ಬದುಕಲು ಹಣ ಅನಿವಾರ್ಯ! ಆದರೆ ಇದು ಸಂಬಂಧಗಳ ಮಧುರ ಬಾಂಧ್ಯ ನಿರ್ಲಕ್ಷಿಸುವಂತೆ ಆಗಬಾರದು…….!

ಒಂದು ಹಳೆಯ ಲೋಕೋಕ್ತಿ, `ಬಡತನ ಬಾಗಿಲಲ್ಲಿ ಇಣುಕಿದರೆ, ಪ್ರೀತಿ ವಾತ್ಸಲ್ಯ ಕಿಟಕಿಯಲ್ಲಿ ಹಾರಿಹೋಯ್ತಂತೆ!’ ಇದು ನೂರಕ್ಕೆ ನೂರರಷ್ಟು ಸತ್ಯ. ಸಂಬಂಧದಲ್ಲಿ ಸದಾ ಸಮರ್ಪಣೆ, ಶ್ರದ್ಧೆ, ಪ್ರಾಮಾಣಿಕ ಪ್ರೀತಿ ಗುಣಾಂಶ ಇರಬೇಕು. ಆದರೆ ಹಣದ ಅಭಾವದಲ್ಲಿ ಈ ಪ್ರೀತಿಗೀತಿ ಮಾಯವಾಗುತ್ತದೆ. ಹಿಂದಿನ ಕಾಲದಲ್ಲಿ, ಸಂಬಂಧ ಹಾಗೂ ಅದರ ಸಂವೇದನಾಶೀಲತೆ ಅತಿ ಮಹತ್ವಪೂರ್ಣ ಎಂದು ಭಾವಿಸಲಾಗುತ್ತಿತ್ತು.

ಹೊಸ ಸಂಬಂಧಗಳಾಗುವುದೇ ಹಣದ ತಕ್ಕಡಿಯ ಆಧಾರದಿಂದ. ಹೊಸ ಸಂಬಂಧ ಕುದುರಿಸುವ ಮೊದಲು ಪರಸ್ಪರ ಸ್ಟೇಟಸ್ ಸಿಂಬಲ್ ಅಳೆಯಲಾಗುತ್ತದೆ. ಇದು ಎಲ್ಲಿಯವರೆಗೆ ಅಂದ್ರೆ, ತಮ್ಮ ನೆಂಟರಲ್ಲಿಯೂ ಸಹ, ಭವಿಷ್ಯದಲ್ಲಿ ಅವರೊಂದಿಗೆ ಸಂಬಂಧ ಉಳಿಸಿಕೊಳ್ಳಬೇಕೋ ಬೇಡವೋ ಎಂಬುದಕ್ಕಾಗಿ ಇಬ್ಬರ ಆರ್ಥಿಕ ಸ್ಥಿತಿಯನ್ನು ತೂಗಿ ನೋಡಲಾಗುತ್ತದೆ.

ನಾವು ಸುಖವಾಗಿ ಬದುಕಲು ಮತ್ತು ಅನುಕೂಲಕ್ಕಾಗಿ ವಸ್ತುಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳಲು ಹಣ ಅತಿ ಅಗತ್ಯ! ಎಲ್ಲಾ ವಸ್ತುಗಳ ಬೆಲೆಯನ್ನೂ ಈ ಹಣದಿಂದಲೇ ಅಳೆಯಲಾಗುತ್ತದೆ. ಕಾಲಕ್ಕೆ ತಕ್ಕಂತೆ ವ್ಯಕ್ತಿಯ ಯೋಗ್ಯತೆಯನ್ನು ಅವನು ಹೊಂದಿರುವ ಹಣದಿಂದಲೇ ಅಳೆಯಲಾಗುತ್ತದೆ. ಸಂಬಂಧಗಳ ಸಮೀಕರಣ ಎಷ್ಟು ಪ್ರಬಲವಾಗಿದೆ ಎಂಬುದನ್ನು ಇದೇ ಸೂಚಿಸುತ್ತದೆ.

