– ರಾಘವೇಂದ್ರ ಅಡಿಗ ಎಚ್ಚೆನ್.

ಕಿಚ್ಚ ಸುದೀಪ್ ಇಂದು 52ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ತಮ್ಮ 52ನೇ ಹುಟ್ಟುಹಬ್ಬವನ್ನ ಅದ್ಧೂರಿಯಾಗಿ ಬೆಂಗಳೂರಿನ ನಂದಿಲಿಂಕ್ ಗ್ರೌಂಡ್​ನಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಸೆಲಬ್ರೇಟ್ ಮಾಡಿಕೊಂಡಿದ್ದಾರೆ.

wmremove-transformed-2

ಬಾದ್​​ ಷಾ ಸುದೀಪ್​​ ಅವರು ರಾತ್ರಿ ಹನ್ನೆರಡು ಗಂಟೆಗೆ ಕೇಕ್ ಕತ್ತರಿಸಿ ಫ್ಯಾನ್ಸ್ ಜೊತೆ ಸಂಭ್ರಮಿಸಿದ್ದಾರೆ. ಈ ಬಾರಿಯ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಕಿಚ್ಚ ಭರ್ಜರಿ ಉಡುಗೊರೆ ನೀಡಿದ್ದು, ರಾಜ್ಯದ ಮೂಲೆ ಮೂಲೆಗಳಿಂದ ಅಭಿಮಾನಿಗಳು ಆಗಮಿಸಿ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ.

WhatsApp-Image-2025-09-02-at-8.12.24-AM-768x502

ಇನ್ನೂ ನಂದಿಲಿಂಕ್ ಗ್ರೌಂಡ್‌ನಲ್ಲಿ ಅಭಿಮಾನಿಗಳ ಘೋಷಣೆ ಮುಗಿಲುಮುಟ್ಟಿತ್ತು. ರಾತ್ರಿಯೆಲ್ಲ ಕಿಚ್ಚನ ಅಭಿಮಾನಿಗಳು ಸಡಗರ ಸಂಭ್ರಮದಲ್ಲಿ ತೊಡಗಿದ್ದಾರೆ. ಸುದೀಪ್‌ ಅವರಿಗೆ ಒತ್ತಡದ ಕೆಲಸವಿದ್ದ ಕಾರಣ ರಾತ್ರಿಯೇ ಅಭಿಮಾನಿಗಳೊಟ್ಟಿಗೆ ಕೇಕ್‌ ಕತ್ತರಿಸಿ ಬರ್ತ್ ಡೇ ಸೆಲಬ್ರೇಷನ್ ಮಾಡಿದ್ದಾರೆ.

FB_IMG_1756750291668 (1)

ಕಿಚ್ಚ ಸುದೀಪ್ ಭೇಟಿಗಾಗಿ, ಅವರ ಹುಟ್ಟುಹಬ್ಬ ಆಚರಣೆಗಾಗಿ ಕಾದ ಅಭಿಮಾನಿಗಳನ್ನ ನಿರಾಸೆಗೊಳಿಸದೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಕಿಚ್ಚ ಸುದೀಪ್ ರಾತ್ರಿ ಕೇಕ್ ಕತ್ತರಿಸಿದ ಬಳಿಕ ಅಭಿಮಾನಿಗಳ ಮುಂದೆ ಮನಬಿಚ್ಚಿ ಮಾತಾಡಿದ್ದಾರೆ. ಇದೇ ವೇಳೆ ಬಿಗ್‌ ಸ್ಕ್ರೀನ್‌ನಲ್ಲಿ ಅಭಿಮಾನಿಗಳಿಗಾಗಿ ‘ಮಾರ್ಕ್‌’ ಟೈಟಲ್‌ ಟೀಸರ್‌ ಅನ್ನೂ ಸಹ ಪ್ರಸಾರ ಮಾಡಲಾಗಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