಉಗುರಿನಿಂದ ಕೈಗಳ ಅಂದ ಹಲವು ಪಟ್ಟು ಹೆಚ್ಚುತ್ತದೆ. ಉಗುರಿಗೆ ಸರಿಯಾಗಿ ಆರೈಕೆ ಮಾಡದಿದ್ದರೆ, ಅದು ಅಸ್ವಸ್ಥಗೊಂಡು ಮುರಿಯಲೂಬಹುದು, ಈ ರೀತಿ ಅದರ ಬೆಳವಣಿಗೆ ಅನುಸರಿಸಿ ನೀವು ನಿಮ್ಮ ಉಗುರು ಹೊಳೆ ಹೊಳೆಯುವಂತೆ ಮಾಡಿಕೊಳ್ಳಿ.

ಕಿತ್ತಳೆಯ ರಸ : ಕಿತ್ತಳೆ ಹಣ್ಣಿನಲ್ಲಿ ವಿಟಮಿನ್‌ `ಸಿ’ ಇರುವ ಕಾರಣ ಇದು ಕೊಲಾಜಿನ್‌ ಉತ್ಪಾದಿಸಲು ನೆರವಾಗುತ್ತದೆ. ಇದರಿಂದ ಉಗುರು ಸಶಕ್ತಗೊಳ್ಳುತ್ತದೆ, ಸಹಜವಾಗಿ ಬೆಳವಣಿಗೆ ಚೆನ್ನಾಗಿರುತ್ತದೆ.

orange juice

ಒಂದು ಬಟ್ಟಲಲ್ಲಿ ಕಿತ್ತಳೆ ರಸ ತೆಗೆದುಕೊಳ್ಳಿ. ಸುಮಾರು 10 ನಿಮಿಷ ಅದರಲ್ಲಿ ನಿಮ್ಮ ಉಗುರನ್ನು ಮುಳುಗಿಸಿಡಿ. ನಂತರ ಉಗುರನ್ನು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಹೀಗೆ ಮಾಡುವುದರಿಂದ ಉಗುರು ಸುಂದರ, ಸಶಕ್ತ ಆಗುತ್ತದೆ. ಜೊತೆಗೆ ಅದರ ಡ್ರೈನೆಸ್‌ ಸಹ ದೂರವಾಗುತ್ತದೆ.

ಆಲಿವ್ ಆಯಿಲ್ ‌: ಈ ಹಿಪ್ಪೆ ಎಣ್ಣೆ ಉಗುರನ್ನು ಅತಿ ಮೃದುವಾಗಿಡುತ್ತದೆ ಹಾಗೂ ಅದರ ಬೆಳವಣಿಗೆಗೆ ಹೆಚ್ಚು ಸಹಕಾರಿ. ಇದರಲ್ಲಿ ವಿಟಮಿನ್‌ ಪ್ರಮಾಣ ಹೆಚ್ಚಿರುತ್ತದೆ, ಅದರಿಂದ ಉಗುರು ಹೆಲ್ದಿ ಆಗುತ್ತದೆ. ಹಿಪ್ಪೆ ಎಣ್ಣೆ ಬಳಸುವ ಮೊದಲು ಅದನ್ನು ತುಸು ಬೆಚ್ಚಗೆ ಮಾಡಿ. ನಂತರ ಅದರಲ್ಲಿ ಉಗುರನ್ನು ಸ್ವಲ್ಪ ಹೊತ್ತು ಮುಳುಗಿಸಿಡಿ. ಮಧ್ಯೆ ಮಧ್ಯೆ ಉಗುರನ್ನು ಮಸಾಜ್‌ ಮಾಡುತ್ತಿರಿ. ನಂತರ ಇದನ್ನು ಹತ್ತಿಯಿಂದ ಕ್ಲೀನ್‌ ಮಾಡಿ. ಇಲ್ಲಿ ನೀರು ಬೇಡ.

