ಯಾವುದೇ ಒಬ್ಬ ಸ್ತ್ರೀ ಎಲ್ಲಿಯವರೆಗೆ ಸುಂದರ ಎಂದು ಹೇಳಲಾಗುದಿಲ್ಲವೆಂದರೆ, ಅವಳು ಮಾನಸಿಕವಾಗಿ ಅಥವಾ ಆಂತರಿಕವಾಗಿ ಬಲಿಷ್ಠವಾಗಿರುವತನಕ. ಹಾಲಿವುಡ್ ನಟಿಯರ ಜಿಮ್ ಫ್ರೀಕ್ ನೆಸ್ ಎಲ್ಲರಿಗೂ ಗೊತ್ತಿರುವುದೇ. ಹೆಸರಾಂತ ನಟಿಯರಾದ ಜೆಸ್ಸಿಕಾ ಅಲ್ಬಾ, ಜೆನಿಫರ್ ಗಾರ್ನರ್ ಮತ್ತು 76 ವರ್ಷದ ಜೆನ್ ಫೆಬಿದಾ ಸಾಕಷ್ಟು ಹೆವಿವೇಟ್ ಎಕ್ಸರ್ ಸೈಜ್‌ಮಾಡುತ್ತಾರೆ. ಹೀಗಾಗಿ ಅವರ ಸೌಂದರ್ಯಕ್ಕೆ ಯಾವುದೇ ಧಕ್ಕೆ ಉಂಟಾಗುವುದಿಲ್ಲ.
ನಮ್ಮ ದೇಶದಲ್ಲೂ ಫ್ಯಾಷನ್ ಹಾಗೂ ಬಾಲಿವುಡ್ ಕ್ಷೇತ್ರದಲ್ಲೂ ಈ ಪರಂಪರೆ ಚಾಲ್ತಿಯಲ್ಲಿದೆ. ಪ್ರತಿಯೊಬ್ಬ ನಟಿಯರು ಟಿ.ವಿ ತಾರೆಯರು ತಮ್ಮ ದೈನಂದಿನ ದಿನಚರಿಯಲ್ಲಿ 12 ಗಂಟೆ, ಜಿಮ್ ಗಾಗಿ ವಿನಿಯೋಗಿಸುತ್ತಾರೆ. ಅದರಲ್ಲಿ ಸೈಕ್ಲಿಂಗ್, ಜಾಗಿಂಗ್, ಹಗುರ ವ್ಯಾಯಾಮಗಳಷ್ಟೆ ಸೇರಿಲ್ಲ ವೇಟ್ ಲಿಫ್ಟಿಂಗ್ ನಂತಹ ಮಸಲ್ ಬಿಲ್ಡಿಂಗ್ ಎಕ್ಸರ್ ಸೈಜ್‌ಗಳು ಕೂಡ ಸೇರಿವೆ. ಅದೇ ಕಾರಣದಿಂದ ಇತ್ತೀಚಿನ ದಿನಗಳಲ್ಲಿ `ಪೈಯೋಕ್ಸಿಂಗ್’ ಎಂಬ ಹೊಸ ಶಬ್ದ ಸೇರಿಕೊಂಡಿದೆ. ಇದರಲ್ಲಿ ಮಸಲ್ ಬಿಲ್ಡಿಂಗ್ ಎಕ್ಸರ್ ಸೈಜ್ ಹಾಗೂ ಬಾಕ್ಸಿಂಗ್‌ಗಳು ಸೇರಿಕೊಂಡಿವೆ.
ದೈಹಿಕ ಬಲ ಎಷ್ಟು ಅಗತ್ಯ ಹಾಗೂ ಇದು ಸೌಂದರ್ಯಕ್ಕೆ ಎಷ್ಟು ನಿಕಟತೆ ಹೊಂದಿದೆ ಎಂಬುದನ್ನು ತಿಳಿದುಕೊಳ್ಳಿ.
