ಮೋಜು ಮಸ್ತಿ ಮುಂದೆ ಉಳಿದೆಲ್ಲವೂ ಗೌಣ : ಉ.ಅಮೆರಿಕಾ ಖಂಡದ ಕ್ಯಾರಿಬಿಯನ್‌ ದ್ವೀಪಗಳಲ್ಲಿನ ಹ್ಯಾತಿ ಭಾರತಕ್ಕಿಂತಲೂ ಬಡ ದೇಶವೆಂದೇ ಹೇಳಬಹುದು. ಆದರಲ್ಲಿನ `ಕಾರ್ನಿವಾಲ್ ಆಫ್‌ ಫ್ಲರ್ಸ್‌' ನಂಥ ಉತ್ಸವಗಳ ಸಂಭ್ರಮಾಚರಣೆ ನೋಡಿದರೆ ಮೋಜು ಮಸ್ತಿ ಎಷ್ಟು ಪ್ರಧಾನವೆಂದು ತಿಳಿಯುತ್ತದೆ.

samachar-darshan-3

ಅದಪ್ಪ ಆತ್ಮವಿಶ್ವಾಸ ! : ಸ್ಮಾರ್ಟ್‌ಸೆಕ್ಸಿ ಎನಿಸಿರುವ ಈ ಹಾಲಿವುಡ್‌ ನಟಿ ಆ್ಯಂಬರ್‌ ಟ್ಯಾಂಬ್ಲೀನ್‌ಳ ಆತ್ಮವಿಶ್ವಾಸ ಅವಳ ಕಣ್ಣುಗಳಲ್ಲಿ ತುಂಬಿ ತುಳುಕುತ್ತಿದೆ. ವಿಡಿಯೋ ಪಾತ್ರಗಳೀಗ ನೆಲದ ಮೇಲೆ : ವಿಡಿಯೋ ಗೇಮ್ಸ್ ಪಾತ್ರಗಳನ್ನು ಜೀವಂತವಾಗಿಸುವ ಜಪಾನಿ ಕಲೆಯನ್ನು `ಕಾಸ್‌ ಪ್ಲೇ' ಎನ್ನುತ್ತಾರೆ. ಪ್ರತಿ ವರ್ಷ ಸಾವಿರಾರು ಆಯೋಜಕರ ನೆರವಿನಿಂದ ಇಂಥ ಲಕ್ಷಾಂತರ ಫ್ಯಾನ್ಸಿ ವೇಷಧಾರಿಗಳು ವಿಶ್ವದೆಲ್ಲೆಡೆಯ ಪ್ರಮುಖ ನಗರಗಳಲ್ಲಿ ಕಾಣಿಸಿಕೊಳ್ಳುತ್ತಾರೆ, ಇವು ಸ್ಕ್ರೀನಿನಿಂದ ನೇರವಾಗಿ ನೆಲದ ಮೇಲೆ ಇಳಿದಿರುವಂತೆ ಇರುತ್ತವೆ.

samachar-darshan-6

ಭೇದಭಾವ ಎಣಿಸಿದ್ದರ ಫಲ : ಫ್ರಾನ್ಸ್ ನಲ್ಲಿ ಈಗಲೂ ವರ್ಣಭೇದದ ನೀತಿ ಇದೆ, ಅಲ್ಲಿ ಬಿಳಿಯನಲ್ಲದ ವ್ಯಕ್ತಿ ಮಂತ್ರಿ ಆದರೆ, ನಮ್ಮಲ್ಲಿ ಲಾಲೂ ಮಾಯಾವತಿಯರನ್ನು ಹಾಸ್ಯ ಮಾಡುವಂತೆ ಕೆಣಕುತ್ತಾರೆ. ಆದರೆ ಒಂದು ಸಣ್ಣ ಪಕ್ಷದ ಒಬ್ಬ ಮುಖಂಡ ಇಲ್ಲಿನ ಚಿತ್ರದಲ್ಲಿರುವ ಮಂತ್ರಿ ಕ್ರಿಸ್ಟೇನ್‌ಳನ್ನು ಖುಲ್ಲಂಖುಲ್ಲ `ಮಂಗ` ಎಂದು ಕೆಣಕಿದಾಗ, ದೊಡ್ಡ ಗಲಾಟೆ ಆಯ್ತು ಹಾಗೂ ಆತನಿಗೆ 1 ತಿಂಗಳ ಸೆರೆವಾಸ ವಿಧಿಸಲಾಯ್ತು.

samachar-darshan-5 (1)