coconut oil

ಕೊಬ್ಬರಿ ಎಣ್ಣೆ ನಿಂಬೆ ರಸ : ಕೊಬ್ಬರಿ ಎಣ್ಣೆಯಲ್ಲಿ ಫ್ಯಾಟಿ ಆ್ಯಸಿಡ್‌ ಇರುತ್ತದೆ. ಇದು ಉಗುರು ದುರ್ಬಲವಾಗಿ ಮುರಿದುಹೋಗುವುದನ್ನು ತಡೆಯುತ್ತದೆ. ಇದರಿಂದ ಉಗುರಿಗೆ ಹೊಳಪು ಬರುತ್ತದೆ. ನಿಂಬೆ ರಸದಿಂದ ಉಗುರಿನ  ಮೇಲೆ ಜಮೆಗೊಂಡ ಹಳದಿ ಪದರ ಸುಲಭವಾಗಿ ತೊಲಗುತ್ತದೆ. ಬಳಸುವ ಮೊದಲು ಕೊಬ್ಬರಿ ಎಣ್ಣೆಯನ್ನು ತುಸು ಬಿಸಿ ಮಾಡಿ. ನಂತರ ಇದಕ್ಕೆ ನಿಂಬೆ ರಸ ಬೆರೆಸಿ. 5 ನಿಮಿಷ ಉಗುರುಗಳನ್ನು ಇದರಲ್ಲಿ ಅದ್ದಿಡಿ. ನಂತರ ಇದನ್ನು ಲಘುವಾಗಿ ಮಸಾಜ್‌ ಮಾಡಿ. ಆಗ ಉಗುರು ಹೆಲ್ದಿಯಾಗಿ, ಹೊಳೆಯ ತೊಡಗುತ್ತದೆ.

ವಿಟಮಿನ್ಆಯಿಲ್ ‌: ಈ ಆಯಿಲ್ ಉಗುರಿಗೆ ಹೆಚ್ಚಿನ ಪೋಷಣೆ ಒದಗಿಸುತ್ತದೆ. ಇದರ ಬಳಕೆಯಿಂದ ಉಗುರು ಎಂದಿಗೂ ಹಾಳಾಗುವುದಿಲ್ಲ. ವಿಟಮಿನ್‌ಆಯಿಲ್‌ನಿಂದ ಉಗುರಿನ ಮಸಾಜ್‌ ಮಾಡಿ. ಮಸಾಜ್‌ ನಂತರ, ನಿಧಾನವಾಗಿ ಇದನ್ನು ಒಣಗಿಸಿ. ಒಣಗಿದ ನಂತರ ತೊಳೆಯಿರಿ.

ಮನೆಯಲ್ಲೇ ಮೆನಿಕ್ಯೂರ್ಮಾಡಿ

ಮೆನಿಕ್ಯೂರ್‌ ಮಾಡುವುದಕ್ಕೋಸ್ಕರ ಪಾರ್ಲರ್‌ಗೆ ಹೋಗಲೇಬೇಕೆಂದೇನಿಲ್ಲ. ಇದಕ್ಕಾಗಿ ಬೇಕಾದ ಅಗತ್ಯ ಸಾಮಗ್ರಿ ತರಿಸಿದರಾಯಿತು. ಅಂದ್ರೆ ನೇಲ್ ‌ಪೇಂಟ್‌ ರಿಮೂವರ್‌, ನೇಲ್ ‌ಕಟರ್‌, ಕಾಟನ್‌, ಟಬ್‌, ಶ್ಯಾಂಪೂ, ಬಿಸಿ ನೀರು, ಮಾಯಿಶ್ಚರೈಸಿಂಗ್‌ ಕ್ರೀಂ, 2 ಚಮಚ ಹಿಪ್ಪೆ ಎಣ್ಣೆ, 1 ಸಣ್ಣ ಚಮಚ ಸಕ್ಕರೆ, ಕೆಲವು ನ್ಯಾಪ್‌ಕಿನ್ಸ್. ಬನ್ನಿ, ಮೆನಿಕ್ಯೂರ್‌ ಮಾಡುವ ಸರಿಯಾದ ವಿಧಾನ ತಿಳಿದುಕೊಳ್ಳೋಣ.

