ಪ್ರಾಣಿಗಳನ್ನೂ ಬದುಕಲು ಬಿಡಿ : ಉ. ಅಮೆರಿಕಾದ ಥ್ಯಾಂಕ್ಸ್ ಗಿವಿಂಗ್‌ ಹಬ್ಬದಂದು ಲಕ್ಷಾಂತರ ಉಷ್ಟ್ರಪಕ್ಷಿಗಳ ಮಾರಣ ಹೋಮವಾಗುತ್ತದೆ. ದೂರ ದೂರ ಇರುವ ಬಂಧುಗಳೆಲ್ಲ ಒಂದೆಡೆ ಕೂಡಿ, 4-5 ಫ್ರೈಡ್‌ ಟರ್ಕಿ, ಉಷ್ಟ್ರಪಕ್ಷಿಗಳ ಸ್ವಾಹಾ ಮಾಡುತ್ತಾರೆ. ಹೀಗಾಗಿ ಇದನ್ನು ವಿರೋಧಿಸಲು ಅಂತಾರಾಷ್ಟ್ರೀಯ ಪ್ರಾಣಿಪ್ರಿಯ ಸಂಘವಾದ ಪೀಪಾ ಸಂಸ್ಥೆ ಈ ದಿನ ಜನ ಸಸ್ಯಾಹಾರಿಗಳಾಗಿ ಉಳಿಯಬೇಕೆಂದು ವಿನಂತಿಸಲು, ಕಠೋರ ಪ್ರದರ್ಶನಗಳನ್ನು ನೀಡುತ್ತದೆ. ಹೀಗಾಗಿ ಈ ಸಂಸ್ಥೆ ಅಮೆರಿಕಾದ ಎಲ್ಲಾ ಪ್ರಸಿದ್ಧ ರೆಸ್ಟೋರೆಂಟ್‌ಗಳ ಎದುರು ಇಂಥ ಹೋರ್ಡಿಂಗ್‌ ಹಾಕಿಸುತ್ತಾರೆ. ಹೋಟೆಲ್‌ಗೂ ಈ ಸಂಸ್ಥೆಗೂ ಜಗಳ ತಪ್ಪಿದ್ದಲ್ಲ! ಮಾಂಸಾಹಾರ ನಿಷೇಧಿಸುತ್ತೇವೆ ಎಂದು ಹೋಟೆಲ್‌ನವರೂ ಪೊಳ್ಳು ಭರವಸೆ ನೀಡಿ ಇವರನ್ನು ಅಟ್ಟುತ್ತಾರೆ, ಆದರೆ ಇದು ಜನರ ಮನಸ್ಸಿಗೆ ನಾಟುವವರೆಗೂ ನಿಲ್ಲುವಂಥದ್ದಲ್ಲ.

ಸಾಮಾಜಿಕ ಅಂತರ ಅಪರಿಚಿತರಿಂದ, ಮನೆಯ ಆಪ್ತರಿಂದಲ್ಲ! : ಇದೀಗ ವಿಶ್ವವಿಡೀ ಎಲ್ಲಾ ರೆಸ್ಟೋರೆಂಟ್‌ಗಳಲ್ಲೂ ಗ್ರಾಹಕರು ಬಂದು ಸೋಶಿಯಲ್ ಡಿಸ್ಟೆನ್ಸಿಂಗ್‌ ಮೇಂಟೇನ್‌ ಮಾಡಿದರೂ, ಮನೆಯ ಆಪ್ತರು ಹತ್ತಿರದಲ್ಲೇ ಕೂರುವಂತೆ ಆದರೆ ಅಪರಿಚಿತರಿಂದ ದೂರ ಉಳಿಯುವಂತೆ ನೋಡಿಕೊಳ್ಳುತ್ತಿವೆ. ಇಂಡೋನೇಷಿಯಾದ ಜಾವಾದಲ್ಲಿ ಎಲ್ಲಾ ಹೋಟೆಲ್‌ಗ‌ಳಲ್ಲೂ ಇಂಥ ಪದ್ಧತಿ ಗಮನಿಸಬಹುದು. ನಿಮ್ಮ ಜೇಬಿಗೆ ಎಷ್ಟು ಕತ್ತರಿ ಬೀಳುತ್ತದೆ ಎಂಬುದನ್ನು ಅಲ್ಲಿ ಎಂಜಾಯ್‌ ಮಾಡಿ ನೀವೇ ತಿಳಿಯಬೇಕಷ್ಟೆ.

