ಅಬ್ಬರದ ಪಟಾಕಿ ಸಿಡಿಮದ್ದುಗಳ ಸದ್ದು ಸ್ವಲ್ಪ ಹೊತ್ತು ಇದ್ದು ಮರೆಯಾಗಿಬಿಡುತ್ತದೆ. ನಮ್ಮ ಜೀವನದಲ್ಲಿ ಯಾರು ಎಷ್ಟು ಮಹತ್ವವುಳ್ಳವರಾಗಿದ್ದಾರೆ ಎಂಬುದನ್ನು ನಾವು ಶಬ್ದಗಳಲ್ಲಿ ಹೇಳಲು ಆಗದು. ಏಕೆಂದರೆ ಅನುಭವಗಳಿಗೆ ಧ್ವನಿ ಇರುವುದಿಲ್ಲ. ಅವನ್ನು ಕೇವಲ ಅನುಭವಿಸಲಷ್ಟೇ ಸಾಧ್ಯ. ಪರಸ್ಪರರ ಬಗೆಗಿನ ಆತ್ಮೀಯತೆ ಹಾಗೂ ನಂಬಿಕೆಯ ಮುಖಾಂತರ ನೀವು ಒಬ್ಬರ ಬಗ್ಗೆ ಎಷ್ಟು ಕಾಳಜಿ ವಹಿಸುತ್ತೀರಿ ಹಾಗೂ ಅವರನ್ನು ಎಷ್ಟು ನೆನಪಿಸಿಕೊಳ್ಳುತ್ತೀರಿ ಎಂಬುದನ್ನು ತೋರಿಸಿಕೊಳ್ಳುವ ಒಂದು ಸುಂದರ ಅವಕಾಶವೆಂದರೆ, ಅದು ಹಬ್ಬ. ಅದರಲ್ಲೂ ವಿಶೇಷವಾಗಿ ದೀಪಾವಳಿ ಎಂತಹ ಒಂದು ಸಂದರ್ಭವೆಂದರೆ, ನೀವು ಹೃದಯದ ಸಂಬಂಧಗಳನ್ನು ಪ್ರೀತಿಯ ಬೆಳಕಿನಿಂದ ಬೆಳಗಿಸಬಹುದು.

ಇಡೀ ವರ್ಷ ಮನೆಯ ಜವಾಬ್ದಾರಿಗಳಲ್ಲಿ ಹೇಗೆ ಕಳೆದುಹೋಗುತ್ತದೆಂದರೆ, ನಿಮ್ಮವರನ್ನು ಖುಷಿಯಿಂದಿಡಲು ಏನಾದರೂ ಕೊಡಬೇಕೆಂದೂ ಕೂಡ ಹೊಳೆಯುವುದೇ ಇಲ್ಲ. ಆದರೆ ದೀಪಾವಳಿಯಲ್ಲಿ ಪ್ರತಿಯೊಬ್ಬರೂ ತಮ್ಮ ಬಜೆಟ್‌ಗೆ ತಕ್ಕಂತೆ ಖರೀದಿಯ ಪ್ಲಾನಿಂಗ್‌ ಮಾಡುತ್ತಾರೆ. ಇಂತಹದರಲ್ಲಿ ನೀವು ಯಾವ ಬಜೆಟ್‌ನಲ್ಲಿ ಎಂತಹ ಉಡುಗೊರೆ ತೆಗೆದುಕೊಳ್ಳಬೇಕು ಹಾಗೂ ಅವರ ಅವಶ್ಯಕತೆಯೂ ಬಗೆಹರಿಯಬೇಕು ಮತ್ತು ಉಡುಗೊರೆ ಪಡೆದು ಅವರ ಮುಖದಲ್ಲೂ ಮುಗುಳ್ನಗೆ ಎದ್ದು ಕಾಣಬೇಕು. ದೀಪಾವಳಿ ಖ್ಯಾತಿಯಾಗಿರುವುದು ಪಟಾಕಿ ಸಿಡಿಮದ್ದುಗಳು, ಬೆಳಕಿನ ಉಲ್ಲಾಸ ಹಾಗೂ ಹೃದಯಗಳನ್ನು ಬೆಸೆಯುವ ಉಡುಗೊರೆಗಳಿಂದ. ದೀಪಾವಳಿಯ ಸಂದರ್ಭದಲ್ಲಿ ನೀವು ನಿಮ್ಮ ನಿಕಟವರ್ತಿಗಳಿಗೆ, ಸಂಬಂಧಿಕರಿಗೆ, ಸ್ನೇಹಿತರಿಗೆ ಹಾಗೂ ನೆರಮನೆಯವರಿಗೆ ಉಡುಗೊರೆ ಕೊಟ್ಟು ನಿಮ್ಮ ಸಂಬಂಧದ ಅಡಿಪಾಯವನ್ನು ಗಟ್ಟಿಗೊಳಿಸುವಿರಿ. ದೀಪಾವಳಿಯ ಉಡುಗೊರೆ ಕೊಡುವಾಗ ಆ ವ್ಯಕ್ತಿಯ ಅಗತ್ಯಗಳ ಬಗ್ಗೆ ವಿಶೇಷ ಗಮನಕೊಡಬೇಕು.