ಹಂತ 1 : ಹತ್ತಿಯ ನೆರವಿನಿಂದ ಉಗುರನ್ನು ನೀಟಾಗಿ ಶುಚಿಗೊಳಿಸಿ, ಫೈಲರ್‌ನಿಂದ ಅದನ್ನೆ ನೀಟಾಗಿ ಶೇಪ್‌ ನೀಡಿ.

ಹಂತ 2 : ಟಬ್‌ಗೆ ಬಿಸಿ ನೀರು ಹಾಕಿ, ತುಸು ಶ್ಯಾಂಪೂ ಬೆರೆಸಿಕೊಳ್ಳಿ. ಇದರಲ್ಲಿ ನಿಮ್ಮ ಉಗುರನ್ನು ಸ್ವಲ್ಪ ಹೊತ್ತು ಅದ್ದಿಡಿ. ನಂತರ ಕೈಗಳನ್ನು ಹೊರತೆಗೆದು ನ್ಯಾಪ್‌ಕಿನ್‌ನಿಂದ ಒರೆಸಿರಿ.

ಹಂತ 3 : ನಂತರ ಹಿಪ್ಪೆ ಎಣ್ಣೆಗೆ ಸಕ್ಕರೆ ಬೆರೆಸಿ ಕೈಗಳಿಗೆ ಹಚ್ಚಿ 10 ನಿಮಿಷ ಸ್ಕ್ರಬ್‌ ಮಾಡಿ. ನಂತರ ಬಿಸಿ ನೀರಿನಿಂದ ತೊಳೆದು ಹಿಪ್ಪೆ ಎಣ್ಣೆಯಿಂದ ಕೈಗಳ ಮಸಾಜ್‌ ಮಾಡಿ. ಇದರಿಂದ ಕೈಗಳು ಎಷ್ಟೋ ಮೃದು ಆಗುತ್ತವೆ.

ಹಂತ 4 : ಕೊನೆಯ ಹಂತದಲ್ಲಿ ಉಗುರಿನ ಮೇಲೆ ನಿಮ್ಮಿಷ್ಟದ ನೇಲ್ ‌ಪಾಲಿಶ್‌ ಹಚ್ಚಿಕೊಳ್ಳಿ.

ಮೋನಿಕಾ 

ಉಗುರನ್ನು ಅಂದಗೊಳಿಸುವ ವಿಧಾನ

ಉಗುರನ್ನು ಧೂಳು ಮಣ್ಣಿನಿಂದ ರಕ್ಷಿಸಿಕೊಳ್ಳಲು ಅನನ್ನು ಸದಾ ಶುಭ್ರವಾಗಿ ಇಟ್ಟುಕೊಳ್ಳಿ.

ಉಗುರನ್ನು ಎಂದೂ ಕಚ್ಚಲು ಹೋಗಬೇಡಿ.

ಉಗುರನ್ನು ಸದಾ ಸ್ವಸ್ಥವಾಗಿಟ್ಟುಕೊಳ್ಳಲು ನಿಮ್ಮ ಆಹಾರದಲ್ಲಿ ತಪ್ಪದೆ ತಾಜಾ ಹಸಿ ತರಕಾರಿ, ಹಾಲು, ಹಾಲಿನ ಪದಾರ್ಥ, ಮೊಟ್ಟೆ ಸೇರಿಸಿಕೊಳ್ಳಿ.

ತಿಂಗಳಲ್ಲಿ 2 ಸಲ ಮೆನಿಕ್ಯೂರ್‌ ಮಾಡಿ.

ಸದಾ ನೇಲ್ ‌ಪಾಲಿಶ್‌ ಬದಲಿಸದೆ, ನ್ಯಾಚುರಲ್ ಕಲರ್‌ ಬಳಸಿಕೊಳ್ಳಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