ಒಪ್ಪಿಗೆಯಿಂದ ನಡೆದ ಸಂಬಂಧಗಳಲ್ಲಿ ಅಪರಾಧವೇನು?

ವೈಯಕ್ತಿಕ ಸ್ವಾತಂತ್ರ್ಯಗಳಲ್ಲಿ ಹೆಂಡತಿಯರು ಯಾರನ್ನಾದರೂ ಪ್ರೇಮಿಸಲು ಮತ್ತು ಅಕ್ರಮ ಸಂಬಂಧ ಇಟ್ಟುಕೊಳ್ಳಲು ಸ್ವಾತಂತ್ರ್ಯ ಇದೆಯೋ ಇಲ್ಲವೋ ಎಂಬುದು ರೋಚಕ ಚರ್ಚೆಯ ವಿಷಯವಾಗಿದೆ. ಭಾರತೀಯ ದಂಡಸಂಹಿತೆ ಸ್ಪಷ್ಟವಾಗಿ ತಿಳಿಸುವುದೇನೆಂದರೆ ಯಾರದಾದರೂ ಪತ್ನಿಯ ಜೊತೆ ಸಂಬಂಧ ಬೆಳೆಸಿದರೆ ಪುರುಷರಿಗೆ ಶಿಕ್ಷೆ ವಿಧಿಸಲಾಗುತ್ತದೆ. ಆದರೆ ಪತ್ನಿ ಯಾರಾದರೂ ಪುರುಷನೊಂದಿಗೆ ಸಂಬಂಧ ಬೆಳೆಸಿದರೆ ಅವಳಿಗೆ ಶಿಕ್ಷೆ ವಿಧಿಸಲಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಗಂಡ ಹೆಂಡತಿಗೆ ಅಗತ್ಯವಾಗಿ ವಿಚ್ಛೇದನ ನೀಡಬಹುದು.

ನೌಕಾ ಸೇನೆ ಬ್ರಿಗೇಡಿಯರ್‌ ರಾಂಕ್‌ನ ಒಬ್ಬ ಆಫೀಸರ್‌ನ್ನು ಆತ ತನ್ನ ಸಹೋದ್ಯೋಗಿಯ ಪತ್ನಿಯೊಂದಿಗೆ ತನ್ನ ಪತ್ನಿಯ ಇಚ್ಛೆ ಇಲ್ಲದೆ ಸಂಬಂಧ ಬೆಳೆಸಿದ್ದರಿಂದ ಹುದ್ದೆಯಿಂದ ತೆಗೆದುಹಾಕಿತು. ಪತಿಪತ್ನಿಯರ ನಡುವೆ ಏನಾಯಿತೆಂದು ತಿಳಿದಿಲ್ಲ. ಆದರೆ  ಈ ಸಂಬಂಧವನ್ನು ಅಪರಾಧ ಅಥವಾ ಅನುಚಿತ ವರ್ತನೆ ಎಂದು ಹೇಳುವುದು ತಪ್ಪಾಗುತ್ತದೆ. ಮದುವೆಯ ನಂತರ ಪತಿಪತ್ನಿಯರಿಗೆ ಪರಸ್ಪರ ನಿಷ್ಠೆ ಇರಬೇಕು. ಮೂರನೆಯವರ ಮೇಲೆ ದೃಷ್ಟಿ ಬೀಳಬಾರದು. ಇದೊಂದು ಸಲಹೆಯಷ್ಟೆ, ಕಾನೂನಿನ ನಿರ್ದೇಶನವಲ್ಲ. ಒಂದು ವೇಳೆ ಇಬ್ಬರಲ್ಲಿ ಯಾರಾದರೂ ವಚನಭಂಗ ಮಾಡಿದರೆ ಅವರ ಮದುವೆಯನ್ನು ಮುರಿಯುವ ಹಕ್ಕು ಕಾನೂನಿನಲ್ಲಿದೆ. ಆ ಕಾನೂನನ್ನು ಉಪಯೋಗಿಸಬಹುದು. ಆದರೆ ಇದಕ್ಕಾಗಿ ಮೂವರಲ್ಲಿ ಯಾರನ್ನಾದರೂ ಶಿಕ್ಷಿಸುವುದು ತಪ್ಪಾಗುತ್ತದೆ.

