ಕಂಟೆಂಟ್ ಮತ್ತು ತಂತ್ರಜ್ಞಾನ ಶಕ್ತಿ ಕೇಂದ್ರವಾದ ಜೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್ (‘Z’), ದೇಶಾದ್ಯಂತ ಯುವ, ಉದಯೋನ್ಮುಖ ಚಿತ್ರಕಥೆ ಪ್ರತಿಭೆಗಳನ್ನು ಗುರುತಿಸಲು ಹೊರಟಿದೆ.

ಜೀ಼ ರೈಟರ್ಸ್ ರೂಮ್‌ ಕೇವಲ ಪ್ರತಿಭೆಗಳನ್ನು ಹುಡುಕುವುದು ಮಾತ್ರವಲ್ಲದೇ ಅದಕ್ಕಿಂತಲೂ ಮಿಗಿಲಾದ ಯುವ, ಉದಯೋನ್ಮುಖ ಚಿತ್ರಕಥೆ ಬರಹಗಾರರ ಪ್ರತಿಭೆಯನ್ನು ಪತ್ತೆ ಹಚ್ಚಲಿದೆ.  ಇದು ಕಂಪನಿಯ ಬ್ರಾಂಡ್ ಫಿಲಾಸಫಿಯಾದ ಯುವರ್ಸ್ ಟ್ರೂಲಿ, ಝೀ, ಜೊತೆಗೆ ತನ್ನ ಕಂಟೆಂಟ್ ಕೊಡುಗೆಯನ್ನು ಪ್ಲಾಟ್‌ಫಾರ್ಮ್‌ಗಳಾದ್ಯಂತ ಬೆಳೆಸುವ ಗುರಿಯೊಂದಿಗೆ ಉದ್ದೇಶಿಸಲಾದ ಸೃಜನಶೀಲ ಪ್ರಯತ್ನವಾಗಿದೆ.

ಆಯ್ದ ಬರಹಗಾರರಿಗೆ ಜೀ಼ ನ ವಿಸ್ತೃತ ಟಿವಿ, ಡಿಜಿಟಲ್ ಮತ್ತು ಚಲನಚಿತ್ರ ಪ್ಲಾಟ್‍ಫಾರ್ಮ್‌ಗಳಲ್ಲಿ ಕಥೆಗಳನ್ನು ರಚಿಸಲು ಅವಕಾಶ ನೀಡುತ್ತಿದೆ.

ಭಾರತದ ಮನರಂಜನಾ ಪ್ರಪಂಚದಲ್ಲಿ ವಿಕಸನಗೊಳ್ಳುತ್ತಿರುವ ಅಗತ್ಯಗಳೊಂದಿಗೆ ಇನ್ನೂ ಗುರುತಿಸಲ್ಪಟ್ಟಿರದ ಪ್ರತಿಭೆಗಳನ್ನು ಸಂಪರ್ಕಿಸುವುದಕ್ಕಾಗಿ ‘ಜೀ಼ ನ ಪ್ರಮುಖ ಕಂಟೆಂಟ್ ಮತ್ತು ಪ್ರಾದೇಶಿಕ ತಂಡಗಳ ನೇತೃತ್ವದಲ್ಲಿ ಈ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ.

80 ನಗರಗಳು ಮತ್ತು 32 ಈವೆಂಟ್ ಸೆಂಟರ್‌ಗಳಲ್ಲಿ ಹೊರಹೊಮ್ಮುತ್ತಿರುವ, ಈ ಅಭಿಯಾನವು ಪ್ರಸಾರ, ಡಿಜಿಟಲ್ ಮತ್ತು ಆನ್-ಗ್ರೌಂಡ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹೆಚ್ಚಿನ-ಪ್ರಭಾವದ ಪ್ರೊಮೋಷನಲ್ ಬ್ಲಿಟ್ಜ್ ಮೂಲಕ ವಿಸ್ತರಿಸಲಾಗುತ್ತಿದೆ.

ಈ ಕಾರ್ಯಕ್ರಮವು ಹಿಂದಿ, ಮರಾಠಿ, ಬಂಗಾಳಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿನ ಭರವಸೆಯ ಕಥೆಗಾರರನ್ನು ಗುರಿಯಾಗಿಸಿಕೊಂಡು, ಕಲ್ಪನೆ, ರಚನೆ ಮತ್ತು ನಿರೂಪಣಾ ಕೌಶಲ್ಯವನ್ನು ಪೋಷಿಸುವಂತಹ ಸಂಯೋಜಿತ ಬರಹಗಾರರ ರೂಮ್‌ಗೆ ಪ್ರವೇಶಿಸಲು ಅಭೂತಪೂರ್ವ ಅವಕಾಶ ನೀಡುತ್ತದೆ.