04-GREATAMERICANLIE_004-1536x1020

ನಿಮ್ಮವರನ್ನು ಸಂತೋಷ ಪಡಿಸಬೇಕೆಂದರೆ : ದೆಹಲಿಯ ಮಾನಸಿಂಗ್‌ ರಸ್ತೆಯ ತಾಜ್‌ ಹೋಟೆಲ್ ‌ಇದೀಗ ಹೊಸ ಇಂಟೀರಿಯರ್ಸ್‌ ಜೊತೆ ರೆಡಿ ಆಗಿದೆ. ಆದರೂ ಎಷ್ಟೋ ಸಾವಿರಾರು ಗ್ರಾಹಕರು ಇನ್ನೂ ಮನೆಗಳಿಂದ ಇಲ್ಲಿಗೆ ತಲುಪಲು ಹಿಂಜರಿಯುತ್ತಿದ್ದಾರೆ. ದೆಹಲಿಯ ಮಹಾನಗರ ಪಾಲಿಕೆಯ ಸೈಟ್‌ನಲ್ಲೇ ಕಟ್ಟಲ್ಪಟ್ಟಿರುವ ಈ ಹೋಟೆಲ್‌, 30 ವರ್ಷಗಳ ಲೀಜ್‌ಗೆ ದೊರಕುತ್ತದೆ ಹಾಗೂ ಈ ಸಲ ಟಾಟಾದವರ ತಾಜ್‌ ಚೇನ್‌ಗೆ ಅತಿ ದುಬಾರಿ ಲೈಸೆನ್ಸ್ ಫೀಸ್‌ ತೆರಬೇಕಾಗಿದೆ. ಅಲ್ಲಿನ ಟೀ ಎಷ್ಟು ದುಬಾರಿ ಎಂಬುದು ಗೊತ್ತಿರುವುದೇ, ಜೊತೆಗೆ ಬೋರ್ಡಿಂಗ್‌, ಲಾಡ್ಜಿಂಗ್‌ ಕೇಳುವುದೇ ಬೇಡ! ಸಂಗಾತಿಯನ್ನು ಸಂತೋಷವಾಗಿ ಇರಿಸಿಕೊಳ್ಳಬೇಕೆಂದರೆ ಇಂಥ ದುಬಾರಿ ಖರ್ಚನ್ನೆಲ್ಲ ನಿಭಾಯಿಸಬೇಕಲ್ಲವೇ? ಹೊಸ ಗರ್ಲ್ ಫ್ರೆಂಡ್‌ ಜೊತೆಗೆ ಟೀ ಪಾರ್ಟಿಗೆ ಹೊರಡಲಿಕ್ಕೂ ಆರಾಮ, ಮನೆಗೆ ದೂರು ಕೊಡಬಹುದಾದ ಕಂಜೂಸ್‌ ಅಕ್ಕಪಕ್ಕದವರ ಕಿರಿಕಿರಿ ಖಂಡಿತಾ ಇರೋದಿಲ್ಲ!

06-forpressrelease.com5f7c2671da0f7TajMahal,NewDelhi-TheAll-NewMachan

ಅಪಾಯ ಎದುರಿಸಲು ತಯಾರಿಕೊರೋನಾ ಇದ್ದರೂ ಸಹ, ಮಿಲಾನ್‌ನಿಂದ ನ್ಯೂಯಾರ್ಕ್‌ವರೆಗೂ ಫ್ಯಾಷನ್‌ ಇಂಡಸ್ಟ್ರಿ ಹೇಗಾದರೂ ಅಪಾಯ ಎದುರಿಸಲೇಬೇಕು ಎಂಬಂತೆ ಮುಂದಿನ ಸೀಸನ್ನಿನ ಸ್ಪೆಷಲ್ ಡ್ರೆಸೆಸ್‌ ತಯಾರಿಸಿ, ರಾಂಪ್‌ ಮೇಲೆ ಪ್ರದರ್ಶನ ಸಹ ನಡೆಸುತ್ತಿದೆ. ಹ್ಞಾಂ, ಸದ್ಯಕ್ಕಂತೂ ವೀಕ್ಷಕರು ಸ್ಕ್ರೀನ್‌ ಮೇಲೆ ಮಾತ್ರ ಇದನ್ನೆಲ್ಲ ನೋಡಬೇಕಾಗಿದೆ, ಏಕೆಂದರೆ ಬಹುತೇಕ ದೇಶಗಳಲ್ಲಿ ಇನ್ನೂ ಗುಂಪು ಗುಂಪಾಗಿ ಜನರು ಒಂದೆಡೆ ಒಗ್ಗೂಡಲು ಅನುಮತಿ ಇಲ್ಲ. ಈ ಹೊಸ ಡ್ರೆಸ್‌ ಧರಿಸಿ ಯಾರು ಎಲ್ಲಿಗೆ ಹೋಗಬೇಕಿದೆಯೋ ಗೊತ್ತಿಲ್ಲ. ಬೇರೆಯವರನ್ನು ಉರಿಸಲೆಂದೇ ತಾನೇ ಗ್ಲಾಮರಸ್‌ ಡ್ರೆಸ್‌ ಹೆಚ್ಚಾಗಿ ಬಳಕೆಯಾಗುವುದು?