ಮದುವೆಯಿಂದ ಪತಿಪತ್ನಿಯರಿಗೆ ಪರಸ್ಪರರ ಮೇಲೆ ಬಹಳಷ್ಟು ಅಧಿಕಾರಗಳು ಸಿಗುತ್ತವೆ. ಆದರೆ ಈಗ ಈ ಅಧಿಕಾರಗಳು ಪರಸ್ಪರ ಹೊಂದಾಣಿಕೆ ಮತ್ತು ತಿಳಿವಳಿಕೆಯದ್ದಾಗಿದೆ. ಸಮಾಜದ ಕೆಲಸ ಇವರ ಪಹರೆ ಕಾಯುವುದಲ್ಲ.

ಸಮಾಜ ಈ ಬಗ್ಗೆ ಯಾವಾಗಲೂ ಏಕಪಕ್ಷೀಯ ವರ್ತನೆ ತೋರಿದೆ. ಶತಮಾನಗಳಿಂದ ಮಹಿಳೆಯರನ್ನು ಕುಲಟೆಯರೆಂದು ಕರೆದು ಕಳಂಕ ಹೊರೆಸಿ ಮನೆಯಿಂದ ಬಹಿಷ್ಕಾರ ಹಾಕಿದೆ. ಏಕೆಂದರೆ ಅವರಿಗೆ ಗಂಡನ ಸಂಪತ್ತು ಎಂಬ ಹಕ್ಕು ಕೊಟ್ಟಿದೆ.

ಭಾರತೀಯ ದಂಡಸಂಹಿತೆಯ ಪ್ರಕಾರ ಪತಿ ಆ ಬ್ರಿಗೇಡಿಯರ್‌ ವಿರುದ್ಧ ಮಿಲಿಟರಿ ಕೇಸ್‌ ಹಾಕಬಹುದು ಮತ್ತು ಅನರನ್ನು ಜೈಲಿಗೆ ಕಳುಹಿಸಬಹುದು. ಆದರೆ ಆ ಬ್ರಿಗೇಡಿಯರ್‌ ಒಪ್ಪಿಗೆ ಮತ್ತು ಪ್ರೀತಿಯಿಂದ ಇನ್ನೊಬ್ಬರ ಪತ್ನಿಯೊಂದಿಗೆ ಸಂಬಂಧ ಬೆಳೆಸಿರಬಹುದು.

ಕೆಲವರಿಗೆ ಈ ವಿಷಯ ಅನೈತಿಕತೆ ಹರಡುವುದೆಂದು ಅನ್ನಿಸಬಹುದು. ಆದರೆ ಸತ್ಯ ಏನೆಂದರೆ ಈ ಪೊಳ್ಳು ನೈತಿಕತೆಯ ಅಹಂಕಾರದಿಂದಾಗಿ ಪೌರಾಣಿಕ ಕಥೆಗಳಲ್ಲಿ ಸೀತಾ ಮತ್ತು ಅಹಲ್ಯಾರು ದುಃಖ ಅನುಭವಿಸಿದರು ಮತ್ತು ದ್ರೌಪದಿ ಪದೇಪದೇ ಅವಮಾನ ಸಹಿಸಿದಳು. ರಾಜ ದಶರಥನ ಮೂವರು ಹೆಂಡತಿಯರನ್ನು ಸಹಜವಾಗಿ ತೆಗೆದುಕೊಳ್ಳಲಾಗುತ್ತದೆ. ಆದರೆ ಮಹಿಳೆಯರನ್ನು ಬಂಧಿಸಿಡಲಾಗುತ್ತದೆ.