ಜೀವನ ಸಾಗಿಸಲು ನಮಗೆ ಆಹಾರ, ಬಟ್ಟೆ, ಮನೆ ಮಾತ್ರ ಇದ್ದರೆ ಸಾಲದು. ನಮಗೆ ಸಂಬಂಧಿಸಿದ ನೆಂಟರಿಷ್ಟರ ಆತ್ಮೀಯ ಒಡನಾಟ ಬೇಕು ಎಂದು ಗೊತ್ತಿದ್ದರೂ, ಜನಕ್ಕೆ `ದುಡ್ಡೇ ದೊಡ್ಡಪ್ಪ’ ಎನಿಸುತ್ತದೆ. ಉತ್ತಮ ಸಂಬಂಧಗಳು ನಮಗೆ ಕೇವಲ ಆಂತರಿಕ ಪ್ರೀತಿಯ ಅನುಭವ ನೀಡುವುದಲ್ಲದೆ, ಕಾಲಕಾಲಕ್ಕೆ ನಮಗೆ ನೆರವು ನೀಡುತ್ತದೆ. ಸಂಬಂಧಗಳಲ್ಲೂ ಸದಾ ಲೆಕ್ಕಾಚಾರ ಇದ್ದೇ ಇರುತ್ತದೆ.

ಹೀಗಾಗಿ ಜನ ಮೊದಲೇ ಪರಸ್ಪರ ಕೊಡುವ ತೆಗೆದುಕೊಳ್ಳುವ ಲೆಕ್ಕಾಚಾರದಲ್ಲಿ ಗಟ್ಟಿಗರಾಗಿರುತ್ತಾರೆ. ಅದಾದ ನಂತರವೇ ಯಾವ ಸಂಬಂಧವನ್ನು ಯಾವ ರೀತಿ ತೂಗಬೇಕೆಂದು ನಿರ್ಧರಿಸಲಾಗುತ್ತದೆ. ಈ ಸಂಬಂಧ ಪರಸ್ಪರರ ಎಷ್ಟೋ ವಿಷಯಗಳನ್ನು ಪ್ರಭಾವಿತಗೊಳಿಸುತ್ತದೆ. ಇದರಲ್ಲಿ ದುಡ್ಡುಕಾಸಿನ ಸ್ಥಿತಿ ಅತಿ ಮುಖ್ಯ ಹಾಗೂ ಪ್ರಾಥಮಿಕ ಪ್ರಾಶಸ್ತ್ಯ ಗಳಿಸುತ್ತದೆ.

ಡಿಪೆಂಡೆಂಟ್ರಿಲೇಶನ್ಶಿಪ್

ಈ ಕುರಿತಾಗಿ ಬೆಂಗಳೂರಿನ ವರ್ಷಾ ಕುಮಾರಿ ಹೇಳುತ್ತಾರೆ, ಪ್ರತಿ ಸಂಬಂಧವನ್ನೂ ಉತ್ತಮಗೊಳಿಸಲು ಹಣ ಪ್ರಧಾನ ಪಾತ್ರ ವಹಿಸುತ್ತದೆ. ಸಂಬಂಧಗಳನ್ನು ಉಳಿಸಿ ಬೆಳೆಸಿಕೊಳ್ಳಲು ಅದರಲ್ಲಿ ಪರಸ್ಪರ ಪ್ರೀತಿ, ಶ್ರದ್ಧೆ, ಪರ್ಸನಾಲಿಟಿಯ ಅಂಶಗಳು ಒಳಗೊಂಡಿರುತ್ತವೆ. ಆದರೆ ಹಣದ ಆಧಾರವಿಲ್ಲದೆ ಇದ್ಯಾವುದೂ ಹೆಚ್ಚು ದಿನ ಉಳಿಯಲಾರದು. ಪ್ರೀತಿವಾತ್ಸಲ್ಯ ವ್ಯಕ್ತಪಡಿಸಲು, ಸುದೀರ್ಘ ಕಾಲ ಉಳಿಸಿಕೊಳ್ಳಲು ಹಣದ ಅಗತ್ಯವಂತೂ ಬೇಕೇಬೇಕು.

