ಒಡವೆಗಳನ್ನು ಸದಾ ಡ್ರೈ ಶುಭ್ರವಾದ ಜಾಗದಲ್ಲೇ ಇಡಬೇಕು, ಏಕೆಂದರೆ ತೇವಾಂಶದ ಕಾಟದಿಂದ ಅದು ಹಾಳಾಗುವ ಸಾಧ್ಯತೆಗಳಿವೆ.
ಒಡವೆಗಳನ್ನು ಸದಾ ಜ್ಯೂವೆಲರ್ನಿಂದ ಸಿಗುವ ಗುಲಾಬಿ ಬಣ್ಣದ ಟಿಶ್ಯು ಪೇಪರ್ ಯಾ ಝಿಪ್ ಲಾಕ್ ಬ್ಯಾಗ್ನಲ್ಲಿ ಹಾಕಿಡಬೇಕು. ಜೊತೆಗೆ ಫ್ಯಾಬ್ರಿಕ್ ಲೈನಿಂಗ್ವುಳ್ಳ ಪರ್ಸ್ನಲ್ಲೂ ಇವನ್ನು ಇಡಬಹುದು.
ಶುಭ್ರಗೊಳಿಸಿ, ಚೆನ್ನಾಗಿ ಒಣಗಿಸಿದ ನಂತರವೇ ಇವನ್ನು ಹೀಗೆ ಎತ್ತಿಡಬೇಕು. ಫ್ಯಾನ್ಸಿ, ಲೆದರ್ ಡಬ್ಬಿ ಯಾವ ಸಂಚಿಯಲ್ಲೂ ಇಡಬಹುದು.
ಯಾವುದೇ ಒಡವೆಯ ಮೇಲೆ ಎಂದೂ ಪರ್ಫ್ಯೂಮ್, ಸೆಂಟ್ ಸಿಂಪಡಿಸಬಾರದು. ಮೇಕಪ್ ಸಾಮಗ್ರಿಗಳನ್ನೂ ಇದಕ್ಕೆ ತಗುಲದಂತೆ ದೂರವಿಡಬೇಕು, ಇಲ್ಲದಿದ್ದರೆ ಒಡವೆಗಳಿಗೆ ಹಾನಿ ತಪ್ಪಿದ್ದಲ್ಲ.
ಎಂದೂ ಬೆಳ್ಳಿ, ಸುವರ್ಣ, ಮುತ್ತು, ಪ್ಲಾಟಿನಂ ಆಭರಣಗಳನ್ನು ಒಂದೇ ಡಬ್ಬಕ್ಕೆ ಹಾಕಿಡಬೇಡಿ. ಇವನ್ನು ಬೇರೆ ಬೇರೆ ಟಿಶ್ಯು ಪೇಪರ್ನಲ್ಲಿ ಸುತ್ತಿ ಬೇರೆ ಬೇರೆ ಝಿಫ್ ಲಾಕ್ ಬ್ಯಾಗುಗಳಲ್ಲೇ ಇಡಬೇಕು. ಇದರಿಂದ ಅವುಗಳ ಮೇಲೆ ಸ್ಕ್ರಾಚ್ ಆಗುವುದಿಲ್ಲ. ಅವುಗಳ ಬಣ್ಣ ಸಹ ಉಜ್ವಲ ಹೊಳೆಯುತ್ತಿರುತ್ತದೆ.
ಒಡವೆಗಳ ದುಬಾರಿ ನವರತ್ನಗಳ ಮೇಲೆ ಗೋಂದಿನಂಥ ಅಂಟು ಪದಾರ್ಥಗಳೇನಾದರೂ ತಗುಲಿದ್ದರೆ, ಬಿಸಿ ನೀರಲ್ಲಿ ಮುಳುಗಿಸಿಡಬೇಡಿ. ಕ್ಲೋರಿನ್ ಬೆರೆತ ನೀರು ಒಡವೆಗಳಿಗೆ ಎಂದಿಗೂ ತಗುಲಬಾರದು.
ಸಿಂಕ್ನಲ್ಲಿ ಹರಿವ ನಲ್ಲಿಯ ನೀರಲ್ಲಿ ಒಡವೆ ತೊಳೆಯುತ್ತಿದ್ದರೆ, ಅಡಿಭಾಗದಲ್ಲಿ ಸದಾ ಒಂದು ಪ್ಲಾಸ್ಟಿಕ್ ಜರಡಿ ಇರಲಿ. ಇದರಿಂದ ಒಡವೆ ಕೈಜಾರಿ ಕೆಳಗೆ ಬೀಳುವುದಿಲ್ಲ, ಸಿಂಕ್ ಪೈಪ್ನಲ್ಲಿ ಕಳೆದು ಹೋಗುವುದೂ ಇಲ್ಲ. ಚೆನ್ನಾಗಿ ಒರೆಸಿ, ಗಾಳಿ ಆಡುವಂತೆ ಒಣಗಿಸಿದ ಮೇಲೆ, ಎತ್ತಿಡಿ. ಆಗಾಗ ಗಾಳಿಗೆ ಎತ್ತಿಡುವುದೂ ಒಳ್ಳೆಯದು.
– ಉಮಾ ಮಹೇಶ್ವರಿ