ಆರೋಗ್ಯ : ಆಧುನಿಕ ತಂತ್ರಜ್ಞಾನ ಮನುಷ್ಯನ ಜೀವನವನ್ನು ಇನ್ನಷ್ಟು ಆರಾಮದಾಯಕಗೊಳಿಸಿದೆ. ಮೊದಲು ಮಹಿಳೆಯರು ಎಲ್ಲ ಕೆಲಸಗಳನ್ನು ಕೈಗಳಿಂದ ಮಾಡುತ್ತಿದ್ದರು. ಈಗ ಅವೆಲ್ಲ ಕೆಲಸಗಳು ಯಂತ್ರದ ಮುಖಾಂತರ ಆಗುತ್ತಿವೆ. ಹೀಗಾಗಿ ವ್ಯಾಯಾಮ ಅತ್ಯವಶ್ಯಕವಾಗಿದೆ. ದೈಹಿಕ ಶ್ರಮದ ಕೊರತೆಯಿಂದಾಗಿ ಬೊಜ್ಜಿನ ಸಮಸ್ಯೆ ಹೆಚ್ಚಾಗಿದೆ, ಅದುವೇ ಹೈ ಬ್ಲಡ್ ಪ್ರೆಶರ್ ಹಾಗೂ ಡಯಾಬಿಟಿಸ್ ಗಳಿಗೆ ಕಾರಣವಾಗಿವೆ.
40ನೇ ವಯಸ್ಸಿನ ಬಳಿಕ ಮುಟ್ಟಂತ್ಯದ ಸಮಯದಲ್ಲಿ ಸ್ತ್ರೀಯರಲ್ಲಿ ಆಸ್ಟೋಪೊರೊಸಿಸ್‌ನ ಸಮಸ್ಯೆ ಸಾಮಾನ್ಯ. ಇದಕ್ಕೆ ಮುಖ್ಯ ಕಾರಣ ಮೂಳೆಗಳ ಸಾಂಧ್ರತೆ ಕಡಿಮೆಯಾಗುವುದಾಗಿದೆ. ಕ್ಯಾಲ್ಸಿಯಂ ಮಾತ್ರೆಗಳು ಅಷ್ಟಿಷ್ಟು ನಿರಾಳತೆ ಕೊಡಬಹುದು. ಆದರೆ ನಿರಂತರ ಸೇವನೆಯಿಂದಾಗಿ ಅದು ಮೂತದ್ರವ ಹರಳುಗಳ ಉತ್ಪತ್ತಿಗೆ ಕಾರಣವಾಗಬಹುದು. ಅದಕ್ಕೆ ವೇಟ್ ಲಿಫ್ಟಿಂಗ್ ಒಂದು ಅತ್ಯುತ್ತಮ ಪರ್ಯಾಯವಾಗಿದೆ.
ಮಾನಸಿಕ ಆರೋಗ್ಯ : ನಿಯಮಿತ ವ್ಯಾಯಾಮದಿಂದ ದೇಹಕ್ಕೆ ಹೆಚ್ಚುವರಿ ಕ್ಯಾಲೋರಿಯ ಅವಶ್ಯಕತೆ ಹೆಚ್ಚುತ್ತದೆ. ಅದರಿಂದಾಗಿ ದೇಹದಲ್ಲಿ ರಕ್ತದ ಪ್ರವಾಹ ಹೆಚ್ಚುತ್ತದೆ ಮತ್ತು ಒಳ್ಳೆಯ ನಿದ್ರೆ ಬರುತ್ತದೆ. ಒಳ್ಳೆಯ ನಿದ್ರೆ ಮಾನಸಿಕ ಆರೋಗ್ಯಕ್ಕೆ ಅತ್ಯಂತ ಅವಶ್ಯಕ. ಒಳ್ಳೆಯ ನಿದ್ರೆಯಿಂದ ಅರ್ಧದಷ್ಟು ಮಾನಸಿಕ ಕಾಯಿಲೆಗಳು ದೂರವಾಗುತ್ತವೆ. ನಿಯಮಿತ ವರ್ಕ್ ಔಟ್ ಟೆನ್ಶನ್ ಕಡಿಮೆ ಮಾಡಲು ನೆರವಾಗುತ್ತದೆ.
