ಹೊಸ ವರ್ಷದಲ್ಲಿ ನಿಮ್ಮ ಅಡುಗೆಮನೆಯಿಂದ ಇನ್ನಷ್ಟು ಮತ್ತಷ್ಟು ಸ್ಮಾರ್ಟ್ಟೇಸ್ಟಿ ವ್ಯಂಜನಗಳು ತಯಾರಾಗಿ ಬರಬೇಕೆಂದರೆ ಉಪಾಯ ಅನುಸರಿಸಿ......!

ಇತ್ತೀಚೆಗೆ ಹೆಚ್ಚಿನ ಮನೆಗಳಲ್ಲಿ ಎಲ್ಲರೂ ಉದ್ಯೋಗಸ್ಥ ವನಿತೆಯರೇ ಆಗಿರುತ್ತಾರೆ. ಹೀಗಾಗಿ ಅಚ್ಚುಕಟ್ಟಾದ ಅಡುಗೆಗಾಗಿ ಅವರ ಬಳಿ ಸದಾ ಸಮಯದ ಆಭಾವ ಇರುತ್ತದೆ. ಅಷ್ಟೇ ಸಮಯದಲ್ಲಿ ಮನೆಯ ಕ್ಲೀನಿಂಗ್‌, ಪಾತ್ರೆ, ಬಟ್ಟೆಗಳ ಕೆಲಸ ಆಗಬೇಕು. ಇದರೊಂದಿಗೆ ಅವರು ಸಕಾಲಕ್ಕೆ ಕಾಫಿ, ತಿಂಡಿ, ಅಡುಗೆ ಮಾಡುತ್ತಲೇ ಇರಬೇಕಾಗುತ್ತದೆ. ಹೀಗಾಗಿ ಇವರ ಸುಸ್ತು, ಟೆನ್ಶನ್ ಎಂದೂ ತಪ್ಪದು.

ನೀವು ಇಂಥದ್ದೇ ಟೆನ್ಶನ್‌ ಎದುರಿಸುತ್ತಿದ್ದೀರಾ? ಹಾಗಾದರೆ ಕಿಚನ್‌ ಗೆ ಅಗತ್ಯವಿರುವ ಈ ಉಪಾಯಗಳನ್ನು ಅನುಸರಿಸಿ ಈ ಹಿಂಸೆಯಿಂದ ಹೊರಬನ್ನಿ. ಹೀಗೆ ನಿಮ್ಮ ಸಮಯದ ಸದುಪಯೋಗ ಪಡೆದು, ನಿಮ್ಮ ಹವ್ಯಾಸಗಳನ್ನು ಅಭಿವೃದ್ಧಿ ಪಡಿಸಿಕೊಳ್ಳಿ. ಇದಕ್ಕಾಗಿ ಎಂಥ ಉಪಾಯಗಳನ್ನು ಅನುಸರಿಸಬೇಕು ಎಂದು ಗಮನಿಸೋಣವೇ? :

ನಿಮ್ಮ ಗ್ಯಾಸ್‌ ಬರ್ನರ್‌ ನ್ನು ಆಗಾಗ ಕ್ಲೀನ್‌ ಮಾಡಿಸಿ. ಇದರ ಸಂದಿನಿಂದ ಸರಾಗವಾಗಿ ಗ್ಯಾಸ್‌ ಹರಿಯದಿದ್ದರೆ ನಿಮ್ಮ ಅಡುಗೆ ಖಂಡಿತಾ ಲೇಟ್‌ ಆಗುತ್ತದೆ.

ಯಾವುದೇ ವ್ಯಂಜನ ಬಿಸಿ ಮಾಡುವಾಗಲೂ, ಅಗಲ ಪಾತ್ರೆ ಅಥವಾ ಬಾಣಲೆ ಬಳಸಿಕೊಳ್ಳಿ. ಇದರಿಂದ ಎಣ್ಣೆ ಬೇಗ ಬಿಸಿ ಆಗುತ್ತದೆ.

ಹೆಚ್ಚು ರೇಜಿಗೆ ಇಲ್ಲದ, ಕಡಿಮೆ ಸಮಯದಲ್ಲಿ ಸುಲಭವಾಗಿ ತಯಾರಿಸಬಹುದಾದಂಥ ವ್ಯಂಜನ ಆರಿಸಿ. ತರಕಾರಿಯನ್ನು ಹಿಂದಿನ ರಾತ್ರಿಯೇ ಹೆಚ್ಚಿಡಿ. ಕಡಲೆಕಾಳು ಮುಂತಾದುವನ್ನು ಹಿಂದಿನ ಸಂಜೆಯೇ (ಆಫೀಸಿನಿಂದ ಬಂದ ತಕ್ಷಣ) ನೆನೆಹಾಕಿಡಿ. ಆಗ ಬೆಳಗಿನ ಅಡಾವುಡಿ ಎಷ್ಟೋ ತಪ್ಪುತ್ತದೆ. ಟೊಮೇಟೊ, ಶುಂಠಿ, ಬೆಳ್ಳುಳ್ಳಿ ಇತ್ಯಾದಿಗಳ ಪೇಸ್ಟ್ ಮೊದಲೇ ಮಾಡಿಟ್ಟುಕೊಳ್ಳಿ. ಇಂಥವನ್ನು ಫ್ರಿಜ್‌ ನಲ್ಲಿರಿಸಿಕೊಂಡು 2-3 ದಿನ ಆರಾಮವಾಗಿ ನಿಭಾಯಿಸಬಹುದು.

