35 ವರ್ಷದ ಸುಜಾತಾ ಯಾವಾಗಲೂ ಬೆನ್ನುನೋವಿನಿಂದ ತೊಂದರೆಪಡುತ್ತಿರುತ್ತಾಳೆ. ವೈದ್ಯರನ್ನು ಭೇಟಿಯಾಗಿ ಮಾತನಾಡಿದಾಗ ತಿಳಿದುಬಂದ ಸಂಗತಿಯೇನೆಂದರೆ, ಅವರ ಬೆನ್ನುನೋವಿಗೆ ಅವರು ಉಪಯೋಗಿಸುವ ಹಾಸಿಗೆಯೇ ಕಾರಣ ಎಂದು ಹೇಳಿದರು.

ದಿನವಿಡೀ ಆಫೀಸಿನಲ್ಲಿ ಕೆಲಸ ಮಾಡಿ ಬಂದಾಗ, ರಾತ್ರಿ ಒಳ್ಳೆಯ ನಿದ್ರೆ ಅತ್ಯವಶ್ಯಕ. ಆದರೆ ಇದಕ್ಕಾಗಿ ಸರಿಯಾದ ಹಾಸಿಗೆ ಇರುವುದು ಕೂಡ ಅಷ್ಟೇ ಅವಶ್ಯಕ. ಅದು ನಿಮ್ಮ ದೇಹಕ್ಕೆ ಸಾಕಷ್ಟು ವಿಶ್ರಾಂತಿ ದೊರಕಿಸಿಕೊಡಬೇಕು.

ಅಂದಹಾಗೆ, ಸರಿಯಾದ ಹಾಸಿಗೆಯ ಮೇಲೆ ಮಲಗಿದಾಗ ನಿಮಗೆ ಗಾಢ ನಿದ್ರೆ ಬರುತ್ತದೆ. ಬೆನ್ನುಮೂಳೆಗೆ ಯಾವುದೇ ತೆರನಾದ ಒತ್ತಡ ಉಂಟಾಗುವುದಿಲ್ಲ. ಮುಂಜಾನೆ ಎದ್ದಾಗ ನಿಮಗೆ ತಾಜಾತನ ಮತ್ತು ಸ್ಛೂರ್ತಿಯ ಅನುಭೂತಿ ಉಂಟಾಗುತ್ತದೆ. ಹಾಸಿಗೆ ನಿಮಗೆ ಆಕ್ಯುಪಂಕ್ಚರ್‌ ಮತ್ತು ಸ್ಪಾ ರೀತಿಯಲ್ಲಿ ಕೆಲಸ ಮಾಡುತ್ತದೆ. ಎಷ್ಟೋ ಜನರಿಗೆ ಹಾಸಿಗೆ ಬದಲಿಸಿದುದರಿಂದಲೇ ಬೆನ್ನುನೋವಿನಿಂದ ಪರಿಹಾರ ದೊರಕಿತು.

 

ಈ ಕುರಿತಂತೆ ಬೆಂಗಳೂರಿನ ರಾಯಲ್ ಮಾರ್ಕೆಟಿಂಗ್‌ನ ಸುಹಾಸ್‌ ಹೀಗೆ ಹೇಳುತ್ತಾರೆ, “ನಮ್ಮ ಕುಟುಂಬದ ವ್ಯಾಪಾರ ವಹಿವಾಟು ಇದೇ ಆಗಿರುವ ಕಾರಣದಿಂದ ನಾನು ಮ್ಯಾಟ್ರಿಸ್‌ ಮಳಿಗೆ ತೆರೆದೆ. ಈ ಕುರಿತಂತೆ ನಾನು ಸೂಕ್ತ ತರಬೇತಿ ಕೂಡ ಪಡೆದಿದ್ದೇವೆ. ಏಕೆಂದರೆ ಗ್ರಾಹಕರಿಗೆ ಸೂಕ್ತವಾದ ಮ್ಯಾಟ್ರಿಸ್‌ ಕೊಡಲು ಸಾಧ್ಯವಾಗಬೇಕು.”

ಇತ್ತೀಚೆಗೆ ಹತ್ತಿಯ ಮ್ಯಾಟ್ರಿಸ್‌ಗಳು ಲಭಿಸುವುದಿಲ್ಲ. ಏಕೆಂದರೆ ಉತ್ತಮ ಗುಣಮಟ್ಟದ ಹತ್ತಿಯ ಅಭಾವವಿದೆ. ಆದರೆ ಈ ಮ್ಯಾಟ್ರಿಸ್‌ಗಳು ನಿಮ್ಮ ಬಜೆಟ್‌ಗನುಗುಣವಾಗಿ ದೊರೆಯುತ್ತವೆ. ವಿಶ್ರಾಂತಿ ಮತ್ತು ಬಜೆಟ್‌ಗೆ ತಕ್ಕಂತೆ ಈ ಮ್ಯಾಟ್ರಿಸ್‌ಗಳು ತುಂಬಾ ಮಾರಾಟವಾಗುತ್ತವೆ.