ಹಾರ್ವರ್ಡ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ಚ್ ನ ಸಂಶೋಧನೆಯ ಪ್ರಕಾರ ನಿಯಮಿತ ವ್ಯಾಯಾಮದಿಂದ ಡಿಪ್ರೆಶನ್ ಶೇ.26ರಷ್ಟು ಪ್ರಮಾಣದಲ್ಲಿ ಕಡಿಮೆಯಾಗಲು ನೆರವಾಗುತ್ತದೆ. ಇದು `ಅಟೆನ್ಶನ್ ಡೆಫಿಸಿಟಿ ಹೈಪರ್ ಆ್ಯಕ್ಟಿವಿಟಿ ಸಿಂಡ್ರೋಮ್’ ಎಂಬ ಮಾನಸಿಕ ರೋಗದ ಚಿಕಿತ್ಸೆಯಲ್ಲಿ ಬಳಸಲ್ಪಡುವ ಔಷಧಿ ರ್ಯಾಟೆನಿ ಹಾಗೂ ಎನಾಡ್ರೋಲ್ ಎಂಬ ಔಷಧಿಗಳಂತೆ ಕೆಲಸ ಮಾಡುತ್ತದೆ. ಈ ರೋಗ ಮುಖ್ಯವಾಗಿ ಮಕ್ಕಳು ಹಾಗೂ ಹದಿ ವಯಸ್ಸಿನವರನ್ನು ಬಲಿಪಶುವಾಗಿಸುತ್ತದೆ. ವರ್ಕ್‌ಔಟ್ ನಿಂದ ಡೊಪಾಮೈನ್ ಮತ್ತು ಸೆರಾಟೊನಿನ್ ಹಾರ್ಮೋನುಗಳ ಸ್ರಾವ ಹೆಚ್ಚುತ್ತದೆ. ಅವು ವ್ಯಕ್ತಿಯನ್ನು ಖುಷಿಯಿಂದಿಡುತ್ತವೆ ಜೊತೆಗೆ ಸಕಾರಾತ್ಮಕ ಯೋಚನೆಯನ್ನು ಹೆಚ್ಚಿಸುತ್ತವೆ.
ಸೌಂದರ್ಯ : ನಿಯಮಿತ ವರ್ಕ್‌ಔಟ್ ನಿಂದಾಗಿ ರಕ್ತಪ್ರವಾಹ ಹೆಚ್ಚುತ್ತದೆ. ಅದು ಸೌಂದರ್ಯದೊಂದಿಗೆ ನೇರ ಸಂಬಂಧ ಹೊಂದಿದೆ. ಸಾಮಾನ್ಯವಾಗಿ ಬಹಳಷ್ಟು ಮಹಿಳೆಯರು ಪಾರ್ಲರ್‌ಗೆ ಹೋಗಿ ಫೇಶಿಯಲ್ ಮಾಡಿಸಿಕೊಳ್ಳುತ್ತಾರೆ. ಏಕೆಂದರೆ ಅದರಿಂದ ರಕ್ತ ಪ್ರವಾಹ ಹೆಚ್ಚುತ್ತದೆ.
ಅದರಿಂದಾಗಿ ಅವರು ಸುಂದರವಾಗಿ ಗೋಚರಿಸುತ್ತಾರೆ. ಸಂಪೂರ್ಣ ವರ್ಕಔಟ್ ನಿಂದ ಇಡೀ ದೇಹ ಸಂದರವಾಗಿ ಕಂಡುಬರುತ್ತದೆ. ತ್ವಚೆಯ ಟೋನಿಂಗ್ ಆಗುತ್ತದೆ. ಚರ್ಮರೋಗ ತಜ್ಞರ ಪ್ರಕಾರ, ವರ್ಕ್‌ಔಟ್ ನಿಂದಾಗಿ ಸ್ಟ್ರೆಸ್‌ಗೆ ಸಂಬಂಧಪಟ್ಟ ಹಾರ್ಮೋನು ಕಾರ್ಟಿಸೋಲ್ ಲೆವೆಲ್ ಕಡಿಮೆಯಾಗುತ್ತದೆ. ಅದರಿಂದ ಸಿರಮ್ ನ ನಿಯಂತ್ರಣ ಪ್ರಕ್ರಿಯೆ ಆರಂಭವಾಗುತ್ತದೆ. ಅದರ ಹೊರತಾಗಿ ಅಧಿಕ ಕಾರ್ಟಿಸೋಲ್ ಕೊಲೊಜೆನ್‌ನ ನಿರ್ಮಾಣವನ್ನು ಹೆಚ್ಚಿಸುತ್ತದೆ. ಅದರಿಂದ ತ್ವಚೆಯ ಬಿಗುವು ಹಾಗೆಯೇ ಇರುತ್ತದೆ. ಮುಖದ ಮೇಲೆ ಸುಕ್ಕುಗಳು ಉಂಟಾಗುವುದಿಲ್ಲ ಹಾಗೂ ದೀರ್ಘ ಕಾಲದ ತನಕ ಸುಂದರವಾಗಿ ಕಾಣುತ್ತದೆ.
