ಹೊಸ ವರ್ಷದಲ್ಲಿ ನೀವು ಸಹ ನಿಮ್ಮ ಮನೆಗೆ ಈ ರೀತಿಯ ಗೃಹಾಲಂಕಾರದ ಟಚ್ ಕೊಡಬಾರದೇಕೆ......?
ಹೊಸ ವರ್ಷ ಬಂತು ಅಂದ್ರೆ ಎಲ್ಲರೂ ಏನಾದರೊಂದು ಹೊಸತನ್ನು ಮಾಡಬಯಸುತ್ತಾರೆ. ಗೃಹಿಣಿಯರಿಗಂತೂ ತಮ್ಮ ಗೃಹಾಲಂಕಾರದ್ದೇ ಚಿಂತೆ. ಯಾವ ರೀತಿ ಹಳೆಯ ಗೃಹಾಲಂಕಾರ ಬದಲಾಯಿಸಿ ಹೊಸತನದ ಟಚ್ ನೀಡುವುದೆಂದು ಯೋಚಿಸುತ್ತಾರೆ. ಎಲ್ಲಕ್ಕೂ ಮುಖ್ಯವಾದುದು ಮನೆಯ ಡ್ರಾಯಿಂಗ್ ರೂಂ. ಇಲ್ಲಿ ಅತಿಥಿಗಳು ಬಂದು ಕೂರುತ್ತಾರೆ, ಹೀಗಾಗಿ ಇದನ್ನು ಸ್ಪೆಷಲ್ ಆಗಿಸಲೇಬೇಕು.
ಡ್ರಾಯಿಂಗ್ ರೂಮಿನ ಗೆಟಪ್ ನಿಂದ ಗೃಹಿಣಿಯ ಕ್ರಿಯೇಟಿವಿಟಿ, ಅಭರುಚಿ ಎದ್ದು ತೋರುತ್ತದೆ. ಎಷ್ಟೋ ಹೆಂಗಸರು ಹೊಸ ವರ್ಷ ಬಂತೆಂದು ಹೊಸ ಸೋಫಾ, ಹೊಸ ಪರದೆ, ಹೊಸ ರತ್ನಗಂಬಳಿ ಖರೀದಿಸ ಡ್ರಾಯಿಂಗ್ ರೂಂ ಲುಕ್ ಬದಲಿಸುವ ಪ್ರಯತ್ನ ಮಾಡುತ್ತಾರೆ. ಇಂಟೀರಿಯರ್ ಡೆಕೋರೇಟರ್ ಬಳಿ ಹೆಚ್ಚಿನ ಸಲಹೆ ಪಡೆಯುತ್ತಾರೆ. ಇದಕ್ಕೆಲ್ಲ ಧಾರಾಳ ಹಣ ಖರ್ಚಾಗುತ್ತದೆ.

ಆದರೆ ಹೆಚ್ಚಿನ ಖರ್ಚೂ ಆಗದೆ, ಹೊಸ ಬದಲಾವಣೆಗಳೊಂದಿಗೆ ಮನೆಗೆ ಹೊಸ ಲುಕ್ ಕೊಡಲಾಗದೇ? ಎಂದು ನೀವು ಕೇಳಿದರೆ, ಖಂಡಿತಾ ಸಾಧ್ಯವಿದೆ. ನಿಮ್ಮ ಯೋಚನಾಧಾಟಿ, ಕಲಾತ್ಮಕತೆ ಜೊತೆ ಕ್ರಿಯೇಟಿವಿಟಿ ಬೆರೆತಿರಬೇಕಷ್ಟೆ.