03-news-cover-14-1584x872

ಧ್ವನಿ ಮುಗಿಲೆತ್ತರಕ್ಕೆ ಏರಿದಾಗ  : ಅಮೆರಿಕಾ ಏನೂ ಈಗ ಮಹಾನ್‌ ದೇಶವಾಗಿ ಉಳಿದಿಲ್ಲ. ಈಗಾಗಲೇ ತಮ್ಮ ರಾಷ್ಟ್ರಪತಿ ಪದವಿಯಿಂದ ಹಿಂದಕ್ಕೆ ಸರಿಯುತ್ತಿರುವಂಥ ಡೊನಾಲ್ಡ್ ಟ್ರಂಪ್‌, 2016ರ ತಮ್ಮ ಗೆಲುವನ್ನು ಈ ನೆನಪಾಗಿಸಿಕೊಳ್ಳಬೇಕಿದೆಯಷ್ಟೆ. ಇದನ್ನು ಆಧರಿಸಿ ಒಂದು ಡಾಕ್ಯುಮೆಂಟರಿ ತಯಾರಾಗಿದೆ, ಗ್ರೇಟ್‌ ಅಮೆರಿಕನ್‌ ಲೈ, ಮಹಾನ್‌ ಅಮೆರಿಕಾದ ಸುಳ್ಳುಗಳು ಅಂತ. ಇದರಲ್ಲಿ ಅಮೆರಿಕಾದ ಜನ ಎಂದೆಂದೂ ಅವರಿಗೇ ವೋಟ್‌ ಹಾಕುತ್ತಾರೆಂಬಂತೆ ಬಿಂಬಿಸಲಾಗಿದೆ. ಅವರ ಹಕ್ಕು, ಅವಕಾಶಗಳು, ಹಣ, ಜೀವನವೇ ಕೈ ಜಾರಿಹೋಗುತ್ತಿದೆ, ಎಂಬಂತೆ ಬಿಂಬಿಸಲಾಗಿದೆ. ಇದು ನಮ್ಮ ದೇಶದ ಹಾಥ್‌ರಸ್‌ ಊರಿನಲ್ಲಿ ಬಡವರು ರಾಜಕೀಯ ನೇತಾರರನ್ನು ನಂಬಿ ವೋಟ್‌ ಹಾಕಿದಂತೆಯೇ ಇದೆ. ಅವರುಗಳ ಭಗವಾ ವರ್ಕರ್ಸ್‌ ಅಮಾಯಕ ಹುಡುಗಿಯರನ್ನು ರೇಪ್‌ವರೆಗೆ ಎಳೆದೊಯ್ದು, ನಂತರ ಮೀಸೆ ತಿರುವಿ ಹೋಗುವವರಂತೆ. ಕೇವಲ ಒಂದು ಡಾಕ್ಯುಮೆಂಟರಿಯಿಂದ ಸಮಾಜವೇನೂ ಬದಲಾಗದು. ಆದರೆ ಧ್ವನಿ ಮುಗಿಲೆತ್ತರ ಏರಿದರೆ ಸುನಾಮಿಯೂ ಬರಬಹುದು!

01-120366468_811445362936273_5579395063142234810_n

ಒಳ್ಳೆಯದು/ಕೆಟ್ಟದ್ದು ಆಗಿದ್ದು ಯಾರು ಯಾರಿಗೆ? : ಮೊಬೈಲ್ ಕಂಪನಿಗಳು ಒಟ್ಟಾಗಿ ತಮ್ಮ ದಂಧೆಯನ್ನು ಚಮಕಾಯಿಸಿಕೊಂಡಿದ್ದಂತೂ ಆಯ್ತು. ಜೇಬಿನಲ್ಲಿ ನೀಟಾಗಿ ಕೂರುವ ಈ ಟೆಕ್ನಿಕ್‌ ಬಳಸಿ ಸಂತೆಯಲ್ಲಿ ತರಕಾರಿ ಮಾರುವವಳೂ ತನ್ನ ಭಾವಿ ಭವಿಷ್ಯ ಬೆಳಗಿಸಿಕೊಳ್ಳುತ್ತಿದ್ದಾಳೆ, ಜೊತೆಗೆ ಮನೆಯನ್ನೂ ನಿಭಾಯಿಸುತ್ತಿದ್ದಾಳೆ. ಜರ್ಮನಿ ಸರ್ಕಾರ ತಾನ್ಝೇನಿಯಾದಲ್ಲಿ ಸಾಧಾರಣ ಸಣ್ಣಪುಟ್ಟ ಕೆಲಸ ಮಾಡುವ ತರಕಾರಿ ತಾಯಮ್ಮಂದಿರಿಗೂ ಹೊಸ ಟೆಕ್ನಿಕ್‌ನ್ನು ಫ್ರಿಯಾಗಿ ನೀಡುತ್ತಿದೆ! ಇದರಿಂದ ನಿಜವಾಗಿ ಯಾರಿಗೆ ಲಾಭ ಆಯಿತು? ಅಸಲಿಗೆ ಅಲ್ಲಿ ತರಕಾರಿ ಮಾರುವವರ ಜೀವನ ಮಟ್ಟ ಚೆನ್ನಾಗಿ ಇದೆಯೋ ಇಲ್ಲವೋ ಹೇಳಲಾಗದು, ಆದರೆ ನಮ್ಮಲ್ಲಿ ಮಾತ್ರ ಅಂಥವರು ಸದಾ ಟಿಬಿ ರೋಗಿಗಳಾಗಿಯೇ ಕಂಡುಬರುತ್ತಾರೆ.

05-Tanzania_2-small

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