ಲೈಂಗಿಕ ಜೀವನ : ದೈನಂದಿನ ವರ್ಕ್‌ಔಟ್ ಲಿಬಿಡೊ ಕಿಲ್ಲರ್ ಆಗಿದೆ. `ಲಿಬಿಡೊ’ ಎಂತಹ ಒಂದು ಸಮಸ್ಯೆಯೆಂದರೆ, ಅದು ಸೆಕ್ಸ್ ಇಚ್ಛೆಯನ್ನು ಕಡಿಮೆಗೊಳಿಸುತ್ತದೆ. ವರ್ಕ್‌ಔಟ್ ನಿಂದ ಆ್ಯಡ್ರಿನಾಲಿನ್ ಹಾಗೂ ಎಂಡಾರ್ಫಿನ್ ಹಾರ್ಮೋನುಗಳ ಮಟ್ಟ ಹೊರಬರುತ್ತದೆ. ಈಸ್ಟ್ರೋಜೆನ್ ಇದು ಅತ್ಯಂತ ಮಹತ್ವದ ಸೆಕ್ಸ್ ಹಾರ್ಮೋನಾಗಿದೆ. ಸೆಕ್ಸ್ ಉತ್ತುಂಗತೆಗಾಗಿ ರಕ್ತ ಪ್ರವಾಹ ಹೆಚ್ಚುವುದು ಮುಖ್ಯ. ಅದರ ಹೊರತಾಗಿ ಉತ್ತುಂಗತೆಗೆ ತಲುಪಲು ಹೆಚ್ಚುವರಿ ಶಕ್ತಿಯ ಅವಶ್ಯಕತೆ ಉಂಟಾಗುತ್ತದೆ. ಅದಕ್ಕಾಗಿ ವರ್ಕ್‌ಔಟ್ ಉಪಯುಕ್ತವಾಗಿ ಪರಿಣಮಿಸುತ್ತದೆ.
ಆತ್ಮರಕ್ಷಣೆ : ಅದೊಂದು ಕಾಲವಿತ್ತು, ಆಗ ಮಹಿಳೆಯನ್ನು ಪುರುಷನಿಗಿಂತ ದುರ್ಬಲ ಎಂದು ಭಾವಿಸಲಾಗುತ್ತಿತ್ತು. ಆದರೆ ಇಂದಿನ ಮಹಿಳೆ ದುರ್ಬಲಳಲ್ಲ. ಮಹಿಳೆಗೆ ಆತ್ಮರಕ್ಷಣೆ ಸೌಂದರ್ಯಕ್ಕಿಂತ ಹೆಚ್ಚು ಅತ್ಯಗತ್ಯವಾಗಿದೆ. ಡೇಲಿ ವರ್ಕ್‌ಔಟ್ ನಿಂದಲೇ ಮಸಲ್ ಮಾಸ್ ಹಾಗೂ ಮೂಳೆಗಳ ಸಾಂಧ್ರತೆ ಹೆಚ್ಚುತ್ತದೆ. ಅದು ಯಾರೇ ಪುರುಷನೊಬ್ಬ ಹಲ್ಲೆ ಮಾಡಿದಾಗ ಕವಚದಂತೆ ಕೆಲಸ ಮಾಡುತ್ತದೆ.
