ಕೈಯಿಂದ ಹೆಣೆದ ಸ್ವೆಟರ್‌, ಶಾಲು, ಕ್ಯಾಪ್ಇವು ಕೇವಲ ಚಳಿಯನ್ನಷ್ಟೇ ಓಡಿಸುವುದಿಲ್ಲ. ಹಲವು ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನೂ ಸಹ ದೂರ ಓಡಿಸುತ್ತವೆ.....

2020ರಲ್ಲಿ ಶೇ.80ರಷ್ಟು ಭಾರತೀಯರು ಕೆಲಸ, ಆರೋಗ್ಯ ಹಾಗೂ ಇತರೆ ಆರ್ಥಿಕ ಕಾರಣಗಳಿಂದ ಒತ್ತಡಕ್ಕೆ ಸಿಲುಕಿದ್ದವರು ಎಂದು ಸಮೀಕ್ಷೆಯೊಂದರ ಅಂಕಿಅಂಶದಿಂದ ಗೊತ್ತಾಗಿತ್ತು. ಆ ಕಾರಣಗಳಿಂದಷ್ಟೇ ಅಲ್ಲ, ನಾವು ಪ್ರತಿದಿನ ಬೇರೆ ಕೆಲವು ಕಾರಣಗಳಿಂದ ಒತ್ತಡಕ್ಕೆ ತುತ್ತಾಗುತ್ತಿರುತ್ತೇವೆ. ಅದರಿಂದ ಹೊರಬರಲು ಆ್ಯಂಟಿ ಸ್ಟ್ರೆಸ್‌ ಸಂಗತಿಗಳ ಬಗ್ಗೆ ಯೋಚಿಸುವುದು ಅನಿವಾರ್ಯವಾಗಿದೆ. ಏಕೆಂದರೆ ನಾವು ಖುಷಿಯಿಂದಿರಬೇಕಿದೆ. ಪ್ರೊಡಕ್ಟಿವ್ ಯೋಚನೆಯ ಬಗ್ಗೆ ತರ್ಕಿಸಬೇಕಿವೆ ನಮ್ಮನ್ನು ನಾವು ಸ್ಟ್ರೆಸ್‌ ನಿಂದ ಹೊರತರಬೇಕಿದೆ.

ಇಂತಹ ಸ್ಥಿತಿಯಲ್ಲಿ ಹೆಣಿಗೆ ಒತ್ತಡದಿಂದ ಹೊರಬರಲು ಅತ್ಯಂತ ಉಪಯುಕ್ತ ಉಪಾಯವಾಗಿದೆ. ಹೆಣಿಗೆಯ ಕುರಿತಂತೆ ಕೆಲವರು ಹೇಳುವುದೇನೆಂದರೆ, ನಾವು ಇದರಿಂದ ಸುಸ್ತಿಗೊಳಗಾಗಿ. ಆಲಸಿಯಾಗುತ್ತೇವೆ. ಆದರೆ ನಿಮಗೆ ಒಂದು ವಿಷಯ ಗೊತ್ತಾ, ಹೆಣಿಗೆಯಿಂದ ನೀವು ಕ್ರಿಯಾಶೀಲರಾಗಿರುತ್ತೀರಿ. ಯಾವುದೇ ಒಂದು ವಿಷಯದ ಬಗ್ಗೆ ನಿಮ್ಮ ಗಮನವನ್ನು ಕೇಂದ್ರೀಕರಿಸುತ್ತೀರಿ. ರಿಲ್ಯಾಕ್ಸ್ ಮೂಡ್‌ ನಲ್ಲಿ ಇರುತ್ತೀರಿ. ನೆಗೆಟಿವ್ ‌ವಿಚಾರಗಳಿಂದ ದೂರ ಇರುತ್ತೀರಿ. ಇದು ನಮ್ಮ ಮೆದುಳಿಗೆ `ಸ್ಟ್ರೆಸ್ ಬಸ್ಟರ್‌'ನ ಹಾಗೆ ಕೆಲಸ ಮಾಡುತ್ತದೆ ಎಂದು ಹೇಳುವುದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ. ಹೆಣಿಗೆಯಿಂದ ಏನೇನು ಲಾಭಗಳಿವೆ ಎನ್ನುವುದನ್ನು ತಿಳಿದುಕೊಳ್ಳಿ.

ಮೆಡಿಟೇಶನ್ ಹಾಗೆ.....