ವಿವಾಹಿತೆಯರು ತಮ್ಮ ದೇಹ ಮತ್ತು ಮನಸ್ಸಿನ ಮೇಲಿನ ಎಲ್ಲ ಅಧಿಕಾರವನ್ನು ಗಂಡನಿಗೆ ಒಪ್ಪಿಸಿ ಬದಲಾಗಿ ಬರೀ ಮನೆಯ ಛಾವಣಿ, ಊಟ, ಬಟ್ಟೆ, ಬೈಗುಳ, ಹೊಡೆತ ಮತ್ತು ಒತ್ತಡ ಪಡೆಯುವುದು ತಪ್ಪು. ಗಂಡನ ವಿಮುಖತೆಯಿಂದಾಗಿ ಪತ್ನಿ ಬೇರೊಬ್ಬರ ಬಗ್ಗೆ ಆಕರ್ಷಿತಳಾದರೆ ಸಮಾಜ, ಕಾನೂನು ಮತ್ತು ಎಂಪ್ಲಾಯರ್‌ಗಳಿಗೆ ನೈತಿಕತೆಯ ಗುತ್ತಿಗೆದಾರರಂತೆ ವರ್ತಿಸಲು ಯಾವುದೇ ಹಕ್ಕಿಲ್ಲ.

ಪತಿಪತ್ನಿಯರ ಪ್ರೀತಿ ಪರಸ್ಪರ ಕೊಡುಕೊಳ್ಳುವ ವ್ಯವಹಾರವನ್ನು ಅವಲಂಬಿಸಿದೆ. ಪ್ರೀತಿಸುವ ಹುಡುಗನಿಗೆ ಒಬ್ಬ ಹುಡುಗಿಯನ್ನು ಬಿಟ್ಟು ಹೇಗೆ ಬೇರೇನೂ ಕಾಣುವುದಿಲ್ಲವೇ ಹಾಗೆ ಹುಡುಗಿಗೂ ಪ್ರೇಮಿಯನ್ನು ಬಿಟ್ಟು ಮಿಕ್ಕೆಲ್ಲ ತುಚ್ಛವಾಗಿ ಕಂಡುಬರುತ್ತದೆ. ಇದೇ ರೀತಿಯ ವರ್ತನೆ ಪತಿ ಪತ್ನಿಯರಲ್ಲಿ ಪರಸ್ಪರ ಇರಬೇಕು. ಇದನ್ನು ಹೇರಿದಂತಿರಬಾರದು.

ಪತ್ನಿಯರು ಯಾರ ಬಗ್ಗೆಯಾದರೂ ಇಚ್ಛೆ ಪಟ್ಟು ಅಪರಾಧ ಮನೋಭಾವ ಹೊಂದಿದ್ದರೆ, ಯಾರೊಂದಿಗಾದರೂ ನಕ್ಕು ಮಾತಾಡಿದರೆ ಹೊಡೆತ ತಿನ್ನಬೇಕಾಗುತ್ತದೆ. ಆದರೆ ಗಂಡ ಸಂಪೂರ್ಣವಾಗಿ ಮುಕ್ತವಾಗಿ ಓಡಾಡುದು ಎಂತಹ ನೈತಿಕತೆ? ಎಂತಹ ನ್ಯಾಯ?

ಅಸಲಿಗೆ ತಪ್ಪು ಧರ್ಮಗಳದ್ದಾಗಿದೆ. ಅವು ಮಹಿಳೆಯರ ಮೇಲೆ ನಾನಾ ರೀತಿಯ ಬಂಧನಗಳನ್ನು ಒಡ್ಡಿದೆ. ವಿಡಂಬನೆಯೆಂದರೆ ಮಹಿಳೆಯರೇ ಅತ್ಯಂತ ಹೆಚ್ಚಾಗಿ ತಮ್ಮ ಧನ, ಮನ ಹಾಗೂ ಧರ್ಮದ ಹೆಸರಿನಲ್ಲಿ ತನುವಿನವರೆಗೆ ಬಲಿ ಕೊಡುತ್ತಿದ್ದಾರೆ. ಮಹಿಳೆಯರಿಗೆ ಅನ್ಯಾಯ ಮಾಡುವಂತಹ ಧರ್ಮ ಅತ್ಯಾಚಾರಿ, ಅನಾಚಾರಿ ಹಾಗೂ ಅಸಹನಶೀಲೆಯಾಗಿದೆ.

