ಸಾಮಗ್ರಿ : 3-4 ಕಪ್‌ ಕಾರ್ನ್‌ ಫ್ಲೇಕ್ಸ್, 5-6 ಎಸಳು ಕರಿಬೇವು, ತುಪ್ಪದಲ್ಲಿ ಹುರಿದ ಒಂದಿಷ್ಟು ಗೋಡಂಬಿ, ದ್ರಾಕ್ಷಿ, ಪಿಸ್ತಾ, ಬಾದಾಮಿ ಚೂರು, ಕೊಬ್ಬರಿ ತುಂಡು, ಕಡಲೆಬೀಜ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಚಾಟ್‌ ಮಸಾಲ, ಅಮ್ಚೂರ್‌ ಪುಡಿ, ಅರಿಶಿನ, ಸಕ್ಕರೆ, ಇಂಗು, ಇತ್ಯಾದಿ.

ವಿಧಾನ : ಒಂದು ನಾನ್‌ ಸ್ಟಿಕ್‌ ಬಾಣಲೆಯಲ್ಲಿ ಮೊದಲು ತುಪ್ಪದಲ್ಲಿ ದ್ರಾಕ್ಷಿ, ಗೋಡಂಬಿ ಹುರಿದು ತೆಗೆಯಿರಿ. ನಂತರ ಇದರಲ್ಲಿ ಕಡಲೆಬೀಜ, ಕೊಬ್ಬರಿ ತುಂಡುಗಳನ್ನೂ ಹುರಿದು ತೆಗೆಯಬೇಕು. ಆಮೇಲೆ ಕರಿಬೇವು ಹುರಿದು ತೆಗೆಯಿರಿ. ನಂತರ ಅದೇ ಬಾಣಲೆಗೆ ಕಾರ್ನ್‌ ಫ್ಲೇಕ್ಸ್, ಇಂಗು, ಉಳಿದ ಮಸಾಲೆ, ಉಪ್ಪು ಹಾಕಿ ಕೆದಕಿ, ಕೊನೆಯಲ್ಲಿ ಮೊದಲೇ ಹುರಿದುಕೊಂಡಿದ್ದ ಎಲ್ಲಾ ಪದಾರ್ಥ ಸೇರಿಸಿ ಬೆರೆಸಿಕೊಳ್ಳಿ. ಇದನ್ನು ಗಾಳಿಯಾಡದ ಡಬ್ಬಕ್ಕೆ ತುಂಬಿರಿಸಿ, ಸಂಜೆ ಕಾಫಿ-ಟೀ ಜೊತೆ ಸವಿಯಲು ಕೊಡಿ.

Cookry-mitha-chatpata-2

ಡ್ರೈ ಫ್ರೂಟ್ಸ್ ಕಟ್ಲೆಟ್

ಮೂಲ ಸಾಮಗ್ರಿ : ಮಧ್ಯಮ ಗಾತ್ರದ 2 ಬೀಟ್‌ ರೂಟ್‌, 200 ಗ್ರಾಂ ಬೇಯಿಸಿ ಮಸೆದ ಆಲೂ, 4-5 ಬ್ರೆಡ್‌ ಪೀಸ್‌, 4-5 ಚಮಚ ಕಾರ್ನ್‌ ಫ್ಲೋರ್‌, 3-4 ಚಮಚ ಕಡಲೆಹಿಟ್ಟು, ಕರಿಯಲು ರೀಫೈಂಡ್‌ ಎಣ್ಣೆ.

ಹೂರಣ ಸಾಮಗ್ರಿ : ಅರ್ಧ ಕಪ್‌ ನೈಲಾನ್‌ ಎಳ್ಳು, ಗೋಡಂಬಿ, ದ್ರಾಕ್ಷಿ, ಪಿಸ್ತಾ, ಬಾದಾಮಿ, ಖರ್ಜೂರ, ಅಂಜೂರದ ಚೂರು (ಒಟ್ಟಾರೆ 1 ಕಪ್‌), 2 ಚಮಚ ಗೋಡಂಬಿ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಪುಡಿಮೆಣಸು, ತುರಿದ ಪನೀರ್‌, ಹೆಚ್ಚಿದ ಕೊ.ಸೊಪ್ಪು.