Watch the brand film here: ZEE Writers' Room Brand Film  ಈ ಕಾರ್ಯಕ್ರಮದ ಬಗ್ಗೆ ಮತಾನಾಡಿದ ಝೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ಚೀಫ್ ಕ್ರಿಯೇಟಿವ್ ಆಫೀಸರ್ ರಾಘವೇಂದ್ರ ಹುಣಸೂರು, “ಭಾರತದ ಅತಿದೊಡ್ಡ ಕಥೆಗಾರರಲ್ಲಿ ಒಬ್ಬರಾಗಿ. ಇದು ಕೇವಲ ನಮ್ಮ ಅವಕಾಶ ಮಾತ್ರವಲ್ಲದೇ, ಮುಂದಿನ ಪೀಳಿಗೆಯ ಬರವಣಿಗೆಯ ಪ್ರತಿಭೆಯನ್ನು ಪೋಷಿಸುವುದು ನಮ್ಮ ಕರ್ತವ್ಯ ಕೂಡ ಆಗಿದೆ. ಝೀ ರೈಟರ್ಸ್ ರೂಮ್‌ನೊಂದಿಗೆ, ನಾವು ಹೊಸ ಧ್ವನಿಗಳು, ಕೇಳಿರದ ವಿಚಾರಗಳು ಮತ್ತು ಪ್ರಾಮಾಣಿಕ ಭಾವನೆಗಳು ಒಂದು ರೂಪ ತಾಳುವಂತೆ ಮಾಡುತ್ತೇವೆ. ಇದು ಒಂದು ಸ್ಪರ್ಧೆಯಲ್ಲ - ಇದು ಒಂದು ಬದ್ಧತೆಯಾಗಿದೆ. ನಾವು ಕ್ರಿಯೇಟರ್‌ಗಳನ್ನು ಸಬಲೀಕರಣಗೊಳಿಸುವುದು, ಅವರಿಗೆ ಕೌಶಲ, ಧೈರ್ಯ ಮತ್ತು ಅವಕಾಶ ನೀಡುವುದು. ಏಕೆಂದರೆ ಕಥೆ ಹೇಳುವುದರ ಭವಿಷ್ಯವು ನಾವು ಏನು ಮಾಡುತ್ತೇವೋ ಅದು ಮಾತ್ರವಾಗಿರದೇ - ನಾವು ಅದನ್ನು ಯಾರೊಂದಿಗೆ ಮಾಡುತ್ತಿದ್ದೇವೆ ಎಂಬುದು ಕೂಡ ಮುಖ್ಯವಾಗಿರುತ್ತದೆ ಎಂದರು.

ಜೀ಼ ನ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ಕಾರ್ತಿಕ್ ಮಹಾದೇವ್ ಮಾತನಾಡಿ, " ಜೀ಼ ರೈಟರ್ಸ್ ರೂಮ್‌ ಮೂಲಕ  ಕಥೆ ಹೇಳುವ ಕೌಶಲ್ಯವನ್ನು ಹೆಚ್ಚಿಸುವ ಮೂಲಕ ಒಂದು ಹೆಜ್ಜೆ ಮುಂದೆ ಇಡುತ್ತಿದ್ದೇವೆ. ಇದು ಉತ್ಸಾಹಭರಿತ ಬರಹಗಾರರಿಗೆ ನಾಳೆಯ ಕಥೆಗಾರರಾಗಲು ಉತ್ತಮ ಅವಕಾಶ ನೀಡುತ್ತಿದ್ದೇವೆ” ಎಂದರು.

ಜೀ಼ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ಪೂರ್ವ, ಉತ್ತರ, ಪ್ರೀಮಿಯಂ ಕ್ಲಸ್ಟರ್‌ನ ಮುಖ್ಯ ಕ್ಲಸ್ಟರ್ ಅಧಿಕಾರಿ ಸಾಮ್ರಾಟ್ ಘೋಷ್ ಮಾತನಾಡಿ "ಬಂಗಾಳ ಯಾವಾಗಲೂ ಸಾಹಿತ್ಯ ಮತ್ತು ಸಿನಿಮಾ ಪ್ರತಿಭೆಯ ಕೇಂದ್ರವಾಗಿದೆ. ಜೀ಼ ರೈಟರ್ಸ್ ರೂಮ್‌ ಮೂಲಕ ಉದಯೋನ್ಮುಖ ಬಂಗಾಳಿ ಕಥೆಗಾರರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ನಾವು ನವಯುಗದ ಪ್ಲಾಟ್‌ಫಾರ್ಮ್ ಅನ್ನು ನಿರ್ಮಿಸುತ್ತಿದ್ದೇವೆ" ಎಂದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