ಉಡುಗೊರೆ ಆಯ್ಕೆ ಮಾಡುವಾಗ

gift-3

ಬಜೆಟ್ನಿರ್ಧರಿಸಿ : ಉಡುಗೊರೆ ಆಯ್ಕೆ ಮಾಡುವುದಕ್ಕಿಂತ ಮುಂಚೆ ಅದಕ್ಕಾಗಿ ನಿಮ್ಮ ಬಜೆಟ್‌ ನಿರ್ಧರಿಸುವುದು ಮುಖ್ಯ. ಅತಿ ಹೆಚ್ಚು ಬೆಲೆ ಬಾಳುವ ಉಡುಗೊರೆಯೇ ಚೆನ್ನಾಗಿರುತ್ತದೆ ಎಂದಲ್ಲ, ಉಡುಗೊರೆ ಕೊಡುವವರ ಭಾವನೆ ಹೆಚ್ಚು ಮಹತ್ವದ್ದಾಗಿರುತ್ತದೆ. ಹೀಗಾಗಿ ನಿಮ್ಮ ಶಕ್ತ್ಯಾನುಸಾರ ಉಡುಗೊರೆಯನ್ನು ಆಯ್ಕೆ ಮಾಡಿ. ನಿರುಪಯುಕ್ತ ಉಡುಗೊರೆಗಳನ್ನು ಕೊಟ್ಟು ಔಪಚಾರಿಕತೆಯನ್ನು ನಿಭಾಯಿಸುವುದಕ್ಕಿಂತ ಒಂದು ಉಪಯುಕ್ತ ಉಡುಗೊರೆ ಅದು ಅಗ್ಗವಾಗಿದ್ದರೂ ಸರಿ ಅದನ್ನೇ ಕೊಡಿ. ಅದು ಅವರಲ್ಲಿ ಖುಷಿಯ ಭಾವನೆಯನ್ನು ತರುತ್ತದೆ.

ವಯಸ್ಸಿಗನುಗುಣವಾಗಿ ಉಡುಗೊರೆ : ಪುಟ್ಟ ಮಕ್ಕಳಿಗೆ ಮೃದು ಆಟಿಕೆಗಳು ಇಷ್ಟವಾಗುತ್ತವೆ. ಸ್ವಲ್ಪ ದೊಡ್ಡ ವಯಸ್ಸಿನ ಮಕ್ಕಳಿಗೆ ಎಲೆಕ್ಟ್ರಾನಿಕ್‌ ಟಾಯ್ಸ್ ಇಷ್ಟವಾಗುತ್ತವೆ. ಅದೇ ರೀತಿ ಕಾಲೇಜು ಯುವತಿಯರಿಗೆ ಉಡುಗೊರೆಯ ರೂಪದಲ್ಲಿ ಮೇಕಪ್‌ ಪ್ರಾಡಕ್ಟ್, ಆರ್ಟಿಫಿಶಿಯಲ್ ಜ್ಯೂವೆಲರಿ, ಸ್ಟೋನ್ ಅಥವಾ ಸನ್‌ ಗ್ಲಾಸೆಸ್‌ ಕೊಡಬಹುದು. ವಿವಾಹಿತರಿಗೆ ಫರ್ಫ್ಯೂಮ್ ಸೆಟ್‌, ಪಿಕ್ಚರ್‌ ಫ್ರೇಮ್ ಅಥವಾ ಮನೆಯ ಅಲಂಕಾರದ ಯಾವುದಾದರೂ ವಸ್ತು ಕೊಡಬಹುದು.

