ಪ್ರೀತಿ ಪ್ರೇಮದ ಮುಂದೆ ಪ್ರಪಂಚದ ಹಣಕಾಸು, ಐಷಾರಾಮಗಳೆಲ್ಲ ತೃಣಸಮಾನ ಎಂದು ಎಲ್ಲರೂ ಭಾಷಣ ಕೊಚ್ಚುತ್ತಾರಷ್ಟೆ, ಆದರೆ ವಾಸ್ತವತೆಯಲ್ಲೂ ಇದು ಹಾಗೆ ಇದೆಯೇ.....?

ಪ್ರೇಮ ಎಂಬುದು ಅಮೋಘ, ಅದ್ಭುತ, ಅಮೂಲ್ಯ ಇತ್ಯಾದಿ ಅನೇಕ ವರ್ಣಮಯ ಮಾತುಗಳಿಂದ ಹೊಗಳಲ್ಪಟ್ಟಿದೆ. ಯುಗ ಯುಗಗಳಿಂದ ಹೆಣ್ಣು ತನಗೆ ಒಲಿದ ಗಂಡು ಅಷ್ಟು ಮಾತ್ರ ಪ್ರೀತಿ ಪ್ರೇಮ ತೋರಲಾರನೇ ಎಂದು ಕಾಯುತ್ತಲೇ ಇದ್ದಾಳೆ. ನಂಬಿಸಿ ಕೈ ಕೊಟ್ಟ ಹೆಣ್ಣಿಗಾಗಿ ಗಂಡೂ ಸಹ ಇನ್ನೂ ಹಂಬಲಿಸುತ್ತಾ ದೇವದಾಸನಾಗಿ ಗುಂಡಿಗೆ ಶರಣನಾಗಿದ್ದಾನೆ. ಹೆಣ್ಣುಗಂಡು ಒಲಿದು ಒಂದಾಗಲು, ಸಂಸಾರ ಎಂಬ ಚೌಕಟ್ಟನ್ನು ನಮ್ಮ ಸಮಾಜ ರೂಪಿಸಿದೆ. ಆದರೆ ಮದುವೆಯಾಗಿ 1-2 ವರ್ಷ ಕಳೆಯುವಷ್ಟರಲ್ಲಿ ಇವರಿಬ್ಬರ ಮಧ್ಯೆ ಆ ಗಾಢ ಪ್ರೀತಿ ಪ್ರೇಮ ಉಳಿಯುತ್ತದೆಯೇ? ಹಣಕಾಸಿಗಾಗಿ ದಿನನಿತ್ಯ ಜಗಳ ನಡೆಯುತ್ತಿಲ್ಲವೇ? ಹಾಗಾದರೆ ಪ್ರೇಮಕ್ಕೂ ಹಣಕ್ಕೂ ಹೋಲಿಸಿದಾಗ ಯಾವುದು ಹೆಚ್ಚು? ಗೆಲ್ಲುವುದು ಯಾವುದು?

ಪ್ರೇಮಿಸಿದರಿಗಾಗಿ ಖರ್ಚು ಮಾಡುವುದು (ಪತ್ನಿಯಾದರೆ ಕಟ್ಟಿಕೊಂಡ ಕರ್ಮ, ಪ್ರೇಯಸಿಯಾದರೆ ಖಯಾಲಿ! ಗಂಡ/ಪ್ರಿಯಕರನಿಗೂ ಇದೇ ಪಾಡು!) ತಪ್ಪೇನಲ್ಲ, ಇದು ನಾರ್ಮಲ್ ವಿಷಯ. ಇಂಥ ಸಂಗಾತಿಗಾಗಿ ತನುಮನ ಅರ್ಪಿಸಿ, ದೋಸ್ತಿ, ಸಾಂಗತ್ಯ ನಿಭಾಯಿಸಬೇಕಾಗುತ್ತದೆ.

ಈಗಂತೂ ಎಲ್ಲರೂ ಭ್ರಾತೃತ್ವದ ಬಾಂಧವ್ಯ ನಿಭಾಯಿಸುವುದು ಅಷ್ಟರಲ್ಲೇ ಇದೆ. ತಾಯಿ ತಂದೆಯರಿಂದ ದೂರ ಇರುವವರೇ ಹೆಚ್ಚು ಹಾಗಿರುವಾಗ ನಮ್ಮವರು ಅಂತ ಜೊತೆಗಿರುವವರು ಪ್ರಿಯ/ಪ್ರೇಯಸಿ ಮಾತ್ರ. (ಇದು ಪತಿ/ಪತ್ನಿಯೂ ಆಗಿರಬಹುದು!). ಈ ಸಂಬಂಧ 6 ತಿಂಗಳು, 6 ವರ್ಷಗಳದ್ದೇ ಆಗಿರಬಹುದು, ಲವ್ ಅಫೇರ್‌ ಮುಂದೆ ಮದುವೆಗೆ ದಾರಿ ಆಗಿರಬಹುದು. ಮದುವೆ ಆಗಲಿ ಬಿಡಲಿ, ಪರಸ್ಪರ ಹೊಣೆಗಾರಿಕೆ (ಆರ್ಥಿಕ/ಸಾಮಾಜಿಕ) ಅಂತೂ ಇದ್ದೇ ಇರುತ್ತದೆ. ಪ್ರೇಮಿಗಾಗಿ ಮಾಡಿದ ಖರ್ಚು ಇಲ್ಲಿ ಬಲು ಮಹತ್ತರವಾದುದು.

