ನವ ಸಂವತ್ಸರ ಭೂಮಿಗೆ ಬಂದು ಸುರಲೋಕದ ಸುರನದಿಯಲಿ ಮಿಂದು ನವ ಸಂವತ್ಸರ ಭೂಮಿಗೆ ಬಂದು ಕರೆಯುತಿದೆ ನಮ್ಮನ್ನು ಇಂದು ಮಾವಿನ ಬೇವಿನ ತೋರಣ ಕಟ್ಟಿ ಬೇವು ಬೆಲ್ಲಗಳ ಒಟ್ಟಿಗೆ ಕುಟ್ಟಿ ಜೀವನವೆಲ್ಲ ಬೇವು ಬೆಲ್ಲ! ಎಂಬ ಪ್ರಕೃತಿ ಕವಿ ಕುವೆಂಪು ಸಾಲಿನಂತೆ ಮತ್ತೊಂದು ಸಂವತ್ಸರದ ಸ್ವಾಗತಕ್ಕೆ ನಾವೆಲ್ಲ ಸಜ್ಜಾಗಿದ್ದೇವೆ. ಏಪ್ರಿಲ್ ‌ಯುಗಾದಿ ಹಬ್ಬ ಅಂದು ನಾವು ಶಾರ್ವರಿ ಸಂವತ್ಸರ ದಾಟಿ ವಿಪ್ಲವ ಸಂತ್ಸರಕ್ಕೆ ಕಾಲಿಡುತ್ತೇವೆ. ಇದು 60 ಸಂವತ್ಸರಗಳಲ್ಲಿ 25ನೆಯದು. ಇಂತಹ ಸಂವತ್ಸರ ಚಕ್ರ ಹಿಂದೆಷ್ಟೋ ಕಳೆದುಹೋಗಿವೆ. 60 ಸಂವತ್ಸರಗಳಿಗೆ ಒಂದು ಸಂವತ್ಸರ ಚಕ್ರ ಮುಕ್ತವಾಯಾಗುತ್ತದೆ. ಪ್ರಭವನಾಮ ಸಂವತ್ಸರ ಮೊದಲನೆಯದಾದರೆ ಅಕ್ಷಯ ಸಂವತ್ಸರ ಕಡೆಯದು.

ಚೈತ್ರ ಬಂದಿಹಳು ಚೈತನ್ಯ ತಂದಿಹಳು ಗಾನಕೋಗಿಲೆ ಕೂಗಿ ಕರೆದಿದೆ ಚೈತ್ರ ಮಾಸನಿಲ್ಲಿಗೆ ಎಂಬ ಭಾರತೀಯ ಸಾಂಸ್ಕೃತಿಕ ಪರಂಪರೆಯಲ್ಲಿ ಮಹತ್ವದ ಸ್ಥಾನವಿರುವ ಯುಗಾದಿ ಬಗ್ಗೆ ಒಂದಷ್ಟು ಮಾತು. ಭಾರತೀಯರ ಹೊಸ ವರ್ಷ ಯುಗಾದಿಯಿಂದಲೇ ಪ್ರಾರಂಭವಾಗುತ್ತದೆ. ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ ತೀವ್ರವಾಗಿರುವ ಈ ದಿನಮಾನಗಳಲ್ಲಿ ಭಾರತೀಯ ಹಬ್ಬಗಳ ಹಾಗೂ ಅವುಗಳ ಸಾಂಸ್ಕೃತಿಕ ಆಯಾಮಗಳನ್ನು ಅವಲೋಕನ ಮಾಡುವುದು ಮುಖ್ಯವಾಗಿದೆ.

ಭಾರತೀಯ ಹಬ್ಬಗಳಿಗೆ ಪುರಾಣ ಪರಂಪರೆಯೇ ಪ್ರಧಾನವಾಗಿದೆ. ಅದರಲ್ಲಿ ಯುಗಾದಿ ಹಾಗೂ ಸಂಕ್ರಾಂತಿಯಂತಹ ಹಬ್ಬಗಳು ಪುರಾಣದ ಕಥೆ ಅವಲಂಬನೆಯ ಜೊತೆಗೆ ಕಾಲಘಟ್ಟದ ಪ್ರಮುಖ ತಿರುವುಗಳಾಗಿ ಬೆಳೆದುಕೊಂಡು ಬಂದಿವೆ. `ಯುಗ' ಮತ್ತು `ಆದಿ' ಸೇರಿ ಯುಗಾದಿ ಆಗಿದೆ.

ugadi-1_0_0_0_0

ಯುಗಾದಿ ಮೂಲತಃ ಸಂಸ್ಕೃತ ಪದ, ಇದರ ತದ್ಭವವೇ `ಉಗಾದಿ.' ಯುಗವೆಂದರೆ ಕಾಲ, ವರ್ಷ ಇಂತಹ ವರ್ಷದ ಆರಂಭವೇ ಯುಗಾದಿ ಎನ್ನಬಹುದು.