gift-4

 

ಅವರ ಆಸಕ್ತಿ ನಮ್ಮ ಖುಷಿ : ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಆಸಕ್ತಿ ಇರುತ್ತದೆ. ಉಡುಗೊರೆಯನ್ನು ವಿಶೇಷವಾಗಿಸಲು ನೀವು ಉಡುಗೊರೆ ಯಾರಿಗೆ ಕೊಡಬೇಕಾಗಿದೆಯೊ, ಅವರ ಆಸಕ್ತಿಗನುಗುಣವಾಗಿ ಉಡುಗೊರೆ ಆಯ್ದುಕೊಳ್ಳಿ. ಅವರಿಗೆ ಇಷ್ಟವಾಗುವ ಬಣ್ಣ, ಆಸಕ್ತಿ, ಆಗುಹೋಗುಗಳು, ಮನೆಯ ಅಲಂಕಾರ ಹೇಗೆ, ಅವರ ಆಸಕ್ತಿಯ ಸಾಹಿತ್ಯ, ಕ್ರೀಡೆ ಇವೆಲ್ಲದರ ಆಧಾರದ ಮೇಲೆ ಉಡುಗೊರೆ ಆಯ್ದುಕೊಳ್ಳಿ.

ಕೊರತೆ ಗಮನಿಸಿ : ನೀವು ಸಂಬಂಧದಲ್ಲಿ ಮಾಧುರ್ಯ ಮತ್ತು ಪ್ರೀತಿ ಹೆಚ್ಚಿಸಲು ಬಯಸುವಿರಾದರೆ, ಅದಕ್ಕೆ ದೀಪಾವಳಿಗಿಂತ ಒಳ್ಳೆಯ ಅವಕಾಶ ಮತ್ತೊಂದಿರಲಾರದು. ಹೆಂಡತಿ, ಮಕ್ಕಳು, ತಂದೆತಾಯಿ ಅಥವಾ ಸ್ನೇಹಿತರು ಇಲ್ಲಿ ಸಂಬಂಧಿಕರು ಇವರಲ್ಲಿ ಯಾರೇ ಆಗಿದ್ದರೂ ಅವರ ಕುಂದುಕೊರತೆ ಅಥವಾ ಕಷ್ಟವನ್ನು ಬಹಳ ಸಮಯದಿಂದ ನೋಡುತ್ತಾ ಬಂದಿದ್ದರೆ, ದೀಪಾವಳಿಯಂದು ಅಂತಹದೊಂದು ಉಡುಗೊರೆಯನ್ನು ಅವರ ಕೈಯಲ್ಲಿಟ್ಟು, ಸಂಬಂಧದಲ್ಲಿ ಹೊಸ ಬೆಳಕು ಮೂಡಿಸಬಹುದು. ಇದರಿಂದ ನೀವು ಆ ವ್ಯಕ್ತಿಯ ಬಗ್ಗೆ ಅದೆಷ್ಟು ಕಾಳಜಿ ವಹಿಸುತ್ತೀದ್ದೀರಿ ಎಂಬುದು ಅವರಿಗೆ ಮನದಟ್ಟಾಗುತ್ತದೆ.

gift-2

ಆರೋಗ್ಯಕರ ಉಡುಗೊರೆ : ಕುಟುಂಬದಲ್ಲಿ ಯಾರೇ ಸದಸ್ಯರು ಅನಾರೋಗ್ಯಪೀಡಿತರಾಗಿದ್ದರೆ ಅವರಿಗೆ ಇಷ್ಟವಾಗುವಂತಹ ಪೇಯಗಳನ್ನು ಅಂದರೆ 2 ಲೀ., 3 ಲೀ. ಪ್ಯಾಕ್‌ನಲ್ಲಿ ಇರುವಂಥವನ್ನು ಕೊಡಬಹುದು. ಅದೇ ರೀತಿ ಖಾರದ ಪದಾರ್ಥಗಳು, ಉಪ್ಪು ಮಿಶ್ರಿತ ಪದಾರ್ಥಗಳು, ಅನಾರೋಗ್ಯದ ಸಂದರ್ಭದಲ್ಲಿ ತಿನ್ನಬಹುದಾದ ಹಣ್ಣುಗಳು, ಬಿಸ್ಕತ್ತುಗಳ ಪ್ಯಾಕ್‌ನ್ನು ಕೊಡಬಹುದು. ಡ್ರೈಫ್ರೂಟ್ಸ್ ಸಹ ಆಯ್ಕೆ ಮಾಡಬಹುದು.

