ಚೈಲ್ಡ್ ಪೋರ್ನೋಗ್ರಫಿ ಹಾಗೂ ಕುಟಿಲ ಸಮಾಜ
ಸುಪ್ರೀಂಕೋರ್ಟ್ ಈ ಬಾರಿ ಒಂದು ಮಹತ್ವಪೂರ್ಣ ತೀರ್ಪು ನೀಡುತ್ತಾ, ಮನ್ ಮೋಹನ್ ಸಿಂಗ್ ರ ಕಾಂಗ್ರೆಸ್ ಸರ್ಕಾರ ರೂಪಿಸಿದ್ದ `ಪ್ರೊಟೆಕ್ಷನ್ ಆಫ್ ಚಿಲ್ಡ್ರನ್ ಫ್ರಂ ಸೆಕ್ಶುಯಲ್ ಅಫೆನ್ಸ್ ಆ್ಯಕ್ಟ್ 2012' ನ ಅಂತರ್ಗತ ತನ್ನ ವ್ಯಾಖ್ಯೆ ನೀಡಿದೆ, ಕಾನೂನಿನ ಪ್ರಕಾರ ಚೈಲ್ಡ್ ಪೋರ್ನೋಗ್ರಫಿ ತಯಾರಿಸುವುದು, ಅದನ್ನು ಫೋನ್/ಕಂಪ್ಯೂಟರ್ ಸ್ಕ್ರೀನ್ ನಲ್ಲಿ ಇಟ್ಟುಕೊಳ್ಳುವುದು, ನೋಡುವುದು ಅಪರಾಧ ಎಂದೇ ಸಾರಿದೆ.
ಈ ಆ್ಯಕ್ಟ್ ನ ಕಲಂಗಳನ್ನು ಬಲು ಸಡಿಲ ಎಂದು ಭಾವಿಸಿ, ಚೈಲ್ಡ್ ಪೋರ್ನೋಗ್ರಫಿಯನ್ನು ಬಿಲ್ ಕುಲ್ ನಿಷೇಧಿಸುವ ಪ್ರಯತ್ನದಲ್ಲಿ ಸುಪ್ರಿಂ ಕೋರ್ಟಿನ ಈ 200 ಪುಟಗಳ ವ್ಯಾಖ್ಯಾನ, ಒಂದು ವಿಧದಲ್ಲಿ ಕಾನೂನು ಕ್ರಮವನ್ನು ಅತಿ ಶಿಸ್ತಿನಿಂದ ಚಾಲನೆಗೆ ತರುವ ಪ್ರಯತ್ನವಾಗಿದೆ.
ಚೈಲ್ಡ್ ಪೋರ್ನ್ ವಿಶ್ವವಿಡಿಯ ಸಮಾಜದಲ್ಲಿ, ಸರ್ಕಾರ ಮಕ್ಕಳ ಸುರಕ್ಷತೆಯ ಹೆಸರಿನಲ್ಲಿ ತೊಡಗಿರುವ ಸಿಬ್ಬಂದಿಗೆ ಒಂದು ದೊಡ್ಡ ಸವಾಲಾಗಿದೆ. ಕೋಟ್ಯಂತರ ಮಂದಿ ಸೆಕ್ಸ್ ನಲ್ಲಿ ವಿಶೇಷವಾಗಿ ಮಕ್ಕಳೊಂದಿಗೆ ಎಂಜಾಯ್ ಅಥವಾ ಹಾಗೆ ನಡೆಯುವ ವಿಡಿಯೋ ನೋಡುವುದೊಂದು ಗೀಳಾಗಿದೆ, ಇದು ಬಲು ಅಸಹ್ಯಕರ ಎನಿಸಿದರೂ ಅಷ್ಟೇ ದುಬಾರಿ ಆಗಿದೆ. ಲಕ್ಷಾಂತರ ಮಕ್ಕಳನ್ನು ಇದರಡಿ ಬಲವಂತವಾಗಿ ಎಳೆತರಲಾಗಿದೆ, ವಿಶ್ವದೆಲ್ಲೆಡೆ ಹೆಣ್ಣು/ಗಂಡು ಮಕ್ಕಳ ಚೈಲ್ಡ್ ಪ್ರಾಸಿಟ್ಯೂಟ್ ಬಲು ದುಬಾರಿ ಬೆಲೆಯಲ್ಲಿ ಲಭ್ಯ ಎಂಬುದು ಸುಳ್ಳಲ್ಲ.