ಸಾವು ಇಲ್ಲಿ ಬಹು ಸುಲಭ!

ಸಾಮಾನ್ಯವಾಗಿ ರಸ್ತೆಗಳಲ್ಲಿ ಒಂದು ವಾಕ್ಯ ಬರೆದಿರುವುದು ಕಂಡುಬರುತ್ತದೆ. `ಎಚ್ಚರಿಕೆಯಿಂದ ಚಲಿಸಿ. ಮನೆಯಲ್ಲಿ ಯಾರೋ ನಿಮ್ಮನ್ನು ನಿರೀಕ್ಷಿಸುತ್ತಿದ್ದಾರೆ.’ ಅಂತಹ ದುಃಖತಪ್ತ ನಿರೀಕ್ಷೆಯಲ್ಲಿರುವವರ ಸಂಖ್ಯೆ ಭಾರತದಲ್ಲಿಯೇ ಹೆಚ್ಚು.

ಭಾರತದಲ್ಲಿ ಪ್ರತಿ ವರ್ಷ 1.5 ಲಕ್ಷ ಜನರು ರಸ್ತೆ ದುರಂತಗಳಲ್ಲಿ ಸಾವನ್ನಪ್ಪುತ್ತಿದ್ದಾರೆ. ಅಪಘಾತದ ಅಂಕಿಸಂಖ್ಯೆಗಳಲ್ಲಿ ಭಾರತವೇ ಅತ್ಯಂತ ಮುಂಚೂಣಿಯಲ್ಲಿದೆ.

ಭಾರತದಲ್ಲಿ 47 ಲಕ್ಷ ಮೈಲುಗಳಷ್ಟು ಉದ್ದನೆಯ ರಸ್ತೆ ಸಂಪರ್ಕವಿದೆ, 12 ಕೋಟಿಗಳಷ್ಟು ವಾಹನಗಳಿವೆ. ಅಮೆರಿಕದಲ್ಲಿ 65 ಲಕ್ಷ ಮೈಲುಗಳಷ್ಟು ರಸ್ತೆ ಸಂಪರ್ಕವಿದೆ, 25 ಕೋಟಿ ವಾಹನಗಳಿವೆ. ಅಲ್ಲಿ ಕೇವಲ 33,000 ಜನರಷ್ಟೇ ಸಾಯುತ್ತಾರೆ. ಚೀನಾದಲ್ಲಿ 41 ಲಕ್ಷ ಮೈಲುಗಳಷ್ಟು ಉದ್ದನೆಯ ರಸ್ತೆಗಳಲ್ಲಿ 20 ಕೋಟಿ ವಾಹನಗಳಿಂದ 70,000 ಜನರು ಪ್ರತಿ ವರ್ಷ ಸಾಯುತ್ತಾರೆ.

ಎರಡುಪಟ್ಟು ಹೆಚ್ಚು ಕುಟುಂಬಗಳನ್ನು ರೋದನದಲ್ಲಿ ಬಿಟ್ಟು ಹೋಗುವ ಹಾಗೂ 1 ಲಕ್ಷ ಮಹಿಳೆಯರನ್ನು ಕಾರಣವಿಲ್ಲದೆಯೇ ವಿಧವೆಯರನ್ನಾಗಿ ಮಾಡಲು ಮುಖ್ಯವಾಗಿ ಸರ್ಕಾರ ಹಾಗೂ ಸಮಾಜವೇ ಹೊಣೆ.

