ಶರತ್ ಚಂದ್ರ
ಕನ್ನಡ ಚಿತ್ರರಂಗದ ಕಿತ್ತೂರ ರಾಣಿ ಚೆನ್ನಮ್ಮ ಬಿ ಸರೋಜಾ ದೇವಿ ಇನ್ನು ನೆನಪು ಮಾತ್ರ. ಅವರ ಹಲವಾರು ಚಿತ್ರಗಳಲ್ಲಿ ಶ್ರೇಷ್ಠ ಅಭಿನಯ ನೀದಡಿ ದ್ದರೂ ಕೂಡ,' ಕಿತ್ತೂರು ರಾಣಿ ಚೆನ್ನಮ್ಮ' ಚಿತ್ರದ ವೀರ ಮಹಿಳೆಯಾಗಿ ಅವರು ನೀಡಿರುವ ಅಭಿನಯ ಮರೆಯುವಂತಿಲ್ಲ. ಆ ಚಿತ್ರದ ಜನಪ್ರಿಯ ಸನ್ನಿವೇಶ, ಅದರಲ್ಲೂ ಬಿ ಸರೋಜಾ ದೇವಿ ಎಂದರೆ ನೆನಪಾಗುವ ಸಂಭಾಷಣೆ ಎಂದರೆ,'' ನಿಮಗೇಕೆ ಕೊಡಬೇಕು ಕಪ್ಪ ? ಎನ್ನುವ ಐಕಾನಿಕ್ ಡೈಲಾಗ್.
ಬಿ. ಸರೋಜಾ ದೇವಿ ಅವರು ನಟಿಸಿರುವ ಹೆಚ್ಚಿನ ಚಿತ್ರಗಳ ಹಾಡುಗಳು ಕೂಡ ಇಂದಿಗೂ ಕನ್ನಡಿಗರ ಮನದಲ್ಲಿ ಚಿರಸ್ಥಾಯಿಯಾಗಿ ಉಳಿದಿವೆ. ವಿಶೇಷ ವೆಂದರೆ ಅವರು ಅಭಿನಯಿಸಿರುವ ಹೆಚ್ಚಿನ ಎಲ್ಲಾ ಜನಪ್ರಿಯ ಹಾಡುಗಳಿಗೆ ದನಿಯಾಗಿದ್ದು ಗಾಯಕಿ ಪಿ. ಸುಶೀಲಾ. ಸುಶೀಲ ಅವರ ಹಾಡುಗಳಿಗೆ ಜೀವಂತಿಕೆ ಬರುತ್ತಿದ್ದುದು ಬಿ.ಸರೋಜಾ ದೇವಿಯವರ ಅದ್ಭುತ ಭಾವಭಿನಯದಿಂದ.
ಕನ್ನಡದ ಪ್ರಪ್ರಥಮ ವರ್ಣ ಚಿತ್ರ' ಅಮರ ಶಿಲ್ಪಿ ಜಕ್ಕಣ್ಣಾಚಾರಿ' ಚಿತ್ರದ 'ಏನೋ ಎಂತೊ' 'ಚೆಲುವಾಂತ ಚೆನ್ನಿಗನೆ ನಲಿದಾಡು ಬಾ', ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ಮಲ್ಲಮ್ಮನ ಪವಾಡ' ಚಿತ್ರದ 'ಶರನೆಂಬೆನಾ ಶಶಿಭೂಷಣ' ಇಂದಿಗೂ ಜನರ ಬಾಯಲ್ಲಿ ನಲಿದಾಡುತ್ತಿದೆ.
ಕಿತ್ತೂರು ಚೆನ್ನಮ್ಮ ಚಿತ್ರದಲ್ಲಿ ಅಳವಡಿಸಲಾದ
ಅಕ್ಕಮಹಾದೇವಿಯವರ ವಚನ 'ತನು ಕರಗದವರಲ್ಲಿ' ಹಾಡು ಕೇಳುವಾಗ ಬಿ. ಸರೋಜಾ ಅವರ ಮುಖ ನಿಜಕ್ಕೂ ಕಣ್ಮುಂದೆ ಬರುತ್ತದೆ.
ಡಾ. ರಾಜಕುಮಾರ್ ಅವರ ಜೊತೆ ನಟಿಸಿರುವ ನ್ಯಾಯವೇ ದೇವರು ಚಿತ್ರದ ಎಂದೆಂದೂ ನೀವು ಸುಖವಾಗಿರಿ' ಭಾಗ್ಯವಂತರು ಚಿತ್ರದ ' ನಿನ್ನ ಸ್ನೇಹಕೆ ಸೋತು ಹೋದೆನು' ಹೀಗೆ ಸರೋಜ ದೇವಿಯವರ ಹೆಚ್ಚಿನ ಹಾಡುಗಳಿಗೆ ಸುಶೀಲ ಕಂಠ ನೀಡಿದ್ದು ಆ ಹಾಡುಗಳು ಇಂದಿಗೂ ಸಂಗೀತ ಪ್ರಿಯರ ಅಚ್ಚು ಮೆಚ್ಚಿನ ಹಾಡುಗಳಾಗಿ ಜೀವಂತ ವಾಗಿ ಉಳಿದಿವೆ.
ಬಬ್ರುವಾಹನ, ಶ್ರೀ ಶ್ರೀನಿವಾಸ ಕಲ್ಯಾಣ ಮುಂತಾದ ಚಿತ್ರಗಳ ಜನಪ್ರಿಯ ಹಾಡುಗಳನ್ನು ಎಸ್. ಜಾನಕಿಯ ವರೂ ಹಾಡಿದರೂ ಕೂಡ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ಸರೋಜಾ ದೇವಿಯವರ ಹೆಚ್ಚಿನ ಸೂಪರ್ ಹಿಟ್ ಹಾಡುಗಳನ್ನು ಹಾಡಿರುವ ಶ್ರೇಯ ಪಿ. ಸುಶೀಲ ಅವರಿಗೆ ಸಲ್ಲುತ್ತದೆ.
ಪಿ. ಸುಶೀಲ ಕನ್ನಡ ಚಿತ್ರಗಳಿಗಿಂತಲೂ ಬಿ ಸರೋಜಾ ದೇವಿ ನಟಿಸಿರುವ ತಮಿಳು ಚಿತ್ರಗಳ ಎಲ್ಲಾ ಹೆಚ್ಚಿನ ಹಾಡುಗಳು ದನಿಯಾಗಿದ್ದರು. ಅದರಲ್ಲೂ ವಿಶೇಷವಾಗಿ ಎಂಜಿಆರ್ ಜೊತೆ ಸರೋಜಾ ದೇವಿ ನಟಿಸಿರುವ ಹೆಚ್ಚಿನ ಚಿತ್ರಗಳಲ್ಲಿ ಪಿ ಸುಶೀಲಾ ಅವರ ವಾಯ್ಸ್ ಇರುತ್ತಿತ್ತು.
ಇಬ್ಬರು ಉತ್ತಮ ಸ್ನೇಹಿತೆಯರಾಗಿದ್ದು, ಇಬ್ಬರೂ ವೃತ್ತಿ ಜೀವನದಲ್ಲಿ ನಿವೃತ್ತಿ ಹೊಂದಿದ್ದರೂ ಕೂಡ, ಸರೋಜಾ ದೇವಿಯವರು ಬದುಕಿದ್ದಾಗ ಗೆಳತಿ ಪಿ ಸುಶೀಲ ಅವರನ್ನು ಆಗಾಗ ಭೇಟಿ ಮಾಡುತ್ತಿದ್ದರು.