ಸಮಷ್ಟಿ ರಂಗ ತಂಡವು ಸೆಪ್ಟೆಂಬರ್ 4ರಂದು ಸಂಜೆ 7.30ಕ್ಕೆ ರಂಗಶಂಕರದಲ್ಲಿ ಚಿತ್ರಪಟ ನಾಟಕ ಪ್ರದರ್ಶಿಸಲಿದೆ.
ಡಾ ಎಚ್ ಎಸ್ ವೆಂಕಟೇಶ ಮೂರ್ತಿ ರಚಿಸಿರುವ ಈ ನಾಟಕವನ್ನು ಮಂಜುನಾಥ ಎಲ್ ಬಡಿಗೇರ ಅವರ ನಿರ್ದೇಶಿಸಿದ್ದಾರೆ. ಗಜಾನನ ಹೆಗಡೆ ಸಂಗೀತ ಹಾಗೂ ರವೀಂದ್ರ ಪೂಜಾರಿ ಬೆಳಕು ನೀಡಿದ್ದಾರೆ. ಶ್ವೇತಾ ಶ್ರೀನಿವಾಸ್ ಅವರು ವಸ್ತ್ರ ವಿನ್ಯಾಸ ಹಾಗೂ ನೃತ್ಯ ಸಂಯೋಜನೆ ಮಾಡಿದ್ದಾರೆ.
ರಂಗ ಕಲಾವಿದೆ, ನಟಿ ಶ್ವೇತಾ ಶ್ರೀನಿವಾಸ್ ಅವರು ಈ ನಾಟಕದ ಪ್ರದರ್ಶನವನ್ನು ನಿರಂತರವಾಗಿ ಸಮಷ್ಟಿ ರಂಗತಂಡದಿಂದ ಮಾಡುತ್ತಾ ಬಂದಿದ್ದಾರೆ. ಈ ನಾಟಕಕ್ಕೆ 2015ರಲ್ಲಿ ಉತ್ತಮ ನಟಿ ಹಾಗೂ ಉತ್ತಮ ವಸ್ತ್ರ ವಿನ್ಯಾಸಕಿ ವಿಭಾಗದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಮೆಟಾ ಪ್ರಶಸ್ತಿ ಪಡೆದಿದ್ದರು.
“ಸೀತೆ ಯಾಗಿ ಪ್ರತಿ ಪ್ರದರ್ಶನದಿಂದ ಪ್ರದರ್ಶನಕ್ಕೆ ಹೊಸ ಹೊಸ ಹೊಳಹುಗಳನ್ನು ಕಂಡುಕೊಳ್ಳುತ್ತ, ಪಾತ್ರದ ಅಂತರಾಳವನ್ನು ಅನ್ವೇಷಿಸಲು, ನಟನಾಭ್ಯಾಸಿಯಾಗಿ ತನ್ನನ್ನು ಇನ್ನಷ್ಟು ಹುರಿಗೊಳಿಸಿಕೊಳ್ಳಲು, ಸ್ಫೂರ್ತಿ ಪಡೆದುಕೊಳ್ಳಲು, ಈ ಚಿತ್ರಪಟ ನಾಟಕ ನನಗೆ ಸಹಕಾರಿಯಾಗಿದೆ, ಮುಂದೆಯೂ ಹುಮ್ಮಸ್ಸನ್ನ ನೀಡುತ್ತಲೇ ಇರುತ್ತದೆ” ಎಂದಿದ್ದಾರೆ ಶ್ವೇತಾ ಶ್ರೀನಿವಾಸ್.