ಶುಗರ್ಫ್ರೀ ಗಿಫ್ಟ್ : ದೀಪಾವಳಿಯ ಸಂದರ್ಭದಲ್ಲಿ ವೃದ್ಧರಿಗೆ ಉಡುಗೊರೆ ಕೊಡುವಾಗ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಸೂಕ್ತ. ವೃದ್ಧರಿಗೆ ಸಿಹಿ ಪದಾರ್ಥಗಳು ಬಹಳ ಇಷ್ಟ ಎನ್ನುವುದು ಎಲ್ಲರಿಗೂ ಗೊತ್ತು. ಅವರಿಗೆ ಮಧುಮೇಹದ ಸಮಸ್ಯೆ ಇದ್ದರೆ ಶುಗರ್‌ಫ್ರೀ ಸಿಹಿತಿಂಡಿಗಳನ್ನು ಆಯ್ಕೆ ಮಾಡಿ. ಫ್ರೂಟ್ಸ್, ಮುರಬ್ಬಾ ಪ್ಯಾಕ್‌ಗಳನ್ನು ಅವರಿಗೆ ಕೊಡಬಹುದು.

ತುಂಟ ಮಕ್ಕಳಿಗೆ : 100, 200 ರೂ.ಗಳಲ್ಲಿ ಮಕ್ಕಳಿಗೆ ನೂಡಲ್ಸ್, ಪಾಸ್ತಾ, ಮಸಾಲಾ ನೂಡಲ್ಸ್, ಚಾಕ್ಲೆಟ್‌ ಮತ್ತು ಬಿಸ್ಕತ್ತುಗಳ ಪ್ಯಾಕೆಟ್‌ಗಳನ್ನು ತೆಗೆದುಕೊಂಡು ಹೋಗಬಹುದು. ದೀಪಾವಳಿ ಹಬ್ಬದಲ್ಲಿ ಹಲ್ದೀರಾಮ್, ಸನ್‌ ಫೀಸ್ಟ್, ಪ್ರಿಯಾ ಗೋಲ್ಡ್ ನಂತಹ ಕಂಪನಿಗಳು ಉಪ್ಪು ಬೆರೆತ ಬಿಸ್ಕತ್ತುಗಳ ಅನೇಕ ವೆರೈಟಿಗಳನ್ನು ಬಿಡುಗಡೆ ಮಾಡುತ್ತವೆ.

gift

ಗಿಫ್ಟ್ ಕಾರ್ಡ್ನ್ನು ಗಿಫ್ಟ್ ಕೊಡಿ : ಹಬ್ಬದ ಸಂದರ್ಭದಲ್ಲಿ ನೀವು ನಿಮ್ಮ ಸ್ನೇಹಿತರು, ಸಂಬಂಧಿಕರು, ಮನೆಯವರಿಗೆ ಗಿಫ್ಟ್ ಕೊಡಲು ಯೋಚಿಸುತ್ತಿದ್ದರೆ, ಗಿಫ್ಟ್ ಕಾರ್ಡ್‌ ಒಂದು ಒಳ್ಳೆಯ ಆಪ್ಶನ್‌ ಆಗಿದೆ. ನೀವು ಗಿಫ್ಟ್ ಕಾರ್ಡ್‌ನ್ನು ಯಾವುದೇ ಬ್ಯಾಂಕ್‌ ಶಾಖೆ, ನೆಟ್ ವರ್ಕಿಂಗ್‌ ಮೂಲಕ ಪಡೆಯಬಹುದು. ಇದರ ಒಂದು ದೊಡ್ಡ ಲಾಭವೆಂದರೆ, ವ್ಯಕ್ತಿ ತನ್ನ ಇಚ್ಛೆಗನುಗುಣವಾಗಿ ಯಾವುದೇ ವಸ್ತು ಖರೀದಿಸಬಹುದು. ಆ ಕಾರ್ಡ್‌ನ್ನು ಸಿನಿಮಾ, ಹೋಟೆಲ್‌, ಆನ್‌ ಲೈನ್‌ ಶಾಪಿಂಗ್‌ಗಾಗಿ ಬಳಸಿಕೊಳ್ಳಬಹುದು.