ಯಾವುದನ್ನು ಹೊಗಳುವುದು? :  12 ಕೋಟಿಗಳ ಕಾರುಗಳೂ ಸಹ ಈಗ ಸಾಧಾರಣ ಎನಿಸಿಬಿಟ್ಟಿವೆ. ಲ್ಯಾಂಬರ್‌ ಗಿನಿಯಂಥ ಕಂಪನಿಗಳು ಇಂಥ ಲಕ್ಷಾಂತರ ಕಾರುಗಳನ್ನು ಸುಲಭವಾಗಿ ಮಾರಾಟ ಮಾಡುತ್ತವೆ. ಇಲ್ಲಿನ ಹೊಸ ಕಾರಿನ ಲಾಂಚ್ ಸಂದರ್ಭದಲ್ಲಿ ಜೊತೆಗಿನ ಗ್ಲಾಮರಸ್‌ ಮಾಡೆಲ್‌ಗಳು ಉಚಿತವಲ್ಲ ಎಂದು ಗ್ರಾಹಕರು ತಿಳಿಯಬೇಕು.

samachar-darshan-7 (2)

ದಿಢೀರ್‌ ತೀರ್ಪು : ಪ. ಬಂಗಾಳದ ದಿಮಾನ್ಪುರ ಜಿಲ್ಲೆಯಲ್ಲಿ ಇತ್ತೀಚೆಗೆ 7 ವರ್ಷದ ಒಬ್ಬ ಮುಗ್ಧ ಹುಡುಗಿಯ ಮೇಲೆ ಅತ್ಯಾಚಾರವೆಸಗಿ ಅವಳನ್ನು ಮರಕ್ಕೆ ಕಟ್ಟಿಹಾಕಿದ ಮೂರು ಪಾತಕಿಗಳಲ್ಲಿ ಇಬ್ಬರು ಕೈಗೆ ಸಿಕ್ಕಿಬಿದ್ದಾಗ ಹಳ್ಳಿಯವರ ಕೋಪ ಭುಗಿಲೆದ್ದು, ಅವರನ್ನು ಈ ರೀತಿ ಹಣ್ಣುಗಾಯಿ ನೀರುಗಾಯಿ ಮಾಡಿಟ್ಟರು. ಕೋರ್ಟಿಗೆ ದಾವೆ ಹೂಡಿ ವರ್ಷಗಟ್ಟಲೆ ಎಳೆದಾಡುವ  ಬದಲು, ದಿಢೀರ್‌ ತೀರ್ಪು ಕೊಡುವುದೆಂದರೆ ಇದೇ ಅಲ್ಲವೇ?

samachar-darshan-2

ಕ್ರೂರತೆಯ ಪರಮಾವಧಿ : ರಸ್ತೆ ಬದಿ ಸಾಮಾನು ಮಾರುವುದು ತಪ್ಪಿರಬಹುದು, ಆದರೆ ಅದಕ್ಕಾಗಿ ಜೀವವನ್ನೇ ತೆಗೆದುಬಿಡುವುದೇ? ನ್ಯೂಯಾರ್ಕ್‌ನಲ್ಲಿ ಯಾರೋ ಒಬ್ಬ ಬಿಳಿಯನಲ್ಲದ ವ್ಯಾಪಾರಿ ಸಿಗರೇಟ್‌ ಮಾರುತ್ತಿದ್ದ ಕಾರಣ, ಅಲ್ಲಿನ ಪೊಲೀಸಿನವರ ಕೆಂಗಣ್ಣಿಗೆ ಗುರಿಯಾಗಿ ಪ್ರಾಣ ತೆರಬೇಕಾಯ್ತು. ಇದರಿಂದ ಅಲ್ಲಿ ದೊಡ್ಡ ವಿವಾದ ಎದ್ದಿತು. 150 ಕಿಲೋ ತೂಗುವ, 6 ಅಡಿ 6 ಇಂಚು ಎತ್ತರದ ದೃಢಕಾಯನಾದ ಇರಿಕ್‌ ಗಾರ್ನರ್‌ ಸಾಧಾರಣ ಹೊಡೆತಕ್ಕೆ ಸಾಯುವನಲ್ಲವೆಂದು ನೋಡಿದರೇನೇ ತಿಳಿಯುತ್ತದೆ. ಪೊಲೀಸರ ದೌರ್ಜನ್ಯಕ್ಕೆ ಯಾವ ದೇಶವಾದರೇನು? ಅಮೆರಿಕಾದ ಪೊಲೀಸರಂತೂ ಮಿಲಿಟರಿಯವರನ್ನೂ ಮೀರಿಸಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