ಈ ಕುರಿತಾಗಿ ಫ್ಯಾಷನ್‌ ಡಿಸೈನರ್‌ ಪೂರ್ಣಿಮಾ ಹೇಳುತ್ತಾರೆ, ಎಲ್ಲರ ಜೀವನದಲ್ಲೂ ಅತ್ಯಂತ ನಿಕಟ ಸಂಬಂಧ ಅಂದ್ರೆ ಪತಿಪತ್ನಿಯರದ್ದು. ಮದುವೆ ಆದ ನಂತರ ಕೆಲವು ಕಾಲ ನಾನು ಕೆಲಸ ಮಾಡುತ್ತಿರಲಿಲ್ಲ. 3 ವರ್ಷಗಳ ನಂತರ ನಾನು ಮತ್ತೆ ಹೊರಗಿನ ಕೆಲಸ ಗಮನಿಸಲು ಆರಂಭಿಸಿದಾಗ, ನನ್ನ ಪತಿ ನನ್ನ ವರ್ತನೆಯನ್ನು ಬೇರೆ ದೃಷ್ಟಿಯಲ್ಲಿ ನೋಡತೊಡಗಿದರು. ಬಿಡು, ನೀನು ಈಗ ಸಂಪಾದಿಸುತ್ತಿದ್ದೀಯಲ್ಲ….. ಎಂದು ಎಲ್ಲಾ ವಿಷಯಕ್ಕೂ ವ್ಯಂಗ್ಯವಾಗಿ ಆಡಿಕೊಳ್ಳದಿದ್ದರೆ ಸಮಾಧಾನ ಸಿಗುತ್ತಿರಲಿಲ್ಲ. ಹಿಂದೆಲ್ಲ ಆಗಿದ್ದರೆ ಆ ಮಾತು ಬೇರೆ ತರಹ ಇರುತ್ತಿತ್ತು.

ಬೇರೆ ಯಾರೋ ಇಂಥ ಮಾತುಗಳನ್ನು ಹೇಳಿದ್ದರೆ, ಅವರು ಹೊರಗಿನವರು ತಾನೇ ಎಂದು ನಿರ್ಲಕ್ಷಿಸಬಹುದಿತ್ತು, ಆದರೆ ಪತಿ ಹೀಗೆ ಹೇಳಿದರೆ ದುಃಖ ಆಗದೆ ಇರುತ್ತದೆಯೇ? ಹಣ ಇಬ್ಬರ ನಡುವೆ ಎಂದೂ ಅಡ್ಡಗೋಡೆ ಆಗಬಾರದು ಎನಿಸಿತು.