ಎಚ್‌ಡಿಎಫ್‌ಸಿ ಬ್ಯಾಂಕ್‌ ಗಿಫ್ಟ್ ಪ್ಲಸ್‌ ಕಾರ್ಡ್‌, ಐಸಿಐಸಿಐ ಬ್ಯಾಂಕ್‌ ಗಿಫ್ಟ್ ಕಾರ್ಡ್‌, ಆಕ್ಸೆಸ್‌ ಬ್ಯಾಂಕ್‌ ಗಿಫ್ಟ್ ಕಾರ್ಡ್‌, ಯೆಸ್‌ ಬ್ಯಾಂಕ್‌ ಗಿಫ್ಟ್ ಕಾರ್ಡ್‌, ಎಸ್‌ಬಿಐನಂಥ ಬ್ಯಾಂಕ್‌ಗಳ ಗಿಫ್ಟ್ ಕಾರ್ಡ್‌ ಲಭ್ಯವಾಗುತ್ತವೆ.

ಕ್ಯಾಂಡಲ್ ಸ್ಟಾಂಡ್‌ : ದೀಪಾವಳಿಯ ಸಂದರ್ಭದಲ್ಲಿ ಕ್ಯಾಂಡಲ್ ಸ್ಟಾಂಡ್‌ ಗಿಫ್ಟ್ ಆಗಿ ಕೊಡುವುದು ಒಂದು ಒಳ್ಳೆಯ ಉಪಾಯ.  ಮೇಣದಬತ್ತಿಯನ್ನು ಈಗ ಜನರು ಸಾಮಾನ್ಯ ಸಂದರ್ಭಗಳಲ್ಲೂ ಬಳಸುತ್ತಾರೆ. ಅ ಡೆಕೊರೇಟಿವ್ ‌ಐಟಂ ರೂಪದಲ್ಲಿ ಗಣನೆಯಾಗುತ್ತವೆ. ಕ್ಯಾಂಡಲ್ ಸ್ಟಾಂಡ್‌ನ್ನು ಮನೆಯ ಮೂಲೆಯಲ್ಲಿ ಇರಿಸಿದರೆ ಅದರಿಂದ ಮನೆಗೆ ವಿಶೇಷ ಲುಕ್‌ ಬರುತ್ತದೆ. ಆನ್ ಲೈನ್‌ನಲ್ಲೂ ಅವು 250 ರೂ.ಗಳಿಂದ ದೊರೆಯುತ್ತವೆ.

ಡ್ರೈ ಫ್ರೂಟ್ಸ್ : ಸಿಹಿ ಪದಾರ್ಥಗಳು ಕಲಬೆರಕೆಯಾಗಬಹುದು. ಅದಕ್ಕೆ ಪ್ರತಿಯಾಗಿ ಬೇಕರಿ ಉತ್ಪನ್ನಗಳು, ದೊಡ್ಡ ದೊಡ್ಡ ಕಂಪನಿಗಳ ಗಿಫ್ಟ್ ಪ್ಯಾಕ್‌ಗಳು ಹಾಗೂ ಡ್ರೈ ಫ್ರೂಟ್ಸ್ ಗಳ ಟ್ರೆಂಡ್‌ ಹೆಚ್ಚುತ್ತ ಹೊರಟಿದೆ. ಸಾಮಾನ್ಯವಾಗಿ ದೀಪಾವಳಿಯ ಸಂದರ್ಭದಲ್ಲಿ ಡ್ರೈ ಫ್ರೂಟ್ಸ್ ಪ್ಯಾಕೆಟ್‌ ಅಥವಾ ಡಬ್ಬದ ರೂಪದಲ್ಲಿ ಕೊಡುವ ಪದ್ಧತಿ ಹೆಚ್ಚಿನ ಪ್ರಮಾಣದಲ್ಲಿ ಚಾಲ್ತಿಯಲ್ಲಿದೆ. ನೀವು ನಿಮ್ಮ ನಿಕಟವರ್ತಿಗಳಿಗೆ ಆರೋಗ್ಯಕರ ಡ್ರೈ ಫ್ರೂಟ್ಸ್ ಉಡುಗೊರೆಯ ರೂಪದಲ್ಲಿ ಕೊಡಬಹುದು. ಅವುಗಳ ಬೆಲೆ 500 ರೂ.ಗಳಿಂದ ಶುರುವಾಗಿ 5000 ರೂ. ತನಕ ಇರುತ್ತದೆ.

