ಹಬ್ಬದ ದಿನಗಳಲ್ಲಿ ನಮ್ಮ ದೇಹವನ್ನು ಆರೋಗ್ಯದಿಂದ ಇಡುವುದು ಮತ್ತು ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಸಾಧ್ಯವಿದೆ. ಆದರೆ ಇದು ಸಾಧ್ಯವಿರುವುದು ನೀವು ಏನನ್ನು ತಿನ್ನಬೇಕು, ಎಷ್ಟರಮಟ್ಟಿಗೆ ತಿನ್ನಬೇಕು? ಪ್ರತಿದಿನ ನೀವೆಷ್ಟು ಕ್ಯಾಲೋರಿ ಸೇವಿಸುತ್ತಿದ್ದೀರಿ ಎನ್ನುವುದು ಆಹಾರದ ಪ್ರಮಾಣ ಮತ್ತು ಅಳತೆಯಿಂದ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.

ನೀವು ಆರೋಗ್ಯದಿಂದ ಮತ್ತು ಸರಿಯಾದ ಶೇಪ್‌ನಲ್ಲಿ ಇರಲು ಬಯಸುವಿರಾದರೆ, ನೀವು ಯಾವುದೇ ಆಹಾರವನ್ನು ಯೋಚಿಸಿಯೇ ಸೇವಿಸಿ. ಹಬ್ಬವೆಂದರೆ, ಖುಷಿ ತರುವಂಥದ್ದು, ಸಿಹಿ ಸೇವಿಸುವಂಥದ್ದು ಎಂದು ನಾವು ಭಾವಿಸುತ್ತೇವೆ. ಸಿಹಿ ಪದಾರ್ಥಗಳ ಸೇವನೆಯ ಜೊತೆಗೆ ನೀವು ಹೆಚ್ಚು ಕ್ಯಾಲೋರಿಯ ಸೇವನೆ ಮಾಡುವಿರಿ. ಇದರಿಂದ ನಿಮ್ಮ ದೇಹದ ಆಕಾರ ಹಾಗೂ ಆರೋಗ್ಯದಲ್ಲಿ ಏರುಪೇರಾಗಬಹುದು.

ಏನು ತಿನ್ನಬೇಕು, ಏನು ತಿನ್ನಬಾರದು?

ಆಹಾರಕ್ಕೆ ಸಂಬಂಧಪಟ್ಟ ಈ ಮೂಲಭೂತ ಸಂಗತಿಗಳನ್ನು ಹಬ್ಬದ ಸಂದರ್ಭಗಳಲ್ಲಿ ಗಮನದಲ್ಲಿಟ್ಟುಕೊಳ್ಳುವುದು ಸೂಕ್ತ. ಈ ಅವಧಿಯಲ್ಲಿ ಡಯೆಟ್‌ ಅತ್ಯಂತ ಮಹತ್ವದ್ದಾಗಿದೆ. ಸೂಕ್ತ ಪದಾರ್ಥಗಳನ್ನು ಸಂಗ್ರಹ ಮಾಡಿಟ್ಟುಕೊಳ್ಳುವುದರ ಮೂಲಕ ನೀವು ಈ ಮೂಲಭೂತ ಸಂಗತಿಗಳ ಪಾಲನೆ ಮಾಡಿಕೊಳ್ಳಬಹುದು. ನೀವು ಕ್ಯಾಲೋರಿಗಳ ಮೇಲೆ ಗಮನಹರಿಸುವವರಾದರೆ, ಆ ಸಮಯದಲ್ಲಿ ನಿಮ್ಮ ಬಳಿ ತಿನ್ನಲು ಸೂಕ್ತ ಪದಾರ್ಥಗಳು ಇರಬೇಕು. ಇದರಿಂದ ನೀವು ಖುಷಿ ಹಾಗೂ ಸಿಹಿ ತಿಂಡಿಗಳ ನಡುವೆಯೂ ನಿಮ್ಮನ್ನು ನೀವು ಆರೋಗ್ಯದಿಂದ ಇಟ್ಟುಕೊಳ್ಳಬಹುದು.