ರಸ್ತೆ ಅಪಘಾತಗಳಿಗೆ ಮುಖ್ಯ ಕಾರಣ ಹದಗೆಟ್ಟ ರಸ್ತೆ, ಕೆಟ್ಟುಹೋದ ವಾಹನಗಳಂತೂ ಆಗಿಯೇ ಆಗಿರುತ್ತವೆ. ಜೊತೆಗೆ ಅಜಾಗರೂಕತೆಯಿಂದ ವಾಹನ ಚಲಾಯಿಸುವುದು ಹಾಗೂ ಮದ್ಯ ಸೇವಿಸಿ ವಾಹನ ನಡೆಸುವುದು ಕೂಡ ಮುಖ್ಯವಾಗಿರುತ್ತದೆ.

ದೈಹಿಕ ದೋಷಗಳಿಂದಾಗಿ ನಡೆಯುವಂತಹ ಅಪಘಾತಗಳಲ್ಲ ಇವು. ಮನುಷ್ಯನ ತಪ್ಪಿನಿಂದ ಘಟಿಸುವಂತಹಗಳಾಗಿವೆ. ಹಾಗೆ ನೋಡಿದರೆ ತಡೆಯಬಹುದಾದಂತಹ ದುರಂತಗಳಾಗಿವೆ.

ಇಂತಹ ದುರಂತಗಳಿಂದ ಕುಟುಂಬಗಳ ದುಃಖ ಮುಗಿಲು ಮುಟ್ಟುತ್ತದೆ. ಏಕೆಂದರೆ ಇಂತಹ ಅಪಘಾತಗಳು ಆಕಸ್ಮಿಕವಾಗಿ ಸಂಭವಿಸುತ್ತವೆ. ತಿಂಗಳಾನುಗಟ್ಟಲೇ ಅಷ್ಟೇ ಏಕೆ ಅನೇಕ ವರ್ಷಗಳ ಕಾಲ ಮರೆಯಲಾಗದ ದುಃಖವನ್ನುಂಟು ಮಾಡುತ್ತವೆ.

ಖೇದದ ಸಂಗತಿಯೆಂದರೆ, ಈ ಅಪಘಾತಗಳನ್ನು ಸರ್ಕಾರ ಅಷ್ಟೇನೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಮಾನವನಿಗೆ ಎಂದೋ ಒಂದು ದಿನ ಸಾವು ಬಂದೇ ಬರುತ್ತದೆ. ಅದು ಎಂದು ಬರುತ್ತದೆ ಎಂದು ಬರೆದಿಡಲಾಗಿರುತ್ತದೆಯೇ? ಎಂಬ ರೀತಿಯಲ್ಲಿ ಸರ್ಕಾರಗಳು ನಡೆದುಕೊಳ್ಳುತ್ತಿವೆ.

ಈ ಸಾವುಗಳಿಗೆ ಜನರ ಬೇಜವಾಬ್ದಾರಿಯೂ ಕೂಡ ಕಾರಣ. ರಸ್ತೆಗಳನ್ನು ಅತಿಕ್ರಮ ಮಾಡಿಕೊಳ್ಳುವುದನ್ನು ತಮ್ಮ ಹಕ್ಕು ಎಂದೇ ಭಾವಿಸಿದ್ದಾರೆ. ರಸ್ತೆ ನಿರ್ಮಾಣವಾಗುವುದಕ್ಕಿಂತ ಮುಂಚೆ ರಸ್ತೆ ಬದಿಯಲ್ಲಿ ಅಂಗಡಿಗಳು ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತವೆ. ಬಳಿಕ ಅಕ್ಕಪಕ್ಕದಲ್ಲಿ ಮನೆಗಳು ಕಾಣಿಸಿಕೊಳ್ಳುತ್ತವೆ. ಜನರು ಆ ಕಡೆ, ಈ ಕಡೆ ನೋಡದೆಯೇ ರಸ್ತೆ ದಾಟುವುದನ್ನು ತಮ್ಮ ಹಕ್ಕು ಎಂದು ಭಾವಿಸುತ್ತಾರೆ. ರಸ್ತೆಗಳನ್ನು ಕಿರಿದುಗೊಳಿಸುವುದು, ಅಲ್ಲಿಯೇ ಮಂದಿರಗಳನ್ನು ನಿರ್ಮಿಸುವುದು, ಅಂಗಡಿಗಳನ್ನು ಹಾಕುವುದು, ಪಾರ್ಕಿಂಗ್‌ ಮಾಡುವುದು ಹೀಗೆ ಏನೆಲ್ಲ ಮಾಡುತ್ತಾರೆ.