ಪೇಂಟಿಂಗ್ಸ್ ಸ್ಮರಣಾರ್ಹ ಉಡುಗೊರೆ : ಇದು ಕೂಡ ದೀಪಾವಳಿಗೆ ಒಂದು ಉತ್ತಮ ಆಯ್ಕೆ. ಸ್ವಚ್ಛತೆಯ ಸಂದರ್ಭದಲ್ಲಿ ಹಳೆಯ ಪೇಂಟಿಂಗ್‌ಗಳನ್ನು ತೆಗೆದುಹಾಕಲಾಗುತ್ತದೆ. ಇಂತಹದರಲ್ಲಿ ನೀವು ಒಂದು ಸುಂದರ ಪೇಂಟಿಂಗ್‌ನ್ನು ಉಡುಗೊರೆಯ ರೂಪದಲ್ಲಿ ಕೊಟ್ಟರೆ ಪಡೆಯುವವರ ಮುಖದಲ್ಲಿನ ಖುಷಿಯನ್ನು ನೋಡಿಯೇ ಅನುಭವಿಸಬೇಕು. ಪೇಂಟಿಂಗ್‌ನ ರೀತಿಯಲ್ಲಿ ಒಂದು ಒಳ್ಳೆಯ ಆರ್ಟ್‌ ಪೀಸ್‌ ಕೂಡ ಗಿಫ್ಟ್ ಕೊಡಬಹುದು. ಅದು ಆ ವ್ಯಕ್ತಿಯ ಮನೆಯ ಇಂಟೀರಿಯರ್‌ನಲ್ಲಿ ಸೇರ್ಪಡೆಗೊಳ್ಳುತ್ತದೆ. ನೀವು ಆನ್ ಲೈನ್‌ ಕಂಪನಿಗಳ ವೆಬ್‌ ಸೈಟ್‌ ಗಮನಿಸಿ ನಿಮ್ಮ ಮೆಚ್ಚಿನ ಉಡುಗೊರೆ ಆಯ್ಕೆ ಮಾಡಬಹುದು. ಅದರ ಜೊತೆ ಕರಕುಶಲ ವಸ್ತುಗಳನ್ನು ಖುದ್ದಾಗಿ ಹೋಗಿ ಆಯ್ಕೆ ಮಾಡಬಹುದು. ಇಂತಹ ಉಡುಗೊರೆಗಳು ನಿಮ್ಮ ಸಂಬಂಧವನ್ನು ಮತ್ತಷ್ಟು ಮಧುರಗೊಳಿಸುತ್ತದೆ.

ಈ ಎಲ್ಲ ಉಡುಗೊರೆಗಳ ಜೊತೆಗೆ ಮತ್ತೊಂದು ಉಡುಗೊರೆಯನ್ನು ನೀವು ನಿಮ್ಮವರಿಗಾಗಿ ಕೊಡಬಹುದು. ಅದೆಂದರೆ, ನಿಮ್ಮ ಸಮಯ. ನಿಮ್ಮವರ ಜೊತೆಗೆ ಕುಳಿತು ಅವರ ಮಾತುಗಳನ್ನು ಆಲಿಸಿ, ನಿಮಗೆ ಹೇಳಬೇಕೆನಿಸಿದ್ದನ್ನು ಹೇಳಿ. ಈ ಒಂದು ಸ್ಮರಣಾರ್ಹ ಘಳಿಗೆ ಮುಂದಿನ ದೀಪಾವಳಿಯವರೆಗೂ ಹೇಗೆ ನಿಮ್ಮ ಮತ್ತು ಅವರ ಮನದಲ್ಲಿ ಬೆಳಕು ಬೀರುತ್ತಿರುತ್ತದೆ ಎಂಬುದನ್ನು ನೀವು ಅನುಭವಿಸುವಿರಿ.

ಗೌತಮಿ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