ಸ್ವಾಲಂಬನೆ : ಎಲ್ಲಕ್ಕೂ ಮಹತ್ವದ ಸಂಗತಿಯೆಂದರೆ ದೈಹಿಕ ಬಲದಿಂದ ನಿಮ್ಮ ಸ್ವಾವಲಂಬನೆಯಲ್ಲಿ ಹೆಚ್ಚಳ ಉಂಟಾಗುತ್ತದೆ. ಗ್ಯಾಸ್ ಸಿಲಿಂಡರ್ ಮುಗಿದಾಗ ಅಥವಾ ಟೂ ವೀಲರ್ ಚಲಾಯಿಸವಾಗ ಸ್ಲಿಪ್ ಆದಾಗ ಅಥವಾ ಸಮತೋಲನ ತಪ್ಪಿದಾಗ ನೆರವಿಗಾಗಿ ನೀವು ಯಾರ ನಿರೀಕ್ಷೆ ಕೂಡ ಮಾಡುವ ಅಗತ್ಯವಿಲ್ಲ. ರಾತ್ರಿ 8-9 ಗಂಟೆಗೆ ಮನೆಯಿಂದ ಹೊರಗೆ ಹೋಗುವಾಗ ತಮ್ಮನನ್ನು ಜೊತೆಗೆ ಕರೆದುಕೊಂಡು ಹೋಗು ಎಂದು ಅಪ್ಪ ಅಮ್ಮನ ಮಾತು ಕೇಳಬೇಕಾಗಿ ಬರುವುದಿಲ್ಲ.
ಎಚ್ಚರಿಕೆಗಳು
ನಿಧಾನವಾಗಿ ಶುರು ಮಾಡಿ. ಒಮ್ಮೆಲೆ ಹೆವಿ ಎಕ್ಸರ್ ಸೈಜ್ ಅಥವಾ ವೇಟ್ ಲಿಫ್ಟಿಂಗ್‌ನಿಂದ ಶುರು ಮಾಡಬೇಡಿ. ಅದರಿಂದ ತದ್ವಿರುದ್ಧ ಪರಿಣಾಮ ಹಾಗೂ ಕೀಲುಗಳಲ್ಲಿ ನೋವಿನ ಸಮಸ್ಯೆ ಕಾಣಿಸಬಹುದು.
ಕಡಿಮೆ ತೂಕದ ಡಬಲ್ಸ್ ಗಿಂತ ಹೆಚ್ಚಾಗಿ ರಾಂಪ್ಸ್ ಮಾಡಿ.
ಹೆವಿ ವರ್ಕ್ ಔಟ್‌ಗಿಂತ ಮುಂಚೆ 10 ನಿಮಿಷಗಳ ಕಾಲ ವಾರ್ಮ್ ಅಪ್ ಮಾಡಲು ಮರೆಯಬೇಡಿ. ಅದಕ್ಕಾಗಿ ಸ್ಟ್ರೆಚಿಂಗ್ ಮುಂತಾದವನ್ನು ಮಾಡಿ. ಅದರಿಂದ ಕೀಲುಗಳಲ್ಲಿ ಚೈತನ್ಯ ಉಂಟಾಗುತ್ತದೆ.
ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ. ಅದರಿಂದ ಹೆಚ್ಚುವರಿ ಪ್ರಮಾಣದಲ್ಲಿ ಕ್ಯಾಲೋರಿ ದಣಿಸಲ್ಪಡುತ್ತದೆ ಮತ್ತು ತೂಕ ಬಹುಬೇಗ ಕಡಿಮೆಯಾಗುತ್ತದೆ.
ವರ್ಕ್ ಔಟ್ ನಿಯಮಿತವಾಗಿ ಮಾಡಿ. ವಾರದಲ್ಲಿ ಒಂದು ಸಲ ಮಾಡಿ ಬಿಟ್ಟುಬಿಡಬೇಡಿ. ವಾರದಲ್ಲಿ 3 ದಿನ 1 ಗಂಟೆಗಳಷ್ಟು ವರ್ಕ್‌ಔಟ್ ಅತ್ಯವಶ್ಯ.
ವರ್ಕ್ ಔಟ್ ಮಾಡುವಾಗ ಕೀಲುಗಳಲ್ಲಿ ನೋವು ಅನಿಸಿದರೆ ವರ್ಕ್ ಔಟ್ ನಿಲ್ಲಿಸಿ.
ಎಲ್ಲಕ್ಕೂ ಮಹತ್ವದ ಸಂಗತಿಯೆಂದರೆ ಯಾವುದೇ ವೇಟ್ ಟ್ರೇನಿಂಗ್‌ನ್ನು ತಜ್ಞರ ಉಸ್ತುವಾರಿಯಲ್ಲಿ ಮಾಡಿ.