ಹಣಕಾಸಿನ ಮಾತುಗಳ ಪ್ರಭಾಕಾಲ ಸರಿದಂತೆ ಗ್ರಾಹಕರ ಖರೀದಾರಿಯ ಕಾರಣ, ಹಣದ ಮಹತ್ವ ಹೆಚ್ಚುತ್ತಾ ಹೋಗುತ್ತದೆ. ಆಗ ಅದರ ಮುಂದೆ ಇತರ ಎಲ್ಲಾ ಮೌಲ್ಯಗಳೂ ಗೌಣ! ಆಧುನಿಕ ಸಮಾಜದ ಎಲ್ಲಾ ಕಣ್ಣುಕುಕ್ಕುವ ಅನುಕೂಲಗಳೂ ಈ ಹಣಬಲದ ಮೇಲೇ ನಿಂತಿದೆ. ನಮ್ಮ ನೆಂಟರ ಸರ್ಕಲ್ ನಲ್ಲಿ ನಮಗೆ ಸಿಗಬಹುದಾದ ಮರ್ಯಾದೆ ಸಹ ಹಣದಿಂದಲೇ ಅಳೆಯಲಾಗುತ್ತದೆ. ಅದೇ ತರಹ ಜಾಹೀರಾತುಗಳೂ ಜನರನ್ನು ಬಹಳ ಪ್ರಚೋದಿಸುತ್ತವೆ. ಕೆಲವು ವರ್ಷಗಳ ಹಿಂದೆ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಇಂಥ ಒಂದು ಜಾಹೀರಾತಿನಲ್ಲಿ, ಒಂದು ಚಿಕ್ಕ ಮಗು ಮನೆಯಿಂದ ಓಡಿಹೋಗಿ ರೈಲ್ವೇ ಸ್ಟೇಷನ್‌ ತಲುಪುತ್ತದೆ. ಅಲ್ಲಿನ ಬಿಸಿ ಬಿಸಿ ಜಿಲೇಬಿ ಗಮನಿಸಿ, ಮನೆಯಲ್ಲಿದ್ದರೆ ದಿನಾ ಇಂಥದ್ದು ಸಿಗುತ್ತದೆ, ಎಂದು ವಾಪಸ್‌ ಆಗುತ್ತದೆ.

ಇಲ್ಲಿ ಗಮನಿಸಬೇಕಾದುದು ಅಂದ್ರೆ, ತಮಗೆ ಸಂಬಂಧಿಸಿದವರಿಗಾಗಿ ಮಗು ಮನೆಗೆ ಮರಳಲಿಲ್ಲ, ಅತ್ಯಧಿಕ ಸೌಲಭ್ಯಗಳು, ಹಣದ ಹೆಗ್ಗಳಿಕೆಗಾಗಿ ಅದು ಮನೆಗೆ ಮರಳಿತು ಅಂತ. ಹೀಗೆ ಆ ಮುಗ್ಧ ಮನಸ್ಸಿನಲ್ಲಿ ಚಿಕ್ಕಂದಿನಿಂದಲೇ ಹಣವೇ ಮುಖ್ಯ ಎಂದು ಬಿತ್ತಲಾಗಿದೆ. ಹಾಗಾಗಿಯೇ ಆ ಸಂಬಂಧ ಉಳಿಸಿಕೊಳ್ಳಲು ಮನೆಗೆ ಮರಳುವುದು ಅದಕ್ಕೆ ಅನಿವಾರ್ಯವಾಗುತ್ತದೆ. ಇದೀಗ ಜಿಲೇಬಿ ಬದಲು ಪಿಜ್ಜಾ, ಬರ್ಗರ್‌, ಐಫೋನ್‌ ಇತ್ಯಾದಿಗಳು ಪ್ರಾಮುಖ್ಯತೆ ಗಳಿಸುತ್ತಿವೆ.