ಈ ನಿಟ್ಟಿನನಲ್ಲಿ ಕ್ಯಾಥೊಲಿಕ್ ಚರ್ಚ್ ಗಳು ಪ್ರತಿ ವರ್ಷ ಕೋಟ್ಯಂತರ ಡಾಲರ್ ಹಣವನ್ನು ಇಂಥ ದಂಧೆಗೆ ಒಳಗಾದ ಮಕ್ಕಳ ಪೋಷಕರಿಗೆ ಸಂಭಾವನೆ ರೂಪದಲ್ಲಿ ಒದಗಿಸುತ್ತವೆ, ಮುಖ್ಯವಾಗಿ ವಿದೇಶೀ ಕಾನ್ವೆಂಟ್ ಗಳಲ್ಲಿ ದೇವರ ಹೆಸರ ಸಮವಸ್ತ್ರ ಧರಿಸಿದ ಪಾದ್ರಿಗಳ ಸೆಕ್ಶುಯಲ್ ಅಬ್ಯೂಸ್ ಗೆ ಒಳಗಾದ ಮಕ್ಕಳಿಗೆ ಇದು ಮೀಸಲು.
ಇದಕ್ಕಾಗಿಯೇ ಒಂದು ದೊಡ್ಡ ಮಾರುಕಟ್ಟೆ ಚೈಲ್ಡ್ ಟ್ರಾಫಿಕಿಂಗ್ ಗೆಂದೇ ಇದೆ. ವಿಶ್ವದ ನಾನಾ ಮೂಲೆಗಳಿಂದ ಮುಗ್ಧ ಮಕ್ಕಳನ್ನು ಅಪಹರಿಸಿ, ಈ ಕಾಮುಕ ದಂಧೆಗೆ ಬಲಿಪಶು ಆಗಿಸುತ್ತಾರೆ. ಮಕ್ಕಳಿಗೆ ನಾನಾ ಚಿತ್ರಹಿಂಸೆ ನೀಡಿ ಅವರಿಂದ ಇಂಥದ್ದನ್ನು ಮಾಡಿಸಲಾಗುತ್ತದೆ. ಎಲ್ಲಿಂದ ಈ ಮಕ್ಕಳನ್ನು ಅಪಹರಿಸಿ ಎಲ್ಲಿಗೆ ರವಾನಿಸಲಾಗುತ್ತಿದೆ ಎಂಬುದು ಆ ಮುಗ್ಧ ಜೀವಗಳಿಗೆ ಕಿಂಚಿತ್ತೂ ಗೊತ್ತಾಗದು.
ಇದರ ಬೇಡಿಕೆ ಪೂರೈಸಲಾಗದಷ್ಟು ಹೆಚ್ಚಿದೆ. ಇದರ ನಿರ್ವಹಣೆಯಲ್ಲಿ ಏನೇ ಅಪಾಯ ಇರಲಿ, ದೊಡ್ಡ ಮೊತ್ತದ ಲಾಭ ಗ್ಯಾರಂಟಿ! ಮದ್ರಾಸ್ ಹೈಕೋರ್ಟ್ ಕೆಲವು ವರ್ಷಗಳ ಹಿಂದೆ ಈ ಕುರಿತು ಹೇಳಿದ್ದೆಂದರೆ, ಮಕ್ಕಳನ್ನು ಬಳಸಿ ಇಂಥ ಲೈಂಗಿಕ ಚಿತ್ರ ತಯಾರಿ ಯಾ ಮಾರಾಟ ಅಪರಾಧ ಎಂದು ಸಾರಿತ್ತು. ಖಾಸಗಿ ವೀಕ್ಷಣೆ ಯಾ ಮೊಬೈಲ್ ನಲ್ಲಿ ಸೇವ್ ಮಾಡಿ ಇರಿಸಿಕೊಳ್ಳುವುದು ಅಪರಾಧದ ಅಡಿ ಬರಲಿಲ್ಲ. ಹೀಗಾಗಿಯೇ ಸುಪ್ರೀಂ ಕೋರ್ಟ್ ತನ್ನ ಹೊಸ ತೀರ್ಪಿನಲ್ಲಿ ಚೈಲ್ಡ್ ಪೋರ್ನೋಗ್ರಫಿಯನ್ನು ಡಾರ್ಕ್ ವೆಬ್ ನಿಂದ ಡೌನ್ ಲೋಡ್ ಮಾಡಿಕೊಂಡು ಫೋನ್ ನಲ್ಲಿ ಸಂಗ್ರಹಿಸಿಡುವುದನ್ನೂ ಅಪರಾಧ ಎಂದಿದೆ!