ರೋಹಿಣಿ ಧಾರಾಳವಾಗಿ ಕಾಸ್ಮೆಟಿಕ್ಸ್ ಗಾಗಿ ಖರ್ಚು ಮಾಡಿ, ಅಂಗಡಿಯವನಿಂದ ಬಿಲ್ ಕೇಳಿದಳು. ಅದು 2 ಸಾವಿರ ದಾಟಿತ್ತು. ತಕ್ಷಣ ಅವಳು ಬಾಯ್‌ ಫ್ರೆಂಡ್‌ ಮೋಹನ್‌ ಕಡೆ ನೋಡಿದಳು. ಇವಳಿಗಾಗಿ ಅಂಗಡಿ ಹೊರಗೆ ಕಾದಿದ್ದ ಮೋಹನ್‌, ಅಷ್ಟರಲ್ಲಿ ಅಲ್ಲಿಂದ ಹೊರಡುವ ಸೂಚನೆ ನೀಡಿದ. ಆದರೂ ರೋಹಿಣಿ ತನ್ನ ಪರ್ಸ್‌ ಬಿಚ್ಚಲಿಲ್ಲ. ಮೋಹನ್‌ ಹೊರಟೇಬಿಟ್ಟನಲ್ಲ ಎಂದು ಅವಳ ಮೂಡ್‌ ಕೆಟ್ಟುಹೋಯಿತು.

ಆದರೂ ಅವಳು ಹೊರಬಂದು ``ಮೋನಿ, ಈ ಬಿಲ್ ‌ತಗೋ!'' ಎಂದಳು. ವಿಧಿಯಿಲ್ಲದೆ ಅವನು ಒಳಬಂದು, ``ಓ ನನಗೆ ಕೊಡಲು ಬಂದ್ಯಾ....? ಸರಿ ಪೇ ಮಾಡ್ತೀನಿ ಬಿಡು,'' ಎನ್ನುತ್ತಾ ಅವನೇ ಪೇ ಮಾಡಿದ. ಅಂತೂ ಇಬ್ಬರೂ ಅಲ್ಲಿಂದ ಹೊರಗೆ ಹೊರಟಾಗ ಇಬ್ಬರ ಮೂಡ್‌ ಆಫ್‌ ಆಗಿತ್ತು. ಕಾಸ್ಮೆಟಿಕ್ಸ್ ನಿನಗೆ, ಅದರ ಬಿಲ್ ‌ಕಟ್ಟೋದು ನಾನಾ ಎಂಬ ಆಕ್ಷೇಪಣೆ ಅವನ ಕಣ್ಣಲ್ಲಿ ಸ್ಪಷ್ಟ ಕಾಣುತ್ತಿತ್ತು.

ಕೇವಲ ಯೂಸ್& ಥ್ರೋ ಆಗಬಾರದು

ಈ ಮೋನಿ ತನಗೆ ಕೇಳಿಸುವಂತೆ ಹಾಗೆ ಗೊಣಗಿದ್ದು ಯಾಕೆ ಅಂತ ರೋಹಿಣಿಗೆ ಕುಟುಕಿತು. ತಾನು ಸಾಮಗ್ರಿ ಕೊಂಡ ನಂತರ, ಜೊತೆಗೆ ಬಾಯ್‌ ಫ್ರೆಂಡ್‌ ಇದ್ದಾನೆಂದ ಮೇಲೆ, ಅವನು ತಾನೇ ಅದನ್ನು ಪೇ ಮಾಡಬೇಕು? ಅತ್ತ ಮೋಹನ್‌ ತನ್ನದೇ ಯೋಚನೆಯಲ್ಲಿ ಮುಳುಗಿದ್ದ. ಕಾಸ್ಮೆಟಿಕ್ಸ್ ಎಂಬುದು ಅವಳ ಪರ್ಸನ್‌ ವಸ್ತು. ಅದಕ್ಕಾಗಿ ತನ್ನದೇ ಹಣ ಕೊಡಬೇಕಲ್ಲವೇ? ಇದನ್ನೆಲ್ಲ ಭರಿಸಲು ತಾನೇನು ಅವಳ ಗಂಡನೇ, ಪ್ರೇಮಿ ತಾನೇ? ಇಂಥ ಭಾರಿ ಖರ್ಚನ್ನು ತನಗೇಕೆ ವಹಿಸಬೇಕು? ಮಧ್ಯಮ ವರ್ಗದ ಪ್ರೇಮಿಗಳಿಗೆ ಈ ಪಾಡು ಎಂದೂ ಮುಗಿಯದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