ಪತ್ನಿ ತನ್ನ ಪತಿಗೆ, ಹಿಂದಿನಂತೆ ನೀವು ನನ್ನನ್ನು ಪ್ರೀತಿಸುತ್ತಿಲ್ಲ, ಎಂದು ಆರೋಪಿಸುವುದು ಎಲ್ಲಾ ಕಡೆ ಮಾಮೂಲಿ. ಹೀಗಾಗಿಯೇ ಬಹಳ ದಿನಗಳಿಂದ ತನಗೆ ದುಬಾರಿ ಗಿಫ್ಟ್ ಕೊಟ್ಟಿಲ್ಲ ಅಂತಾಳೆ. ಇದರರ್ಥ, ಪತಿ ಪತ್ನಿಯರ ಪ್ರೇಮದ ನಡುವೆ ಭೌತಿಕ ವಸ್ತುಗಳಿಗೆ ಅತಿ ಪ್ರಾಮುಖ್ಯತೆ ಇದೆ. ಆದರೆ ಈ ಎಲ್ಲಾ ಸ್ಥಿತಿಗಳಲ್ಲಿ ಸಂಬಂಧಗಳ ನಡುವೆ ಘರ್ಷಣೆ ಸಾಮಾನ್ಯ, ಹಣವೇ ಅದಕ್ಕೆ ಮೂಲ. ಹಣದ ಹೆಚ್ಚಳ ಅಥವಾ ಅಭಾವದಿಂದಾಗಿ ಸಂಬಂಧ ಮುರಿಯುತ್ತಾ ಹೋಗುತ್ತದೆ. ಪರಿಣಾಮವಾಗಿ ಒಬ್ಬಂಟಿ ಉಳಿಯುವವರ ಸಂಖ್ಯೆ ಹೆಚ್ಚಬಹುದು.

ಭಾವನಾತ್ಮಕ ಸ್ವರೂಪ

ಶಿಕ್ಷಕಿ ರಶ್ಮಿ ಭಟ್‌ ಹೇಳುತ್ತಾರೆ, ಸಂಬಂಧಗಳ ನಡುವೆ ಇಂದು ಹಣ ಅತಿ ಪ್ರಾಬಲ್ಯ ಗಳಿಸುತ್ತಿದೆ ಎಂಬುದೇನೋ ನಿಜ, ಆದರೆ ವ್ಯಕ್ತಿಗತವಾಗಿ ನಮ್ಮ ಸಂಬಂಧಗಳ ನಡುವೆ ಹಣ ಅಡ್ಡಿಯಾಗಲು ನಾನು ಬಿಡುವುದಿಲ್ಲ. ನನ್ನ ಈ ಸ್ವಭಾವವನ್ನು ಅತಿ ಭಾವುಕತೆ ಎಂದು ಟೀಕಿಸುವವರೂ ಇದ್ದಾರೆ. ಆದರೆ ಸಂಬಂಧಗಳ ಮಧ್ಯೆ ಎಲ್ಲದಕ್ಕೂ ಹಣದ ಲೆಕ್ಕಾಚಾರ ಅಡ್ಡಿ ಬಂದರೆ, ಅದು ತಲೆ ಮೇಲೆ ಭಾರವಾಗಿ ಕಾಡುತ್ತದೆ.

ಹೀಗಾಗಿ ನನ್ನ ಪ್ರಯತ್ನ ಎಂದರೆ, ಹಣ ಬಲಕ್ಕಿಂತ ಜನಬಲವೇ ಮುಖ್ಯ! ಜನರ ಆತ್ಮೀಯತೆ ನಡುವೆ ಈ ಹಣಕ್ಕೆ ಪ್ರಾಶಸ್ತ್ಯ ಕೊಡಬೇಡಿ. ಎಷ್ಟೋ ಸಲ ಈ ಕಾರಣ ನನಗೆ ಹಣಕಾಸಿನ ಹಾನಿ ಆಗಿದ್ದಿದೆ, ಆದರೆ ನಮ್ಮ ನೆಂಟರಿಷ್ಟರ ನಡುವೆ ಸ್ನೇಹ ಸಂಬಂಧ ಉಳಿಯಲು ಹಣ ಮುಖ್ಯ ಆಗಬಾರದು. ನಾನು ಪ್ರಾಕ್ಟಿಕ್‌ ಅಲ್ಲ ಅಥವಾ ಓವರ್‌ ಎಮೋಷನ್‌ ಎಂದು ಹೇಳುವವರು ಹೇಳಲಿ, ಹಣಕ್ಕಿಂತ ಜನ ಮುಖ್ಯ ಅಂತ ನೀವು ಒಪ್ಪುತ್ತೀರಲ್ಲವೇ…..?

ಜಿ. ಕಾವ್ಯಾ

 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