ನೀವು ಇಷ್ಟಪಟ್ಟರೆ ಈ ಅವಧಿಯಲ್ಲಿ ಒಣಹಣ್ಣುಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಅದರಲ್ಲಿ ಆರೋಗ್ಯಕರ ಫ್ಯಾಟ್‌ ಇರುತ್ತದೆ. ಅವು ನಿಮ್ಮ ತೂಕಕ್ಕೆ ಯಾವುದೇ ಹಾನಿ ಉಂಟು ಮಾಡದೇ ನಿಮ್ಮ ಚರ್ಮ ಹಾಗೂ ಕೂದಲಿನ ಆರೋಗ್ಯಕ್ಕೆ ಪೂರಕ ರೀತಿಯಲ್ಲಿ ಕೆಲಸ ಮಾಡುತ್ತದೆ. ಒಂದು ಮುಷ್ಟಿಯಷ್ಟು ಒಣಹಣ್ಣುಗಳು ಅಂದರೆ ಒಣದ್ರಾಕ್ಷಿ, ಬಾದಾಮಿ, ಪಿಸ್ತಾ, ಗೋಡಂಬಿ, ಅಂಜೂರ ಮುಂತಾದವು ಹಬ್ಬದ ದಿನಗಳಲ್ಲಿ ತಿನ್ನಬಹುದಾದ ಮತ್ತು ಉಡುಗೊರೆ ಕೊಡಬಹುದಾದ ಒಳ್ಳೆಯ ಉಪಾಯಗಳಾಗಿವೆ. ಅಷ್ಟೇ ಅಲ್ಲ ಮದುವೆ ನಿಶ್ಚಿತಾರ್ಥ, ಮದುವೆ ಸಮಾರಂಭ, ದಸರಾ, ದೀಪಾವಳಿ ಹಬ್ಬದ ಸಂದರ್ಭದಲ್ಲಿ ಲೋ ಕ್ಯಾಲೋರಿ ಸಿಹಿ ತಿಂಡಿಗಳಲ್ಲಿ ಇವನ್ನು ಸೇರ್ಪಡೆಗೊಳಿಸಬಹುದು.

ಮತ್ತೊಂದು ಮಹತ್ವದ ಸಂಗತಿಯೆಂದರೆ, ನೀವು ಸಕ್ಕರೆ, ತುಪ್ಪ ಹಾಗೂ ಎಣ್ಣೆಯಲ್ಲಿ ಕರಿದ ಪದಾರ್ಥಗಳಿಂದ ದೂರ ಇರಬೇಕು. ಅದರ ಬದಲು ಬೆಲ್ಲ, ಡಾರ್ಕ್‌ ಚಾಕ್ಲೇಟ್‌ ಅಥವಾ ಒಣಹಣ್ಣುಗಳಿಂದ ತಯಾರಿಸಿದ ಸಿಹಿ ತಿಂಡಿಗಳನ್ನು ಸೇವಿಸಿ. ಇದು ನಿಮಗೆ ಅತ್ಯುತ್ತಮ ಪರ್ಯಾಯವಾಗಬಹುದು. ಮೈದಾ ಸಕ್ಕರೆ ಹಾಗೂ ತುಪ್ಪದಿಂದ ತಯಾರಿಸಿದ ಸಿಹಿ ತಿಂಡಿಗಳನ್ನು ಆದಷ್ಟು ಕಡಿಮೆ ಸೇವಿಸಿ. ಏಕೆಂದರೆ ಹೆಚ್ಚು ಕ್ಯಾಲೋರಿಯಿಂದ ದೂರ ಇರಲು ಸಾಧ್ಯವಾಗುತ್ತದೆ.

ಮಸಾಲೆ ಪದಾರ್ಥಗಳ ಬದಲಿಗೆ ಆರೋಗ್ಯಕರ ಪದಾರ್ಥಗಳನ್ನು ಉಪಯೋಗಿಸಬಹುದು. ಸಿಹಿ ತಿಂಡಿಗಳಲ್ಲಿ ಲವಂಗ, ಕೇಸರಿ, ದಾಲ್ಚಿನ್ನಿ, ಏಲಕ್ಕಿ ಹಾಗೂ ಕರಿಮೆಣಸನ್ನು ಬಳಸಬಹುದು. ಇವು ಆಹಾರ ಪದಾರ್ಥಗಳಿಗೆ ಒಳ್ಳೆಯ ಸುವಾಸನೆ ಕೊಡುವುದರ ಜೊತೆಗೆ ಅನೇಕ ಜೈವಿಕ ಗುಣಗಳಿಂದ ಸಮೃದ್ಧವಾಗಿರುತ್ತವೆ. ಈ ಮಸಾಲೆಗಳು ಭಾರತೀಯ ಅಡುಗೆಮನೆಗಳಲ್ಲಿ ಸುಲಭವಾಗಿ ಲಭ್ಯವಾಗುತ್ತವೆ.

