ಸಿಟ್ಟೇರುವುದು ಸಹಜ : ವಿಶ್ವದೆಲ್ಲೆಡೆ ಈಗ ಸರ್ಕಾರಿ ದೌರ್ಜನ್ಯವನ್ನು ತೀವ್ರವಾಗಿ ಖಂಡಿಸಲಾಗುತ್ತದೆ. ಅಮೆರಿಕಾದ ಮಿಸೌರಿ ರಾಜ್ಯದಲ್ಲಿ ಒಂದೆಡೆ ಪೊಲೀಸರು 18 ವರ್ಷದ ಮೈಕ್ ಬ್ರೌನ್‌ನನ್ನು ಗುಂಡಿಕ್ಕಿ ಕೊಂದಾಗ, ಅಲ್ಲಿನ ಸ್ಥಳೀಯರು ಸಿಡಿದುಬಿದ್ದರು, ದಂಗೆಯೆದ್ದರು, ಹರತಾಳಗಳಾದವು. ಮೈಕಲ್ ಬಿಳಿಯೇತರನೆಂಬ ಕಾರಣಕ್ಕೆ ಅವನನ್ನು ಸಾಯಿಸಲಾಗಿತ್ತು, ಭಾರತದಲ್ಲೂ ಬಡ ದಲಿತರ ವಿರುದ್ಧ ಹೀಗೇ ಆಗುತ್ತದೆ.
ಹೀಗೆ ಮಾಡಿದ್ದೇಕೆ? : ಡೇವಿಡ್ ಫಾರ್ನೆಲ್ ಹಾಗೂ ಬ್ಯಾಂಡಿ ಎಷ್ಟೇ ಸ್ಪಷ್ಟೀಕರಣ ಕೊಡಲಿ, ಆಸ್ಟ್ರೇಲಿಯಾದ ಈ ದಂಪತಿ ತಮ್ಮ ಒಬ್ಬ ಮಗಳನ್ನು ಥೈಲೆಂಡ್ ನಲ್ಲೇ ಬಿಟ್ಟು ಬಂದಿರುವ ವಿಚಾರವನ್ನು ಅಲ್ಲಿನ ಜನತೆ ನಂಬುವುದೇ ಇಲ್ಲ. ಆಕೆ ಮಾನಸಿಕ ಅಸ್ವಸ್ಥಳು ಬೇರೆ. ಬಾಡಿಗೆ ತಾಯಿಯಿಂದ ಪಡೆದಿದ್ದ ಆ ಸಂತಾನದ ಮೇಲೆ ಅವರಿಗೆ ಪ್ರೀತಿ ಇದ್ದದ್ದೂ ಅಷ್ಟಕ್ಕಷ್ಟೆ. ಅಂಥ ವಿಧಾನದಿಂದ ಪಡೆದ ಮಕ್ಕಳು ಹೊಸ ಹೊಸ ಸಮಸ್ಯೆ ಎದುರಿಸುತ್ತಿದ್ದಾರೆ. ಜನರೆಲ್ಲ ಇವರ ವಿರುದ್ಧ ತಿರುಗಿಬಿದ್ದಾಗ, ಇವರು ಟಿ.ವಿ. ಮಾಧ್ಯಮಗಳಲ್ಲಿ ತಮ್ಮ ಸ್ವಸ್ಥ ಮಗನೊಂದಿಗೆ ಕಾಣಿಸಿಕೊಂಡು ವಿವರಣೆ ನೀಡಿ, ನಂತರ ಥೈಲೆಂಡ್‌ನಿಂದ ಮಗಳನ್ನು ಕರೆಸಿಕೊಂಡರು.
ಕಣ್ಣುಬಾಯಿ ಕೈಗಳಲ್ಲೇ! : ಇವು ಅಸಲಿಯಲ್ಲ…. ಕೇವಲ ಬಾಡಿ ಪೇಂಟ್‌ನ ಕಮಾಲ್! ಇತ್ತೀಚೆಗೆ ಹುಡುಗಿಯರು ತಮ್ಮ ದೇಹವನ್ನೇ ಕ್ಯಾನ್‌ವಾಸ್ ಆಗಿಸಿಕೊಳ್ಳುತ್ತಿದ್ದಾರೆ. ಆರ್ಟಿಸ್ಟ್ ಸ್ಮಾರ್ಟ್‌ಡ್ಯಾಶಿಂಗ್ ಆದರೆ, ಇಡೀ ದೇಹವೇ ಕ್ಯಾನ್‌ವಾಸ್ ಆದೀತು! ಅದನ್ನು ನೋಡುವ ಪ್ರೇಕ್ಷಕರಿಗೆ ಕೆಲಸ ತೃಪ್ತಿಕರವಾಗಿ ಇರಬೇಕಷ್ಟೆ.