ದೇಹದ ದೊಡ್ಡ ಮಸಲ್ಸ್ ಗಳಾದ ಆ್ಯಬ್ಸ್ ಬಟಿಕ್ ಹಾಗೂ ಚೆಸ್ಟ್ ನಿಂದ ವರ್ಕ್ ಔಟ್ ಆರಂಭಿಸಿ ಹಾಗೂ ಬಳಿಕ ಫ್ಲೆಕ್ಸ್ ಮಾಡಿ.
ಮಸಲ್ ಬಿಲ್ಡಿಂಗ್ ನಲ್ಲಿ ತಪ್ಪುಗಳು
ಮಸಲ್ ಬಿಲ್ಡಿಂಗ್‌ನಿಂದ ಸ್ತ್ರೀ ಪುರುಷರಂತೆ ಕಂಡುಬರುತ್ತಾಳೆ. ತಜ್ಞರ ಪ್ರಕಾರ, ಮಸಲ್ ಬಿಲ್ಡಿಂಗ್‌ನಲ್ಲಿ ಟೆಸ್ಟೊಸ್ಟೆರಾನ್ ಹಾರ್ಮೋನ್ ವಿಶೇಷ ಪಾತ್ರ ವಹಿಸುತ್ತದೆ. ಆದರೆ ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ಇದರ ಪ್ರಮಾಣ ಅತ್ಯಂತ ಕಡಿಮೆ ಇರುತ್ತದೆ. ಹೀಗಾಗಿ ಮಹಿಳೆಯರ ಮಸಲ್ ಪುರುಷರಂತೆ ಆಗುವುದಿಲ್ಲ. ಇದರಲ್ಲಿ ಅವಳು ಪುರುಷರಂತೆ ಕಾಣುವ ಪ್ರಸಂಗವೇ ಉದ್ಭವಿಸುವುದಿಲ್ಲ.
ದೀರ್ಘಕಾಲ ಜಿಮ್ ಗೆ ಹೋಗುವುದರಿಂದ ಕೀಲುನೋವಿನ ಸಮಸ್ಯೆ ಉಂಟಾಗುತ್ತದೆ. ವಾಸ್ತವ ಸಂಗತಿಯೇನೆಂದರೆ, ಎಕ್ಸರ್ ಸೈಜ್ ಹಾಗೂ ವೇಟ್ ಲಿಫ್ಟಿಂಗ್ ಸ್ನಾಯುಗಳನ್ನು ಬಲಗೊಳಿಸುತ್ತವೆ. ಸ್ನಾಯುಗಳು ಕೀಲುಗಳಿಗೆ ಸಪೋರ್ಟ್ ಕೊಡುತ್ತವೆ. ನಮ್ಮ ದೇಹದಲ್ಲಿ ಕೀಲುಗಳಿಗೆ ಮಸಲ್ಸ್ ಹಾಗೂ ಲಿಗಮೆಂಟ್ಸ್ ನ ಅವಶ್ಯಕತೆ ಇರುತ್ತದೆ. ಅವಿಲ್ಲದೆ ಇದ್ದರೆ ಮೂಳೆಗಳು ತುಂಡರಿಸುತ್ತವೆ. ಅದೇ ಕಾರಣವೆಂಬಂತೆ. ವಯಸ್ಸು ಹೆಚ್ಚುತ್ತಾ ಹೋದಂತೆ ಒಂದಷ್ಟು ಬಿದ್ದರೆ ಸಾಕು, ಅಥವಾ ಪೆಟ್ಟು ಬಿದ್ದಾಗ ಫ್ರಾಕ್ಚರ್ ಆಗುವ ಅಪಾಯ ಹೆಚ್ಚುತ್ತದೆ. ಹಾಗಾಗಿ ಜಿಮ್ಮಿಂಗ್ ಕೀಲುನೋವಿನ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ ಹೊರತು ಹೆಚ್ಚಿಸುವ ಕೆಲಸ ಮಾಡುವುದಿಲ್ಲ.