ರಸ್ತೆ ಬದಿಯಲ್ಲಿ ಮದ್ಯದ ಅಂಗಡಿಗಳು ಯಥೇಚ್ಛವಾಗಿ ಕಂಡುಬರುತ್ತವೆ. `ಕುಡಿಯಿರಿ ಮತ್ತು ಸಾವು ತಂದುಕೊಳ್ಳಿರಿ’ ಎಂಬಂತೆ ಅವು ಸಂದೇಶ ನೀಡುತ್ತಿರುತ್ತವೆ. ಕುಡಿದು ವಾಹನ ಚಲಾಯಿಸುವುದು ಕೆಲವರಿಗೆ ಭಾರಿ ಮಜಾ ಕೊಡುತ್ತದೆ.

ದೇಶದ ಸರ್ಕಾರಕ್ಕೆ ಇದರ ಬಗ್ಗೆ ಎಳ್ಳಷ್ಟೂ ಚಿಂತೆಯಿಲ್ಲ. ಹೀಗಾಗಿ ಸುಪ್ರೀಂಕೋರ್ಟ್‌ ಒಂದು ಸಮಿತಿ ರಚಿಸಿದ್ದು, ಅದು ಈ ಕುರಿತಂತೆ ಸಲಹೆ ನೀಡಲಿದೆ. ಆದರೆ ಸರ್ಕಾರ ಈ ರೀತಿಯ ಸಲಹೆಗಳನ್ನು ಗಮನಿಸುತ್ತದೆಯೇ? ಸರ್ಕಾರದಲ್ಲಿ ಪ್ರತಿನಿಧಿಗಳು ಅಧಿಕಾರ ಚಲಾಯಿಸಲು ಬರುತ್ತಾರೆಯೇ ಹೊರತು, ಸೇವೆ ಸಲ್ಲಿಸಲು ಅಲ್ಲ. ಆಡಳಿತ ಇರುವುದೇ ಹಣ ಮಾಡಲು ಎಂದು ಅವರು ತಿಳಿದಿದ್ದಾರೆ. ಇಲ್ಲಿ ಯಾರ ಜೀವಕ್ಕೂ ಬೆಲೆಯಿಲ್ಲ.

ಇಚ್ಛಾಮರಣದ ಹಕ್ಕು ಎಷ್ಟು ಸೂಕ್ತ?

ಇಚ್ಛಾಮರಣದ ಹಕ್ಕು ಮಾನವರಿಗೆ ಇರಬೇಕೊ ಬೇಡವೋ ಎಂಬ ಬಗ್ಗೆ ಸುಪ್ರಿಂಕೋರ್ಟ್‌ ಚರ್ಚೆ ಆರಂಭಿಸಿದೆ. ಸುಪ್ರಿಂಕೋರ್ಟ್ ಮುಂದೆ ಬಂದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆ ನಡೆಸುತ್ತಾ, ಸರ್ಕಾರ ಈ ಕುರಿತಂತೆ ಉತ್ತರ ನೀಡಬೇಕೆಂದು ಹೇಳಿದೆ.