ಖರೀದಿಗೆ ಹೋದಾಗ ಲೈಟಾಗಿ ಏನನ್ನಾದರೂ ತಿನ್ನುವ ಪದ್ಧತಿ ಇದ್ದರೆ, ಈ ಅವಧಿಯಲ್ಲಿ ನೀವು ಏನನ್ನು ತಿನ್ನುವಿರಿ ಎನ್ನುವುದನ್ನು ಗಮನಿಸುವುದು ಕೂಡ ನಿಮ್ಮ ಆರೋಗ್ಯಕ್ಕೆ ಮಹತ್ವದ್ದಾಗಿದೆ. ಹೊರಗಡೆ ಹೋದಾಗ ಆರ್ಗ್ಯಾನಿಕ್‌ ಹಣ್ಣುಗಳ ಸಲಾಡ್‌ಸೇವಿಸಬಹುದು. ಆರೋಗ್ಯಕರ ಪಾಕ ವಿಧಾನಗಳಿಂದ ತಯಾರಿಸಿದ ಡೆಸರ್ಟ್‌ ಮೇಲೆ ಹಣ್ಣುಗಳನ್ನಿರಿಸಿ ಸೇವಿಸಬಹುದು.

ಆರೋಗ್ಯಕರ ಡಯೆಟ್ಗೆ ಕೆಲವು ಟಿಪ್ಸ್

ನಿಮ್ಮನ್ನು ನೀವು ಆರೋಗ್ಯದಿಂದ ಮತ್ತು ಫಿಟ್‌ ಆಗಿಟ್ಟುಕೊಳ್ಳಲು ಕೆಳಕಂಡ ಉಪಾಯಗಳನ್ನು ಅನುಸರಿಸಬಹುದು.

ನೀವು ದಿನ ಯಾವುದಾದರೂ ವರ್ಕ್‌ಔಟ್‌ ಮಾಡುವವರಾಗಿದ್ದರೆ, ನಿಮ್ಮ ಈ ದಿನಚರಿಯನ್ನು ಮುಂದುವರಿಸಿ. ಏಕೆಂದರೆ ವರ್ಕ್‌ಔಟ್‌ನಲ್ಲಿ ಅಡ್ಡಿ ಉಂಟಾದ ಬಳಿಕ ಆಹಾರದಲ್ಲಿ ಒಂದಿಷ್ಟು ಏರುಪೇರಾದರೂ ನಿಮ್ಮ ದೇಹದಲ್ಲಿ ತೂಕ ಹೆಚ್ಚುವ ಹಾನಿ ಉಂಟಾಗಬಹುದು.

ಆಹಾರ ತಯಾರಿಸುವುದು ಹಲವರಿಗೆ ಒತ್ತಡ ಕಡಿಮೆ ಮಾಡುವ ಕೆಲಸ ಮಾಡುತ್ತದೆ. ಅಂದಹಾಗೆ ಖಾಲಿ ಹೊಟ್ಟೆಯಲ್ಲಿ ಆಹಾರ ತಯಾರಿಸುವುದರಿಂದ ನಡುನಡುವೆ ಏನನ್ನಾದರೂ ತಿನ್ನಬೇಕೆಂದು ಮನಸ್ಸಾಗುತ್ತದೆ. ಇದರಿಂದ ರಕ್ಷಿಸಿಕೊಳ್ಳುವ ಉಪಾಯವೆಂದರೆ, ಅಡುಗೆ ಮಾಡುವ ಸಮಯದಲ್ಲಿ ನೀವು ಖಾಲಿ ಹೊಟ್ಟೆಯಿಂದ ಇರಬೇಡಿ ಅಥವಾ ಆರೋಗ್ಯಕ್ಕೆ ಹಿತಕರ ಅಲ್ಲದ ಪದಾರ್ಥಗಳನ್ನು ಸಮೀಪ ಇಟ್ಟುಕೊಳ್ಳಬೇಡಿ. ನೀವು ಯಾವುದೇ ಆಹಾರ ಸಿದ್ಧಪಡಿಸಿ, ಅದಕ್ಕಾಗಿ ಆರೋಗ್ಯಕರ ಪದಾರ್ಥಗಳನ್ನೇ ಬಳಸಿ. ಸಿಹಿ ಪದಾರ್ಥಗಳ ಬದಲಿಗೆ ಬೆಲ್ಲ, ಜೇನುತುಪ್ಪ ಅಥವಾ ಸಿಹಿ ತಿಂಡಿಗಳನ್ನು ಬಳಸಬಹುದು. ಅವು ನೈಸರ್ಗಿಕ ಸಿಹಿಯ ಅಥವಾ ಸುವಾಸನೆಯಂತೆ ಸ್ವೀಕರಿಸಲ್ಪಡುತ್ತವೆ.