ಬೆಳಗ್ಗೆ ತಿಂಡಿಗೆ ಆಲೂ ಪರೋಟ ಆಗಬೇಕಿದ್ದರೆ, ರಾತ್ರಿಯೇ ಆಲೂ ಬೇಯಿಸಿ, ಮಸೆದಿಡಿ. ಗೋಧಿಹಿಟ್ಟನ್ನು ನಾದಿಕೊಂಡು ನೆನೆಯಲು ಬಿಡಿ. ಬೆಳಗ್ಗೆ ಸುಲಭವಾಗಿ ಆಲೂ ಪರೋಟ ತಯಾರಿಸಿ, ಅತ್ತ ಕುಕ್ಕರ್‌ ನಲ್ಲಿ ಮಧ್ಯಾಹ್ನದ ಅಡುಗೆಗೆ ಸಿಂಗಲ್ ಪಾಟ್‌ ಡಿಶ್‌ ಮಾಡಿಕೊಳ್ಳಬಹುದು.

ರಾಜ್ಮಾ ಗ್ರೇವಿ, ಛೋಲೆ, ಪೂರಿಗೆ ಬೇಕಾಗುವ ಸಾಗು ಇತ್ಯಾದಿಗಳಿದ್ದರೆ, ಇದಕ್ಕೆ ಬೇಕಾದ ಎಲ್ಲಾ ಪೂರ್ವಭಾವಿ ತಯಾರಿಗಳನ್ನೂ ಹಿಂದಿನ ದಿನವೇ ಅಗತ್ಯವಾಗಿ ಮಾಡಿಡಿ.

ಬೆಳ್ಳುಳ್ಳಿ ಬಿಡಿಸಲು ಹೆಚ್ಚಿನ ಸಮಯ ಬೇಕು. ಆದ್ದರಿಂದ ಇದನ್ನು ಲೈಟಾಗಿ ತವಾ ಮೇಲೆ ಬಾಡಿಸಿ ಅಥವಾ ಬಿಸಿ ನೀರಲ್ಲಿ 2 ನಿಮಿಷ ನೆನೆಸಿ, ನಂತರ ಸುಲಿಯಿರಿ. ಸುಲಭವಾಗಿ ಕೆಲಸ ಆಗುತ್ತದೆ.

ಅದೇ ತರಹ ಪಾಲಕ್‌ ಪನೀರ್‌ ಮಾಡಬೇಕಿದ್ದರೆ, ರಾತ್ರಿಯೇ ಪಾಲಕ್‌ ಸೊಪ್ಪು ಹೆಚ್ಚಿ, ಬಾಡಿಸಿ, ರುಬ್ಬಿಡಿ.

ನಿಮ್ಮ ಮನೆಯವರೆಲ್ಲ ಕಾಫಿ ಪ್ರಿಯರೇ? ಹಾಗಿದ್ದರೆ ಅಗತ್ಯವಾಗಿ 2 ಫಿಲ್ಟರ್‌ ಇರಿಸಿಕೊಂಡು, ಒಂದರ ಡಿಕಾಕ್ಷನ್‌ ಮುಗಿಯುವ ಮೊದಲೇ ಮತ್ತೊಂದರಲ್ಲಿ ಹಾಕಿಟ್ಟುಬಿಡಿ. ಆಗ ಹೊಸದಾಗಿ ಅದನ್ನು ಹಾಕುವ, ಇಳಿಸುವ ರೇಜಿಗೆ ಇರುವುದಿಲ್ಲ. ಇದನ್ನು ಒಂದು ಪಕ್ಷ ಮರೆತರೆ, ಸದಾ ಇನ್‌ ಸ್ಟೆಂಟ್‌ ಕಾಫಿ ಪೌಡರ್‌ ಪ್ಯಾಕೆಟ್ಸ್ ರೆಡಿ ಇರಲಿ. ಮಧ್ಯದಲ್ಲಿ ಯಾರಾದರೂ ಕೇಳಿದಾಗ, ಥಟ್‌ ಅಂತ ಬಿಸಿ ಹಾಲಿಗೆ ಇದನ್ನು ಹಾಕಿ, ಸಕ್ಕರೆ ಕದಡಿ, ಸವಿಯಲು ಕೊಡಿ. ನಿಮ್ಮ ಟೈಂ ಎಷ್ಟೋ ಉಳಿತಾಯ ಆಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