ಸರ್ಕಾರಿ ವಕೀಲರು ಸರ್ಕಾರ ಇಚ್ಛಾಮರಣದ ವಿರುದ್ಧ ಇದೆಯೆಂದು ಹೇಳಿದ್ದಾರೆ. ಮೋದಿ ಸರ್ಕಾರ ಕಾಂಗ್ರೆಸ್‌ ಸರ್ಕಾರಕ್ಕಿಂತ ಭಿನ್ನವಾಗಿ ಯೋಚಿಸುತ್ತದೆ ಎನ್ನುವುದು ಬೇರೆ ಮಾತು.

ಮೋದಿ ಸರ್ಕಾರ ಎಂತಹ ಭಾರತೀಯ ಸಂಸ್ಕೃತಿಯಲ್ಲಿ ವಿಶ್ವಾಸವಿಟ್ಟಿದೆ ಎಂದರೆ, ಅಲ್ಲಿ ಸತಿ ಪದ್ಧತಿ, ಬಲಿ ಕೊಡುವುದು, ವಾನಪ್ರಸ್ಥಾಶ್ರಮ ಜೀವನದ ಭಾಗಗಳೇ ಆಗಿಬಿಟ್ಟಿವೆ. ಒಂದು ವೇಳೆ ಸರ್ಕಾರ ಅದಕ್ಕೆ ಕಾನೂನಿನ ಮೊಹರು ಹಾಕಿದರೆ ಗುಣಪಡಿಸಲಾಗದ ರೋಗಗಳಿಂದ ನರಳುತ್ತಿರುವ ರೋಗಿಗಳಿಗೆ ಇಚ್ಛಾಮರಣ ಪಡೆಯುವ ಹಕ್ಕು ದೊರೆಯುತ್ತದೆ.

ಆದರೆ ಕಾನೂನು ಹಾಸಿಗೆಯ ಮೇಲೆ ಕೇವಲ ಉಸಿರಾಡುತ್ತ ಬಿದ್ದಿರುಲ ರೋಗಿಗಳಿಗೆ ಔಷಧಿಗಳನ್ನು ನಿಲ್ಲಿಸಲು ಅಥವಾ ಸಾಯಿಸಲು ವೈದ್ಯರಿಗೆ ಅನುಮತಿ ಕೊಡುವುದಿಲ್ಲ.

vihangam

ಆದರೆ ಬಹಳಷ್ಟು ಡಾಕ್ಟರ್‌ಗಳು ಪರೋಕ್ಷವಾಗಿ ಹೀಗೆ ಮಾಡುತ್ತಿರಬಹುದೇನೊ? ಅದು ವೈದ್ಯರ ಕೈಯಲ್ಲೇ ಇದೆ. ಒಬ್ಬ ವ್ಯಕ್ತಿಯನ್ನು ಜೀವಂತ ಶವದ ರೂಪದಲ್ಲಿ ಯಂತ್ರೋಪಕರಣಗಳ ಸಹಾಯದಿಂದ ಎಷ್ಟು ದಿನ ಬೇಕಾದರೂ ಇಡಬಹುದಾಗಿದೆ. ಆ ಯಂತ್ರೋಪಕರಣಗಳಿಂದ ಮುಕ್ತಗೊಳಿಸಿ ಆ ವ್ಯಕ್ತಿಯನ್ನು ಸಾವಿನ ದವಡೆಗೆ ನೂಕಿಬಿಡುತ್ತಾರೇನೊ?

ಇಚ್ಛಾಮರಣದ ಹಕ್ಕು ಕೊಟ್ಟುಬಿಟ್ಟರೆ ವೈದ್ಯರ ಮೇಲೆ ಒತ್ತಡ ಹೆಚ್ಚಬಹುದು. 5-6 ವರ್ಷ ನೋವಿನಿಂದ ನರಳಿ ನರಳಿ ಸಾಯಬಹುದಾದ ರೋಗಿಗಳಿಗೆ ಸಾವನ್ನು ಕೊಟ್ಟುಬಿಡಿ ಎಂದು ಒತ್ತಾಯಿಸಬಹುದು. ರೋಗಿಯ ಒಪ್ಪಿಗೆಯನ್ನು ಅವನ ಅನುಮತಿಯಿಲ್ಲದೆ ಕಾಗದದ ಮೇಲೆ ಸಹಿ ಅಥವಾ ಹೆಬ್ಬೆಟ್ಟು ಹಾಕಿಸಿಕೊಳ್ಳಬಹುದು. ಆದರೆ ಇದು ವೈದ್ಯಕೀಯ ವೃತ್ತಿಗೆ ವಿರುದ್ಧವಾದುದಾಗಿದೆ.