ಹಬ್ಬಗಳ ಮುಂಚಿನ ಸಿದ್ಧತೆಗಾಗಿ ಖರೀದಿಯನ್ನು ಕೆಲವು ಸಿದ್ಧಾಂತಗಳನ್ವಯ ಮಾಡಬೇಕು. ಅದರಲ್ಲಿ ಆರೋಗ್ಯಕರ ಆಹಾರ ಪದಾರ್ಥಗಳ ಆಯ್ಕೆ ಹಾಗೂ ಆರಂಭದಿಂದಲೇ ಅನಾರೋಗ್ಯಕರ ಪದಾರ್ಥಗಳಿಂದ ರಕ್ಷಿಸಿಕೊಳ್ಳುವುದು ಕೂಡ ಸೇರಿದೆ.

ಮಾಂಸಾಹಾರದಿಂದ ದೂರವಿರಿ. ಆಹಾರದಲ್ಲಿ ನೈಸರ್ಗಿಕ ಪದಾರ್ಥಗಳು, ಹಣ್ಣುಗಳು ಹಾಗೂ ತರಕಾರಿಗಳು ಸೇರಿರಲಿ. ಇದು ಸಾಧ್ಯ ಇಲ್ಲದಿದ್ದಾಗ ಮಾಂಸಾಹಾರ ಹಾಗೂ ಸಸ್ಯಾಹಾರದ ನಡುವೆ ಸಮತೋಲನ ಸಾಧಿಸುವ ಮಂತ್ರವನ್ನು ಪಾಲಿಸಿ.

ನೀರು ಕುಡಿಯದೆ ಇರಬೇಡಿ. ಬೇರೆ ಕೆಲವು ದ್ರವ ಪದಾರ್ಥಗಳನ್ನೂ ಸೇವಿಸಬಹುದು. ಹಬ್ಬದ ದಿನಗಳಲ್ಲಿ ನಾವು ಆತುರಾತುರವಾಗಿ ಆಹಾರ ಸೇವನೆ ಮಾಡುತ್ತೇವೆ. ನಾವು ನಮ್ಮ ಕೆಲಸ ಕಾರ್ಯಗಳ ನಡುವೆ ಸುತ್ತಾಟ, ಖರೀದಿ ಹಾಗೂ ಇತರೆ ಸಂಗತಿಗಳ ನಡುವೆ ಸಮತೋಲನ ಸಾಧಿಸಬೇಕು. ಈ ವ್ಯಸ್ತತೆಯ ನಡುವೆ ನಾವು ಪೋಷಣೆ ಹಾಗೂ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರಬಾರದು. ಎಷ್ಟೋ ಸಲ ನೀರಡಿಕೆಯನ್ನೇ ನಾವು ಹಸಿವು ಎಂದು ಭಾವಿಸಿ, ಹೆಚ್ಚು ಆಹಾರ ಸೇವಿಸುತ್ತೇವೆ. ನೀರನ್ನು ಕಡಿಮೆ ಸೇವಿಸುತ್ತೇವೆ. ಈ ಕಾರಣದಿಂದ ದೇಹದಲ್ಲಿ ನಿರ್ಜಲೀಕರಣದ ಸಮಸ್ಯೆ ಉಂಟಾಗಬಹುದು. ಅದರಿಂದ ದೇಹದಲ್ಲಿ ದಣಿವು, ಸುಸ್ತು ಕಾಡಬಹುದು. ಹೀಗಾಗಿ ಹಬ್ಬವೇ ಇರಲಿ, ಮದುವೆಯ ಖರೀದಿ ಇರಲಿ, ನಡುನಡುವೆ ಸಾಕಷ್ಟು ನೀರು ಹಾಗೂ ದ್ರವ ಪದಾರ್ಥಗಳನ್ನು ಸೇವಿಸಿ.

ಸಂಗೀತಾ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