ಸಾಮಾಜಿಕ ಉದಾರತೆಯ ಪರಿ : ಚಡ್ಡಿಗೆ ಮಾತ್ರ ತನ್ನದೇ ಆದ ಮರ್ಯಾದೆ ಇಲ್ಲವೇ? ಅಮೆರಿಕಾದಲ್ಲಿ ಈಗೆಲ್ಲ `ಪ್ಯಾಂಟ್ ಬಿಚ್ಚಿ ಚಡ್ಡಿಯಲ್ಲೇ ನರ್ತಿಸಿ’ ಎಂಬ ಆಂದೋಳನ ಶುರುವಾಗಿದೆ. ಇದು ಓಪನ್ ಸೆಕ್ಸ್ ನ ವಿಕೃತ ರೂಪವೇನೂ ಅಲ್ಲ. ಇದು ಬೇಕೆಂದೇ ಸ್ವಸ್ಥ ಜನ, ಅನಿಯಂತ್ರಿತ ಮೂತ್ರ ರೋಗಿಗಳ ಚಿಕಿತ್ಸೆಗಾಗಿ ಚಂದಾ ವಸೂಲಿ ಮಾಡಲು, ಸಾರ್ವಜನಿಕ ಸ್ಥಳಗಳಲ್ಲಿ ಗುಂಪಾಗಿ ಹೀಗೆ ಕುಣಿಯಲು ಶುರು ಮಾಡುತ್ತಾರೆ. ಗ್ಲಾಮರಸ್ ಡ್ಯಾನ್ಸಿನ ಮಜಾ ಪಡೆದರು, ಕೊಟ್ಟ ಹಣವನ್ನು ಇಂಥ ಆಸ್ಪತ್ರೆಗಳಿಗೆ ದೇಣಿಗೆಯಾಗಿ ನೀಡಲಾಗುತ್ತದೆ, ಈ ರೀತಿ ರೋಗಿಗಳ ಚಿಕಿತ್ಸೆ ಉಚಿತವಗಿ ನಡೆಯುತ್ತದೆ. ಇದು ಸಾಮಾಜಿಕ ಉದಾರತೆಯ ಒಳ್ಳೆಯ ಉದಾಹರಣೆಯಾಗಿದೆ.
ಹಾಡಿರಲಿ, ಡ್ಯಾನ್ಸಿನ ಗಮ್ಮತ್ತು ನೋಡಿ! : ಈಗ ಪಾಶ್ಚಿಮಾತ್ಯ ದೇಶಗಳಲ್ಲಿ ಗಾಯಕಿಯರೇ ಧಾರಾಳ ಸೆಕ್ಸಿಯಾಗಿ ತಮ್ಮ ಶೋ ನಡೆಸಿಕೊಡುತ್ತಾರೆ, ಪ್ರೇಕ್ಷಕರ ನೂಕುನುಗ್ಗಲಂತೂ ಕೇಳುವುದೇ ಬೇಡ! ಸದಾ ಮುಚ್ಚಿದ ಕೋಣೆಗಳಲ್ಲಿ ಹಾಡು ರೆಕಾರ್ಡ್‌ಮಾಡುತ್ತಿದ್ದ ಅರಿಯಾನಾ ಗ್ರಾಂಡೆ, ಸ್ಟೇಜ್ ಪರ್ಫಾರ್ಮೆನ್ಸ್ ನೀಡಲು ಬಂದಾಗ ತನ್ನ ಮಾದಕ ಗ್ಲಾಮರಸ್ ಮೋಡಿಯಿಂದ ಮರುಳು ಮಾಡಿದ್ದು ಹೀಗೆ.
ಹೀರೋ ಬಂದ ದಾರಿ ಬಿಡಿ : ನಮ್ಮ ದೇಶದಲ್ಲಿ ಸಿನಿಮಾ ಹೀರೋಗಳಿಗಿರುವ ಅಭಿಮಾನಿಗಳ ಸಂಖ್ಯೆ ಬೇರೆ ಯಾವುದಕ್ಕೂ ಇಲ್ಲ. ಹೀಗಾಗಿ ಅವರನ್ನು ಹತ್ತಿರದಿಂದ ಕಾಣಸಿಗುವ ಅವಕಾಶವಿದೆ ಎಂದಾಗ ಇಂದಿನ ಯುವಜನತೆ ಅದಕ್ಕಾಗಿ ಮುಗಿಬೀಳದೆ ಇರುತ್ತಾರೆಯೇ? ತಮ್ಮ ನೆಚ್ಚಿನ ಹೀರೋನನ್ನು ಕಾಣಬೇಕೆಂಬ ಧಾವಂತದಲ್ಲಿ ಬೇರೆಯವರ ಕೈ, ಕಾಲು ತುಳಿದುಕೊಂಡು ಓಡಾಡಿದರೂ ಆಶ್ಚರ್ಯವಿಲ್ಲ. ಇತ್ತೀಚೆಗೆ ಬೆಂಗಳೂರಿಗೆ ತಮ್ಮ ಹೊಸ ಚಿತ್ರದ ಪ್ರಚಾರಕ್ಕಾಗಿ ಅಕ್ಷಯ್ ಕುಮಾರ್ ಬಂದಿದ್ದಾಗ ಆದದ್ದೂ ಇದೇ…. ಕ್ರೇಜ್ ಅಂದ್ರೆ ಇದೇ ಅಲ್ಲವೇ?
ಫ್ಯಾಟ್…..ಬಟ್ ಆಲ್ಸೋ ಸ್ಮಾರ್ಟ್! : ಇತ್ತೀಚೆಗೆ ಯೂರೋಪಿನ ಬಹುತೇಕ ರಾಷ್ಟ್ರಗಳಲ್ಲಿ ಡುಮ್ಮಿಯರಿಗೆಂದೇ ವಿಶೇಷ ಮಾಡೆಲಿಂಗ್ ಟ್ರೇನಿಂಗ್ ಏಜೆನ್ಸಿಗಳು ಶುರುವಾಗಿವೆಯಂತೆ. ದಪ್ಪ ಆಗಿದ್ದರೇನಂತೆ? ಸ್ಮಾರ್ಟ್ ಆಗಿ ತುಂಡುಡುಗೆಯಲ್ಲಿ ಮಿಂಚಲು, ತಮ್ಮ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಇವರು ಸದಾ ರೆಡಿ!