ಸುಹಾಸ್‌ ಅವರ ಪ್ರಕಾರ, ಮ್ಯಾಟ್ರಿಸ್‌ಗಳು ಹಲವು ಬಗೆಯಾಗಿವೆ :

ರೀಗಲ್ ಮ್ಯಾಟ್ರಿಸ್‌ನಲ್ಲಿ ಮೊದಲು ತೆಂಗಿನನಾರು, ನಂತರ ಫೋಮ್, ನಂತರ ಪುನಃ ತೆಂಗಿನ ನಾರಿನ ಪದರ ಇರುತ್ತದೆ. ಇದರ ಬೆಲೆ ರೂ. 8,800 ರೂ. ಮೇಲ್ಪಟ್ಟು.

ಬಾಂಡೆಡ್‌ ಫೋಮ್ ನಿಂದ ತಯಾರಿಸಲಾದ ಅಲ್ಟಿ ಮಾ ಮ್ಯಾಟ್ರಿಸ್‌ನಲ್ಲಿ 3 ಅಂಗುಲದ ತೆಂಗಿನನಾರಿನ ಪದರ ಇರುತ್ತದೆ. ಇದರ ಬೆಲೆ 16,500 ರೂ. ಮೇಲ್ಪಟ್ಟು.

ಮೆಮೊ ಕೇರ್‌ ಸ್ಪ್ರಿಂಗ್‌ ಸ್ವಲ್ಪ ದುಬಾರಿ ಮ್ಯಾಟ್ರಿಸ್‌ ಆಗಿದೆ. ಸ್ಪ್ರಿಂಗ್‌ ಇರುವ ಕಾರಣದಿಂದ ಇದರಲ್ಲಿ ಚೆನ್ನಾಗಿ ಬೌನ್ಸ್ ಆಗಿರುತ್ತದೆ. ಇದರಲ್ಲಿ ಮೆಮೊರಿ ಫೋಮ್ ಇರುವ ಕಾರಣದಿಂದ ಇದು ಬಾಡಿ ಶೇಪ್‌ ಪಡೆದುಕೊಳ್ಳುತ್ತದೆ. ಅಂದರೆ ಇದು ಆರಾಮದಾಯಕ ಮ್ಯಾಟ್ರಿಸ್‌ ಇದರ ಬೆಲೆ 32,500 ರೂ. ಮೇಲ್ಪಟ್ಟು.

ವಿವಾಂಟಾ ಸ್ಪ್ರಿಂಗ್‌ ಸ್ವಲ್ಪ ಕಡಿಮೆ ದುಬಾರಿಯ ಮ್ಯಾಟ್ರಿಸ್‌ ಆಗಿದೆ. ಇದರಲ್ಲಿ ಸ್ಪ್ರಿಂಗ್‌ನ ಮೇಲ್ಭಾಗದ ಶೀಟ್‌ ಇರುವುದಿಲ್ಲ. ಇದರ ಬೆಲೆ 18,800 ರೂ. ಮೇಲ್ಪಟ್ಟು ಇದೆ. ಇದು ಎಲ್ಲಕ್ಕೂ ಐಡಿಯಲ್ ಮ್ಯಾಟ್ರಿಸ್‌ ಆಗಿದ್ದು, ಇದನ್ನು ಯಾರು ಬೇಕಾದರೂ ಬಳಸಬಹುದು.

ಪೇನ್‌ ಕೇರ್‌ ಒಂದು ಬಗೆಯ ಆರ್ಥೋಪೆಡಿಕ್‌ ಮ್ಯಾಟ್ರಿಸ್‌ ಆಗಿದೆ. ಯಾರಿಗೆ ಬೆನ್ನುಮೂಳೆಯ ಸಮಸ್ಯೆ ಇರುತ್ತದೋ ಅವರಿಗೆ ಇದು ಅತ್ಯಂತ ಉಪಯುಕ್ತ ಮ್ಯಾಟ್ರಿಸ್‌ ಆಗಿದೆ. ಇದಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಿದೆ. ಇದರ ಬೆಲೆ 16,200 ರೂ. ಮೇಲ್ಪಟ್ಟು.

aram-bhi-sehat-bhi

ಮೆವೊ ಕ್ಯೂರ್‌ ಕಾಯರ್‌ನಲ್ಲಿ ಬಾಂಡೆಡ್‌ ಕಾಯರ್‌ನ ಮೇಲ್ಭಾಗದಲ್ಲಿ ಸೂಪರ್‌ ಸಾಫ್ಟ್ ಮೆವೋರಿ ಫೋಮ್ ಇರುತ್ತದೆ. ಇದು ಸಾಕಷ್ಟು ಮೃದು ಇರುತ್ತದೆ. ಇದರ ಬೆಲೆ 35,000 ರೂ. ಮೇಲ್ಪಟ್ಟು.

ಹೆಚ್ಚಿನ ಗ್ರಾಹಕರು ಪೇನ್‌ ಕೇರ್‌ ಮತ್ತು ಮೆವೊ ಕ್ಯೂರ್‌ ಹೆಚ್ಚಾಗಿ ಖರೀದಿಸುತ್ತಾರೆ. ಏಕೆಂದರೆ ಇವ ಆರಾಮದಾಯಕವಾಗಿರುವುದರ ಜೊತೆ ಜೊತೆಗೆ ಬೆನ್ನುಮೂಳೆಗೂ ಸಾಕಷ್ಟು ನೆಮ್ಮದಿ ನಿರಾಳತೆ ದೊರಕಿಸಿಕೊಡುತ್ತವೆ.

ಬೆಡ್‌ನ್ನು ಸರಿಯಾಗಿಡಲು ಉಪಾಯ

ಕಂಪನಿಯ ವಾರಂಟಿಯ ಬಳಿಕ 24 ವರ್ಷಗಳ ತನಕ ಬೆಡ್‌ ಬಾಳಿಕೆ ಬರುತ್ತದೆ. ನಡುವೆ ತಗ್ಗು ಬಿದ್ದಲ್ಲಿ ಅದನ್ನು ಬದಲಿಸಿ.

ಸ್ವಲ್ಪ ಸ್ವಲ್ಪ ದಿನಗಳ ಬಳಿಕ ಬೆಡ್‌ನ ಸೈಡ್‌ನ್ನು ಬದಲಿಸುತ್ತ ಇರಿ.

ನೀರು ಅಥವಾ ಒದ್ದೆ ಪದಾರ್ಥಗಳಿಂದ ಮ್ಯಾಟ್ರಿಸನ್ನು ರಕ್ಷಿಸಲು ವಾಟರ್‌ ಪ್ರೂಫ್‌ ಮ್ಯಾಟ್ರಿಸ್‌ ಪ್ರೊಟೆಕ್ಟರ್‌ ಅಳವಡಿಸಿ.

ಇತ್ತೀಚೆಗೆ ಮ್ಯಾಟ್ರಿಸ್‌ ಒಳಭಾಗದಲ್ಲಿ ಹಲವು ಬಗೆಯ ರಾಸಾಯನಿಕಗಳನ್ನು ಹಾಕಲಾಗಿರುತ್ತದೆ. ಅದರಿಂದಾಗಿ ಅದರಲ್ಲಿ ಧೂಳು ಸೇರಿಕೊಳ್ಳುವುದಾಗಲಿ, ಹುಳು ಹುಪ್ಪಟೆ ಕಾಟವಾಗಲಿ ಇರುವುದಿಲ್ಲ.

ಎಷ್ಟೋ ಸಲ ಗೊತ್ತಿದ್ದೋ ಗೊತ್ತಿಲ್ಲದೆಯೋ ಹಾಸಿಗೆಯ ಮೇಲೆ ಚಹಾ ಇಲ್ಲವೇ ಆಹಾರ ಪದಾರ್ಥಗಳು ಬಿದ್ದು ಕಲೆ ಉಂಟಾಗುತ್ತವೆ. ಅವನ್ನು ಸ್ವಚ್ಛಗೊಳಿಸುವುದು ಸುಲಭದ ಕೆಲಸವಲ್ಲ.

ಬೆಡ್‌ ಮೇಲೆ ಉಂಟಾದ ಕಲೆಗಳನ್ನು ನಿವಾರಿಸಲು ಒಂದು ಬಟ್ಟಲಿನಲ್ಲಿ ಬೇಕಿಂಗ್‌ ಸೋಡಾ ಮತ್ತು ನೀರು ಮಿಶ್ರಣ ಮಾಡಿಕೊಂಡು ಪೇಸ್ಟ್ ತಯಾರಿಸಿಕೊಳ್ಳಿ. ಆ ಕಲೆಯ ಮೇಲೆ ಈ ಪೇಸ್ಟ್ ಹಚ್ಚಿ ಅರ್ಧ ಗಂಟೆ ಹಾಗೆಯೇ ಬಿಡಿ. ನಂತರ ಒದ್ದೆ ಬಟ್ಟೆಯಿಂದ ಒರೆಸಿ.

ಬೆಡ್‌ನ್ನು ಯಾವಾಗಲೂ ವ್ಯಾಕ್ಯೂಮ್ ಕ್ಲೀನರ್‌ನಿಂದ ಸ್ವಚ್ಛಗೊಳಿಸಿ.

ನಿಂಬೆರಸ ಹಚ್ಚಿ ಉಜ್ಜುವುದರಿಂದಲೂ ಕಲೆ ನಿವಾರಣೆಯಾಗುತ್ತದೆ.

ಒಂದು ವೇಳೆ ಬೆಡ್‌ ಮೇಲೆಯೇ ರಕ್ತದ ಕಲೆ ಉಂಟಾಗಿದ್ದರೆ, ಅದರ ಮೇಲೆ ಸ್ವಲ್ಪ ಉಪ್ಪು ಸವರಿ. ಬೆಡ್‌ ಮೇಲೆ ನೀರು ಬಿದ್ದರೆ ತಕ್ಷಣವೇ ಒಂದು ಟವೆಲ್ ‌ಅಥವಾ ಕಾಗದ ಹಾಕಿ. ಏಕೆಂದರೆ ಒಳಗೆ ನೀರು ಹೋಗದಿರಲಿ.

– ಪಿ. ಶೋಭಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