ಹೊಸ ವರ್ಷದ ಸಂದರ್ಭದಲ್ಲಿ ಅತ್ಯಾಧುನಿಕ ಗ್ಯಾಜೆಟ್ಸ್ ಕೊಳ್ಳಬೇಕೆಂದಿರುವಿರಾ? ಕೆಳಗಿನ ಸಲಹೆಗಳನ್ನು ಅನುಸರಿಸಿ ನಿಮಗೆ ಸೂಕ್ತವಾದ ಗ್ಯಾಜೆಟ್ಸ್ ಕೊಂಡುಕೊಳ್ಳಿ

ಫಿಟ್ನೆಸ್ವಾಚ್

ನೀವು ಫಿಟ್‌ ನೆಸ್‌ ಫ್ರೀಕ್‌ ಆಗಿದ್ದು, ಆ ಕುರಿತು ಬಹಳ ಕಾಳಜಿ ವಹಿಸುತ್ತೀರಾದರೆ, ಅದಕ್ಕೆ ಸಂಬಂಧಿಸಿದ ಸ್ಮಾರ್ಟ್‌ ವಾಚ್‌ ಕೊಳ್ಳುವುದೇ ಸೂಕ್ತ. ಇದು ನಿಮಗೆ ಸಮಯ, ಅಲಾರಂ ಮಾತ್ರವಲ್ಲದೆ ನಿಮ್ಮ ಇಡೀ ದಿನದ ಚಟುವಟಿಕೆ ಟ್ರಾಕ್‌ ಮಾಡುತ್ತಾ, ನೀವು ಸದಾ ಫಿಟ್‌ ಆಗಿರಲೆಂದು ಮೋಟಿವೇಟ್‌ ಸಹ ಮಾಡುತ್ತದೆ.

ಒಂದು ದಿನಕ್ಕೆ ನೀವು 6 ಸಾವಿರ ಹೆಜ್ಜೆ ಇಡಬೇಕಾದುದು ಅನಿವಾರ್ಯ. ಹಾಗಾಗಿ ಇದು ನಿಮಗೆ 10 ನಿಮಿಷಕ್ಕೊಮ್ಮೆ ಬೇಗ ವಾಕಿಂಗ್‌ ಗೆ ಹೊರಡಿ, ಎಂದು ಸೂಚಿಸುತ್ತದೆ. ಈಗ ನೀರು ಕುಡಿಯಬೇಕು ಎಂದೂ ಹೇಳುತ್ತದೆ. ನಿಮ್ಮ ಪ್ರತಿದಿನದ ಫಿಟ್‌ ನೆಸ್‌ಗೋಲ್ ಕಂಪ್ಲೀಟ್‌ ಆದಾಗ, ಇದು ನಿಮಗೆ `ವೆಲ್ ‌ಡನ್‌!' ಮುಂತಾದ ಶಬ್ದಗಳಿಂದ ಮೋಟಿವೇಟ್‌ ಮಾಡುತ್ತದೆ. ಇದರಿಂದ ನೀವು ನಿಮ್ಮ ಡೇಲಿ ವ್ಯಾಯಾಮ, ಕ್ಯಾಲೋರಿಸೀಸ್‌, ನಿದ್ದೆ.... ಇತ್ಯಾದಿ ಸುಲಭವಾಗಿ ಟ್ರಾಕ್‌ ಮಾಡಬಹುದು, ನಿಮ್ಮನ್ನು ಸದಾ ಫಿಟ್‌ ಆಗಿ ಇರಿಸಿಕೊಳ್ಳಬಹುದು. ಇಷ್ಟು ಮಾತ್ರವಲ್ಲ, ಇದರಿಂದ ನೀವು ಸಕಾಲಕ್ಕೆ  ಬಿ‌ಪಿ, ಆಕ್ಸಿಜನ್‌ ಲೆವೆಲ್‌, ಹಾರ್ಟ್‌ ರೇಟ್‌ ಇತ್ಯಾದಿ ಮಾನಿಟರ್‌ ಮಾಡಬಹುದು.

ಏರ್ಪ್ಯೂರಿಫೈರ್

ದಿನೇದಿನೇ ಎಲ್ಲೆಡೆ ವಾಯುಮಾಲಿನ್ಯ ಹೆಚ್ಚುತ್ತಿದೆ. ಇದು ಔಟ್‌ ಡೋರ್‌ ಮಾತ್ರವಲ್ಲದೆ ಇಂಡೋರ್‌ ಸಮಸ್ಯೆಯೂ ಹೌದು. ಹೊರಗಿನ ಮಾಲಿನ್ಯಕ್ಕಿಂತ ಮನೆಯ ಒಳಗಿನ ವಾಯುಮಾಲಿನ್ಯ 5 ಪಟ್ಟು ಹೆಚ್ಚಾಗಿರುತ್ತದೆ, ಏಕೆಂದರೆ ಮನೆಯೊಳಗಿನ ಗಾಳಿ ಹೊರಗಿನ ಗಾಳಿಯಷ್ಟು ವೇಗವಾಗಿ ಚಲಿಸದು. ಇದರಿಂದಾಗಿ ವಾಯುಜನಿತ ದೋಷಗಳು ಮನೆಯ ಒಳಗೆ ಹೆಚ್ಚು ಒತ್ತಡ ಉಂಟು ಮಾಡುತ್ತದೆ. ಹಾಗಾಗಿ ಈ ಏರ್‌ ಪ್ಯೂರಿಫೈರ್‌, ನಿಮ್ಮ ಮನೆಯ ಇಂಡೋರ್‌ ಏರ್‌ ನ್ನು ಸತತ ಫ್ರೆಶ್‌ ಮಾಡುತ್ತಿರುತ್ತದೆ. ಹೀಗಾಗಿ ನೀವು ವಾಯು ಮಾಲಿನ್ಯದಿಂದ ಕಾಡಬಹುದಾದ ರೋಗಗಳಿಂದ ಪಾರಾಗುವಿರಿ. ಆಸ್ತಮಾ, ಉಸಿರುಗಟ್ಟುವ ಹಿಂಸೆ, ಕೆಮ್ಮು ಇತ್ಯಾದಿ ದೂರವಾಗುತ್ತವೆ. ಹೀಗಾಗಿ ಹೊಸ ಗ್ಯಾಜೆಟ್‌ ಕೊಳ್ಳುವ ನಿಮ್ಮ ಪಟ್ಟಿಯಲ್ಲಿ ಅಗತ್ಯವಾಗಿ ಇದೂ ಇರಲಿ.

ಇದಂತೂ ನಿಜಕ್ಕೂ ಅತಿ ಪರಿಣಾಮಕಾರಿ. ಇದನ್ನು ಕೊಳ್ಳುವಾಗ ವಹಿಸಬೇಕಾದ ಎಚ್ಚರಿಕೆ ಎಂದರೆ, ನೀವು ಹೈ ಎಫಿಶಿಯೆನ್ಸಿ ಪಾರ್ಟಿಕುಲೇಟ್‌ ಏರ್‌ ಫಿಲ್ಟರ್‌ ಆರಿಸುವುದಿದ್ದರೆ, 99% ಅತಿ ಸಣ್ಣ ಪಾರ್ಟಿಕಲ್ಸ್ ನ್ನೂ ಅದು ಹೀರಿಕೊಳ್ಳುವುದರಲ್ಲಿ ಸಮರ್ಥ ಆಗಿರುತ್ತದೆ. ಹೀಗಾಗಿ ನೀವು ನಿರೋಗಿ ಆಗಿರಬಹುದು. ಇದರಿಂದ ನಮ್ಮ ನಿದ್ದೆಯ ಗುಣಮಟ್ಟ ಸುಧಾರಿಸುತ್ತದೆ.

Alexa

ಅಲೆಕ್ಸಾ

ಇದು ಡಿಜಿಟಲ್ ವಾಯ್ಸ್ ಅಸಿಸ್ಟೆಂಟ್‌ ಆಗಿದೆ. ಈ ಸಾಧನ ಮನೆಯ ಹಿರಿಯರಿಂದ ಕಿರಿಯರವರೆಗೂ ಎಲ್ಲರಿಗೂ ಬಲು ಉಪಕಾರಿ, ಎಲ್ಲರೂ ಮೆಚ್ಚುತ್ತಾರೆ. ಇದರ ನೆರವಿನಿಂದ ಎಷ್ಟೆಷ್ಟೋ ಮಾಹಿತಿ ಸಿಗುವುದಲ್ಲದೆ, ಕೆಲಸ ಸುಲಭವಾಗುತ್ತದೆ. ನಮಗೆ ಯಾವಾಗ ಮನಸ್ಸಾಗುತ್ತದೋ, ಅಲೆಕ್ಸಾ ಮುಂದೆ ಕಮಾಂಡ್‌ ಕೊಟ್ಟರೆ ನಮಗೆ ಬೇಕಾದ ಮಾಹಿತಿ, ಹಾಡು ಎಲ್ಲಾ ಒದಗಿಸುತ್ತದೆ! ಇಂಥವರಿಗೆ ಇಷ್ಟು ಹೊತ್ತಿನ ನಂತರ ಕಾಲ್ ‌ಮಾಡಬೇಕು, ಹವಾಮಾನದ ನಿಖರತೆ, ಮಕ್ಕಳಿಗಾಗಿ ಕಥೆ ಅಥವಾ ಶಿಶುಗೀತೆ, ಜೋಗುಳ..... ಇತ್ಯಾದಿ ಎಲ್ಲವನ್ನೂ ಕ್ಷಣಾರ್ಧದಲ್ಲಿ ಒದಗಿಸುತ್ತದೆ. ಇದಕ್ಕಾಗಿ ನೀವು ಇಕೋ ಡಾಟ್‌ ಥರ್ಡ್‌ ಜನರೇಶನ್‌/ಫೋರ್ತ್ ಜನರೇಶನ್‌ ಇತ್ಯಾದಿ ಆರಿಸಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