ರಾಜ್ಯದಲ್ಲಿ ಕೆಎಂಎಫ್, ನಂದಿನಿ ತುಪ್ಪದ ಬೆಲೆಯನ್ನು ಏರಿಕೆ ಮಾಡಿದೆ. ಪ್ರತಿ ಕೆ.ಜಿ. ತುಪ್ಪದ ದರವನ್ನು 90 ರೂಪಾಯಿ ಏರಿಕೆ ಮಾಡಿದೆ. ಪ್ರತಿ ಕೆ.ಜಿ.ಗೆ 610 ರೂಪಾಯಿ ಇದ್ದ ಬೆಲೆ ಈಗ 700 ರೂಪಾಯಿಗೆ ಏರಿಕೆಯಾಗಿದೆ.

ಜಿಎಸ್‌.ಟಿ.  ದರ ಇಳಿಕೆ ಸಂಭ್ರದಲ್ಲಿದ್ದ ಜನತೆಗೆ ಕೆಎಂಎಫ್ ಶಾಕ್ ನೀಡಿದ್ದು, ತುಪ್ಪದ ದರವನ್ನು ಕೆಎಂಎಫ್ ಏರಿಕೆ ಮಾಡಿದೆ. ಎಲ್ಲ ಮಾದರಿಯ ತುಪ್ಪದ ದರವನ್ನು ಪ್ರತಿ ಕೆ.ಜಿ.ಗೆ. 90 ರೂಪಾಯಿ ಏರಿಕೆ ಮಾಡಿದೆ.  ಇಂದಿನಿಂದಲೇ ನೂತನ ದರ ಜಾರಿಗೆ ಬರಲಿದೆ ಎಂದು ಕೆಎಂಎಫ್ ಹೇಳಿದೆ.

ಈ ಹಿಂದೆ ಒಂದು ಕೆ.ಜಿ.  ತುಪ್ಪಕ್ಕೆ 610 ರೂ ಇತ್ತು. ಇಂದಿನಿಂದ 700 ರೂ ಗೆ ಏರಿಕೆ ಆಗಿದೆ.  ತುಪ್ಪ ಹೊರತು ಪಡಿಸಿ ಉಳಿದ ಇತರೆ ನಂದಿನಿ ಉತ್ಪನ್ನದ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ.

ನಂದಿನಿ ತುಪ್ಪದ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಬಮೂಲ್ ಅಧ್ಯಕ್ಷ  ಡಿಕೆ ಸುರೇಶ್‌ ಪ್ರತಿಕ್ರಿಯೆ ನೀಡಿದ್ದು, ನಂದಿನಿ ಹಾಲು ೯೫ ಲಕ್ಷದಿಂದ ೧ ಕೋಟಿ ಲೀ.ವರೆಗೆ ಉತ್ಪತ್ತಿ ಆಗುತ್ತಿದೆ. ಕೇವಲ ೫೦ ಲಕ್ಷ ಲೀ. ಹಾಲು‌ ಮಾರಾಟವಾಗುತ್ತಿದೆ. ೪ ರೂ. ರೈತರಿಗೆ ಹಣ ಕೊಡಲು ಮುಂದಾಗಿದ್ದೇವೆ. ಹಾಲಿನ ಉತ್ಪನ್ನಗಳಿಂದ ನಷ್ಟವಾಗುತ್ತಿದೆ.  ಬೆಣ್ಣೆಗೆ ಅಭಾವ ಇದೆ. ತುಪ್ಪ, ಬೆಣ್ಣೆಗೆ ಬೇಡಿಕೆ ಜಾಸ್ತಿ ಇದೆ. ಮಾರ್ಕೆಟ್ ಗಳಲ್ಲಿ ಬೇರೆ ಬ್ರ್ಯಾಂಡ್ ನಲ್ಲಿ ವಿನ್ಯಾಸದಲ್ಲಿ ಮಾಡ್ತಿದ್ದಾರೆ. ನಮ್ಮದು ಗುಣಮಟ್ಟ ಚೆನ್ನಾಗಿದೆ. ಹಸುಗಳ ಹಾಲಿನಿಂದ ತಯಾರಿಸಿದ ತುಪ್ಪ ಸರಬರಾಜು ಮಾಡುತ್ತಿದ್ದೇವೆ.  ನಷ್ಟ ಭರಿಸಲು ಬೆಲೆ‌ ಏರಿಕೆ ಮಾಡಬೇಕು.ಹೀಗಾಗಿ ತುಪ್ಪದ ದರ ಏರಿಕೆ ಮಾಡಿದ್ದೇವೆ ಎಂದು ಹೇಳಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