ವಿಧಾನ : ಮೊದಲು ಬಾಣಲೆಯಲ್ಲಿ 4 ಚಮಚ ಎಣ್ಣೆ ಬಿಸಿ ಮಾಡಿ ನೀಟಾಗಿ ತುರಿದ ಬೀಟ್‌ ರೂಟ್‌ ಹಾಕಿ ಬಾಡಿಸಿ ಕೆಳಗಿಳಿಸಿ. ಇದಕ್ಕೆ ಮಸೆದ ಆಲೂ, ಬ್ರೆಡ್‌ ಪೀಸ್‌, ಕಾರ್ನ್‌ ಫ್ಲೋರ್‌, ಕಡಲೆಹಿಟ್ಟು, ತುಸು ಉಪ್ಪು ಹಾಕಿ, ತುಸು ನೀರು ಚಿಮುಕಿಸಿ ಮಿಶ್ರಣ ಕಲಸಿಡಿ. ಗೋಡಂಬಿ, ಎಳ್ಳು ಹೊರತುಪಡಿಸಿ ಉಳಿದೆಲ್ಲ ಹೂರಣದ ಸಾಮಗ್ರಿಯನ್ನು ಒಂದು ಬೇಸನ್ನಿಗೆ ಹಾಕಿ ಮಿಶ್ರಣ ಮಾಡಿ. ನಂತರ ಆಲೂ ಮಿಶ್ರಣದಿಂದ ಸಣ್ಣ ನಿಂಬೆ ಗಾತ್ರದ ಉಂಡೆಗಳನ್ನು ಬೇರೆ ಮಾಡಿ. ಪ್ರತಿ ಉಂಡೆಯನ್ನೂ ಒತ್ತಿ ಚಪ್ಪಟೆ ಮಾಡಿ, ಅದರಲ್ಲಿ 1-2 ಚಮಚ ಡ್ರೈ ಫ್ರೂಟ್ಸ್ ಮಿಶ್ರಣ ತುಂಬಿಸಿ, ಮತ್ತೆ ಪೂರ್ತಿ ಕವರ್‌ ಮಾಡಿ, ಚಿತ್ರದಲ್ಲಿರುವಂತೆ ರೆಡಿ ಮಾಡಿ. ಇದನ್ನು ಎಳ್ಳಿನಲ್ಲಿ ಹೊರಳಿಸಿ, ಮೇಲೆ 1-1 ಗೋಡಂಬಿ ಸಿಗಿಸಿಡಿ. ಇವನ್ನು ಕಾದ ಎಣ್ಣೆಯಲ್ಲಿ ಕರಿದು, ಬಿಸಿಯಾಗಿ ಇರುವಂತೆಯೇ ಟೊಮೇಟೊ ಸಾಸ್‌ ಜೊತೆ ಸವಿಯಲು ಕೊಡಿ.

Cookry-mitha-chatpata-3

ಸ್ಪೆಷಲ್ ಟೋಸ್ಟ್

ಸಾಮಗ್ರಿ : ಒಂದಿಷ್ಟು ಬ್ರೆಡ್‌ ಸ್ಲೈಸ್‌, 1-2 ಪ್ಯಾಕೆಟ್‌ ಶುಗರ್‌ ಫ್ರೀ, ತುಸು ಶುಗರ್‌ ಫ್ರೀ ಪೀನಟ್‌ ಬಟರ್‌, 2-3 ಮಾಗಿದ ಚುಕ್ಕೆ ಬಾಳೆಹಣ್ಣು, 2 ಚಿಟಕಿ ಏಲಕ್ಕಿ ಪುಡಿ.

ವಿಧಾನ : ಮೊದಲು ಬ್ರೆಡ್‌ ಗೆ ತುಪ್ಪ ಸವರಿ, ತವಾ ಮೇಲೆ ಹಾಕಿ ಎರಡೂ ಬದಿ ಬಿಸಿ ಮಾಡಿ. ಇದನ್ನು ಕೆಳಗಿಳಿಸಿ ಶುಗರ್‌ ಫ್ರೀ ಉದುರಿಸಿ ನಂತರ ಬಾಳೆ ಹಣ್ಣಿನ ಬಿಲ್ಲೆಗಳನ್ನು ಬ್ರೆಡ್‌ ಮೇಲಿರಿಸಿ, ಮೇಲೆ ಏಲಕ್ಕಿಪುಡಿ ಉದುರಿಸಿ. ಇದೀಗ ಬ್ರೆಡ್‌ ಟೋಸ್ಟ್ ಸವಿಯಲು ಸಿದ್ಧ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