ಎಷ್ಟೋ ಸಲ ಒತ್ತಡ ಹಾಗೂ ಖಿನ್ನತೆಗೊಳಗಾದ ರೋಗಿಗಳು ಜೀವಿಸುವ ಇಚ್ಛಾಶಕ್ತಿಯನ್ನೇ ಕಳೆದುಕೊಂಡು ಬಿಡುತ್ತಾರೆ. ಅವರು ವೈದ್ಯರ ಮುಂದೆ `ನಾನು ಆತ್ಮಹತ್ಯೆ ಮಾಡಿಕೊಳ್ಳಲು ಇಚ್ಛಿಸುತ್ತಿದ್ದೇನೆ, ತಾವು ಸಹಕರಿಸಬೇಕು,’ ಎಂದು ಕೇಳಿಕೊಳ್ಳಬಹುದು.

ಈ ಹಕ್ಕು ದೊರೆತರೆ ಹಣ ಇರುವ ರೋಗಪೀಡಿತ ವ್ಯಕ್ತಿಯನ್ನು ಜನರು ಬೇಗ ಸಾಯಿಸಲು ಸಂಚು ರೂಪಿಸಬಹುದು. ವೈದ್ಯರ ಬಳಿ ಇಚ್ಛಾಮರಣದ ಹಕ್ಕು ಇದ್ದರೆ ಅವರು ಹತ್ಯೆಯ ಆರೋಪದಡಿ ಸಿಲುಕುವ ಸಂದರ್ಭವೇ ಬರದು.

ಜೀವನ ಅತ್ಯಮೂಲ್ಯ. ಅದನ್ನು ಕಾಯ್ದುಕೊಂಡು ಹೋಗುವುದು ಪ್ರತಿಯೊಬ್ಬರಿಗೂ ಸಾವೇ ಹೌದು. ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿಯಾಗಿದೆ. ಹೀಗಾಗಿ ಅದು ಸಾವಿನೊಂದಿಗೆ ಸದಾ ಹೋರಾಡುತ್ತಿರುತ್ತದೆ. ಸಾವು ಸದಾ ನಮ್ಮ ನಾಲ್ಕೂ ಬದಿ ಸುತ್ತಾಡುತ್ತದೆ. ಅಪಘಾತಗಳು, ಅಪರಿಚಿತ ರೋಗಗಳು, ಷಡ್ಯಂತ್ರಗಳಿಗೆ ನಾವು ಸಿಲುಕುತ್ತಿರುತ್ತೇವೆ. ಆದರೂ ನಮಗೆ ಜೀವದ ಬಗ್ಗೆ ಆಶಾಭಾವನೆ ಇರುತ್ತದೆ. ಡಾಕ್ಟರ್‌ ನಮ್ಮನ್ನು ಬದುಕಿಸಿಯೇ ಬದುಕಿಸುತ್ತಾರೆ ಎಂಬ ನಂಬಿಕೆ ಇರುತ್ತದೆ. ಈ ನಂಬಿಕೆ ಹೊರಟುಹೋಗಬಾರದು. ಇಚ್ಛಾಮರಣ ಕಾನೂನು ಎಷ್ಟೇ ಸುಖಕರ ಎನಿಸಿದರೂ, ಅದು ದುರುಪಯೋಗವಾಗುವ ಸಾಧ್ಯತೆಯೇ ಹೆಚ್ಚು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