`ಯುಗಾದಿ'ಯನ್ನು ಆಯನಗಳ ಜೋಡಿ ಎಂದು ಕರೆಯುವುದು `ಯುಗ' ಪದಕ್ಕೆ `ಜೋಡಿ' ಅಥವಾ `ಜೊತೆ' ಎಂಬ ಅರ್ಥ ಇದೆ. ಹಾಗಿದ್ರೆ ಯಾವ ಜೊತೆ ಎಂದು ಯೋಚಿಸಿದರೆ ನಮಗೆ ತಕ್ಷಣಕ್ಕೆ `ಉತ್ತರಾಯಣ' ಮತ್ತು `ದಕ್ಷಿಣಾಯನ'ಗಳೆಂಬ ಎರಡು ಆಯನಗಳ ಜೋಡಿ ನೆನಪಾಗುತ್ತದೆ. ಈ ಆಯನಗಳ ಜೋಡಿ ಕಳೆದು ಹೊಸ ಜೋಡಿ ಪ್ರಾರಂಭವಾಗುವುದರಿಂದ ಇದು ಯುಗಾದಿ.

`ಯುಗ' ಪದಕ್ಕಿರುವ ಮತ್ತೊಂದು ಅರ್ಥ ದ್ವಂದ್ವ ಅರ್ಥಾತ್‌ ಸುಖದುಃಖಗಳೆಂಬ ದ್ವಂದ್ವ. `ಯುಗಾದಿ' ಆಡು ಮಾತಿನಲ್ಲಿ `ಉಗಾದಿ' ಆಗಿದೆ. ಚೈತ್ರ ಶುದ್ಧ ಪಾಡ್ಯದಂದೇ ಏಕೆ ಹಬ್ಬ ಆಚರಿಸಬೇಕು? ಅದಕ್ಕೂ ಕಾರಣವಿದೆ ಕೇಳಿ. ಜಗತ್ತು ಸೃಷ್ಟಿಯಾದದ್ದು ಚೈತ್ರ ಶುದ್ಧ ಪಾಡ್ಯದಂದೇ ಎಂದು ಬ್ರಹ್ಮಾಂಡ ಪುರಾಣದಲ್ಲಿ ವ್ಯಕ್ತವಾಗಿದೆ. ಬ್ರಹ್ಮ ಚೈತ್ರ ಮಾಸದ ಶುಕ್ಲಪಕ್ಷದ ಪ್ರಥಮ ದಿನದಂದು ಸೂರ್ಯೋದಯದ ವೇಳೆಯಲ್ಲಿ ಗ್ರಹ, ಋತು, ತಿಂಗಳು ಅಧಿಪತಿಗಳನ್ನೊಳಗೊಂಡಂತೆ ಸಮಸ್ತ ಲೋಕವನ್ನು ಸೃಷ್ಟಿಸಿದರು.

ಕಾಲದ ಗಣನೆಯನ್ನೂ ಸಹ ಅಂದಿನಿಂದಲೇ ಆರಂಭಿಸಲಾಯಿತು. ಈ ಕಾಣದಿಂದಾಗಿ ಚೈತ್ರ ಶುದ್ಧ ಪಾಡ್ಯವೇ ವರ್ಷದ ಮೊದಲ ದಿನವೆಂದು ಪರಿಗಣನೆಯಾಯಿತು.

diya

ಪ್ರಪಂಚದಲ್ಲಿ ಯುಗಾದಿ ಹಬ್ಬದ ಆಚರಣೆ ತುಂಬಾ ಪ್ರಾಚೀನ ಕಾಲದಿಂದ ನಡೆದುಕೊಂಡು ಬಂದಿದೆ. ಕಿ.ಪೂ.ದಲ್ಲಿ ಮೆಸಟೋಮಿಯಾದಲ್ಲೂ ಯುಗಾದಿ ಆಚರಣೆಯಿತ್ತು ಎಂದು ಹೇಳುವುದಿದೆ. ಮಲ್ಲಿನಾಥನೆಂಬ 14ನೇ ತೀರ್ಥಂಕರ ಹುಟ್ಟಿದ್ದು, ಆದಿ ತೀರ್ಥಂಕರನ ಮಗ ಭರತ ದಿಗ್ವಿಜಯ ಸಾಧಿಸಿದ್ದು ಯುಗಾದಿ ದಿನವಾದ್ದರಿಂದ ಜೈನರಿಗೂ ಯುಗಾದಿ ಮಹತ್ವದ ದಿನವೇ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