ಯಾವ ರೀತಿ ಮೆಡಿಟೇಶನ್‌ ಅಥವಾ ಧ್ಯಾನ ನಿಮ್ಮ ಮನಸ್ಸನ್ನು ಶಾಂತಗೊಳಿಸಿ, ನಿಮ್ಮ ಗಮನವನ್ನು ಕೇಂದ್ರೀಕೃತಗೊಳಿಸುವ ಕೆಲಸ ಮಾಡುತ್ತದೋ ಅದೇ ರೀತಿ ಹೆಣಿಗೆ ಕೂಡ ನಿಮ್ಮನ್ನು ಗುರಿಯತ್ತ ಕೇಂದ್ರೀಕರಿಸಿ, ನಿಮ್ಮನ್ನು ಒತ್ತಡದಿಂದ ದೂರಗೊಳಿಸುತ್ತದೆ.

ಅನೇಕ ಶೋಧಗಳಿಂದ ಸಾಬೀತಾದ ಸಂಗತಿಯೆಂದರೆ, ಹೆಣಿಗೆಯ ಕೆಲಸ ಯಾರನ್ನು ಒತ್ತಡದಿಂದ ಮುಕ್ತಗೊಳಿಸುತ್ತದೆಂದರೆ, ಅವರು ಬಹುಬೇಗ ಉತ್ಸಾಹಿತರಾಗುತ್ತಾರೆ. ಒತ್ತಡಕ್ಕೆ ಸಿಲುಕುತ್ತಾರೆ ಹಾಗೂ ಚಿಕ್ಕ ಪುಟ್ಟ ಸಂಗತಿಗಳಿಂದ ಟೆನ್ಷನ್‌ ಗೆ ಒಳಗಾಗುತ್ತಾರೆ. ಇದು ಅವರನ್ನು ಮಾನಸಿಕವಾಗಿ ಆರೋಗ್ಯದಿಂದಿಡಲು ನೆರವಾಗುತ್ತದೆ.

ನೀವು ಟೆನ್ಷನ್‌ ಗೊಳಗಾದಾಗ ಕೈಕಾಲು ಅಲ್ಲಾಡಿಸುತ್ತೀರಿ, ಇಲ್ಲಿ ನೋವಿನಿಂದ ನರಳುತ್ತಿರಬಹುದು. ನಿಮ್ಮಲ್ಲಿ ಕೆಲವರಿಗೆ ಈ ಸಂವೇದನೆಗಳ ಅನುಭವ ಮಾಡಿಕೊಂಡಿರಬಹುದು ಅಥವಾ ಇಂಥದೇ ಕೆಲವು ಹೋಲಿಕೆಯಾಗುವ ಲಕ್ಷಣಗಳು ಗೋಚರಿಸಿರಬಹುದು. ಗೊತ್ತಿದ್ದೋ ಗೊತ್ತಿಲ್ಲದೆಯೋ, ನಮ್ಮ ಮೆದುಳು ಈ ರೀತಿಯ ಆಗುಹೋಗುಗಳಲ್ಲಿ ಸೇರ್ಪಡೆಗೊಂಡು, ನಮಗೆ ತೊಂದರೆ ಕೊಡುವ ಭಾವನೆಗಳನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಅದೇ ರೀತಿ ನಾವು ಹೆಣಿಗೆಯ ಮುಖಾಂತರ, ಒಂದೇ ಸಂಗತಿಯನ್ನು ಮೇಲಿಂದ ಮೇಲೆ ಪುನರಾವರ್ತಿಸುತ್ತಿದ್ದರೆ, ನಮ್ಮ ಮೆದುಳಿನಲ್ಲಿ `ಹ್ಯಾಪಿ ಹಾರ್ಮೋನ್ಸ್' ಸಕ್ರಿಯಗೊಂಡು ನಮ್ಮನ್ನು ರಿಲ್ಯಾಕ್ಸ್ ಗೊಳಿಸುವುದರ ಜೊತೆ ಜೊತೆಗೆ ನಮ್ಮನ್ನು ಖುಷಿಯಿಂದಿಡುವ ಕೆಲಸ ಮಾಡುತ್ತದೆ.

ಹೆಣಿಗೆ ಒಂದು ರೀತಿಯಲ್ಲಿ ಮೆಡಿಟೇಶನ್‌ ನಂತೆ. ಏಕೆಂದರೆ ಯಾವ ರೀತಿ ನೀವು ಧ್ಯಾನದ ಸಂದರ್ಭದಲ್ಲಿ ನಿಮ್ಮ ಸಂಪೂರ್ಣ ಗಮನವನ್ನು ಉಸಿರಾಟದ ಪ್ರಕ್ರಿಯೆಯ ಮೇಲೆ ಕೇಂದ್ರೀಕರಿಸುತ್ತೀರೊ, ಅದೇ ರೀತಿ ಹೆಣಿಗೆಯ ಸಂದರ್ಭದಲ್ಲೂ ನೀವು ನಿಮ್ಮ ಹೆಚ್ಚಿನ ಕೆಲಸವನ್ನು ಕೈಗಳ ಮೇಲೆ ಕೇಂದ್ರೀಕೃತಗೊಳಿಸುತ್ತೀರಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