ಹೆವಿ ಎಕ್ಸರ್ ಸೈಜ್‌ನಿಂದ ಹೆವಿ ಪೆರಿಯಡ್ಸ್ ಪ್ಲೇ ಸಮಸ್ಯೆ ಹೆಚ್ಚುತ್ತದೆಯೇ? ಶೇ.63 ರಷ್ಟು ಟಾಪ್ ಫೀಮೇಲ್ ಅಥ್ಲೀಟ್‌ಗಳ ಪ್ರಕಾರ, ವರ್ಕ್ ಔಟ್‌ನಿಂದ ಪೆಲ್ವಿಕ್ ಏರಿಯಾದಲ್ಲಿ ರಕ್ತ ಪ್ರವಾಹ ಹೆಚ್ಚುತ್ತದೆ. ಅದರಿಂದ ಮುಟ್ಟಿನ ಸಮಯದಲ್ಲಿ ಆಗುವ ನೋವಿನಿಂದ ನಿರಾಳತೆ ದೊರಕುತ್ತದೆ. ಆ ಅವಧಿಯಲ್ಲಿ ಖಿನ್ನತೆಯ ಸಮಸ್ಯೆ ಸಹ ಕಂಡು ಬರುತ್ತದೆ. ಅದನ್ನು ವರ್ಕ್ ಔಟ್ ನಿಂದ ಸ್ರವಿಸುವ ಹಾರ್ಮೋನುಗಳು ನಿವಾರಿಸುವ ಕೆಲಸ ಮಾಡುತ್ತವೆ. ಅವು ಮೂಡ್ ಸ್ವಿಂಗ್ ಹಾರ್ಮೋನುಗಳಾಗಿವೆ. ಅದರ ಹೊರತಾಗಿ ನಿಯಮಿತ ಎಕ್ಸರ್‌ಸೈಜ್ ಪೀರಿಯಡ್ಸ್ ನ್ನು ಕೂಡ ನಿಯಮಿತಗೊಳಿಸುತ್ತದೆ. ಒಂದುವೇಳೆ ನಿಮಗೆ ಈ ದಿನಗಳಲ್ಲಿ ಸರಿ ಎನಿಸದೇ ಇದ್ದಲ್ಲಿ ವಾಕಿಂಗ್ ಅಷ್ಟೇ ಮಾಡಿ. ವರ್ಕ್ ಔಟ್‌ನಿಂದ ಸಂತಾನೋತ್ಪತ್ತಿ ಅಂಗಗಳ ಮೇಲೆ ದುಷ್ಪರಿಣಾಮ ಉಂಟಾಗುತ್ತದೆಯೇ? ಆಧುನಿಕ ಜೀವನ ಶೈಲಿಯಿಂದಾಗಿ ನಮ್ಮ ಆಹಾರದಲ್ಲಿ ಕ್ರಿಮಿನಾಶಕಗಳು ಹಾಗೂ ಔಷಧಿಗಳ ಬಳಕೆ ಹೆಚ್ಚುತ್ತಿದೆ. 35ರ ಬಳಿಕ ಮಹಿಳೆಯರಿಗೆ ಈಸ್ಟ್ರೋಜೆನ್‌ನ ಸ್ರಾವ ಹೆಚ್ಚುವುದರಿಂದ ಬ್ರೆಸ್ಟ್ ಕ್ಯಾನ್ಸರ್‌ನ ಸಮಸ್ಯೆ ಉದ್ಭವಿಸುತ್ತದೆ. ನಿಯಮಿತ ವರ್ಕ್ ಔಟ್ ಈಸ್ಟ್ರೋಜೆನ್‌ನ ಪ್ರಮಾಣವನ್ನು ಕುಗ್ಗಿಸುತ್ತದೆ. ಈಸ್ಟ್ರೋಜೆನ್‌ನ ಹೆಚ್ಚುವರಿ ಪ್ರಮಾಣ ಸ್ತನ ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ಅಷ್ಟೇ ಅಲ್ಲ, ಈಸ್ಟ್ರೋಜೆನ್ ಸಮತೋಲನದಲ್ಲಿರುವುದರಿಂದ ಓವ್ಯೂಲೇಶನ್ ಹಾಗೂ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುತ್ತದೆ.
– ಪ್ರತಿನಿಧಿ