ಕೋಣೆಯ ಶೋಭೆ ಹೆಚ್ಚಿಸಿ
ಸಾಮಾನ್ಯವಾಗಿ ಮಧ್ಯಮ ವರ್ಗದವರ ಮನೆಗಳಲ್ಲಿ ಮುಂದಿನ ವರಾಂಡಾ, ಹಾಲ್ ಗಳಲ್ಲಿ ಸುಂದರ ಫರ್ನೀಚರ್, ಪರದೆ, ಶೋಪೀಸ್ ಇತ್ಯಾದಿ ಸುಸಜ್ಜಿತ ಆಗಿರುತ್ತವೆ. ಇಲ್ಲಿ ಉತ್ತಮ ಸೋಫಾಸೆಟ್ ಜೊತೆ ಸೆಂಟ್ರಲ್ ಟೇಬಲ್ ಸಹ ಇರುತ್ತದೆ. ಕಿಟಕಿ, ಬಾಗಿಲುಗಳಿಗೆ ಬ್ಯೂಟಿಫುಲ್ ಪರದೆ, ಸೈಡ್ ಟೇಬಲ್ ನಲ್ಲಿ ಶೋಪೀಸ್, ಫ್ಲವರ್ ವಾಸ್, ಇನ್ ಡೋರ್ ಪ್ಲಾಂಟ್ಸ್ ಇತ್ಯಾದಿಗಳಿಂದ ಆ ಕೋಣೆಯ ಶೋಭೆ ಹೆಚ್ಚುತ್ತದೆ.
ಇತ್ತೀಚೆಗೆ ಮನೆ ಚಿಕ್ಕದು ಅಥವಾ ತುಸು ದೊಡ್ಡದಿರಲಿ, ಅದರ ಮೇನ್ ಹಾಲ್ ನಲ್ಲಿ ಪಾರ್ಟಿಶನ್ ಮಾಡಿ, ಮುಂಭಾಗದಲ್ಲಿ ಡ್ರಾಯಿಂಗ್ ರೂಂ ಹಾಗೂ ಹಿಂಭಾಗದಲ್ಲಿ ಡೈನಿಂಗ್ ರೂಂ ಮಾಡಲಾಗಿರುತ್ತದೆ. ಕೆಲವು ಕಡೆ ಎರಡೂ ಭಾಗಗಳ ನಡುವೆ ತೆಳು ಪರದೆ ಇಳಿಬಿಟ್ಟು ಬೇರ್ಪಡಿಸಲಾಗುತ್ತದೆ. ಕೆಲವೊಮ್ಮೆ ಡ್ರಾಯಿಂಗ್‌ಡೈನಿಂಗ್ ಒಂದೇ ಕೋಣೆಯಲ್ಲಿ ಆ ಬದಿ ಈ ಬದಿ ಅರೇಂಜ್ ಮಾಡಿರಲಾಗುತ್ತದೆ.
ಡೈನಿಂಗ್ ರೂಮಿನಲ್ಲಿ ಡೈನಿಂಗ್ ಟೇಬಲ್ ಜೊತೆ ಕುರ್ಚಿ, ವುಡನ್ ಶೋಕೇಸ್ ನಲ್ಲಿ ಅಲಂಕರಿಸಲಾದ ಕ್ರಾಕರಿ, ಗೋಡೆಯಲ್ಲಿನ ಅಲ್ಮೇರಾ ಇತ್ಯಾದಿಗಳಿಂದ ಹೆಚ್ಚಿನ ಮನೆಗಳ ರೂಪುರೇಷೆ ಕೂಡಿರುತ್ತವೆ. ಬೆಡ್ ರೂಮಿನಲ್ಲಿ ದುಬಾರಿ ಮಂಚ, ಬೆಡ್, ಡ್ರೆಸ್ಸಿಂಗ್ ಟೇಬಲ್, ಸೈಡ್ ಟೇಬಲ್ಸ್, ಅಲ್ಮೇರಾ ಇತ್ಯಾದಿಗಳಿಂದ ಕೂಡಿರುತ್ತವೆ. ನಂತರ ಮಕ್ಕಳ ಸ್ಟಡಿರೂಂ, ಕಂಪ್ಯೂಟರ್ ಟೇಬಲ್, ಚೇರ್, ಬುಕ್ಸ್ ಶೆಲ್ಫ್, ಬೆಡ್, ಸ್ಟೂಲ್, ಬೀನ್ ಬ್ಯಾಗ್ ಇತ್ಯಾದಿ ಅನೇಕ ವಸ್ತುಗಳಿರುತ್ತವೆ.
ಒಂದು ಹೊಸ ಮನೆ ಕೊಂಡಾಗ, ಅದರ ಹೊಸ ಫರ್ನೀಚರ್ ಗಾಗಿ ಲಕ್ಷಾಂತರ ರೂ. ಹಣ ಖರ್ಚಾಗುತ್ತದೆ. ಆದರೆ ಪ್ರಭಾ ಈ ನಿಟ್ಟಿನಲ್ಲಿ ಮುಂದಾಲೋಚನೆ ವಹಿಸಿ, ಫರ್ನೀಚರ್ ಗೆ ಹೆಚ್ಚಿನ ಮಹತ್ವ ನೀಡಲಿಲ್ಲ. ಆಕೆ ಮನೆಯಲ್ಲಿ ಹೆಸರಿಗಷ್ಟೇ ಫರ್ನೀಚರ್ ಅಲ್ಲಿ ಇಲ್ಲಿ ಕಂಡುಬರುತ್ತದೆ. ಪ್ರಭಾಳ ಇಡೀ ಮನೆ ಡ್ರಾಯಿಂಗ್ ರೂಮಿನಿಂದ ಬೆಡ್ ರೂಂವರೆಗೂ, ನೆಲದ ಮೇಲೆಯೇ ಅಲಂಕರಿಸಲಾಗಿದೆ, ಕ್ಲಾಸಿಕ್‌ರಿಚ್ ಲುಕ್ಸ್ ಗಾಗಿ ಪ್ರಭಾಳ ಮನೆಯ ಅಂಗಳ ಪ್ರವೇಶಿಸುತ್ತಿದ್ದಂತೆಯೇ, ಹಸಿರು ತುಂಬಿದ ಲಾನ್ ನಿಮ್ಮನ್ನು ಸ್ವಾಗತಿಸುತ್ತದೆ. ಪಿಬಲ್ಸ್ ತುಂಬಿದ ಅಂದದ ಮಾರ್ಗ ಪೋರ್ಟಿಕೋಗೆ ಕರೆದೊಯ್ಯುತ್ತದೆ. 3 ಸಣ್ಣ ಮೆಟ್ಟಿಲುಗಳ ಎರಡೂ ತುದಿಗಳಲ್ಲಿ ಒಂದರ ಮೇಲೆ ಒಂದರಂತೆ ಇರಿಸಿದ 3-3 ಕ್ಲಾಸಿಕ್ ಕಲಶದಲ್ಲಿನ ಹೂಗಳು, ಬಂದವರಿಗೆ ಸ್ವಾಗತ ಕೋರುತ್ತವೆ. ಮೆಟ್ಟಿಲು ಹತ್ತುತ್ತಲೇ ಎಡಬದಿಗೆ, ಚಪ್ಪಲಿ ಬಿಡುವ ವ್ಯವಸ್ಥೆ ಇದೆ, ಏಕೆಂದರೆ ಬಾಗಿಲ ಬಳಿಯಿಂದಲೇ ಡ್ರಾಯಿಂಗ್ ರೂಂ ಇಡೀ ಬ್ಯೂಟಿಫುಲ್ ಮಖಮಲ್ ಕಾರ್ಪೆಟ್ ಹಾಸಲ್ಪಟ್ಟಿದೆ. ಎದುರಿನ ಗೋಡೆಯಿಂದ ಹಿಡಿದು, ಅರ್ಧ ಕೋಣೆವರೆಗೆ ಎತ್ತರದ ಗಾದಿಗಳಲ್ಲಿ ಬಣ್ಣ ಬಣ್ಣದ ಚಾದರಗಳಿದ್ದು, ರಾಜಮನೆತನದ ವಿಭಿನ್ನ ವಿನ್ಯಾಸ ಎದ್ದು ಕಾಣುತ್ತದೆ. ನಡುನಡುವೆ ನೀರು ಕಾಫಿ ಗ್ಲಾಸ್ ಇರಿಸಲು, ಸಾಧಾರಣ ವುಡನ್ ಸ್ಟೂಲುಗಳಿದ್ದು, ಅದರ ಟಾಪ್ ಮೇಲೆ ಪ್ರಭಾ ಸ್ವಯಂ ಆಯಿಲ್ ಪೇಂಟ್ ನಿಂದ ಚಿತ್ತಾರ ಬಿಡಿಸಿರುತ್ತಾಳೆ.





